(You can only view comments here. If you want to write a comment please download the app.)
H. Guruprasad,Bangalore
12:47 PM, 16/12/2021
My dear sir article will get download always kindly request you look into this problem.
Sowmya Manchenalli Venkatesh,Bangalore
1:40 AM , 29/10/2020
Karthikaa masaa pooje have tilisi kodi gurugale. . Dayavitu
Mythreyi Rao,Bengaluru
1:11 PM , 13/12/2019
ಧನುರ್ಮಾಸದ ಸ್ನಾನವನ್ನು ಹಿಂದೆಲ್ಲ ನದಿತೀರ, ಕಲ್ಯಾಣಿ ಕಡೆಗೆ ಬಾವಿಯಲ್ಲಾದರೂ ಮಾಡಬೇಕು ಅಂತಿದ್ರು. ಇದೇ ಸರಿಯಾದ ಕ್ರಮವೇ ಗುರುಗಳೆ
Mythreyi Rao,Bengaluru
1:06 PM , 13/12/2019
ಗುರುಗಳೆ ಪ್ರಣಾಮಗಳು.
ಧನುರ್ಮಾಸದ ಆಚರಣೆ ಈವರೆವಿಗೆ ಹಿಂದೆಂದೂ ಮಾಡದಿದ್ದು, ಲೇಖನ ಓದಿದ ನಂತರ ದೋಷದ ಭಯದಿಂದ ಮಾಡಬೇಕೆನ್ನುವವರಿಗೆ ಏನು ಮಾಡುವುದು?
ಪ್ರಶ್ನೆ ಉದ್ಧಟತವೆನಿಸಿದಲ್ಲಿ ಕ್ಷಮಿಸಿ.
Shree,Bengaluru
12:58 PM, 13/12/2019
Gurugalige pranaamagalu
Bharathisha,Bangalore
9:50 PM , 12/12/2018
ಆಚರ್ಯರೆ ಬಹಳ ಉತ್ತಮವಾದ ವಿವರಣೆ...
ಒಂದು ಸಣ್ಣ ಸಂದೇಹ..ಹುಗ್ಗಿಗೆ ಸಾಮಾನ್ಯವಾಗಿ ಕೊಬ್ಬರಿ,ಮೆಣಸು,ಜೀರಿಗೆ...ಬಳಸುತ್ತಾರೆ...ಇದು ಸರಿಯೇ....
ಅಥವಾ ಕೇವಲ ಮೊಸರು,ಶುಂಠಿ, ಬೆಲ್ಲ,ಏಲಕ್ಕಿ...ಇವುಗಳನ್ನು ಮಾತ್ರಾ ಬಳಸಬೇಕಾ...ದಯವಿಟ್ಟು ತಿಳಿಸಿ
Vishnudasa Nagendracharya
ಹಸಿ ಶುಂಠಿ ಒಣ ಶುಂಠಿಗಳನ್ನು ಹುಗ್ಗಿಗೆ ಹಾಕಿ, ಸ್ವಲ್ಪ ಬೆಲ್ಲವನ್ನು ಹುಗ್ಗಿ ಮತ್ತು ಗೊಜ್ಜಿಗೆ ಹಾಕಿ, ಮೊಸರನ್ನು ಹುಗ್ಗಿಯೊಂದಿಗೆ ಇಟ್ಟು ನೈವೇದ್ಯ ಮಾಡುವದು ಪದ್ಧತಿ.
Shanthala Mamilla.S,Davanagere
9:18 PM , 12/12/2018
Dhanyavadagalu Gurugale 🙏
v arvind sangam,raichur
12:57 PM, 12/12/2018
🙏🙏🙏🙏🙏🙏
Giri.s,Bangalore
5:39 AM , 05/12/2018
Good massage
Gururaj Pandurang Joshi,Ponda
4:33 PM , 24/06/2018
Listen
Nagarajan,Bangalore
12:36 AM, 14/01/2018
ధ జయ
Nithinchandra,Atmakur
5:58 PM , 12/01/2018
ಧನುರ್ಮಾಸದಲ್ಲಿ ಊಟಕ್ಕೂ ಅಷ್ಟೆ ಮಹತ್ವ ಇದೆಯಾ ಆಚಾರ್ಯ?
Vishnudasa Nagendracharya
ಧನುರ್ಮಾಸದಲ್ಲಿ ಊಟದ ನಿಯಮವನ್ನು ಶಾಸ್ತ್ರ ವಿಧಿಸಿದ್ದು ನನ್ನ ಕಂಡಿಗೆ ಕಂಡಿಲ್ಲ. ಇದು ಶಿಷ್ಟಾಚಾರದಿಂದ ಬಂದದ್ದು.
ಶಿಷ್ಟಾಚಾರಕ್ಕೂ ಕಾರಣಗಳಿವೆ.
ಮಾಡಿದ ಅಡಿಗೆಯನ್ನು ನಾಲ್ಕು ಗಂಟೆಗಳ ಒಳಗೆ ಊಟ ಮಾಡಬೇಕು. ಬಹಳ ವಿಳಂಬ ಮಾಡಬಾರದು. ಮತ್ತು ಸಾಮಾನ್ಯವಾಗಿ ಬ್ರಾಹ್ಮಣರಲ್ಲಿ ಪೂಜೆ ಮುಗಿದ ತಕ್ಷಣ ಊಟ ಮಾಡುವ ಪದ್ಧತಿ. ಹೀಗಾಗಿ ಧನುರ್ಮಾಸದಲ್ಲಿಯೂ ಸಹ ಬೇಗನೇ ಊಟ. ಆದರೆ ದ್ವಾದಶಿಯಂತೆ ಇಷ್ಟು ಹೊತ್ತಿನಲ್ಲಿಯೇ ಮಾಡಬೇಕೆಂಬ ನಿಯಮವಿಲ್ಲ. ವೃಥಾ ವಿಲಂಬ ಮಾಡದೇ ಊಟ ಮಾಡುವದು ಒಳಿತು.
ನಮ್ಮಲ್ಲಿ ದೇವರ ಪೂಜೆ ಮುಗಿದ ತಕ್ಷಣ, ವೈಶ್ವದೇವಾದಿಗಳನ್ನು ಮುಗಿಸಿ ಊಟ ಮಾಡುವ ಪದ್ಧತಿ.
ಶ್ರಾದ್ಧವಿದ್ದಾಗ ಮಾತ್ರ, ಶ್ರಾದ್ಧದ ನಿಯಮ ಮಹತ್ತರವಾದುದರಿಂದ, ಮತ್ತು ಕುತಪಕಾಲದ ನಿಯಮಕ್ಕೆ ಇಲ್ಲಿ ನಿಷೇಧವನ್ನು ಹೇಳಿಲ್ಲವಾದ್ದರಿಂದ ಕುತಪಕಾಲದಲ್ಲಿಯೇ ಶ್ರಾದ್ಧವನ್ನು ಮಾಡಿ ಊಟ ಮಾಡಬೇಕು.
Gurugale danurmasa prayuktha beligge 4 kke snana agutha avaga sandyavandane madabahuda? Sandyavandane vandane madi pooje GE ready ago hottige belagaguthe eno anno bhaya ?
Vishnudasa Nagendracharya
ಹದಿನೈದು ನಿಮಿಷದ ಸಂಧ್ಯಾವಂದನೆಗೆ ಎರಡು ಗಂಟೆ ಬೇಕೆಂಬ ಭಯವೇಕೆ?
ARVIND ACHARYA SANGAM,Raichur
9:22 PM , 16/12/2017
Sri gurubhyo namah danurmasadaahithi tumba chennagi de aadre ondu dout sandyavandane upadesha padeda japagalu pooje mugida mele mada bahuda or sandyavandane japa mugisiye poojege aniyagabeka tilisi
Vishnudasa Nagendracharya
ಮಂತ್ರಗಳ ಜಪವನ್ನು ಸೂರ್ಯೋದಯದ ನಂತರ ಮಾಡಬಹುದು. ದೇವರ ಪೂಜೆಗೆ ವಿಲಂಬವುಂಟು ಮಾಡುವ ಎಲ್ಲವನ್ನೂ ಸೂರ್ಯೋದಯದ ನಂತರ ಮಾಡತಕ್ಕದ್ದು. ಸಂಧ್ಯಾವಂದನೆ ಮಾತ್ರ ದೇವರ ಪೂಜೆಗಿಂತ ಮೊದಲು.
Sangeetha prasanna,Bangalore
6:32 AM , 17/12/2017
ಹರೇ ಶ್ರೀನಿವಾಸ .ಗುರುಗಳಿಗೆ ನಮನಗಳು .ಕೆಲ ಗುಡಿಗಳಲ್ಲಿ ಅನ್ನ ಅಥವಾ ಪುಳಿಯೋಗರೆ ಪ್ರಸಾದ ರೂಪ ದಲ್ಲಿ ಕೊಡುತ್ತಾರೆ .ಮಠಗಳಲ್ಲಿ ಈ ಸಂಪ್ರದಾಯ ಇಲ್ಲದಿರುವ ಕಾರಣ ನಮಗೆ ದ್ವಂದ್ವ ಇದೆ .ಹಾಗೆ ಪ್ರಸಾದ ಸ್ವೀಕಾರ ಮಾಡದಿದ್ದರೆ ತಪ್ಪಾಗುವದೆ ಎಂಬ ಭಯ .ಕೆಲವರು ತೀರ್ಥ ಸ್ವೀಕಾರ ಮಾಡದಿರುವದನ್ನು ಗಮನಿಸಿದ್ದೆನೆ .ಯಾವುದು ಸರಿ .ದಯವಿಟ್ಟು ತಿಳಿಸಿ .ಹರಿ ಸರ್ವೋತ್ತಮ ವಾಯು ಜೀವೋತ್ತಮ .👏👏👏👏👏
Vishnudasa Nagendracharya
ತಂತ್ರಸಾರೋಕ್ತ ಕ್ರಮದಲ್ಲಿ, ಮತ್ತು ಪರಿಶುದ್ಧವಾದ ರೀತಿಯಲ್ಲಿ ಎಲ್ಲಿ ನೈವೇದ್ಯವಾಗಿರುವದಿಲ್ಲವೋ ಅಲ್ಲಿನ ಪ್ರಸಾದವನ್ನು ಸ್ವೀಕರಿಸುವಂತಿಲ್ಲ.
ತಿರುಮಲದ ಶ್ರೀನಿವಾಸದೇವರ ನೈವೇದ್ಯದ ಕುರಿತು ಒಂದು ವಿಶೇಷವನ್ನು ತಿಳಿಯಬೇಕು.
ತಿರುಪತಿಯಲ್ಲಿ ಅರ್ಚಕರು ನೈವೇದ್ಯ ಮಾಡುವದಿಲ್ಲ. ಸಾಕ್ಷಾತ್ ಬ್ರಹ್ಮದೇವರೇ ನೈವೇದ್ಯ ಮಾಡುವದರಿಂದ ಅಲ್ಲಿನ ಪ್ರಸಾದ ಸ್ವೀಕರಿಸುವ ಪದ್ದತಿ ಇದೆ.
ಆದರೆ, ನೈವೇದ್ಯಕ್ಕಿಡುವವರು ಮನುಷ್ಯರೇ ಆದ್ದರಿಂದ, ಅವರು ಶಾಸ್ತ್ರೀಯವಾದ ಕ್ರಮದಲ್ಲಿಯೇ ಪದಾರ್ಥಗಳನ್ನು ನೈವೇದ್ಯಕ್ಕಿಡಬೇಕು.
ಚಾತುರ್ಮಾಸ್ಯದಲ್ಲಿ ನಿಷಿದ್ದವಾದ ಪದಾರ್ಥವನ್ನಿಟ್ಟರೆ ಅದನ್ನು ಬ್ರಹ್ಮದೇವರು ನೈವೇದ್ಯ ಮಾಡುವದಿಲ್ಲ.
ಹಾಗೂ ಏಕಾದಶಿಯಂದೂ ಸಹ ಹಣ್ಣು ಹಾಲಿನ ನೈವೇದ್ಯವಾದರೂ ಅದನ್ನು ನಾವು ಸ್ವೀಕರಿಸುವಂತಿಲ್ಲ.
ಹೀಗಾಗಿ ತಂತ್ರಸಾರದ ರೀತಿಯಲ್ಲಿ ನೈವೇದ್ಯ ನಡೆಯದ ಯಾವುದೇ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಬಾರದು. ದೇವಾಲಯದವರು ಅದನ್ನು ನೀಡಿದಾಗ ತಿರಸ್ಕರಿಸದೆ, ತೆಗೆದುಕೊಂಡು, ಅದನ್ನು ತಿನ್ನಬಯಸುವ ಮತ್ತೊಬ್ಬರಿಗೆ ನೀಡಿಬಿಡಬೇಕು.
ತಿರುಪತಿಯಲ್ಲಿ ಮಾತ್ರ, ಚಾತುರ್ಮಾಸ್ಯ ಏಕಾದಶಿಗಳಂದು ಪ್ರಸಾದ ಸ್ವೀಕರಿಸದೇ ಬೇರೆ ದಿವಸಗಳಲ್ಲಿ ಸ್ವೀಕರಿಸಬಹುದು.
Kavitha,Shimoga
9:09 PM , 17/12/2017
Danurmasa the pooja niyama
Deshmukh seshagiri rao,Banglore
9:46 PM , 16/12/2017
ಗುರುಗಳಿಗೆ ನಮಸ್ಕಾರಗಳು ನಮ್ಮ ಜನ್ಮ ಸಾರ್ಥಕ ಆಯ್ತು.
Deshmukh seshagiri rao,Banglore
7:09 PM , 16/12/2017
ಶ್ರೀ ಗುರುಗಳಿಗೆ ತುಂಬಾ ತುಂಬಾ ಧನ್ಯವಾದಗಳು.
ಜ್ಯೋತಿ ಪ್ರಕಾಶ್ ಲಕ್ಷ್ಮಣ ರಾವ್,ಧರ್ಮಪುರಿ
7:06 PM , 16/12/2017
ಆಚಾರ್ಯರಿಗೆ ಅನಂತಾನಂತ ನಮಸ್ಕಾರಗಳು.
H. Suvarna kulkarni,Bangalore
4:53 PM , 16/12/2017
ಗುರುಗಳಿಗೆ ಪ್ರಣಾಮಗಳು ಧನುರ್ಮಾಸ ದಪ್ರಾಮುಖ್ಯತೆಯನ್ನು ತಿಳಿಸಿ ವಿಶ್ವನಂದಿನಿ ಬಾಂಧವರನ್ನು ಧನುರ್ಮಾಸ ದಪೂಜೆಗೆ ಪ್ರೇರಣೆ ನೀಡಿದ್ದೀರಿ ಧನ್ಯವಾದಗಳು ಕುಳಿತಲ್ಲೇ ನಮ್ಮ ನಮ್ಮ ಮನೆಗೆ ಬಂದು ನಮಗೆ ಮಾರ್ಗದರ್ಶನ ಮಾಡಿದಂತೆ ಇರುತ್ತವೆ ನಿಮ್ಮ ಲೇಖನಗಳು ಮತ್ತು ಉಪನ್ಯಾಸಗಳು ಧನ್ಯರು ನಾವು ತಮಗೆ ಕೋಟಿ ಕೋಟಿ ನಮನಗಳು
Ramesh V D,Hoskote Bengaluru
2:51 PM , 16/12/2017
ತಮ್ಮ ಲೇಖನ ಉಪನ್ಯಾಸಗಳಿಲ್ಲದೇ ಹಬ್ಬ ವ್ರತಗಳು ನಡೆಯುವದಿಲ್ಲ.
ತಿಳಿಯದೇ ಮಾಡುತ್ತಿದ್ದವರು ತಿಳಿದು ಮಾಡುತ್ತಿದ್ದೇವೆ.
ಚಿರಋಣಿಗಳು ತಮಗೆ.