(You can only view comments here. If you want to write a comment please download the app.)
Pandurang,Bangalore
7:15 PM , 26/07/2019
ಆಚಮನ ಎಕಾದಶಿ ಯಂದು ಎಷ್ಟು ಸಲ ಮಾಡಬಹುದು
Vishnudasa Nagendracharya
ಏಕಾದಶಿಯಂದು, ಅಶೌಚದಲ್ಲಿ, ಗ್ರಹಣದಲ್ಲಿ ಹೀಗೆ ಯಾವ ಸಂದರ್ಭದಲ್ಲಿಯೂ ಸಹ ಪ್ರತಿನಿತ್ಯ ಮಾಡುವಂತೆಯೇ ಆಚಮನ.
ಆಚಮನ ಮಾಡುವದು ನೀರು ಕುಡಿದಂತಲ್ಲ.
ಒಂದು ಉದ್ದಿನ ಕಾಳು ಮುಳುಗುವಷ್ಟು ನೀರನ್ನು ಮಾತ್ರ ಕುಡಿಯತಕ್ಕದ್ದು. ಅದಕ್ಕಿಂತ ಹೆಚ್ಚಾಗಿ ಕುಡಿದಲ್ಲಿ, ಮತ್ತು ಆ ನೀರು ಗಂಟಲನ್ನು ದಾಟಿದಲ್ಲಿ ಅದು ಸುರಾಪಾನಕ್ಕೆ ಸಮ. ಇದು ಪ್ರತಿನಿತ್ಯದ ಆಚಮನಕ್ಕೂ ಅನ್ವಯಿಸುತ್ತದೆ.
ಪ್ರಪ್ರಥಮವಾಗಿ ತಿಳಿಯಬೇಕಾದ ಆಚರಣೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಆಚಾರ್ಯರೇ ಕರ್ಮದ ಆಚರಣೆಯ ಆರಂಭ ಮತ್ತು ಅಂತ್ಯಗಳೆರಡರಲ್ಲೂ ಆಚಮನವಿದೆ ಅಲ್ಲವೆ. ಆರಂಭದಲ್ಲಿ ಶುದ್ದಿಗೊಸ್ಕರವಾದರೆ ಕೊನೆಯಲ್ಲಿ ಯಾಕಾಗಿ ಎಂದು ನನಗೆ ತಿಳಿಯಲಿಲ್ಲ. ತಿಳಿಸಿಕೊಡುವಿರಾ ಆಚಾರ್ಯರೇ?
Vishnudasa Nagendracharya
ಆಚಮನದ ಆದಿಯಲ್ಲಿ ದೇಹದ ಅಂತರಂಗದ ಶುದ್ಧಿಗಾಗಿ.
ಆಚಮನದ ಅಂತ್ಯದಲ್ಲಿ ಸಮಸ್ತ ಕರ್ಮಗಳ ಪರಿಶುದ್ಧಿಗಾಗಿ. ಪರಿಪೂರ್ತಿಗಾಗಿ. ಅವಭೃತದಂತೆ.
Pranesh ಪ್ರಾಣೇಶ,Bangalore
10:31 AM, 07/06/2018
ನಹೀ ಜ್ಞಾನೇನ ಸದೃಶಂ ಪವಿತ್ರಂ.... ಜ್ಞಾನದಿಂದ ಶುದ್ಧರನ್ನಾಗಿ ಮಾಡುತ್ತಿರುವ ತಮಗೆ ವಂದನೆಗಳು
ಶುಧ್ಧ ನೀರು ಬಗೆಗಿನ ಮಾತಿನ್ನಲ್ಲಿ ಹೇಳಿದ್ದೀರಿ ಹುಳ ಇಲ್ಲದ ನೀರು ಎಂದು ಆದರೆ ನಮ್ಮ ಮನೆಯಲ್ಲಿ ಬೆಳಿಗ್ಗೆ ಸಂಗ್ರಹಿಸಿದ ನೀರು ಸಂಜೆಗೆ ಇರುವೆ ಬಂದಿರುತ್ತೆ. ಈರೀತಿಯಾದ ನೀರು ಅಶುದ್ಧವೇ?
Vishnudasa Nagendracharya
ಒಂದು ತಟ್ಟೆಯಲ್ಲಿ ನೀರನ್ನು ಹಾಕಿ ಅದರಲ್ಲಿ ನೀರು ತುಂಬಿದ ಬಿಂದಿಗೆಯನ್ನಿಟ್ಟರೆ ಅದಕ್ಕೆ ಇರುವೆ ಬರುವದಿಲ್ಲ.
ನೀರನ್ನು ಬಹಳ ದಿವಸ ಒಂದೇ ಪಾತ್ರೆಯಟ್ಟಾಗ ಹುಳ ಬರುತ್ತದೆ. ಸಣ್ಣ ದಾರದಂತಹ ಹುಳಗಳು. ಅದನ್ನು ಕುಡಿಯುವದರಿಂದ ಆರೋಗ್ಯವೂ ಕೆಡುತ್ತದೆ. ಗುಣಿಗಳಲ್ಲಿ, ಹೊಂಡಗಳಲ್ಲಿ ನೀರು ನಿಂತಾಗ ಈ ರೀತಿಯ ಹುಳಗಳು ಬೇಗ ಹುಟ್ಟಿಕೊಳ್ಳುತ್ತವೆ. ಆ ಹುಳಗಳಿರುವ ನೀರನ್ನು ಸರ್ವಥಾ ಯಾವ ಕಾರ್ಯಕ್ಕೂ ಉಪಯೋಗಿಸಬಾರದು.