ಆಚಾರ್ಯರೇ ನಮಸ್ಕಾರ. ರುದ್ರ ದೇವರ ಲಿಂಗಕ್ಕೆ ರುದ್ರಾಕ್ಷಿ ಇಟ್ಟು ಪೂಜೆ ಮಾಡಬಹುದಾ ವೈಷ್ಣವರು...?
Srinidhi,Hyderabad
4:22 PM , 10/03/2021
ನಮಸ್ಕಾರಗಳು ಆಚಾರಯ್ರಿಗೆ, ಪ್ರಾಚೀನ ಮತ್ತು ಸ್ವಯಂ ಭೂ ಶಿವ ಕ್ಷೆತ್ರ ಗಳ್ಳಿಗೆ ಹೋದಾಗ ಅಲ್ಲಿಯ ತೀರ್ಥ ಮತ್ತು ಪ್ರಸಾದ ತೊಗೋಬಹುದಾ?? ಅಲ್ಲಿಯ ತೀರ್ಥ ಪ್ರಸಾದ ವನ್ನು ನಿರಾಕರಿಸಿದರೇ ಪ್ರಾಯಶ್ಚಿತ ವೇನು ಅಂತ ತಿಳಿಸಬೇಕು ಯಂದು ಪ್ರಾಥನೇ.
Nuthan,UDUPI
4:16 PM , 10/03/2021
ಆಚಾರ್ಯರೆ ಏಕೆ ನಮ್ಮ ಮಾಧ್ವರು ರಾಧೇಯನ್ನು ಪೂಜಿಸುವುಧಿಲ್ಲಾ?
Shravan Prabhu,Kumta taluk near gokarna
11:28 PM, 23/02/2020
ಆಚಾರ್ಯರಿಗೆ ಸಾಷ್ಟಾಂಗ ಪ್ರಣಾಮಗಳು. ಆಚಾರ್ಯರೇ ಮಾಧ್ವರು ಶಿವ ತಾಂಡವ ಸ್ತೋತ್ರವನ್ನು ಪಠಿಸಬಹುದೇ?
Girish,BELLARY
7:34 PM , 21/02/2020
🙏🙏
Manjunatha,Bangalore
12:20 PM, 21/02/2020
ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು.
ತಲಕಾಡಿನ ಪಂಚಲಿಂಗಗಳನ್ನು ಸ್ಥಾಪನೆ ಮಾಡಿದವರು ಯಾರು? ಅಲ್ಲಿ ಏನಾದರೂ ವಿಶೇಷ ಸನ್ನಿಧಾನವಿದೆಯೇ?
Raghavendra,Bengaluru
3:20 PM , 24/02/2018
ಪ್ರತಿದಿನ ಅನ್ಯದೇವತೆಗಳಿಗೆ ಮಾಡುವ ನೈವೇದ್ಯ ಗೋವುಗಳಿಗೆ ನೀಡುವುದು ನಗರ ಜೀವನದಲ್ಲಿ ಕಷ್ಟ. ಆದ್ದರಿಂದ ನೈವೇದ್ಯ ಮಾಡುವುದನ್ನು ಬಿಡುವುದರಿಂದ ಆ ದೇವತೆಗಳಿಗೆ ಅವಕೃಪೆ ಉಂಟಾಗುತ್ತದೆಯೇ? ಬದಲಿ ಏನು ಮಾಡುವುದು ತಿಳಿಸಿ
ಹೊರಗಿನ ಆಹಾರ ಸೇವಿಸುವ ನಮಗೆ ಆ ದೇವತೆಗಳ ನೈವೇದ್ಯ ಅದಕ್ಕಿಂತ ಉತ್ತಮವೇ ಅಲ್ಲವೇ? ಈ ವಿಷಯದಲ್ಲಿ ಗೊಂದಲವಾಗಿದೆ, ದಯವಿಟ್ಟು ಮಾರ್ಗದರ್ಶನ ಮಾಡಿ
Vishnudasa Nagendracharya
ಗೋವುಗಳಿಗೆ ನೀಡಲು ಸಾಧ್ಯವಿಲ್ಲದಿದ್ದಲ್ಲಿ ಅದನ್ನು ವಿಸರ್ಜಿಸಬೇಕು. ಉಣ್ಣಬಾರದು.
ಹೋಟೆಲ್ಲು ಮುಂತಾದ ನಿಷಿದ್ಧ ಪ್ರದೇಶಗಳಲ್ಲಿ ತಿನ್ನುವ ಜನ ದೇವತೆಗಳ ನೈವೇದ್ಯವನ್ನು ಏಕೆ ಉಣ್ಣಬಾರದು ಎಂಬ ಪ್ರಶ್ನೆಯೇ ತಪ್ಪು.
ಕಾರಣ, ಎರಡೂ ನಿಷಿದ್ಧ. ಎರಡನ್ನೂ ಮಾಡತಕ್ಕದ್ದಲ್ಲ.
ಒಂದು ನಿಷಿದ್ಧದ ಆಚರಣೆ ಮಾಡಿದ ಮಾತ್ರಕ್ಕೆ ಮತ್ತೊಂದು ನಿಷಿದ್ಧ ಮಾಡಿದರೆ ಅಪರಾಧದ ಮೊತ್ತ ಜಾಸ್ತಿ ಆಗುತ್ತದೆಯಲ್ಲವೇ?
Raghavendra,Bengaluru
6:30 PM , 13/02/2018
ಧನ್ಯವಾದಗಳು
ಹಾಗಿದ್ದರೆ ನಾವು ಬೇರೆ ದಿನಗಳಲ್ಲಿ ಸರಸ್ವತಿ, ಶಿವ, ಗಣಪತಿಗಳಿಗೆ ಮಾಡಿದ ನೈವೇದ್ಯ ಸ್ವೀಕರಿಸಲೇಬಾರದೆ? ಸೋಮವಾರ ರುದ್ರರಿಗೆ ನೈವೇದ್ಚ್ರ್ಯ ಮಾಡಿ ಸ್ವೀಕರಿಸುತ್ತಿದ್ದೆ. ಆಚಾರ್ಯ ಹಾಗೂ ರಾಯರ ಹಸ್ತೋದಕ ಮಠಗಳಲ್ಲಿ ಸ್ವೀಕರಿಸುತ್ತೇವಲ್ಲಾ. ನಾವು ಲೌಕಿಕದಲ್ಲಿದ್ದು ತೀರಾ ಸಂಪ್ರದಾಯ ಪಾಲಕರಂತೂ ಅಲ್ಲ ಆದರೂ ನಮ್ಮ ಆಚಾರದಲ್ಲಿ ಶ್ರದ್ದೆಯಿದೆ.
ನಿಮ್ಮಿಂದ ಉತ್ತಮ ಜ್ಞಾನಪ್ರಾಪ್ತಿಯಾಗುತ್ತಿದೆ.
Vishnudasa Nagendracharya
ಉಳಿದ ದೇವತೆಗಳ ನೈವೇದ್ಯವನ್ನು ಯಾವ ಕಾರಣಕ್ಕೂ, ಯಾವ ದಿವಸವೂ ಸೇವಿಸಬಾರದು.
ದೇವತೆಗಳ ನೈವೇದ್ಯಕ್ಕೂ, ಗುರುಗಳ ಹಸ್ತೋದಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ನಾವು ಸಮರ್ಪಿಸುವ ನೈವೇದ್ಯವನ್ನು ದೇವತೆಗಳು “ಉಣ್ಣುತ್ತಾರೆ”. ಅಂದರೆ, ನಾವು ಸಮರ್ಪಿಸುವ ಪದಾರ್ಥದಲ್ಲಿರುವ ತಮ್ಮ ಭಾಗವನ್ನು ಅವರು ಸ್ವೀಕರಿಸುತ್ತಾರೆ. ಹೀಗಾಗಿ ಅದು ಅವರ ಎಂಜಲಾಗುತ್ತದೆ. ಶ್ರೀಹರಿ, ಲಕ್ಷ್ಮಿ, ಮುಖ್ಯಪ್ರಾಣ ಮತ್ತು ಭಾರತಿ ಇವರ ಎಂಜಲನ್ನು ಮಾತ್ರ ಸ್ವೀಕರಿಸಬೇಕು, ಉಳಿದ ದೇವತೆಗಳ ನೈವೇದ್ಯವನ್ನು ಸ್ವೀಕರಿಸಬಾರದು.
ಗುರುಗಳ ಹಸ್ತೋದಕದ ವಿಷಯದಲ್ಲಿ ಹೀಗಿಲ್ಲ. ಗುರುಗಳಿಗೆ ನಾವು ಅನ್ನಾದಿಗಳನ್ನು ಸಮರ್ಪಿಸಿದಾಗ ಅವರು ಅದನ್ನು ತಮ್ಮ ಕಣ್ಣಿನಿಂದ ಮಾತ್ರ ನೋಡುತ್ತಾರೆ. ಉಣ್ಣುವದಿಲ್ಲ. ತೇಜೋರೂಪದಲ್ಲಿರುವ ಅವರು ಈ ಪಾರ್ಥಿವ ಆಹಾರವನ್ನು ಸ್ವೀಕರಿಸುವದಿಲ್ಲ. ತೇಜೋರೂಪದಲ್ಲಿ ಅವರು ದೇವತೆಗಳು ನೀಡುವ ಅಮೃತವನ್ನು ಸ್ವೀಕರಿಸುತ್ತಾರೆ, ಇದು ಪ್ರಣವಜಪದ ಮಹಿಮೆ. ಅವರ ಕಣ್ಣಿನ ಮುಖಾಂತರ ದೇವರ ಪಂಚರೂಪಗಳ ಮತ್ತು ಮುಖ್ಯಪ್ರಾಣನ ರೂಪಗಳ ಸನ್ನಿಧಾನ ಅನ್ನದಲ್ಲಿ ತುಂಬುತ್ತದೆ.
ಅವರಿಗೆ ಸಮರ್ಪಿಸಿದ್ದರಿಂದ ಅದು ನಿವೇದಿತವಾಯಿತು. ಅವರು ‘ಉಂಡಿ’ಲ್ಲವಾದ್ದರಿಂದ ಅಂದು ಉಚ್ಚಿಷ್ಟವಲ್ಲ. ಹೀಗಾಗಿ ಹಸ್ತೋದಕ ಸರ್ವಥಾ ಗ್ರಾಹ್ಯ.
ಹಸ್ತೋದಕದ ಮಹಿಮೆ ಎಷ್ಟು ಹಿರಿದಾದದ್ದು ಎಂದರೆ, ಸಕಲ ಕಲಿಕೃತ ದೋಷಗಳೂ ಅದರ ಸೇವನೆಯಿಂದ ದೂರವಾಗುತ್ತವೆ.
ಹೀಗಾಗಿ ಭಕ್ತಿಯಿಂದ ಹಸ್ತೋದಕ, ಪಾದೋದಕಗಳನ್ನು ಸ್ವೀಕರಿಸಿ.
Raghavendra,Bengaluru
4:01 PM , 13/02/2018
ಆಚಾರ್ಯರೇ ರುದ್ರದೇವರಿಗೆ ನೈವೇದ್ಯ ಮಾಡಿದ್ದು ಸ್ವೀಕರಿಸಬಾರದ್ದು ಎಂದಿದ್ದೀರಿ. ಯಾವ ದೇವತೆಗಳ ನೈವೇದ್ಯ ಸ್ವೀಕರಿಸಬಹುದು / ಇಲ್ಲ ಇದರ ಬಗ್ಗೆ ವಿವರಗಳನ್ನು ತಿಳಿಸಿ
Vishnudasa Nagendracharya
ಶ್ರೀಹರಿ, ಲಕ್ಷ್ಮೀದೇವಿ, ಮುಖ್ಯಪ್ರಾಣ ಮತ್ತು ಭಾರತೀದೇವಿ ಈ ನಾಲ್ಕು ಜನರಿಗೆ ನೈವೇದ್ಯ ಮಾಡಿದ್ದನ್ನು ಹೊರತು ಪಡಿಸಿ ಉಳಿದ ಯಾವುದೇ ದೇವತೆ-ಗುರುಗಳಿಗೆ ನೈವೇದ್ಯ ಮಾಡಿದ್ದನ್ನು ಸ್ವೀಕರಿಸಬಾರದು.
Santosh,Gulbarga
8:35 AM , 13/02/2018
Thank you Gurugale....
Niranjan Kamath,Koteshwar
8:23 AM , 13/02/2018
ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ತ್ರಿಪುರಾಸುರ ಸಂಹಾರ , ಈ ಶಿವರಾತ್ರಿ ಯಂದು ಕೇಳಿ ಪುನೀತರಾದೆವು. ಧನ್ಯೋಸ್ಮಿ
M. Ullas Hegde,Mangalore
8:28 PM , 12/02/2018
Unable to download
Vishnudasa Nagendracharya
It is working fine. Just checked again. Please check your net speed and try to download again.