(You can only view comments here. If you want to write a comment please download the app.)
Raghavendra,Bangalore
12:38 PM, 04/10/2017
ಅಚಾರ್ಯರೇ, ಈ ಸ್ನಾನ ಮಾಡುವ ಸಮಯವನ್ನು ತಿಳಿಸಿಕೊಡುವಿರ
Vishnudasa Nagendracharya
ಸೂರ್ಯೋದಯಕ್ಕಿಂತ ಮುಂಚೆ.
Pranesh ಪ್ರಾಣೇಶ,Bangalore
1:23 PM , 04/10/2017
ಆಚಾರ್ಯ ದಯವಿಟ್ಟು ಕೆಲವು ಸಂಶಯ ಪರಿಹರಿಸಿ
1.ಸ್ನಾನದ ಕಾಲ
2.ನಮ್ಮ ಮನೆಯಲ್ಲಿ ಒಂದು ಬಲಮುರಿ ಪೂಜ್ಯ ಶಂಖ ಯಡ ಮುರಿ ಪೂಜನೀಯ ಶಂಖ ದೇವರ ಅಭಿಷೇಕಾದಿ ಕಾಲದಲ್ಲಿ ಬಳಸುವ ಶಂಖ ಇದರಲ್ಲಿ ಯಾವುದನ್ನು ಬಳಸಬೇಕು
3. ಪಿತೃಗಳಿಗೆ ತರ್ಪಣ ಯಾವಾಗ ಕೊಡಬೇಕು (ದೇವರಿಗೆ ನಾಧ್ಯಅಭಿಮಾನಿಗಳಿಗೆ ಆದ ನಂತರನೋ ಅಥವಾ ದೇವರ ಪೂಜೆ ನಂತರನೋ)
4. ಅರ್ಘ್ಯದಲ್ಲಿ ರತ್ನ ಸುವರ್ಣ ಬಳಸುವುದಕ್ಕೆ ಭಾಗ್ಯಹೀನರಾದವರು ಏನು ಮಾಡಬೇಕು?
5. ರತ್ನ ಸುವರ್ಣ ಬಳಸಿದ ಪಕ್ಷದಲ್ಲಿ ಅವುಗಳನ್ನು ಪುನರ್ ಬಳಕೆ (ದೇವರಿಗೆ ಕನಕಾಭಿಶೇಕಕ್ಕೆ)ಮಾಡಬಹುದ ?
ಹೌದಾದರೆ ಅವುಗಳನ್ನು ಶುದ್ಧಿ ಮಾಡಬೇಕೆ?
Vishnudasa Nagendracharya
1. ಸೂರ್ಯೋದಯಕ್ಕಿಂತ ಮುಂಚೆ.
2. ಪೂಜಕಶಂಖ (ಪೂಜನೀಯ ಅಲ್ಲ. ಪೂಜ್ಯ ಮತ್ತು ಪೂಜನೀಯ ಎರಡೂ ಒಂದೇ ಅರ್ಥವನ್ನು ನೀಡುವ ಶಬ್ದಗಳು. ನಿಮ್ಮ ಅಭಿಪ್ರಾಯವನ್ನು ತಿಳಿಸಲು ನೀವು ಪೂಜಕ ಎಂಬ ಶಬ್ದ ಬಳಸಬೇಕು) ಎಡಮುರಿ ಶಂಖದಿಂದ ಅರ್ಘ್ಯವನ್ನು ನೀಡತಕ್ಕದ್ದು.
3. ಪಿತೃಗಳಿಗೆ ತರ್ಪಣ ದೇವರ ಪೂಜೆ, ವೈಶ್ವದೇವ ಮುಗಿದ ಬಳಿಕ. (ಎಲ್ಲ ತರ್ಪಣಗಳಿಗೂ ಇದು ಅನ್ವಯಿಸುತ್ತದೆ)
4. ತುಳಸಿಗಿಂತ ಮಿಗಿಲಾದ ರತ್ನವುಂಟೇ. ಇದಕ್ಕೆ ನನ್ನ ಲೇಖನ ಉಪನ್ಯಾಸಗಳಲ್ಲಿ ಅನೇಕ ಬಾರಿ ಉತ್ತರ ನೀಡಿದ್ದೇನೆ. ಮುತ್ತು ಮತ್ತು ಹವಳಗಳು ತುಂಬ ಕಡಿಮೆ ಬೆಲೆಯಲ್ಲಿಯೇ ದೊರೆಯುವ ರತ್ನಗಳು.
5. ಒಮ್ಮೆ ಬಳಸಿದ ರತ್ನ-ಕನಕಾದಿಗಳನ್ನು ಅವಶ್ಯವಾಗಿ ಮತ್ತೊಮ್ಮೆ ದೇವರಿಗೆ ಸಮರ್ಪಿಸಲು, ಕನಕಾಭಿಷೇಕಾದಿಗಳಿಗೆ ಬಳಸಬಹುದು. ಶುದ್ಧ ನೀರಿನಿಂದ ತೊಳೆದು ಬಳಸಬೇಕು. ರತ್ನ-ಬಂಗಾರ-ಬೆಳ್ಳಿಗಳ ಮೇಲೆ ಪ್ರಮಾದದಿಂದ ಎಂಜಲು ಮುಸುರೆ ತಗುಲಿದರೆ ಒಮ್ಮೆ ಬೆಂಕಿಯಲ್ಲಿಟ್ಟು ಬಳಸಬಹುದು.
P.R.SUBBA RAO,BANGALORE
11:24 PM, 04/10/2017
ಶ್ರೀ ಗುರುಭ್ಯೋನಮಃ
ಕಾರ್ತಿಈಕ ಸ್ನಾನದ ಸಮಯಕ್ಕೆ ಸರಿಯಾಗಿ ಈ ಲೇಖನ ದೊರಕಿದ್ದು ಬಹಳ ಉಪಕಾರ ವಾಗಿದೆ
ಅನಂತಾನಂತ ವಂದನೆಗಳು
ಇಂತಿ ತಮ್ಮ ವಿಧೇಯ