(You can only view comments here. If you want to write a comment please download the app.)
Shashidhara G,Bengalore
7:39 PM , 05/09/2020
ಪೂಜ್ಯ ಆಚಾರ್ಯರಿಗೆ ನಮಸ್ಕಾರಗಳು
ಮಹಾಲಯಶ್ರಾದ್ಧದ ಬಗ್ಗೆ ಅನೇಕ ಅಪೂರ್ವ ವಿಚಾರಗಳನ್ನು ತಿಳಿಸಿದ್ದೀರಿ, ನಮಸ್ಕಾರಪೂರ್ವಕ ಧನ್ಯವಾದಗಳು,
ಪ್ರಕೃತ ಪಕ್ಷಮಾಸದಲ್ಲಿ ಶ್ರಾದ್ಧಾಭಾವದಿನದಂದು ಆಚರಣೆ ಕ್ರಮ ಹೇಗೆ ಎಂದು ದಯವಿಟ್ಟು ತಿಳಿಸಿ ,
SUVARNA H,BANGALORE
5:44 PM , 17/09/2018
ಗುರುಗಳಿಗೆ ಪ್ರಣಾಮಗಳು ನಾವು ಪಕ್ಷ ಮಾಸದಲ್ಲಿ ಹರಿದ್ವಾರ,ಬದರಿ,ಕುರುಕ್ಷೇತ್ರ ಗಳಲ್ಲಿ ಇರುವ ಸಂದರ್ಭದಲ್ಲಿ ಮರಣ ತಿಥಿ ಬರುವ ಮೊದಲೆ ಪಕ್ಷ ಮಾಡಬಹುದೆ
ಅಂದರೆ ಮರಣ ತಿಥಿ ಪಂಚಮಿ ಇದ್ದರೆ ನಾವು ಪ್ರತಿಪದೆ ಎಂದು ಹರಿದ್ವಾರ ದಲ್ಲಿದ್ದರೆ ಅಂದು ಪಕ್ಷ ಮಾಡಬಹುದೆ ದಯವಿಟ್ಟು ತಿಳಿಸಿ
Vishnudasa Nagendracharya
Dwitiya maaDi
Vidyadheesh,Bangalore
10:56 PM, 17/09/2017
Namo namaha
Pranesh ಪ್ರಾಣೇಶ,Bangalore
7:26 AM , 16/09/2017
ಆಚಾರ್ಯ operation ಮದ್ಯದಲ್ಲಿ ಅಥವಾ ಆದ ನಂತರ operation failure ನಿಂದ ಮೃತರಾದರೆ ಘಾತ ಮರಣ ವೆಂದು ಪರಗಣಿಸಬೇಕೆ?
ಮುತ್ತೈದೆ ಅಪಘಾತದಿಂದ ಮೃತರಾದರೆ ಅವಿಧವಾ ನವಮಿ ಮಾಡಬೇಕೆ ಅಥವಾ ಘಾತ ಚತುರ್ದಶಿ ಮಾಡಬೇಕೆ?
Vishnudasa Nagendracharya
ಆಪರೇಷನ್ನಿನಿಂದ ಮೃತರಾದರೆ ಅದನ್ನು ಅಪಘಾತ ಎಂದು ಪರಿಗಣಿಸಬೇಕಾಗಿಲ್ಲ.
ಕಾರಣ, ರೋಗಿ ಆಪರೇಷನ್ನಿಗೆ ಸ್ಪಂದಿಸದೇ ಇದ್ದಾಗ, ಅಗತ್ಯ ಸಲಕರಣೆಗಳು ಸರಿಯಾದ ಕಾಲಕ್ಕೆ ದೊರೆಯದೇ ಇದ್ದಾಗ, ವೈದ್ಯ, ಸಿಬ್ಬಂದಿಯವರ ಅಚಾತುರ್ಯದಿಂದ ಹೀಗೆ ಅನೇಕ ಕಾರಣಗಳಿಂದ ಮೃತಿ ಉಂಟಾಗಲು ಸಾಧ್ಯವಿರುತ್ತದೆ.
ಮುತ್ತೈದೆ ಅಪಘಾತದಿಂದ ಮರಣ ಹೊಂದಿದರೆ
ಅವಿಧವಾನವಮಿ ಮತ್ತು ಘಾತಚತುರ್ದಶಿ ಎರಡನ್ನೂ ಮಾಡಬೇಕು.
ಅವಿಧವಾನವಮಿಯಲ್ಲಿ ಮೂರು ಪಿಂಡಗಳು.
ಘಾತಚತುರ್ದಶಿಯಲ್ಲಿ ಒಂದೇ ಪಿಂಡದ ಏಕೋದ್ದಿಷ್ಟ ಶ್ರಾದ್ಧ.
AshwathnarayN,Koppal
4:06 PM , 06/09/2017
ಡವುಹಿತ್ರ್ ಶ್ರದ್ಧಾ ಎಂದರೆ ಏನು ಯಾರು ಯಾರು ಮ್ಡ್ ಬೇಕುತಿಳಿಸಿ
Vishnudasa Nagendracharya
ನಿಮ್ಮ ಪ್ರಶ್ನೆ ಹೀಗಿರಬೇಕು - ದೌಹಿತ್ರಶ್ರಾದ್ಧ ಎಂದರೇನು? ಯಾರು ಮಾಡಬೇಕು ತಿಳಿಸಿ.
ಉತ್ತರ ಹೀಗಿದೆ -
ದುಹಿತಾ ಎಂದರೆ ಮಗಳು. ದೌಹಿತ್ರ ಎಂದರೆ ಮಗಳ ಮಗ. ದೌಹಿತ್ರ ಮಾಡುವ ಶ್ರಾದ್ಧ ದೌಹಿತ್ರ ಶ್ರಾದ್ಧ.
ತಂದೆ ತಾಯಿ ಬದುಕಿರುವಾಗಲೂ ಮಗ ತನ್ನ ತಾಯಿಯ ತಂದೆಗೆ ಆಶ್ವೀನ ಶುಕ್ಲ ಪ್ರತಿಪದೆಯ ದಿವಸ ಶ್ರಾದ್ಧವನ್ನು ಮಾಡಬೇಕು. (ತಂದೆ ಬದುಕಿದ್ದಾಗ, ತಾಯಿಯ ತಂದೆಯ ಸಾಂವತ್ಸರಿಕಾದಿ ಶ್ರಾದ್ಧಗಳನ್ನು ಮಾಡಲು ಬರುವದಿಲ್ಲ.) ಈ ಮಾತಾಮಹಶ್ರಾದ್ಧ ಇತರ ಶ್ರಾದ್ಧಗಳಂತಲ್ಲ. ನಾಂದೀಶ್ರಾದ್ಧದಂತೆ ಆಭ್ಯುದಯಿಕವಾದ (ಶ್ರೇಯಸ್ಸನ್ನು ನೀಡುವ ಮಂಗಳವಾದ ಎಂದರ್ಥ) ಶ್ರಾದ್ಧ. ಹೇಗೆ ವಿವಾಹ, ಉಪನಯನ, ಉಪಾಕರ್ಮ, ಗೃಹಪ್ರವೇಶ ಮುಂತಾದವುಗಳಲ್ಲಿ ಮಂಗಲಮಯವಾದ ನಾಂದೀಶ್ರಾದ್ಧವನ್ನು ಮಾಡುತ್ತೇವೆಯೋ ಹಾಗೆ ಆಶ್ವೀನ ಶುಕ್ಲ ಪ್ರತಿಪದೆಯಂದು ಮಗಳ ಮಗನಾದವನು, ತನ್ನ ತಾಯಿಯ ತಂದೆಗೆ ಶ್ರಾದ್ಧವನ್ನು ಮಾಡಬಹುದು. ಇದರಿಂದ ಮಗಳ ಮನೆಗೆ ಅಪಾರವಾದ ಶ್ರೇಯಸ್ಸುಂಟಾಗುತ್ತದೆ. ಮತ್ತು ಮಾತಾಮಹ ಮುಂತಾದ ಪಿತೃಗಳಿಗೆ ಅಪಾರವಾದ ತೃಪ್ತಿಯುಂಟಾಗುತ್ತದೆ.
ಇತ್ತೀಚಿನ ದಿವಸಗಳಲ್ಲಿ ಈ ಆಚರಣೆ ಲುಪ್ತವಾಗಿದೆ.
Vilas,Bellary
1:14 PM , 06/09/2017
Acharyare namaskara
Pitru paksha folder cleared most of my doubts....
Thanks for creating such a great app which is emerging like a digital library of a MADHWA PHILOSOPHY.....
Ananta koti namanagalu for driving us in the right direction
Hare shrinivasa
Prajwal,Bangalore
9:22 PM , 04/09/2017
Riddhi band are avidhwa navmi yavaga madabeku ?
Vishnudasa Nagendracharya
ಯಾವುದೇ ಕಾರಣದಿಂದ ಮಹಾಲಯದಲ್ಲಿ ಪಕ್ಷ, ಅವಿಧವಾನವಮೀ, ಘಾತಚತುರ್ದಶಿ ಮುಂತಾದ ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿದ್ದಲ್ಲಿ ಆಶ್ವೀನ ಕೃಷ್ಣಪಕ್ಷದಲ್ಲಿ ಮಾಡಬೇಕು. ಯ
ಅವಿಧವಾನವಮಿಯನ್ನು ಆಶ್ವೀನಕೃಷ್ಣಪಕ್ಷದ ನವಮಿಯಂದು ಮಾಡಬೇಕು.
Dattatreya,Sandur
9:08 PM , 04/09/2017
ನಮಸ್ಕಾರ ಗುರುಗಳೇ,
ನನ್ನ ತಂದೆಯ ಮರಣವು ಏಕಾದಶಿ ಅದು ಘಾಥದಿಂದ. ಪಕ್ಷ ಯಾವದಿನ ಮಾಡಬೇಕು ತಿಳಿಸಿ
Vishnudasa Nagendracharya
ಸಾಂವತ್ಸರಿಕ ಶ್ರಾದ್ಧದ ಸಂದರ್ಭಗಳಲ್ಲಿ ಏಕಾದಶಿಯ ಶ್ರಾದ್ಧವನ್ನು ದ್ವಾದಶಿ ಮಾಡತಕ್ಕದ್ದು.
ಪಿತೃಪಕ್ಷದಲ್ಲಿ ದ್ವಾದಶಿಯಂದು ಯತಿದ್ವಾದಶಿ ಇರುತ್ತದೆಯಾದ್ದರಿಂದ ಮಾಡಲು ಸಾಧ್ಯವಿಲ್ಲ. ಆದ್ದರಿಂದ
ಅಮಾವಾಸ್ಯಾ
ಭರಣೀ
ಅಥವಾ
ಮಧ್ಯಾಷ್ಟಮಿಯಂದು ಸರ್ವಪಿತೃಗಳ ಪಕ್ಷಶ್ರಾದ್ಧವನ್ನು ಮಾಡಬೇಕು.
ಘಾತಚತುರ್ದಶಿಯಂದು ನಿಮ್ಮ ತಂದೆಯವರಿಗೆ ಮಾತ್ರ ಘಾತಚತುರ್ದಶೀಶ್ರಾದ್ಧವನ್ನು ಮಾಡಬೇಕು.