Prashnottara - VNP004

ಸಂಜೆ ಊರ್ಧ್ವಪುಂಡ್ರ ಧರಿಸಬಹುದೇ?


					 	

ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏 ದ್ವಾದಶ ಊರ್ಧ್ವಪುಂಡ್ರಗಳು ಗೋಪಿಚಂದನದಿಂದ ಸಾಯಂ ಸಂಧ್ಯವಂದನೆಯಲ್ಲಿ ಹಚ್ಚಿಕೊಳ್ಳ ಬಹುದೇ? 🙏 ದಯವಿಟ್ಟು ತಿಳಿಸಿ. — ಭಾರದ್ವಾಜ್ ಕರಣಮ್, ಬಳ್ಳಾರಿ.


Play Time: 03:30, Size: 1.70 MB


Download Article Download Upanyasa Share to facebook View Comments
4162 Views

Comments

(You can only view comments here. If you want to write a comment please download the app.)
 • RAVIKUMAR KULKARNI,RAICHUR

  2:45 PM , 23/04/2020

  ಒಳ್ಳೆಯ ವಿಷಯ
 • Satyanarayana R B,Bengaluru

  12:59 AM, 29/01/2020

  ಧನ್ಯವಾದಗಳು
 • Sudha gururaja,Mysore , Karnataka

  10:56 AM, 03/05/2017

  Gurugalige anantanta namaskaragalu.gurugale.striyaru.hanege gopichandana dharanemadi.gadha narayanamudre hanege matra hachikolabeka atava elli elli hengasaru mudra hakobeku

  Vishnudasa Nagendracharya

  Bareyuttene
 • Sudha gururaja,Mysore , Karnataka

  10:56 AM, 03/05/2017

  Gurugalige anantanta namaskaragalu.gurugale.striyaru.hanege gopichandana dharanemadi.gadha narayanamudre hanege matra hachikolabeka atava elli elli hengasaru mudra hakobeku
 • Padma Sirisha,Mysore

  7:21 PM , 16/04/2017

  Excellent ಆಚಾರ್ಯರೇ. Article with Audio answer... easy way to Understand.
 • ಭಾರದ್ವಾಜ್,

  9:51 AM , 15/04/2017

  ಗೋಪಿಯನ್ನು ಗುರು ಉಪದೇಶ ಪಡೆದ ಹೆಣ್ಣು ಮಕ್ಕಳು ಮಾತ್ರ ಧಾರಣೆ ಮಾಡ ಬೇಕ ಅಥವ ಎಲ್ಲರು ಮಾಡಬಹುದ?ದಯವಿಟ್ಟು ತಿಳಿಸಿ.

  Vishnudasa Nagendracharya

  ಎಲ್ಲರೂ ಮಾಡಬೇಕು. 
  
  ಗೋಪೀಚಂದನ ಧಾರಣೆ, 
  
  ತಪ್ತಮುದ್ರಾಧಾರಣೆ, 
  
  ವೈಷ್ಣವನಾಮ (ನಾರಾಯಣ, ಲಕ್ಷ್ಮೀ, ಮಧ್ವ, ಶಂಕರ, ಮುಂತಾದ ಹರಿ ಮತ್ತು ಹರಿಯ ಪರಿವಾರದವರ ಹೆಸರನ್ನು ಇಟ್ಟುಕೊಳ್ಳುವದು) 
  
  ವಿಷ್ಣುಸ್ಮರಣೆ
  
  ಎನ್ನುವದು ಸಕಲ ವೈಷ್ಣವರಿಗೂ ಸಕಲಕಾಲದಲ್ಲಿಯೂ ಇರಬೇಕು. ಅವು ವೈಷ್ಣವಸಂಸ್ಕಾರಗಳು. ವೈಷ್ಣವಚಿಹ್ನೆಗಳು. 
  
  ಇವುಗಳಿಗೆ, ಜಾತಿ, ಲಿಂಗ, ವಯಸ್ಸಿನ ಭೇದವಿಲ್ಲ. 
  
  *
  
  ಇನ್ನು ಗೋಪೀಚಂದನವಂತೂ ನಾವು ಹುಟ್ಟಿದಂದಿನಿಂದ ಆರಂಭಿಸಿ, ಸತ್ತ ನಂತರ ನಮ್ಮ ದೇಹದಲ್ಲಿಯೂ ಇರಲೇಬೇಕು. 
  
   ಸತ್ತ ಬಳಿಕ ಶವವನ್ನು ಸುಡುವದಿಕ್ಕಿಂತ ಮುಂಚೆ ಸಹಿತ ಆ ದೇಹಕ್ಕೆ ಗೋಪೀಚಂದನ ಮುದ್ರೆಗಳನ್ನು ಹಾಕಿಯೇ ಸುಡಬೇಕು. 
  
  ಈ ನಿಯಮ ಹೆಣ್ಣುಮಕ್ಕಳಿಗೂ ಅನ್ವಯಿಸುತ್ತದೆ. 
  
  ಗೊಪೀಚಂದನಧಾರಣೆಯಿಲ್ಲದೆ ಯಾವ ಕಾಲಕ್ಕೂ ಇರುವಂತಿಲ್ಲ. 
  
  ಗೋಪಿಚಂದನವನ್ನು ಧರಿಸಿರುವ ವಿಷ್ಣುಭಕ್ತರ ಬಳಿಗೆ ಎಂದಿಗೂ ಯಮದೂತರು ಬರುವದಿಲ್ಲ. 
  
  ಹೀಗಾಗಿ ಹೆಣ್ಣುಮಕ್ಕಳೂ ಸಹಿತ ಮದುವೆಗಿಂತ ಮುಂಚೆ, ಮದುವೆಯ ನಂತರ, ಗುರೂಪದೇಶಕ್ಕಿಂತ ಮುಂಚೆ, ಗುರೂಪದೇಶದ ನಂತರ ಗೋಪೀಚಂದನವನ್ನು ಧರಿಸಲೇಬೇಕು. 
  
  ಸ್ತ್ರೀಯರು ಗೋಪೀಚಂದನವನ್ನು ಪುರುಷರಂತೆ ಧರಿಸುವದಲ್ಲ. ಅವರು ಧರಿಸುವ ಪ್ರಕಾರದಲ್ಲಿ ವ್ಯತ್ಯಾಸವಿದೆ. ಅದನ್ನು ಸದಾಚಾರಸ್ಮೃತಿಯ ಲೇಖನ-ಉಪನ್ಯಾಸಗಳಲ್ಲಿ ತಿಳಿಸುತ್ತೇನೆ. 
 • Sangeetha prasanna,

  8:30 AM , 15/04/2017

  ಗುರುಗಳಿಗೆ ನಮಸ್ಕಾರಗಳು .ಹೆಣ್ಣುಮಕ್ಕಳು ಸಂಜೆ ಗೋಪಿ ಧಾರ ಣೆ ಮಾಡಬಹುದೆ .ತಿಳಿಸಿ .🙏

  Vishnudasa Nagendracharya

  ಖಂಡಿತ.
  
  ಸಂಜೆ ಮುಖ ತೊಳೆದು ಕುಂಕುಮ ಹಚ್ಚಿಕೊಳ್ಳುವ ಮುನ್ನ ಗೋಪಿಚಂದನವನ್ನು ಧಾರಣೆ ಮಾಡಬಹುದು. 
  
  ಸದಾ ಊರ್ಧ್ವಪುಂಡ್ರಧಾರಿಗಳಾಗಿರಬೇಕು ಎಂಬ ನಿಯಮ ಎಲ್ಲರಿಗೂ ಅನ್ವಯಿಸುತ್ತದೆ. 
  
  ಸಂಜೆ ಹಚ್ಚಬಾರದು ಎಂಬ ನಿಷೇಧ ಎಲ್ಲಿಯೂ ಇಲ್ಲ. 
 • ಪ್ರಮೋದ,

  7:28 AM , 15/04/2017

  ಆಚಾರ್ಯರೇ,
     ಸಾಯಂ ಸಂಧ್ಯಾವಂದನೆ ಸಮಯದಲ್ಲೂ ಗೋಪಿಚಂದನ ಧಾರಣೆ ಮಾಡಬಹುದು ಅಂದ್ರಿ . ಅಂಗಾರ ಅಕ್ಷತೆಯೂ ಅವಶ್ಯ ಹಚ್ಚಿಕೊಳ್ಳಬಹುದಾ? ಅವು ಮಧ್ಯಾಹ್ನ ಊಟದ ಸಂಕೇತವಾಗಿ ಹಚ್ಚಿಕೊಳ್ಳುವುದಲ್ಪವೇ? ಅಂಗಾರ ಅಕ್ಷತೆಯನ್ನು ಹಚ್ಚಿಕೊಳ್ಳುವ ಕಾರಣವನ್ನು ದಯಮಾಡಿ ತಿಳಿಸಿ🙏

  Vishnudasa Nagendracharya

  ಸಂಜೆಯ ಸಮಯವೂ ಅಂಗಾರ ಅಕ್ಷತೆಯನ್ನು ಹಚ್ಚಲೇಬೇಕು. 
  
  ರಾತ್ರಿ ಭೋಜನವನ್ನಾಗಲೀ ಮಧ್ಯಾಹ್ನದ ಭೋಜನವನ್ನಾಗಲೀ ಅಂಗಾರ ಅಕ್ಷತೆಗಳನ್ನು ಧರಿಸದೇ ಮಾಡಬಾರದು. 
  
  ಅಂಗಾರ ಅಕ್ಷತೆಗಳನ್ನು ಏಕೆ ಹಚ್ಚಿಕೊಳ್ಳಬೇಕು ಎಂಬುದರ ಕುರಿತು ಸದಾಚಾರಸ್ಮೃತಿಯ ಲೇಖನ ಉಪನ್ಯಾಸಗಳಲ್ಲಿ ಭೋಜನದ ಕುರಿತು ಮಾತನಾಡುವಾಗ ತಿಳಿಸುತ್ತೇನೆ. ಪ್ರಮಾಣಗಳನ್ನೂ ಸಹಿತ. 
  
  
 • Madhvwshachar,

  5:25 AM , 15/04/2017

  simply Superb. very needy info. Namaskara

  Vishnudasa Nagendracharya

  ಮೂರೂ ಸಂಧ್ಯೆಗಳಲ್ಲಿಯೂ ಊರ್ಧ್ವಪುಂಡ್ರಧಾರಣೆ ಆಗಲೇಬೇಕು ಎನ್ನುವದನ್ನು ಶ್ರೀ ಸ್ಮೃತಿಮುಕ್ತಾವಲಿ ಕೃಷ್ಣಾಚಾರ್ಯರು ಸದಾಚಾರಸ್ಮೃತಿಯ ವ್ಯಾಖ್ಯಾನದಲ್ಲಿ ಹಾರೀತಸ್ಮೃತಿಯ ಆಧಾರವನ್ನು ನೀಡಿ ತಿಳಿಸಿದ್ದಾರೆ —
  
  ತದಾರಭ್ಯ ಧರೇನ್ನಿತ್ಯಂ
  ಊರ್ಧ್ವಪುಂಡ್ರಂ ವಿಧಾನತಃ
  ತ್ರಿಸಂಧ್ಯಾಸು ಮೃದಾ ವಿಪ್ರೋ
  ಯಾಗಕಾಲೇ ವಿಶೇಷತಃ 
  
  ಬೆಳಿಗ್ಗೆ ಹಚ್ಚಿಕೊಂಡಿದ್ದ ಊರ್ಧ್ವಪುಂಡ್ರಗಳು ಅಳಿಸಿ ಹೋಗಿದ್ದಲ್ಲಿ, ಅಥವಾ ಸ್ನಾನವನ್ನೇ ಮಾಡಿದ್ದಲ್ಲಿ ಮತ್ತೆ ಊರ್ಧ್ವಪುಂಡ್ರಗಳನ್ನು ಧರಿಸಿಯೇ ಸಂಧ್ಯಾವಂದನೆ ಮಾಡಬೇಕು ಎನ್ನುವದು ಇದರಿಂದ ಸಿದ್ಧವಾಗುತ್ತದೆ. ತ್ರಿಸಂಧ್ಯಾಸು ಎನ್ನುವ ಶಬ್ದವಿರುವದರಿಂದ. 
 • Kiran J,NANJANGUD

  10:25 PM, 21/05/2017

  Achare dinake muru bhari sandhyanvandhane iruvudarinda kelsake hoguvavaru shouchithya matthu yekagrateya saluvagi 3 bari snana vittukollabahudhe