Article - VNA292

ಆತ್ಮಶ್ರಾದ್ಧ


Download Article Share to facebook View Comments5994 Views

Comments

(You can only view comments here. If you want to write a comment please download the app.)
 • Usha,Hyderabad

  5:49 PM , 21/05/2022

  ನಮಸ್ಕಾರ ಆಚಾರ್ಯರಿಗೆ. ಜಲಧೇನು ದಾನ ಅಂದರೆ ಏನು ಅಂಥ ತಿಳಿಯಲಿಲ್ಲ. ಸ್ವಲ್ಪ ವಿವರಿಸಲು ಸಾಧ್ಯವಾಗುತ್ತದೆಯೇ?

  Vishnudasa Nagendracharya

  ಒಂದು ಗೋವಿನ ದೇಹದಷ್ಟು ಅಗಲ ಉದ್ದವಾದ ಪ್ರದೇಶವನ್ನು ಗೋಮಯದಿಂದ ಸಾರಿಸಿ, ನೀರು ತುಂಬಿದ ಕಲಶಗಳನ್ನು ಗೋವಿನ ದೇಹದ ಆಕಾರದಲ್ಲಿ ಜೋಡಿಸಿ, ತುಪ್ಪ ತುಂಬಿದ ಪುಟ್ಟ ಕಲಶವನ್ನು ಕರು ಎಂದು ಸ್ಥಾಪಿಸಿ, ಧಾನ್ಯಗಳಿಂದ ಗೋವಿನ ಕೊಂಬು, ದೇಹ, ಕೆಚ್ಚಲು ಮುಂತಾದವುಗಳನ್ನು ರಚಿಸಿ, ಹಾಗೆಯೇ ಈ ಗೋ-ವತ್ಸಗಳನ್ನು ಹಾಲು-ಮೊಸರು-ಬೆಣ್ಣೆ-ತುಪ್ಪ ತುಂಬಿದ ಪುಟ್ಟ ಪುಟ್ಟ ಕಲಶಗಳಿಂದ ಅಲಂಕರಿಸಿ, ಅದರಲ್ಲಿ ಕಾಮಧೇನುವನ್ನು ಆವಾಹಿಸಿ, ಒಂದು ಕಲಶದಲ್ಲಿ ಯಥಾಶಕ್ತಿ ಸುವರ್ಣ ರತ್ನಗಳನ್ನಿಟ್ಟು, ಪೂಜಿಸಿ (ಪ್ರತ್ಯೇಕವಾದ ಪೂಜಾವಿಧಾನವಿದೆ) ಉತ್ತಮರಾದ ಬ್ರಾಹ್ಮಣರಿಗೆ ದಾನ ಮಾಡಬೇಕು. 
  
  ಜಲ ತುಂಬಿದ ಕಲಶಗಳಲ್ಲಿ ಕಾಮಧೇನುವನ್ನು ಆವಾಹಿಸಿ ದಾನ ಮಾಡುವದರಿಂದ ಇದು ಜಲಧೇನು ದಾನ ಎಂದು ಕರೆಸಿಕೊಳ್ಳುತ್ತದೆ. 
  
  ಈ ದಾನ ಮಾಡುವದರಿಂದ ಎಂದಿಗೂ ನೀರಿನ ಕೊರತೆ ಉಂಟಾಗುವದಿಲ್ಲ, ನೀರಿನಿಂದ ಸಮಸ್ಯೆ ಉಂಟಾಗುವದಿಲ್ಲ. 
  
  ನೀರು ನಮ್ಮ ಸಮಸ್ತ ಆಚರಣೆಗೆ ಮೂಲಭೂತವಾದ ಪದಾರ್ಥ. ಅದಿಲ್ಲದೇ ಅನುಷ್ಠಾನವಿಲ್ಲ. ಅತ್ಯಂತ ಕಡಿಮೆ ನೀರು ದೊರೆಯುವ ಪ್ರದೇಶದಲ್ಲಿ ವಾಸವಿರುವವರಿಗೆ ಇದರ ಸಮಸ್ಯೆಯ ಅರಿವಿರುತ್ತದೆ. ಹೀಗೆ ಸಾಧನೆಗಾಗಿ ಶುದ್ಧ ನೀರು ದೊರೆಯುವ ಪ್ರದೇಶದಲ್ಲಿ ಇರಬೇಕಾದರೂ ಪುಣ್ಯ ಇರಬೇಕು, ಆ ಪುಣ್ಯವನ್ನು ನೀಡುವ ದಾನ, ಈ ಜಲಧೇನು ದಾನ.
  
  ಹಾಗೂ ವಾಸ್ತವಿಕ ಗೋದಾನವನ್ನು ಮಾಡಲು ಅಸಮರ್ಥರಾದವರಿಗೆ ಇರುವ ಅನೇಕ ಮಾರ್ಗಗಳಲ್ಲಿ ಒಂದು ಮಾರ್ಗವಿದು. 
   
 • Jayanthi Venugopal,Bangalore

  8:41 PM , 11/07/2021

  ನಮಸ್ಕಾರ ಆಚಾರ್ಯರೇ. ಆತ್ಮ ಶ್ರಾದ್ಧದ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದಿರ🙏🏻. ಹೆಂಡತಿ ಮಾತ್ರ ಆತ್ಮ ಶ್ರಾದ್ಧ ಮಾಡಿಕೊಳ್ಳ ಬಹುದಾ? ದಯವಿಟ್ಟು ಮಾರ್ಗದರ್ಶನ ನೀಡಿ ಗುರುಗಳೇ 🙏🏻
 • Shree,Bengaluru

  9:27 AM , 08/09/2020

  ನನಗೆ ಆತ್ಮ ಶ್ರಾಧ ಮಾಡಿ ಕೊಳ್ಳಲು ಬಯಕೆ ಇದೆ, ಮಾಹಿತಿಗಾಗಿ ಧನ್ಯವಾದಗಳು
 • Vikram Shenoy,Doha

  1:05 PM , 23/02/2020

  ಈ ತರಹದ ಅದ್ಭುತ ಜ್ಞಾನವನ್ನು ನಾನು ನನ್ನ ಎಲ್ಲ ಬಂದು ಬಾಂಧವರ ಜೊತೆ share ಮಾಡ್ತಾ ಇದ್ದೇನೆ. ಈ ಕಲಿಕಾಲದಲ್ಲಿ ನಿಮ್ಮ ಈ ಕಾರ್ಯಕ್ಕೆ ಅಭಿನಂದನೆಗಳು.
 • Pranesh,Bangalore

  2:56 PM , 28/09/2019

  ಅಬ್ರಹ್ಮ ಅಣು ಪರ್ಯಂತ ಭಗವಂತನ ಕಾರುಣ್ಯ ಅಪಾರ 
  ಸಾಧನೆಗೆ ಶಾಸ್ತ್ರದ ಸಹಕಾರ ಕಂಡು ಮೂಕವಿಸ್ಮಿತನಾದೆ .
  ಇದನ್ನು ವಿಸ್ತಾರವಾಗಿ ತಿಳಿಸಿದ ತಮಗೆ ಪ್ರಣಾಮಗಳು
 • Chandrika prasad,Bangalore

  12:19 PM, 28/09/2019

  ತುಂಬಾ ಚೆನ್ನಾಗಿದೆ ಲೇಖನ. ಆದರೆ ನಮ್ಮಂತ ಸ್ತ್ರೀ ಯ ರಿಗೇ ಕಷ್ಟ ಸಾಧ್ಯ. ಮನೆಯವರ ಸಹಕಾರ ಇಲ್ಲದೆ ಮಾಡುವಂತಿಲ್ಲ. ಎಲ್ಲದಕ್ಕೂ ಪ್ರೇರಕ ಶ್ರೀಹರಿ. ವಿಚಾರ ತಿಳಿಯುವುದಕ್ಕೆ ತಪ್ಪಿಲ್ಲ. ಆಚಾರ್ಯರಿಗೆ ನಮೋನಮಃ 🙏