Pralayakaladalli nada padarthavu say a devara udaradalli irutte andaga andhanthamassu iralikke hege saadhya?
Manjunath,Bangalore
5:05 PM , 05/11/2017
ಆಚಾರ್ಯರಿಗೆ ನಮಸ್ಕಾರಗಳು🙏🙏
೧)ಜೀವಾತ್ಮರಿಗೆ ಆದಿ ಅಂತ್ಯಗಳು ಉಂಟೋ?
ಇದ್ದರೆ ಸೃಷ್ಟಿ ಹೇಗೆ ಅಂತ್ಯ ಹೇಗೆ
Vishnudasa Nagendracharya
ಶ್ರೀಮದ್ ಭಾಗವತದ ಜನ್ಮಾದ್ಯಸ್ಯ ಯತಃ ಎಂಬ ಹಾಗೂ ತೇಜೋವಾರಿಮೃದಾಂ ಎಂಬ ಮಾತಿನ ವಿವರಣೆರೂಪವಾದ ಅನೇಕ ಉಪನ್ಯಾಸಗಳಲ್ಲಿ ಈ ಪ್ರಶ್ನೆಗೆ ಉತ್ತರವನ್ನು ನೀಡಲಾಗಿದೆ. ಕೇಳಿ, ಉತ್ತರವನ್ನು ಪಡೆದು ನೀವೇ ಮತ್ತೆ ಕಾಮೆಂಟಿನಲ್ಲಿ ಅದನ್ನು ಬರೆಯಬೇಕೆಂದು ಈ ಮೂಲಕ ಸೂಚಿಸುತ್ತೇನೆ. ಈ ಪ್ರಶ್ನೆ ಇರುವ ಉಳಿದವರಿಗೂ ಅನುಕೂಲವಾಗುತ್ತದೆ.
ಪ್ರತಿಯೊಂದು ಉಪನ್ಯಾಸ-ಲೇಖನಗಳನ್ನೂ ಸೂಕ್ಷ್ಮವಾಗಿ ಗಮನಿಸಬೇಕು, ಅಧ್ಯಯನದ ರೀತಿಯಲ್ಲಿಯೇ ಪ್ರವಚನದ ಶ್ರವಣ ನಿಮ್ಮಿಂದ ನಡೆಯಬೇಕು ಎನ್ನುವ ಕಾರಣದಿಂದ ಈ ಪ್ರಶ್ನೆಗೆ ಉತ್ತರ ನೀಡುವ ಜವಾಬ್ಜಾರಿಯನ್ನು ನಿಮಗೇ ನೀಡುತ್ತಿದ್ದೇನೆ.
ಹೌದು.
ಅನಾದಿ ಕಾಲದಿಂದ ಅನಂತ ಕಾಲದವರೆಗೆ ಅವರು ಸಂಸಾರದಲ್ಲಿಯೇ ಇರುತ್ತಾರೆ. ಮೋಕ್ಷವಿಲ್ಲ. ಕಾರಣ ಅವರಿಗೆ ಮೋಕ್ಷದ ಬಯಕೆಯೇ ಇರುವದಿಲ್ಲ. ಅದಕ್ಕಾಗಿ ಕಿಂಚಿತ್ ಪ್ರಯತ್ನವನ್ನೂ ಸಹ ಮಾಡುವದಿಲ್ಲ.
ನಿತ್ಯಸಂಸಾರಿಗಳಿಗೆ ಮೋಕ್ಷವಿಲ್ಲ.
ಅವರಿಗೂ ಮೋಕ್ಷವಿದ್ದರೆ “ನಿತ್ಯಸಂಸಾರಿ” ಎಂಬ ಶಬ್ದ ಹೇಗೆ ಕೂಡುತ್ತದೆ? ಮಹಾಲಕ್ಷ್ಮೀದೇವಿಯರನ್ನು ನಿತ್ಯಮುಕ್ತರು ಎನ್ನುತ್ತೇವೆ. ಅನಾದಿಕಾಲದಿಂದಲೂ ಮುಕ್ತರು, ಅನಂತಕಾಲದವರೆಗೆ ಮುಕ್ತರು ಎನ್ನುವ ಕಾರಣಕ್ಕೆ. ಹಾಗೆ, ನಿತ್ಯಸಂಸಾರಿ ಎಂದರೆ ಅವರ ಸಂಸಾರ ನಿತ್ಯವಾದದ್ದು. ಅನಾದಿಕಾಲದಿಂದ ಅನಂತಕಾಲದವರೆಗೆ ಸಂಸಾರದಲ್ಲಿರುವವರು ಎಂದರ್ಥ.
ತ್ರಿದಿವನಿರಯಭೂಗೋಚರಾನ್ ನಿತ್ಯಬದ್ಧಾನ್ ಎಂದು ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ನಿರ್ಣಯಿಸಿದ್ದಾರೆ.
Ashok Prabhanjana,
2:28 PM , 18/04/2017
Swethadweepa dalli iruva bhagavad rupa mayapathi Vasudevanadu endu keLidene, adu Sarina? Vasudeva ne Raama na? Swethadweepa dalli Vasudeva avatara maaDi bandaga Raama endu onde Rupavanne kareyutaare endu keLidene. idu sarina? daya maaDi vivarsi GurugaLe -()-
Vishnudasa Nagendracharya
ಪರಮಾತ್ಮನ ಏನು ಚತುರ್ವ್ಯೂಹ ರೂಪವಿದೆ, ವಾಸುದೇವ ಸಂಕರ್ಷಣ ಪ್ರದ್ಯುಮ್ನ ಅನಿರುದ್ಧ ಎಂದು ಆ ವಾಸುದೇವನೇ ಶ್ವೇತದ್ವೀಪದಲ್ಲಿರುವದು ಮತ್ತು ರಾಮಚಂದ್ರನಾಗಿ ಅವತರಿಸಿದ್ದು. ಲಕ್ಷ್ಮಣನಲ್ಲಿ ಸಂಕರ್ಷಣ, ಭರತನಲ್ಲಿ ಪ್ರದ್ಯುಮ್ನ ಮತ್ತು ಶತ್ರುಘ್ನನಲ್ಲಿ ಅನಿರುದ್ಧ.
ವಾಸುದೇವ ಕಾರ್ಯ ಮೋಕ್ಷವನ್ನು ನೀಡುವದು ಎಂದು ಆಚಾರ್ಯರು ಹೇಳುತ್ತಾರೆ - ನಿಜಮುಕ್ತಿಪದಪ್ರದಾತಾ ಎಂದು. ಮೋಕ್ಷವನ್ನು ಶ್ವೇತದ್ವೀಪದಲ್ಲಿ ಕುಳಿತು ನೀಡುತ್ತಾನೆ. ಅವನೇ ರಾಮನಾಗಿ ಅವತರಿಸಿದಾಗ ಎಲ್ಲರಿಗೂ ಮೋಕ್ಷವನ್ನು ನೀಡಲು ತನ್ನೊಡನೆ ಕರೆದುಕೊಂಡು ಹೋದದ್ದು.
Raghavendra,
7:29 PM , 16/04/2017
Gurugale namaskaragalu
Very informative
ಪ್ರಮೋದ,
5:41 PM , 16/04/2017
ಆಚಾರ್ಯರೇ, ಲಕ್ಷ್ಮ್ಯಾತ್ಮಕಕ್ಕೂ ಲಕ್ಷ್ಮಿಯಿಂದ ಅಭಿಮನ್ಯಮಾನವೆನ್ನುವುದಕ್ಕು ಏನು ವ್ಯತ್ಯಾಸ?
Vishnudasa Nagendracharya
ಲಕ್ಷ್ಮ್ಯಾತ್ಮಕ ಎಂದರೆ ಆ ವಸ್ತುವೇ ಲಕ್ಷ್ಮೀದೇವಿ. ಶ್ವೇತದ್ವೀಪ ಅನಂತಾಸನ ವೈಕುಂಠಗಳು ಮಹಾಲಕ್ಷ್ಮಿಯ ರೂಪಗಳು. ಶ್ರೀ ವಾದಿರಾಜಗುರುಸಾರ್ವಭೌಮರು ಈ ತತ್ವವನ್ನು ಯುಕ್ತಿಮಲ್ಲಿಕೆಯಲ್ಲಿ ತಿಳಿಸಿದ್ದಾರೆ. ಶ್ರೀ ಮಧ್ವವಿಜಯದ ಹನ್ನೊಂದನೆಯ ಸರ್ಗದ ಉಪನ್ಯಾಸದಲ್ಲಿ ವಿವರಿಸಿದ್ದೇನೆ, ಕೇಳಿ.
ಲಕ್ಷ್ಮೀದೇವಿಯಿಂದ ಅಭಿಮನ್ಯಮಾನ ಎಂದರೆ ಆ ವಸ್ತುವಿನ ಒಡತಿ ಲಕ್ಷ್ಮೀದೇವಿಯರು ಎಂದರ್ಥ. ಜಡಪ್ರಕೃತಿ ಲಕ್ಷ್ಮಿದೇವಿಯಿಂದ ಅಭಿಮನ್ಯಮಾನ. ಲಕ್ಷ್ಮೀದೇವಿಯೇ ಜಡಪ್ರಕೃತಿಯಲ್ಲ. ಪ್ರಕೃತಿ ಬೇರೆ, ಪ್ರಕೃತಿಯ ಅಭಿಮಾನಿನಿಯಾದ ಲಕ್ಷ್ಮೀದೇವಿ ಬೇರೆ.
ಪ್ರಮೋದ,
3:45 PM , 16/04/2017
ಭಗವಂತನ ತ್ರಿಧಾಮಯೆನಿಸಿದ ಶ್ವೇತದ್ವೀಪ, ಅನಂತಾಸನ ಹಾಗು ವೈಕುಂಠ ಲಕ್ಷ್ಮ್ಯಾತ್ಮಕವಾದದ್ದು. ಹಾಗಾಗಿ, ಅವುಗಳಿಗೆ ನಾಶವೆಂಬುದಿಲ್ಲ. ಅಂಧಂತಮಸ್ಸೂ ನಿತ್ಯ ಲೋಕ ಎಂದು ಹೇಳಿದ್ದೀರಿ. ಅಂದರೆ, ಅದೂ ಲಕ್ಷ್ಮ್ಯಾತ್ಮಕ ಲೋಕವಾ? ಉಳಿದ ತಾಮಸ್ರ, ಅಂಧತಾಮಸ್ರ, ಕುಂಭಿಪಾಕಾದಿಗಳಿಗೆ ನಾಶ ಉಂಟೇ?
Vishnudasa Nagendracharya
ನಿತ್ಯವಾದ ಎಲ್ಲವೂ ಲಕ್ಷ್ಮ್ಯಾತ್ಮಕವಾಗಬೇಕಾಗಿಲ್ಲ.
ಜಡಪ್ರಕೃತಿ ಜಡವಾದ ಪದಾರ್ಥ. ಲಕ್ಷ್ಮೀದೇವಿಯಿಂದ ಅಭಿಮನ್ಯಮಾನ. ಲಕ್ಷ್ಮ್ಯಾತ್ಮಕವಲ್ಲ. ಆದರೂ ಅದು ನಿತ್ಯ.
ಪರಮಾತ್ಮನೂ ನಿತ್ಯ.
ಜೀವರೂ ನಿತ್ಯರು.
ಜಗತ್ತಿನ ಸಮಸ್ತವೂ ಮಹಾಲಕ್ಷ್ಮೀದೇವಿಯಿಂದ ನಿಯಮಿತವಾದ್ದರಿಂದ, ತಮೋಲೋಕವೂ ಲಕ್ಷ್ಮೀದೇವಿಯರ ಅಧೀನಕ್ಕೊಳಗಾಗಿದೆ.
ಲೋಕಾಲೋಕ ಪರ್ವತದ ಆಚೆಯಿರುವ ಅಂಧತಮಸ್ಸು ಇದು ನಿತ್ಯವಾದ ಲೋಕ. ಇದು ಮೇರುಪರ್ವತದ ಉತ್ತರ ಭಾಗಕ್ಕಿದೆ.
ಮೇರು ಪರ್ವತದ ದಕ್ಷಿಣದಲ್ಲಿರುವ ನರಕದಲ್ಲಿ ಕುಂಭೀಪಾಕ ಮುಂತಾದವು ಇವೆ. ನರಕದಲ್ಲಿಯೂ ತಾಮಿಸ್ರ ಅಂಧತಾಮಿಸ್ರ ಎಂಬ ಪ್ರದೇಶಗಳಿವೆ. ಇವೆಲ್ಲವೂ ಅನಿತ್ಯವಾದದ್ದು. ಚತುರ್ಮಖಬ್ರಹ್ಮದೇವರಿಂದ ಸೃಷ್ಟಿಯಾಗುವಂತದ್ದು.
Vijay Kumar,
2:51 PM , 16/04/2017
ನಿತ್ಯ ಸಂಸಾರಿಗಳ ಬಗ್ಗೆ ವಿವರಿಸುವಿರಾ ಆಚಾರ್ಯರೆ?
Vishnudasa Nagendracharya
ತುಂಬ ದೊಡ್ಡ ವಿಷಯ ಮತ್ತು ವಿವಾದದ ವಿಷಯ.
ಸಮಯ ದೊರೆತ ತಕ್ಷಣ ಬರೆಯುತ್ತೇನೆ.