Prashnottara - VNP002

ಆಚಾರ್ಯರೆ, ಹೆಣ್ಣು ಮಕ್ಕಳು ದ್ವಾದಶ ಸ್ತೋತ್ರವನ್ನು ಪಠಣೆ ಮಾಡಬಹುದಾ?


					 	

ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ರಚನೆ ಮಾಡಿರುವ ದ್ವಾದಶಸ್ತೋತ್ರಗಳನ್ನು ಅವಶ್ಯವಾಗಿ ಸ್ತ್ರೀಯರು ಪಠಿಸಬಹುದು. ಸ್ತೋತ್ರಗಳನ್ನು ಪಠಿಸುತ್ತ ಅಡಿಗೆ ಮುಂತಾದ ಮನೆಯ ಕಾರ್ಯಗಳನ್ನು ಮಾಡಿದಲ್ಲಿ ಮನೆಯೂ ಪವಿತ್ರವಾಗಿರುತ್ತದೆ, ಮಾಡುವ ಅಡಿಗೆಯೂ ಪವಿತ್ರವಾಗುತ್ತದೆ.


Share to facebook View Comments
4820 Views

Comments

(You can only view comments here. If you want to write a comment please download the app.)
 • Uma Sridhar,Chennai

  7:35 AM , 05/12/2017

  Haraye namaha. Acharyarige namaskara. Sthreeyaru Raghavendra stotra patisa bahude dhayavitu thilisi
 • Bharadwaj Haribal,

  8:25 PM , 20/11/2017

  ಆದರೆ ವಿಷ್ಣು ಸಹಸ್ರ ನಾಮ ವನ್ನು ಹೇಳಬಹುದೆ

  Vishnudasa Nagendracharya

  ಹೇಳಬಹುದು. 
 • ARUNDHATI SURESH KULKARNI,BANGALORE

  11:42 AM, 07/11/2017

  ಶ್ರೀ ಗುರುಭ್ಯೋ ನಮ: ತಮ್ನ ಪ್ರವಚನದಲ್ಲಿ ಅನೇಕ ಸಾರಿ ಭಗವಂತನಿಗೆ ಸದ್ಭಕ್ತರೆಲ್ಲರೂ ಪ್ರಿಯರು ಎನ್ನುವುದನ್ನು ಕೇಳಿದ್ದೇನೆ. ಆದರೆ ನಮ್ಮ ಶಾಸ್ತ್ರ ಗಳಲ್ಲಿ ವಿಧವೆಯರಿಗೆ ಅನೇಕ ಕಾರ್ಯಗಳನ್ನು ಮಾಡಲು ನಿಷೇಧ ವಿಧಿಸಿದ್ದಾರೆ. ಉದಾಹರಣೆಗೆ ದೇವರಿಗೆ ಅನ್ನ ,ಭಕ್ಷಗಳ ನೈವೇಧ್ಯ, ತುಳಸೀ ಪೂಜೆ, ಇತ್ಯಾದಿ. ಅನಿವಾರ್ಯ ಸಂಧರ್ಭದಲ್ಲಿ ಮನೆಯಲ್ಲಿ  ಅವುಗಳನ್ನು ಮಾಡಲು ಬರುವುದಿಲ್ಲವೇ? ಅಥವಾ ಭಕ್ತಿಯಿಮದ ಮಾಡಿದಾಗ ಭಗವಂತನು ಸ್ವೀಕರಿಸುವುದಿಲ್ಲವೆ? ದಯವಿಟ್ಟು ತಿಳಿಸಿ. ಕೆಲವು ಶಾಸ್ತ್ರ ಗಳು ಮನಸ್ಸಿಗೆ ನೋವುಂಟು ಮಾಡುತ್ತದೆ.

  Vishnudasa Nagendracharya

  ಶಾಸ್ತ್ರಗಳು ನೋವುಂಟು ಮಾಡುವದಿಲ್ಲ. ಶಾಸ್ತ್ರವನ್ನು ನಾವು ತೆಗೆದುಕೊಳ್ಳುವ ರೀತಿ ನೋವುಂಟು ಮಾಡುತ್ತದೆ. ಶಾಸ್ತ್ರ, ಧರ್ಮಗಳು ನಿಷ್ಠುರ ನಿಜ. ಕಟುಕವಲ್ಲ. 
  
  ನಿಯಮ, ನಿಷೇಧಗಳು ಎಲ್ಲರಿಗೂ ಇವೆ. ಭಕ್ತಿ, ಜ್ಞಾನ, ವೈರಾಗ್ಯಾದಿ ಗುಣಗಳಲ್ಲಿ ಅತ್ಯಧಿಕನಾದ ಒಬ್ಬ ಗೃಹಸ್ಥನಿರಬಹುದು, ಅಥವಾ ಮತ್ತೊಂದು ಪೀಠದ ಸಂನ್ಯಾಸಿಯೇ ಇರಬಹುದು. ಆ ವ್ಯಕ್ತಿ ಉಡುಪಿಯ ಕೃಷ್ಣನನ್ನು ಪೂಜಿಸಲಾದೀತೆ. ಇಲ್ಲ. ಕಾರಣ. ಆ ಅಧಿಕಾರ ಅವರಿಗಿಲ್ಲ. 
  
  ಹಾಗೆಯೇ ಗೃಹಸ್ಥನಂತೆ, ಬ್ರಹ್ಮಚಾರಿ ಇಲ್ಲ. ಬ್ರಹ್ಮಚಾರಿಯ ಧರ್ಮಗಳನ್ನು ಗೃಹಸ್ಥ ಪಾಲಿಸುವಂತಿಲ್ಲ. 
  
  
  ಹಾಗೆಯೇ ಕುಮಾರಿಯ ನಿಯಮ ಮುತ್ತೈದೆಗಿಲ್ಲ, ವಿಧವೆಯರಿಗಿಲ್ಲ. ಮುತ್ತೈದೆಯ ನಿಯಮ ಕುಮಾರಿ ವಿಧವೆಯರಿಗಿಲ್ಲ. 
  
  ಇನ್ನು ಹೆಣ್ಣುಮಕ್ಕಳನ್ನು ಎಂದಿಗೂ ಶಾಸ್ತ್ರ ಕೀಳಾಗಿ ಕಂಡಿಲ್ಲ. ವಿಧವೆ ಮತ್ತು ವಿಧುರ ಇಬ್ಬರಿಗೂ ನಿಷ್ಠುರ ಧರ್ಮಗಳೇ ಇವೆ. 
  
  
 • Sandhya Ravi Kumar,

  11:47 PM, 13/06/2017

  ,👌
 • Sathyapramoda katti,Bangalore

  11:45 PM, 05/05/2017

  Dwaadashastotravannu streeyarau pathisabaaradu embudaagi kelvaru heltaare.. Avaru kaarana koduvudenendare. Adu shrimadaachaaryarinda rachitavaadaddarinda pathisabaardu endu. idu sariye??

  Vishnudasa Nagendracharya

  ಹಾಗೇನಿಲ್ಲ. ದ್ವಾದಶಸ್ತೋತ್ರಾದಿಗಳನ್ನು ಅವಶ್ಯವಾಗಿ ಸ್ತ್ರೀಯರು ಪಠಿಸುವ ಸಂಪ್ರದಾಯ ನಮ್ಮಲ್ಲಿದೆ. 
  
  ವೇದ ಮತ್ತು ವೈದಿಕವಾದದ್ದನ್ನು ಸ್ತ್ರೀಯರು ಕಲಿಯುವಂತಿಲ್ಲ, ಅಷ್ಟೆ. 
 • ಜಯರಾಮಾಚಾರ್ಯ ಬೆಣಕಲ್,

  10:42 AM, 16/04/2017

  ಆಚಾರ್ಯರೇ ಶ್ರೀವಿಷ್ಣು ಸಹಸ್ರನಾಮವನ್ನು ಹೆಣ್ಣು ಮಕ್ಕಳು ಪಠಿಸಬಹುದೇ , ಅಥವಾ ಪಠಿಸಲೇ ಬಾರದೇ?

  Vishnudasa Nagendracharya

  ಜಾತಾಶೌಚ, ಮೃತಾಶೌಚ, ರಜಸ್ವಲಾಧರ್ಮ, ವರ್ಣಾಶ್ರಮಧರ್ಮ ಮುಂತಾದ ನಿಯಮಗಳನ್ನು ಪಾಲಿಸುತ್ತಿರುವ ಪುರುಷರು ಮತ್ತು ಸ್ತ್ರೀಯರು ಅವಶ್ಯವಾಗಿ ವಿಷ್ಣುಸಹಸ್ರನಾಮವನ್ನು ಪಠಿಸಬಹುದು. 
  
  ಇದರ ಕುರಿತು ವಿಸ್ತಾರ ಚರ್ಚೆಯಿಂದ ಕೂಡಿದ ಲೇಖನ ಉಪನ್ಯಾಸಗಳ ಅಗತ್ಯವಿದೆ. 
  
  ಸದಾಚಾರಸ್ಮೃತಿ ಮತ್ತು ದೇವರ ಪೂಜೆಯ ಲೇಖನ ಉಪನ್ಯಾಸಗಳು ಮುಗಿದ ನಂತರ ಮಾಡಿ ನೀಡುತ್ತೇನೆ. 
 • ಜಯರಾಮಾಚಾರ್ಯ ಬೆಣಕಲ್,ಬೆಂಗಳೂರು.

  6:32 PM , 14/04/2017

  ನಿಮ್ಮ ಉತ್ತರ ಸಂತೋಷದಾಯಕ.