(You can only view comments here. If you want to write a comment please download the app.)
Vikram Shenoy,Doha
5:46 PM , 18/01/2021
ಅತೀ ಉತ್ತಮ ಆಚರ್ಯೇರೇ. 🙏🙏🙏🙏🙏
Vijaykrishna V,Hubballi
12:14 PM, 18/01/2021
Guruvarya namonamaha🙏 nimma ee jyana koduva kelasakke naa sada runi🙏
Nanna prashne iste...nanna obba snehitana tande dharmadashigalagiddare, avaru pooje maaduvalli eradu saligramagalu biddu bhinnavaagive,astaagiyu avaru adannu iga saha pooje maaduttale iruvaru ..adu sariye? Illavaadare parihara tilisi.
Dhanyosmi guruvarya 🙏🙏
Vishnudasa Nagendracharya
ಕೆಳಗಿನ ಕಾಮೆಂಟಿನಲ್ಲಿ ತಿಳಿಸಿದ ವಿಷಯಗಳು ಇಲ್ಲಿಗೂ ಅನ್ವಯ.
ಸಾಲಿಗ್ರಾಮಗಳು ಒಡೆದಾಗ ಯಾವ ರೀತಿ ಒಡೆದಿದೆ ಎನ್ನುವದನ್ನು ಪರೀಕ್ಶಿಸಬೇಕು.
ಯಾವ ಒಡೆದಿರುವ ಭಾಗದಲ್ಲಿ ಮಧ್ಯದ ಸುಳಿ ಸಮೇತ ಚಕ್ರವಿದ್ದರೆ ಅದನ್ನು ಅವಶ್ಯವಾಗಿ ಸುದರ್ಶನ ಎಂದು ಪೂಜೆ ಮಾಡಬಹುದು.
ಒಡೆದಿರುವ ಭಾಗದಲ್ಲಿ ಕೇವಲ ರೇಖೆಗಳಿದ್ದು ಮಧ್ಯದಲ್ಲಿ ಸುಳಿ ಇಲ್ಲವಾದರೆ, ಅಥವಾ ಸುಳಿ ಇದ್ದೂ ಅತ್ಯಂತ ವಿಕಾರವಾದ ರೂಪವನ್ನು ಪಡೆದಿದ್ದರೆ, ಅದನ್ನು ನದಿ ಸಮುದ್ರಗಳಲ್ಲಿ ವಿಸರ್ಜನೆ ಮಾಡಿಬಿಡಬೇಕು.
Shravan Prabhu,Kumta taluk near gokarna
4:20 PM , 15/01/2021
ಆಚಾರ್ಯರಿಗೆ ಸಾಷ್ಟಾಂಗ ಪ್ರಣಾಮಗಳು, ಆಚಾರ್ಯರೇ ಅಭಿಷೇಕ ಮಾಡುವ ಶಂಖಕ್ಕೆ ಬೆಳ್ಳಿ, ಮುತ್ತಿನ ಅಥವಾ ಬಂಗಾರದ ಕವಚವನ್ನು ಹಾಕಲೇಬೇಕೇ, ಹಾಕದೆ ಅಭಿಷೇಕವನ್ನು ಮಾಡಬಾರದೇ?
ಇನ್ನೊಂದು ಪ್ರಶ್ನೆ, ಶಂಖಕ್ಕೆ ಕವಚವನ್ನು ಅಳವಡಿಸಬೇಕಾದರೆ ಶಂಖದ ಗರ್ಭವನ್ನು ಮತ್ತು ಶಂಖವನ್ನು ಒಡೆಯುತ್ತಾರೆ, ಇದರಿಂದ ಶಂಖ ಭಿನ್ನ ಆಗುವುದಿಲ್ಲವೇ?
ಪ್ರಶ್ನೆ ಕೇಳಿದ್ದಲ್ಲಿ ಏನಾದ್ರೂ ತಪ್ಪಿದ್ದರೆ ದಯವಿಟ್ಟು ಕ್ಷಮಿಸಬೇಕು.
🙏🙏🙏
Vishnudasa Nagendracharya
ದೇವರಿಗೆ ದೇವತೆಗಳಿಗೆ ಸಂಬಂಧಿಸಿದ ಸಾಲಿಗ್ರಾಮ, ಶಂಖ, ಗಂಟೆ, ಲಿಂಗ ಮುಂತಾದ ಯಾವುದೇ ಪ್ರತೀಕಗಳನ್ನು ನಾವು ದೇವರ ಪೂಜೆಗೆ ಬಳಸಬೇಕಾದರೂ ಅದಕ್ಕೆ ಕೆಲವು ಸಂಸ್ಕಾರವಾಗಲೇಬೇಕು.
ಅಷ್ಟೇಕೆ ದೇವರಿಗೆ ನೈವೇದ್ಯ ಮಾಡುವ ಪದಾರ್ಥಗಳು, ಅರ್ಪಿಸುವ ಹೂ ತುಳಸಿಗಳೂ ಸಹ ಹೀಗೇ ಇರಬೇಕೆಂಬ ನಿಯಮಗಳಿವೆ.
ಹಾಗೆ, ಶಂಖಕ್ಕೂ ಸಹ.
ಶಂಖ ಎನ್ನುವದು ಆ ಪ್ರಾಣಿಯ ಅಸ್ಥಿ. ಮೂಳೆ.
ಮನುಷ್ಯರಿಗೆ ಬೆನ್ನುಮೂಳೆ ಇದ್ದಂತೆ, ಶಂಖದ ಮಧ್ಯಭಾಗದಲ್ಲಿ ಉದ್ದನೆಯ ಪದಾರ್ಥ ಇರುತ್ತದೆ. ಅದನ್ನು ಗರ್ಭ ಎನ್ನುತ್ತೇವೆ.
ಆ ಗರ್ಭವನ್ನು ತೆಗೆದಾಗ ಮಾತ್ರ ಅದರಲ್ಲಿ ದೇವತಾ ಸನ್ನಿಧಾನ ಉಂಟಾಗುತ್ತದೆ. ಅದಕ್ಕೆ ಬಂಗಾರ ಅಥವಾ ಬೆಳ್ಳಿಯ ಕಟ್ಟನ್ನು ಹಾಕಿಸಿದಾಗ ಅದು ಪೂಜೆಯಲ್ಲಿ ಉಪಯೋಗಿಸಲು ಬರುತ್ತದೆ.
ಬಲಮುರಿ ಶಂಖಕ್ಕೂ ಸಹಿತ ಬಂಗಾರ ಬೆಳ್ಳಿಗಳ ಕಟ್ಟನ್ನು ಹಾಕಿಸುವ ಪದ್ಧತಿ ಇದೆ.
ಶ್ರೀಮದಾಚಾರ್ಯರು ಪೂಜಿಸುತ್ತಿದ್ದ ಏಳು ಬಲಮುರಿ ಶಂಖಗಳಲ್ಲಿ ಎರಡು ಶ್ರೀಮದ್ ವ್ಯಾಸರಾಜಸಂಸ್ಥಾನದಲ್ಲಿದೆ. ಮುನಿತ್ರಯರಿಂದ ಪೂಜಿತವಾಗಿರುವ ಆ ಶಂಖಗಳಿಗೆ ಬಂಗಾರದ ಕಟ್ಟು ಇರುವದನ್ನು ಇಂದಿಗೂ ಕಾಣಬಹುದು.
ಇನ್ನು ಸಕಲ ದೇವಸ್ಥಾನ, ಮತ್ತು ಶ್ರೀಮದಾಚಾರ್ಯರ ಪವಿತ್ರ ಪರಂಪರೆಗಳಲ್ಲಿ ಅಭಿಷೇಕಕ್ಕೆ ಬಳಸಲಾಗುವ ಎಲ್ಲ ಶಂಖಗಳಿಗೂ ಬೆಳ್ಳಿ ಅಥವಾ ಬಂಗಾರದ ಕವಚ ಇರುವದು ಅತ್ಯಂತ ಸುಸ್ಪ,ಷ್ಟವಾಗಿದೆ.
ಹೀಗೆ ಶಾಸ್ತ್ರೀಯವೂ ಸಾಂಪ್ರದಾಯಿಕವೂ ಆದ ಈ ಪದ್ಧತಿಯನ್ನು ನಾವು ಅವಶ್ಯವಾಗಿ ಅನುಸರಿಸಬೇಕು.
ಇನ್ನು ಗರ್ಭ ತೆಗೆಯುವದರಿಂದ ಭಿನ್ನ ಆಗುವದಿಲ್ಲವೇ ಎಂಬ ಪ್ರಶ್ನೆ.
ಪ್ರತೀಕ ಭಿನ್ನ ಆಗುವದು ಎಂದರೇನು ಎಂದು ನಾವು ಸ್ಪಷ್ಟವಾಗಿ ಅರಿಯಬೇಕು.
ಯಾವುದೇ ಪ್ರತಿಮೆಯಾದರೂ ಅದಕ್ಕೆ ಕಿವಿ ಬಾಯಿ ಮುಂತಾದವು ಇದ್ದೇ ಇರುತ್ತವೆ.
ಆ ಕಿವಿ ಬಾಯಿ ಕಣ್ಣು ಎಲ್ಲವೂ ಸಹ ಪ್ರತಿಮೆಯನ್ನು ಭಿನ್ನ ಮಾಡಿದಾಗ ತಾನೇ ಉಂಟಾಗುವದು.
ಆದರೆ ಅದು ಅವಶ್ಯವಾಗಿ ಗ್ರಾಹ್ಯ.
ಅಷ್ಟೇಕೆ ಸಾಲಿಗ್ರಾಮಕ್ಕೂ ವದನ ಇರುತ್ತದೆ. ಅಂದರೆ ಆ ಪ್ರದೇಶದಲ್ಲಿ ಅದು ಭಿನ್ನವಾಗಿದೆ ಎಂದೇ ಅರ್ಥ. ಹಾಗಂತ ಅದು ಅಪೂಜ್ಯವೇ ಅಲ್ಲ.
ಆದರೆ ಅದೇ ಸಾಲಿಗ್ರಾಮ ಕೆಳಗೆ ಬಿದ್ದು ಒಡೆದಾಗ ಅದು ಅಪೂಜ್ಯ
ಅಂದರೆ, ಯಾವ ಸ್ಥಳದಲ್ಲಿ ಭಿನ್ನವಾದಾಗ ಪ್ರತಿಮೆ, ಸಾಲಿಗ್ರಾಮ, ಶಂಖಗಳು ವಿಕಾರದ ರೂಪವನ್ನು ತಾಳುತ್ತದೆಯೋ ಆ ರೀತಿಯ ಭಿನ್ನತೆಯಿಂದ ಅದು ಅಪೂಜ್ಯವಾಗುತ್ತದೆ. ಹೊರತು, ಸುಲಕ್ಷಣವಾದ ಕ್ರಮದಲ್ಲಿ ಭಿನ್ನಗೊಂಡಾಗ, ಅರ್ಥಾತ್ ಶಿಲ್ಪಿಗಳು ಕೆತ್ತಿದಾಗ ಅದು ಭಿನ್ನ ಎಂದು ಕರೆಸಿಕೊಳ್ಳುವದಿಲ್ಲ.
ಶಂಖದ ಗರ್ಭವನ್ನು ತೆಗೆದರೇ ಅದು ಪೂಜ್ಯ ಎಂದು ಶಾಸ್ತ್ರ ಹೇಳಿರುವದರಿಂದ ಅದನ್ನು ಕುಶಲ ಬಡಗಿಗಳಿಂದ ತೆಗೆಯಿಸಿ ಪೂಜಿಸತಕ್ಕದ್ದು.
Srihari M Subodha,Bangalore
8:53 PM , 20/12/2017
ಶ್ರೀ ಪ್ರಾಣದೇವರಿಗೆ ಮಧು ಅಭಿಷೇಕ ಮಾಡುವದಿದ್ದರೆ ಹೇಗೆ ಮಾಡಬೇಕು?
ಸಮಗ್ರ ಪೂಜೆ ಮುಗಿದ ಬಳಿಕ ದೇವರ ತೀರ್ಥವನ್ನು ಸ್ವೀಕರಿಸಿದ ನಂತರ ಪ್ರಾಣದೇವರ ತೀರ್ಥವನ್ನು ಸ್ವೀಕರಿಸಬೇಕು.
Praveen Patil,Bangalore
12:18 PM, 12/08/2017
ಗುರುಗಳೆ, ಪ್ರತಿ ದಿವಸದ ಪೂಜೆಯಲ್ಲಿ ಲಕ್ಷ್ಮೀ ದೇವಿಯರ ಪ್ರತಿಮೆಯನ್ನು ಭಗವಂತನ ಪ್ರತಿಮೆಗಳ ಸಹಿತವಾಗಿ ಶೋಡಶೋಪಚಾರ ಪೂಜೆಯನ್ನು ಮಾಡಬಹುದಾ ಅಥವಾ ಭಗವಂತನಿಗೆ ಮಾಡಿದ ನಂತರ ಪೂಜೆ ಮಾಡಬೇಕಾ ಎಂದು ದಯಮಾಡಿ ತಿಳಿಸಿರಿ...
Vishnudasa Nagendracharya
VNU483 ಉಪನ್ಯಾಸದಲ್ಲಿ ಈಗಾಗಲೇ ವಿವರಿಸಿದ್ದೇನೆ.
ಲಕ್ಷ್ಮೀದೇವಿಯ ಪ್ರತಿಮೆಯನ್ನು ಪ್ರತ್ಯೇಕವಾಗಿ ಪೂಜಿಸತಕ್ಕದ್ದಲ್ಲ. ಭಗವಂತನ ಪ್ರತಿಮೆಗಳೊಂದಿಗೇ ಪೂಜಿಸಬೇಕು.
Jayashree Karunakar,Bangalore
12:40 PM, 10/08/2017
ಗುರುಗಳೆ
ಪ್ರತೀದಿವಸ ಮನೆಯಲ್ಲಿ ನಾವು ಅಧ್ಯಯನ ಮಾಡಲೇಬೇಕಾದ ಗ್ರಂಥಗಳನ್ನು ತಿಳಿಸಿಕೊಡಿ ಹಾಗೂ ಕ್ರಮವನ್ನು ದಯಮಾಡಿ ತಿಳಿಸಿ.
Vishnudasa Nagendracharya
ಸರ್ವಶಾಸ್ತ್ರನಿರ್ಣಾಯಕವಾದ ಬ್ರಹ್ಮಸೂತ್ರಗಳು
ಭಗವದ್ಗೀತಾ
ವಿಷ್ಣುಸಹಸ್ರನಾಮ
ಮಹಾಭಾರತ
ಅಪೌರುಷೇಯವಾದ ವೇದಗಳು
ಭಾಗವತ, ರಾಮಾಯಣಾದಿ ಗ್ರಂಥಗಳು
ಸ್ಮೃತಿಗ್ರಂಥಗಳು
ಶ್ರೀಮದಾಚಾರ್ಯರ ಭಾಷ್ಯಗಳು
ಶ್ರೀ ಟೀಕಾಕೃತ್ಪಾದರೇ ಮೊದಲಾದವರು ರಚಿಸಿರುವ ಟೀಕಾಗ್ರಂಥಗಳು
ಶ್ರೀ ಚಂದ್ರಿಕಾಚಾರ್ಯರೇ ಮೊದಲಾದವರು ರಚಿಸಿರುವ ಟಿಪ್ಪಣಿಗಳು
ಶ್ರೀ ವಾದಿರಾಜಗುರುಗಳೇ ಮೊದಲಾದವರು ರಚಿಸಿರುವ ಸ್ವತಂತ್ರಕೃತಿಗಳು
ಇವುಗಳೆಲ್ಲವನ್ನೂ ಬ್ರಾಹ್ಮಣಪುರುಷರು ಅಧ್ಯಯನ ಮಾಡಬೇಕು.
ತನ್ನ ಗಂಡ ಅಥವಾ ಗುರುಗಳಿಂದ ಆ ಗ್ರಂಥಗಳ ನಿರ್ಣೀತಾರ್ಥವನ್ನು, ಸಾರಾರ್ಥವನ್ನು ಸ್ತ್ರೀಯರು ತಿಳಿಯಬೇಕು.
ಅದರ ಜೊತೆಯಲ್ಲಿ ಮಹಾನುಭಾವರು ರಚಿಸಿರುವ ಸ್ತೋತ್ರಗಳು
ಪುರಂದರದಾಸಾರ್ಯರೇ ಮೊದಲಾದ ಭಾಗವತೋತ್ತಮರು ರಚಿಸಿರುವ ಶಾಸ್ತ್ರಸಾರಗಳನ್ನೊಳಗೊಂಡ ದಾಸಸಾಹಿತ್ಯದ ಕೃತಿಗಳನ್ನು ಸ್ತ್ರೀಪುರುಷರಿಬ್ಬರೂ ಅಧ್ಯಯನ ಮಾಡಬೇಕು.
ಭಗವಂತನನ್ನು ತಿಳಿಸಿಕೊಡುವ ಶಾಸ್ತ್ರದ ಅಧ್ಯಯನ, ನಮ್ಮ ಬುದ್ಧಿಯ ಯೋಗ್ಯತೆಯಂತೆ ಪರಿಪೂರ್ಣವಾಗಿ ನಡೆಯಬೇಕು.
ಬೆಂಗಳೂರಿನಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಸ್ತಕಗಳು ದೊರೆಯುವ ಸ್ಥಳಗಳು
ವಂದನಾ ಬುಕ್ ಹೌಸ್, ತ್ಯಾಗರಾಜನಗರ
ವೇದಾಂತ ಬುಕ್ ಹೌಸ್, ಚಾಮರಾಜಪೇಟೆ
ಮತ್ತು ಆಯಾಯಾ ಮಠಗಳು ಮತ್ತು ಸಂಸ್ಥೆಗಳು.
Mqadhwakart ಎನ್ನುವ ವೆಬ್ಸೈಟು ಸಹ ಪುಸ್ತಕಮಾರಾಟದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ.
Srihari M Subodha,Bangalore
7:01 PM , 10/08/2017
Ee lekhanadalli yava devathagala pratimegalu iralebeku endu thilisiddakke dhanyavadagalu. Avu illadidda pakshadalli avannu kondu tharabahude athava yaradaru sajjanarannu keli padedukollabeke???
Vishnudasa Nagendracharya
ಸಾಲಿಗ್ರಾಮಗಳನ್ನು ಮತ್ತು ಈಗಾಗಲೇ ಪೂಜೆಗೊಳ್ಳುತ್ತಿರುವ ಪ್ರತಿಮೆಗಳನ್ನು ಮಾತ್ರ ಹಣ ಕೊಟ್ಟು ಕೊಂಡುಕೊಳ್ಳಬಾರದು.
ಅಂಗಡಿಗಳಲ್ಲಿ ಮಾರಾಟಕ್ಕಿರುವ ಪ್ರತಿಮೆಗಳನ್ನು ಅವಶ್ಯವಾಗಿ ಕೊಂಡುಕೊಳ್ಳಬಹುದು.
ಆದರೆ, ಅವು ಸುಲಕ್ಷಣವಾಗಿರಬೇಕು. ಮತ್ತು ಉತ್ತಮ ರೀತಿಯಲ್ಲಿ ನಿರ್ಮಾಣವಾಗಿರಬೇಕು. (ಇತ್ತೀಚಿಗೆ ಕೆಮಿಕಲ್ಲುಗಳ ಮತ್ತು ಕಳಪೆ ಲೋಹಗಳ ಬಳಕೆ ತುಂಬ ಆಗಿದೆ. ಎಚ್ಚರದಲ್ಲಿರಬೇಕು.)