Prashnottara - VNP006

ಸಂಧ್ಯಾವಂದನೆಯ ನಂತರವೇ ಅಕ್ಷತೆ ಧರಿಸಬಹುದೇ?


					 	

ಆಚಾರ್ಯರಿಗೆ ನಮಸ್ಕಾರಗಳು. ಅಂಗಾರ ಅಕ್ಷತಿಯನ್ನು ಸಂಧ್ಯಾ ನಂತರ ಅಥವಾ ಭೋಜನ ಸಮಯದಲ್ಲಿ ಯಾವಾಗ ಹಚ್ಚಬೇಕು. — ಪವನ ಸಂಡೂರು.


Download Article Share to facebook View Comments
3320 Views

Comments

(You can only view comments here. If you want to write a comment please download the app.)
 • Harish,

  7:05 PM , 29/04/2017

  ಗುರುಗಳೆ ಸಾಯಂಕಾಲದ ಸಮಯದಲ್ಲೂ ಸಂಧ್ಯಾವಂದನೆ ಮಾಡುವಾಗ ಗೋಪಿಚಂದನ ಧರಿಸಬೇಕೇ?

  Vishnudasa Nagendracharya

  ಪ್ರಶ್ನೋತ್ತರ ನಾಲ್ಕರಲ್ಲಿ, (ಸಂಜೆ ಊರ್ಧ್ವಪುಂಡ್ರ ಧರಿಸಬಹುದೇ) ಉತ್ತರ ನೀಡಿಯಾಗಿದೆ. 
 • Narasimha Rao,Bangalore

  8:53 PM , 23/04/2017

  ಗುರುಗಳೇ ನಮಸ್ಕಾರಗಳು.
  ಬಹಳ ದಿವಸದಿಂದ ಕಾಡುತ್ತಿರುವ ಒಂದು ಪ್ರಶ್ನೆ:
  ಈ ಮುಧ್ರ ಧಾರಣೆ ಅನ್ನೋದು ಆಯಾ ಮಠದವರು ಅವರವರ ಮಠದ ಮಠಾಧೀಶರಿಂದಲೇ/ಸ್ವಾಮಿಗಳಿಂದಲೇ ಪಡೆಯ ಬೇಕೋ ಅಥವಾ ಯಾವುದೇ ಮಧ್ವ ಮಠದ ಯತಿಗಳಿಂದ ಪಡೆಯ ಬಹುದೋ ತಿಳಿಸಿಕೊಡಿ.

  Vishnudasa Nagendracharya

  ನಮ್ಮನಮ್ಮ ಮಠಾಧೀಶರಿಂದಲೇ ಪಡೆಯಬೇಕು. 
  
 • Narasimha Rao,Bangalore

  10:18 PM, 22/04/2017

  ತುಂಬಾ ಧನ್ಯವಾದಗಳು ಗುರುಗಳೆ, ಅನಂತ ನಮಸ್ಕಾರಗಳು
 • Narasimha Rao,Bangalore

  8:45 PM , 22/04/2017

  ಗುರುಗಳೇ ನಮಸ್ಕಾರಗಳು.
  ಎರಡು ಪ್ರಶ್ನೆಗಳು ಸಂಧ್ಯಾವಂದನೆ ಬಗ್ಗೆ
  1. ಸಾಯಂಕಾಲ ಮತ್ತು ಮಧ್ಯಾಹ್ನ ಸಂಧ್ಯಾವಂದನೆ ಮಾಡಲು ಅಗದಿದ್ದ ಪಕ್ಷದಲ್ಲಿ ಮುಂಜಾನೀಯೇ ಮಾಡಬಹುದಾ?
  2. ಪ್ರಾಯಶ್ಚಿತ್ತ ಆರ್ಘ್ಯವನ್ನು ಯಾವಾಗ ಕೋಡಬೇಕು?

  Vishnudasa Nagendracharya

  ಬಹಳ ಮಹತ್ತ್ವದ ಪ್ರಶ್ನೆ. ಇದರ ಕುರಿತು ಸಂಧ್ಯಾವಂದನೆಯ ವಿಭಾಗದಲ್ಲಿ ವಿಸ್ತೃತವಾಗಿ ಬರೆಯುತ್ತೇನೆ. ಈಗ ಸಂಕ್ಷೇಪವಾಗಿ ತಿಳಿಸುತ್ತೇನೆ. 
  
  ಸಂಧ್ಯಾವಂದನೆಯನ್ನು ಸಕಾಲದಲ್ಲಿಯೇ ಮಾಡಬೇಕು. ಮಾಡಲು ಸಾಧ್ಯವೇ ಇಲ್ಲದ ಪಕ್ಷದಲ್ಲಿ ಬಿಡಬಾರದು. ಪ್ರಾತಃಕಾಲದಲ್ಲಿಯೇ ಮಧ್ಯಾಹ್ನದ ಸಂಧ್ಯಾವಂದನೆಯನ್ನು, ಮಾಡಬಹುದು. . 
  
  ಸಾಮಾನ್ಯವಾಗಿ ನಾವೆಲ್ಲಿ ಹೋದರೂ ಸಂಜೆಗೆ, ರಾತ್ರಿಗೆ ಮನೆಗೆ ಬರುತ್ತೇವೆ. ಹೀಗಾಗಿ ಸಂಜೆಯ ಸಂಧ್ಯಾವಂದನೆಯನ್ನು ಸಂಜೆ ಅಥವಾ ರಾತ್ರಿ ಮಾಡಬೇಕು. ಮಾಡಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇದ್ದಾಗ, (ಪ್ರಯಾಣ ಮುಂತಾದವು) ಸಂಜೆಯ ಸಂಧ್ಯಾವಂದನೆಯನ್ನೂ ಬೆಳಿಗ್ಗೆಯೇ ಮುಗಿಸೇಬಹುದು. 
  
  ಪೂರ್ಣ ಲೋಪ ಮಾಡುವದಕ್ಕಿಂತ ಇಷ್ಟಾದರೂ ಮಾಡಬೇಕು. 
  
  ಮಧ್ಯಾಹ್ನದ, ಸಂಜೆಯ ಸಂಧ್ಯಾವಂದನೆಯನ್ನು ಬೆಳಿಗ್ಗೆಯೇ ಮಾಡಿದಾಗ ಪ್ರಾಯಶ್ಚಿತ್ತಾರ್ಘ್ಯವನ್ನು ಬೆಳಿಗ್ಗೆಯೇ ನೀಡಬೇಕು. “ಸಕಾಲ-ಅರ್ಘ್ಯ-ಅಪ್ರದಾನ-ದೋಷಪರಿಹಾರಾರ್ಧಂ ಪ್ರಾಯಶ್ಚಿತ್ತಾರ್ಘ್ಯಪ್ರದಾನಂ ಕರಿಷ್ಯೇ” ಎಂದು ಸಂಕಲ್ಪ. 
  
  ಇದರ ಕುರಿತು ಅನೇಕರು ಆಕ್ಷೇಪ ಮಾಡಿದ್ದಾರೆ. ಅದಕ್ಕೆ ಆ ಲೇಖನಗಳಲ್ಲಿ ಉತ್ತರಿಸುತ್ತೇನೆ. (ದೇವರ ಪೂಜೆಯ ಲೇಖನಗಳು ಮುಗಿದ ಬಳಿಕ ಸಂಧ್ಯಾವಂದನೆಯ ಲೇಖನ-ಉಪನ್ಯಾಸ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತೇನೆ) 
  
  
 • ಸುದರ್ಶನ ಚಂದ್ರ,

  9:25 PM , 19/04/2017

  ಆಚಾರ್ಯರೆ ನಮಸ್ಕಾರ,ಬಾಳೆ ಹೂವಿನಿಂದ ಮಾಡಿದ ಅಕ್ಷತೆ ಶ್ರೇಷ್ಠವೋ?ಅಕ್ಷತೆ ಚಕ್ಕೆಯದ್ದೋ?
  ಇತ್ತೀಚಿಗೆ ಶುದ್ದ ಮಡಿಯಲ್ಲಿ ಮಾಡಿದ ತೀಥದ ಪುಡಿ-ಅಕ್ಷತೆ ಉಂಡೆ/ಪುಡಿಗಳು ಮಾರುಕಟ್ಟೆಯಲ್ಲಿ ಸಿಗುತ್ತೆವೆ,ಅವುಗಳನ್ನು ಬಳಸಬಹುದೆ?ವಿಕ್ರಯಗೂಂಡ-plasticನ ಸಂಪರ್ಕಕ್ಕೆ ಬಂದ ಅವು ಮಡಿಗೆ ಬರುತ್ತದೆಯೆ?ದಯಮಾಡಿ ಉತ್ತರಿಸಿ.

  Vishnudasa Nagendracharya

  ಅಂಗಡಿಯಲ್ಲಿ ಮಾರುವ ಅಕ್ಷತೆಯ ಉಂಡೆಯನ್ನ ಸರ್ವಥಾ ಬಳಸಬಾರದು. ಏನು ಹಾಕಿ ಮಾಡುತ್ತಾರೆಯೋ ಗೊತ್ತಿಲ್ಲ. ಬೂರುಗದ ಮಣಿಗಳನ್ನು ತುಳಸಿ ಮಣಿ ಎಂದು ಮಾರುವ ಕಾಲ, ಪ್ಲಾಸ್ಟಿಕ್ಕಿನ ಅಕ್ಕಿಯನ್ನು ತಿನ್ನಲು ಮಾರುವ ಕಾಲ. ಹೀಗಾಗಿ ಸರ್ವಥಾ ಬಳಸಬಾರದು. 
  
  ಬಾಳೆಯ ಹೂವನ್ನು ಸುಟ್ಟು, ಅರಿಶಿನದ ಕೊಂಬಿನಿಂದ ತೇದು ಮಾಡಿದ ಅಕ್ಷತೆಯೇ ಶ್ರೇಷ್ಠ. 
  
  ಚಂದನದ ಮರ ತೊಗಟೆಯನ್ನು ತಂದು ತೇದು ಮಾಡುವ ಅಕ್ಷತೆ ಇನ್ನೂ ಶ್ರೇಷ್ಠ. ಉದಯಿಸುವ ಸೂರ್ಯನಂತೆ ಕೆಂಪಗಿನ ಬಣ್ಣ ನೀಡುತ್ತದೆ. 
  
  ಪ್ಲಾಸ್ಟಿಕ್ಕು ಮತ್ತು ಪ್ಲಾಸ್ಟಿಕ್ಕಿನಿಂದ ನಿರ್ಮಾಣ ಮಾಡಿದ ಪದಾರ್ಥಗಳು ಯಾವ ಕಾಲಕ್ಕೂ ಮಡಿಗೆ ಬರುವದಿಲ್ಲ. 
  
 • suraj sudheendra,

  5:29 PM , 16/04/2017

  ಗರುಗಳೇ ಅಂಗಾರಾಕ್ಷತೆ ಹಚ್ಚುವ ಪಧ್ದತಿ ಮಠದಿಂದ ಮಠಕ್ಕೆ ಭಿನ್ನ. ಹೀಗೇ ಹಚ್ಚಬೇಕು ಎನ್ನುವ ನಿಯಮವೇನಾದರು ಇದೆಯ?

  Vishnudasa Nagendracharya

  ಇವತ್ತಿಗೆ ಆ ರೀತಿಯಂತೂ ಇದೆ. 
  
  ಶ್ರೀ ವ್ಯಾಸರಾಜ ಮಠದವರು ಅಂಗಾರ ಅಕ್ಷತೆಗಳನ್ನು ಬಿಡಿಸಿ ಹಚ್ಚುತ್ತಾರೆ. ಕೂಡಿಸುವದಿಲ್ಲ. 
  
  ಶ್ರೀ ರಾಘವೇಂದ್ರ ಮಠದವರು ಮೊದಲು ಅಕ್ಷತೆ ಹಚ್ಚಿ ಆಮೇಲೆ ಅಂಗಾರ ಹಚ್ಚುತ್ತಾರೆ. ಅವರೂ ಕೂಡಿಸುವದಿಲ್ಲ. 
  
  ಶ್ರೀ ಉತ್ತರಾದಿ ಮಠದವರು ಅಂಗಾರ ಅಕ್ಷತೆಗಳನ್ನು ಕೂಡಿಸಿ ಹಚ್ಚುತ್ತಾರೆ. 
  
  ಆದರೆ ಈ ಬೆಳವಣಿಗೆ ಇತ್ತೀಚಿನದೋ ಪ್ರಾಚೀನವೋ ಎನ್ನುವದರ ಕುರಿತು ಸಂಶಯವಿದೆ. ಕಾರಣ, ಆಯಾಯ ಮಠದ ಪ್ರಾಚೀನ ಸ್ವಾಮಿಗಳು ಬೇರೆಬೇರೆ ರೀತಿಯಲ್ಲಿ ಹಚ್ಚಿಕೊಂಡಿರುವ ದಾಖಲೆಗಳಿವೆ. 
  
  ಶೋಭಾಯಮಾನವಾಗಿ, ಮತ್ತೊಬ್ಬರು ಅಂಗಾರ ಅಕ್ಷತೆ ಹಚ್ಚಿಕೊಳ್ಳಲು ಪ್ರೇರಿಸುವಂತೆ ಧರಿಸಬೇಕು ಎನ್ನುವದು ಶಾಸ್ತ್ರಗಳ ನಿಲುವು. 
  
 • Ravi,

  4:27 PM , 16/04/2017

  Acharyrige Namaskar,
  Sayamkala sandhavandankita modalu akshate Angara dharisabeko illa nantarave.?( Beligge devara puje mugisi dharisida akshate yavado karanakke alisi hogiddare)

  Vishnudasa Nagendracharya

  ಮೊದಲು. 
 • suraj sudheendra,

  1:23 PM , 16/04/2017

  ಗುರುಗಳೇ ನಮಸ್ಕಾರಗಳು. ನಮ್ಮ ಮನೆಯಲ್ಲೇ ಪೂಜೆಯನ್ನು ಮಾಡಿದಾಗ ಅಂಗಾರಾಕ್ಷತೆ ಧರಿಸಿರುತ್ತೆವೆ. ಆ ದಿವಸ ಇನ್ನೊಬ್ಬರ ಮನೆಯಲ್ಲಿ ಊ‌ಟಕ್ಕಾಗಿ ಹೋದಾಗ ಅವರು ಅಂಗಾರಾಕ್ಷಾತೆ ನೀಡಿದಾಗ ಏನಯ ಮಾಡಬೆಕು?

  Vishnudasa Nagendracharya

  ಬೇರೆಯವರ ಮನೆಗೆ ಊಟಕ್ಕಾಗಿ ಹೋಗುವಾಗ ಅಂಗಾರ ಅಕ್ಷತೆಯನ್ನು ಧರಿಸಿ ಹೋಗಬಾರದು. 
  
  ಕಾರಣ, ಭೋಜನದ ಒಂದು ಪೂರ್ವಾಂಗ, ಅತಿಥಿಗಳಿಗೆ ಗಂಧ ಅಕ್ಷತೆಗಳನ್ನು ನೀಡುವದು. ಹೀಗಾಗಿ ಅವರು ನೀಡುವ ಗಂಧಾಕ್ಷತೆಗಳನ್ನು ಸ್ವೀಕರಿಸಬೇಕು. ಶ್ರಾದ್ಧಕ್ಕಾಗಿ ಅಥವಾ ವಿಶೇಷ ಕಾರ್ಯಕ್ರಮಕ್ಕಾಗಿ ನೀವು ಬ್ರಾಹ್ಮಣರಾಗಿ ಆಮಂತ್ರಣ ಪಡೆದು ಹೋಗುತ್ತಿದ್ದಲ್ಲಿ ಈ ನಿಯಮವನ್ನು ಅವಶ್ಯವಾಗಿ ಪರಿಪಾಲಿಸಬೇಕು. 
  
  ಇನ್ನೊಂದು ಪ್ರಸಂಗ —
  
  ಆದರೆ, ನೀವು ಅಕಸ್ಮಾತ್ತಾಗಿ ಮತ್ತೊಬ್ಬರ ಮನೆಗೆ ಹೋಗಿದ್ದೀರಿ. ಅಂಗಾರ ಅಕ್ಷತೆ ಹಚ್ಚಿದ್ದೀರಿ, ಆದರೆ ಊಟವಾಗಿಲ್ಲ. ಅವರ ಮನೆಯಲ್ಲಿ ಊಟ ಮಾಡಲು ಸಿದ್ಧರಾದಾಗ ಹಳೆಯ ಅಂಗಾರ ಅಕ್ಷತೆಗಳನ್ನು ಅಳಿಸುವ ಆವಶ್ಯಕತೆಯಿಲ್ಲ. ಹಾಗೆಯೇ ಊಟ ಮಾಡಬಹುದು. 
  
  ಮತ್ತೊಂದು ಪ್ರಸಂಗ —
  
  ಇನ್ನು, ಅಂಗಾರ ಅಕ್ಷತೆ ಧರಿಸಿ ಇನ್ನೂ ಊಟ ಮಾಡದೇ ನೀವು ನಿಮ್ಮ ಪರಿಚಯದವರ ಮನೆಗೆ ಹೋಗಿದ್ದೀರಿ. ಅಲ್ಲಿಗೆ ಸ್ವಾಮಿಗಳೊಬ್ಬರು ಬಂದಿದ್ದಾರೆ. ಪೂಜೆ ನಡೆಯುತ್ತಿದೆ, ಅಂತಹ ಸಂದರ್ಭದಲ್ಲಿ ಹಣೆಯ ಅಂಗಾರ ಅಕ್ಷತೆಗಳನ್ನು ಅಳಿಸಿಕೊಂಡು ಗೋಪೀಚಂದನ ಧರಿಸಿ ಪೂಜೆಯನ್ನು ನೋಡಬೇಕು. ಆ ನಂತರ ದೇವರ ಪ್ರಸಾದದ ಗಂಧಾಕ್ಷತೆಗಳನ್ನು ಹಚ್ಚಿಕೊಳ್ಳಬೇಕು. 
  
  
 • Manjunath,

  10:07 AM, 16/04/2017

  ಆಚಾರ್ಯರೆ ಗೋಪಿಚಂದನ ಎಲ್ಲರು ಧರಿಸಬಹುದು ವೈಷ್ಣವರ ಸಂಕೇತ
  
  ಅಂಗಾರ ಅಕ್ಷತಿ ಮಾಧ್ವರ ಸಂಕೇತ ಇದನ್ನು ಮಾಧ್ವರೇತರ ವೈಷ್ಣವರು ಧರಿಸಬಹುದೇ?
  
  ಗೋಪಿಚಂದನಕ್ಕೆ ನಿರ್ಬಂಧವಿಲ್ಲ ಅಂಗಾರ ಅಕ್ಷತೆಗೆ ಇದೆಯೇ?
  
  ತಿಳಿಸಿಕೊಡಿ

  Vishnudasa Nagendracharya

  ಶ್ರೀಹರಿಯನ್ನು ಸರ್ವೋತ್ತಮ ಎಂದು ಒಪ್ಪುವ ಸಮಸ್ತರೂ ಅಂಗಾರ ಅಕ್ಷತೆಗಳನ್ನು ಧರಿಸಬಹುದು. 
  
  ಗೋಪೀಚಂದನ, ತಪ್ತಮುದ್ರಾಧಾರಣೆ, ಅಂಗಾರ ಅಕ್ಷತೆ, ವೈಷ್ಣವನಾಮ, ಏಕಾದಶೀ, ಚಾತುರ್ಮಾಸ್ಯ, ಹರಿಸ್ಮರಣೆಗಳಿಗೆ ಯಾವ ಜಾತಿ ಭೇದವಿಲ್ಲ. 
  
  ಒಬ್ಬ ಮುಸಲ್ಮಾನನಾಗಲೀ, ಕ್ರಿಶ್ಚಿಯನ್ನಾಗಲೀ ಅಥವಾ ಯಾರೇ ಆಗಲಿ ವಿಷ್ಣುಸರ್ವೋತ್ತಮತ್ವವನ್ನು ಅಂಗೀಕರಿಸಿ ವೈಷ್ಣವನಾಗಿ ಬಾಳಲು ಅಪೇಕ್ಷೆ ಪಟ್ಟಲ್ಲಿ ಮೇಲಿನ ಎಲ್ಲವನ್ನೂ ಅವನು ಮಾಡಬಹುದು. 
  
  ಅಕ್ಷತೆಯನ್ನು ಯಾವ ಸ್ತ್ರೀಯರೂ ಧರಿಸಬಾರದು. ಅಂಗಾರವನ್ನು ಮಡಿಹೆಂಗಸರು ಮಾತ್ರ ಧರಿಸಬಹುದು. ಉಳಿದಂತೆ ಮೇಲೆ ಹೇಳಿದ ಎಲ್ಲವನ್ನೂ ಬ್ರಾಹ್ಮಣೇತರರೂ ಅವಶ್ಯವಾಗಿ ಧರಿಸಬಹುದು, ಪಾಲಿಸಬಹುದು.