ಅಕ್ಷಯತೃತೀಯಾ ಹಬ್ಬವಲ್ಲ. ಮತ್ತು ಅಂದು ಪಿತೃಗಳಿಗೆ ಶ್ರಾದ್ಧ ತರ್ಪಣದ ವಿಧಿಯಿದೆ. ಹೀಗಾಗಿ ಗಂಡಸರಾಗಲೀ, ಹೆಂಗಸರಾಗಲೀ ಎರೆದುಕೊಳ್ಳಬಾರದು.
ಆ ದಿವಸ ಮನೆಯಲ್ಲಿ ಶ್ರಾದ್ಧ ಮಾಡುವದಿದ್ದರೆ ಕರ್ತೃವಿನ ಹೆಂಡತಿ ತಲೆಗೆ ಎಣ್ಣೆ ಹಚ್ಚಿಕೊಳ್ಳದೇ ತಲೆಸ್ನಾನ ಮಾಡಿ ಶ್ರಾದ್ಧಕ್ಕೆ ಅಡಿಗೆ ಮಾಡಿಕೊಡಬೇಕು.
ಮಾಡಿದ ಅಷ್ಟೂ ಗಂಧವನ್ನು ಮೊದಲು ಸಾಲಿಗ್ರಾಮ ಪ್ರತಿಮೆಗಳಲ್ಲಿರುವ ಶ್ರೀಹರಿಗೆ ಸಮರ್ಪಿಸಬೇಕು.
ಆ ನಂತರ ಅದೇ ಗಂಧವನ್ನು ಪ್ರಾಣದೇವರಿಗೆ ಸಮಗ್ರವಾಗಿ ಸಮರ್ಪಿಸಬೇಕು.
ಪ್ರಾಣದೇವರಿಗೆ ಸಮರ್ಪಿಸಿದ್ದರಲ್ಲಿ ಸ್ವಲ್ಪ ತೆಗೆದು ರುದ್ರಾದಿಗಳಿಗೆ ಸಮರ್ಪಿಸಬೇಕು.
ಪ್ರಾಣದೇವರಿಗೆ ಸಮರ್ಪಿಸಿದ್ದನ್ನೇ ತೆಗೆದು ಗುರುಗಳಿಗೆ ಸಮರ್ಪಿಸಬೇಕು.
ಗುರುಗಳಿಗೆ ಸಮರ್ಪಿಸಿದ ನಂತರ ನಾವು ಹಚ್ಚಿಕೊಳ್ಳಬೇಕು.
ರುದ್ರ-ಗಣಪತಿ ಮುಂತಾದವರಿಗೆ ಸಮರ್ಪಿಸಿದ್ದನ್ನು ಮಾರನೆಯ ದಿವಸ ವಿಸರ್ಜಿಸಬೇಕು. ಗುರುಗಳಿಗೆ ಸಮರ್ಪಿಸಿದ್ದನ್ನು ಅವಶ್ಯವಾಗಿ ನಾವು ಹಚ್ಚಿಕೊಳ್ಳಬಹುದು.
ನೀವು ಪ್ರಾಣದೇವರಿಗೆ, ದೇವತೆಗಳಿಗೆ, ಗುರುಗಳಿಗೆ ಗಂಧಾಲಂಕಾರ ಮಾಡುವಗಲೂ ಇದೇ ಕ್ರಮವನ್ನು ಅನುಸರಿಸಬೇಕು. ಮೊದಲು ಸಾಲಿಗ್ರಾಮಕ್ಕೆ, ಆ ನಂತರ ಭಾರತೀಪತಿಗೆ, ಆ ನಂತರ ದೇವತಾ-ಗುರುಗಳಿಗೆ.
T raghavendra,Mangalore
12:18 PM, 07/05/2019
Fine
Madhvwshachar,Bangalore
10:28 PM, 28/04/2017
excellent article Acharyare
ಪ್ರಶಾಂತ ಲ ಸೂರ್ಯವಂಶಿ,ಗಜೇಂದ್ರಗಡ
10:41 PM, 28/04/2017
ಅಕ್ಷಯ ತೃತೀಯಂದು ಬಂಗಾರ ತರುವುದಯ ಸರಿನಾ
Vishnudasa Nagendracharya
ಈ ದಿವಸ ಬಂಗಾರವನ್ನು ಕೊಳ್ಳಬೇಕು ಎಂಬ ನಿಯಮ ಸರ್ವಥಾ ಇಲ್ಲ.
ಬಂಗಾರವನ್ನು ತರುವದಿದ್ದರೆ, ಅದನ್ನು ಯಾರು ಉಪಯೋಗಿಸುತ್ತಾರೆಯೋ ಅವರ ತಾರಾಬಲ ಅನುಕೂಲ ಇರುವ ದಿವಸ ತರಬೇಕು.
ಅಕ್ಷಯತೃತೀಯಾದಂದು ಕೊಂಡುಕೊಳ್ಳಲೇಬೇಕು, ಕೊಂಡುಕೊಂಡರೆ ಅಕ್ಷಯವಾಗುತ್ತದೆ ಎಂದೆಲ್ಲ ಇಲ್ಲ.
ಬಂಗಾರವನ್ನು ತರುವದಿದ್ದರೆ, ಅದನ್ನು ಯಾರು ಉಪಯೋಗಿಸುತ್ತಾರೆಯೋ ಅವರ ತಾರಾಬಲ ಅನುಕೂಲ ಇರುವ ದಿವಸ ತರಬೇಕು.
ತಾರಾಬಲವಿಲ್ಲದ ದಿವಸ ತಂದರೆ ತೊಂದರೆಗಳುಂಟಾಗುತ್ತವೆ.
ಅಕ್ಷಯ ತೃತೀಯಾದಂದು ತರಬೇಕಾದರೂ ತಾರಾಬಲ ನೋಡಲೇಬೇಕು.
K.Revathi sreenivas,Shakthinagar, Raichur
10:07 AM, 29/04/2017
ಧನ್ಯವಾದಗಳು ಗುರುಗಳೇ ಈ ದಿನ ನೀವು ಹೇಳಿದ ರೀತಿಯಲ್ಲಿಯೇ ದೇವರ ಪೂಜೆಯನ್ನು ಮಾಡಿ, ಹೊಸ ರೀತಿಯ ಕೃತಾರ್ಥತೆಯನ್ನು ಅನುಭವಿಸುತ್ತಿದ್ದೇವೆ. ಹೀಗೆಯೇ ನಮ್ಮನ್ನು ಕೈ ಹಿಡಿದು ಉದ್ಧರಿಸಿ ಗುರುಗಳೇ... ನಿಮ್ಮ ಅಂತರ್ಯಾಮಿಗೆ ನಮ್ಮ ಅನಂತ ನಮನಗಳು...