Prashnottara - VNP008

ಸಂಕ್ಷಿಪ್ತ ಪೂಜೆ


					 	

ಆಚಾರ್ಯರಿಗೆ ನಮಸ್ಕಾರಗಳು.ಉದ್ಯೋಗಸ್ಥರಿಗೆ ನಿತ್ಯ ಪೂಜೆ ಮಾಡಲು ಸಂಕ್ಷಿಪ್ತ ಪೂಜಾ-ವಿಧಾನವನ್ನು ತಿಳಿಸಿದರೆ ಮಹದುಪಕಾರವಾಗುತ್ತದೆ. ----------------------------- ಖಂಡಿತ. ಈಗ ಪೂಜಾಪದ್ಧತಿಯ ಉಪನ್ಯಾಸ-ಲೇಖನಗಳ ಜ್ಞಾನಕಾರ್ಯವೇ ನಡೆಯುತ್ತಿದೆ. ಈ ಮಾಲಿಕೆಯಲ್ಲಿ 1. ಹಬ್ಬ ವ್ರತಗಳಲ್ಲಿ, ಮಾಡಬಹುದಾದ ಸುಮಾರು ಮೂರು ಗಂಟೆಗೂ ಹೆಚ್ಚು ಅವಧಿಯ ಪರಿಪೂರ್ಣ ಪೂಜೆಯ ಕ್ರಮ 2. ರಜಾದಿನಗಳಂದು ಮಾಡಲಿಕ್ಕೆ ಸಾಧ್ಯವಾಗುವ ಸುಮಾರು ಒಂದೂವರೆ ಗಂಟೆ ಅವಧಿಯ ವಿಸ್ತೃತ ಪೂಜೆಯ ಕ್ರಮ 3. ಪ್ರತೀನಿತ್ಯ ಮಾಡಲು ಸಾಧ್ಯವಾಗುವ ಸುಮಾರು ಅರ್ಧಗಂಟೆಯ ಸಂಕ್ಷಿಪ್ತ ಪೂಜೆಯ ಕ್ರಮ 4. ಅವಸರದ ಸಮಯದಲ್ಲಿ ಹದಿನೈದು ನಿಮಿಷದಲ್ಲಿ ಮಾಡಿ ಮುಗಿಸುವ ಅತೀ ಸಂಕ್ಷಿಪ್ತ ಪೂಜೆಯ ಕ್ರಮ 5. ಕೇವಲ ಮೂರು ನಿಮಿಷಗಳಲ್ಲಿ ಮಾಡಿ ಮುಗಿಸುವ ಅತ್ಯಂತ ಸಂಕ್ಷಿಪ್ತ ಪೂಜಾ ಕ್ರಮ ಇವಿಷ್ಟನ್ನೂ ತಿಳಿಸುತ್ತೇನೆ. ಪೂಜೆಯ ಸಮಗ್ರ ವಿಧಿಯನ್ನು ತಿಳಿದಾಗ ಸಂಕ್ಷಿಪ್ತವಾಗಿ ಮಾಡಲು ಸಾಧ್ಯ. ಹೀಗಾಗಿ ಎಲ್ಲವನ್ನೂ ಸಮಗ್ರವಾಗಿ ಕೇಳಿ, ಓದಿ. ನಾಳೆಯ ಉಪನ್ಯಾಸ VNU431, ಪೂಜಾನಿರ್ಣಯದಲ್ಲಿ ಐದನೆಯ ಉಪನ್ಯಾಸ, ದೇವರ ಪೂಜೆಯ ಸಮಗ್ರ ಪಕ್ಷಿನೋಟವನ್ನು ನೀಡುತ್ತದೆ. ತಪ್ಪದೇ ಕೇಳಿ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
7369 Views

Comments

(You can only view comments here. If you want to write a comment please download the app.)
 • ASB,...

  11:58 AM, 02/10/2022

  ಹರೇ ಶ್ರೀನಿವಾಸ 🙏🙏🙏
  ಗುರುಗಳ ಚರಣಾರವೃಂದಕೆ ಅನಂತ ನಮಸ್ಕಾರಗಳು 
  ಇಲ್ಲಿ ತಿಳಿ ಹೇಳಿದ ಪೂಜಾ ನಿರ್ಣಯ ಬ್ರಾಹ್ಮಣರಿಗೆ ಸ್ವಧರ್ಮಭೂತವಾದದ್ದು 🙏
  ಶೂದ್ರ ವರ್ಣರಾದವರಿಗೆ ಪೂಜಾ ನಿರ್ಣಯ ಮಾಡಿ ಕೊಟ್ಟಲಿ ಮಹತ್ತರ ದಯೆ, ಕಾರುಣ್ಯವಾಗುವುದು 🙏🙇‍♂️
  ದೇವರ ಪೂಜೆಯ ಜ್ಞಾನವಿಲ್ಲದೆ ಮನಸ್ಸು ತಳಮಳಗೂಂಡಿದೆ 🥺🙏

  Vishnudasa Nagendracharya

  ಬ್ರಾಹ್ಮಣರ ಪೂಜಾ ವಿಧಾನ ಅತ್ಯಂತ ಜಟಿಲವಾದ ನಿಯಮಗಳಿಂದ ಕೂಡಿದ್ದು. 
  
  ಕ್ಷತ್ರಿಯ ವೈಶ್ಯರ ಪೂಜಾ ವಿಧಾನ ಅದಕ್ಕಿಂತ ಕಡಿಮೆ ನಿಯಮ. 
  
  ಕೇವಲ ನಮಸ್ಕಾರ, ನಾಮಸ್ಮರಣೆ ಮತ್ತು ಮನಸ್ಸಿನ ಚಿಂತನೆಗಳಿಂದ ಶೂದ್ರರಿಗೆ ಪೂಜಾಫಲ ದೊರೆಯುತ್ತದೆ. ಪುರಾಣಗಳಲ್ಲಿ ಈ ಕುರಿತು ಸ್ಪಷ್ಟ ಇತಿಹಾಸ ಮತ್ತು ಮಾಹಿತಿಗಳಿವೆ. ಅವೆಲ್ಲವನ್ನೂ ಕ್ರೋಡೀಕರಿಸಿ, ಪೂಜಾ ನಿರ್ಣಯದ ಲೇಖನ ಉಪನ್ಯಾಸಗಳ ಸಂದರ್ಭಗಳಲ್ಲಿ ವಿವರಿಸಿ ನೀಡುತ್ತೇನೆ. 
  
  ಶೂದ್ರರಿಗೆ ಇರುವ ಮತ್ತೊಂದು ಸೌಲಭ್ಯ - ಶ್ರೇಷ್ಠ ಮಹಾನುಭಾವರು ಮಾಡುವ ಪೂಜೆಗೆ, ತಮಗೆ ಯೋಗ್ಯವಾದ ರೀತಿಯಲ್ಲಿ ಸೇವೆ ಮಾಡುವದರಿಂದಲೇ ಅವರಿಗೆ ಮಹಾಫಲ ದೊರೆಯುತ್ತದೆ. 
 • Dayanand,Athani

  11:37 AM, 23/06/2022

  VNU 431
 • Sheshagiri,Bangalore

  11:51 AM, 07/10/2020

  ನಮಸ್ತೆ ಆಚಾರ್ಯರಿಗೆ, ಶ್ರಾದ್ಧದ ದಿನ ಗುರುಗಳ ಹಸ್ತೊದಕ ಕ್ರಮದಲ್ಲಿ ಏನಾದರೂ ವ್ಯತ್ಯಾಸ ಇದೆಯಾ... ಅಂದರೆ ದೇವರ ಪೂಜೆ, ರಮಾ ದೇವಿ, ಪ್ರಾಣದೇವರ ನೈವೇದ್ಯ, ಶೇಷ - ರುದ್ರ - ಗರುಡ ದೇವರ ನೈವೇದ್ಯ, ವೈಷ್ವದೇವ ನಂತರ ಗುರುಗಳ ಹಸ್ಥೋದಕ ಮಾಡಿ ಶ್ರಾದ್ಧ ಮಾಡಬಹುದೇ? ಇಲ್ಲ ಶ್ರಾದ್ಧದ ನಂತರ ಕರ್ತೃ ಅಲ್ಲದವನು ಗುರುಗಳ ಹಸ್ಥೊಡಕ ಮಾಡುವುದು ಸರಿಯಾದ ಕ್ರಮವೇ . ದಯವಿಟ್ಟು ತಿಳಿಸಿ ಕೊಡಿ
 • PrahladraoKulkarni,Kalburgi

  1:59 PM , 19/11/2019

  Ko
 • Nagabhushana,Kerala

  1:41 PM , 30/01/2018

  Poojeya vidhanavannu yavaga tilisuttira aacharyare
 • Chandresh,Mumbai

  6:06 PM , 13/01/2018

  Vnu431
 • Jayashree karunakar,

  10:36 PM, 04/06/2017

  ಗುರುಗಳೇ ಮಾನಸಿಕ ಪೂಜಾವಿಧಾನವನು ದಯವಿಟುತಿಳಿಸಿ

  Vishnudasa Nagendracharya

  ದೇವರ ಪೂಜೆಯ ವಿಭಾಗದಲ್ಲಿ ಬರುತ್ತದೆ. ಒಂದರ ನಂತರ ಒಂದನ್ನು ನೀಡುತ್ತ ಹೋಗುತ್ತೇನೆ. ದಯವಿಟ್ಟು ಕಾಯಬೇಕು.
 • Raviraj Upadhyaya,

  6:38 PM , 04/06/2017

  Adashtu Bega tilisi aacharyare

  Vishnudasa Nagendracharya

  ಸಂಕ್ಷಿಪ್ತ ಪೂಜಾವಿಧಾನವನ್ನು ಬೇಗ ನೀಡಿ ಎಂದು ಅನೇಕ ಜನ ಮೇಲಿಂದ ಮೇಲೆ ಕೇಳುತ್ತಿದ್ದೀರಿ. ಆದರೆ, ವಿಸ್ತಾರವನ್ನು ತಿಳಿಯದೇ ಸಂಕ್ಷೇಪ ಅರ್ಥವಾಗುವದಿಲ್ಲ. ವಿಸ್ತಾರವನ್ನು ಚನ್ನಾಗಿ ಬಲ್ಲವರು, ಸಂಕ್ಷೇಪವನ್ನು ಅರಿಯಬಲ್ಲರು. ಗಣಿತದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ವ್ಯಕ್ತಿ, ಎರಡನೇ ತರಗತಿಯ ಲೆಕ್ಕವನ್ನು ಅತಿ ಸುಲಭವಾಗಿ ಮಾಡುತ್ತಾನೆ. ಸಾವಿರಾರು ಕಿಲೋಮೀಟರುಗಳನ್ನು drive ಮಾಡಿದ ವ್ಯಕ್ತಿ ಎಂತಹ ದಾರಿಯಲ್ಲಿಯೂ ಸುಲಭವಾಗಿ ಗಾಡಿ ಓಡಿಸುತ್ತಾನೆ. ಮೊದಲಿಗೆ ವಿಸ್ತಾರ ಅರ್ಥವಾಗಬೇಕು. 
  
  ಈಗ ಸಂಕ್ಷಿಪ್ತ ಪೂಜೆಯ ಪುಸ್ತಕಗಳು, ಆಡಿಯೋಗಳು, ವಿಡಿಯೋಗಳು ಎಷ್ಟು ಉಪಲಬ್ಧವಿಲ್ಲ? ಆದರೂ ಯಾಕೆ ಜನರಿಗೆ ಮಾಡಲಾಗುತ್ತಿಲ್ಲ ಎಂದರೆ, ವಿಸ್ತಾರವನ್ನು ಅರಿಯದೇ ಸಂಕ್ಷೇಪವನ್ನು ತಿಳಿಯಲು ಹೋಗುತ್ತಾರೆ. ಅಲ್ಲಿಯೇ ತಪ್ಪಾಗುತ್ತಿರುವದು. 
  
  ಹೀಗಾಗಿ ಸಾವಧಾನವಾಗಿ ವಿಸ್ತಾರವನ್ನು ತಿಳಿಯುತ್ತ ಹೋಗಿ, ಇದು ಮುಗಿಯುವ ವೇಳೆಗೆ ನೀವೇ ಇಷ್ಟನ್ನು ಮಾಡಿದರೆ ಸಂಕ್ಷೇಪವಾಗುತ್ತದೆ ಎಂದು ಹೇಳಬಲ್ಲಿರಿ. 
  
  ವಿಶ್ವನಂದಿನಿಯಲ್ಲಿ ನಾನು ಅದೇ ಪ್ರಯೋಗವನ್ನು ಮಾಡುತ್ತಿರುವದು. ಪರಿಣಾಮಕಾರಿಯಾಗಿ ಜನರಲ್ಲಿ ಮೂಡಬೇಕೆಂದು ಪ್ರಯತ್ನಿಸುತ್ತಿದ್ದೇನೆ. ಹೀಗಾಗಿ ವಿಸ್ತಾರವನ್ನು ಶ್ರದ್ದೆಯಿಂದ ತಿಳಿದುಕೊಳ್ಳಿ. 
  
  ನಾವು ಸಮಯ ಉಳಿಸಲು ಸಂಕ್ಷೇಪ ಪೂಜೆ ಮಾಡಬೇಕಾಗಿಲ್ಲ. ದೇವರನ್ನು ಮೆಚ್ಚಿಸಲು ಮಾಡಬೇಕಾಗಿದೆ ಎನ್ನುವ ಎಚ್ಚರ ಸದಾ ನಮ್ಮಲ್ಲಿರಬೇಕು. 
  
  ಏನೋ ಒಂದು ಮಾಡಿ ಮುಗಿಸುವದು ಸಂಕ್ಷೇಪವಲ್ಲ. ಐದೇ ನಿಮಿಷದ ಪೂಜೆಯನ್ನೂ ಹರಿಪ್ರೀತಿಯಾಗುವಂತೆ, ಶಾಸ್ತ್ರ ಒಪ್ಪುವಂತೆ ಮಾಡುವದು ಸಂಕ್ಷೇಪ. 
 • Sangeetha prasanna,

  12:12 PM, 18/04/2017

  Gurugalige namaskargalu.sankshipt Pooja vidhankke aaturdind kayuttiddeve

  Vishnudasa Nagendracharya

  ದೇವರ ಪೂಜೆಯ ಉಪನ್ಯಾಸ ಮಾಲಿಕೆಯಲ್ಲಿಯೇ ಬರುತ್ತದೆ
  
  ಕ್ರಿಯೆಯ ವಿವರಣೆ, ಮಂತ್ರ, ಮಂತ್ರಾರ್ಥದ ವಿವರಣೆಯೊಂದಿಗೆ.
 • Ananda Teertha,

  8:34 AM , 17/04/2017

  ಆಚಾರ್ಯರ ಪಾದಾರವಿಂದಗಳಿಗೆ ಸಾಷ್ಟಾಂಗ ಸಾಷ್ಟಾಂಗ ಸಾಷ್ಟಾಂಗ ಪ್ರಣಾಮಗಳು. 🙏🙏
 • ಪ್ರಮೋದ,ಬೆಂಗಳೂರು

  11:43 PM, 16/04/2017

  ಬಹಳ ಬಹಳ ಸಂತೋಷ☺
  ಧನ್ಯೋಸ್ಮಿ🙏🙏🙏
 • Pramod Kulkarni,

  11:31 PM, 16/04/2017

  Kutuhaladinda kadiddeve acharyare
 • GOPAL RAO R,Coimbatore

  7:24 AM , 20/05/2017

  VNU431
 • H V SREEDHARA,Bengaluru

  4:04 PM , 14/05/2017

  ಆಚಾರ್ಯರಿಗೆ ಪ್ರಣಾಮಗಳು. ಸಂಕ್ಷಿಪ್ತ ದೇವರ ಪೂಜೆಯ ಲೇಖನ ಹಾಗೂ ಉಪನ್ಯಾಸವನ್ನು ಕಾತುರದಿಂದ ಎದುರು ನೋಡುತ್ತಿದ್ದೆನೆ.
 • Nagabhushsna,Kerala

  5:09 PM , 23/05/2017

  Yavaga acharyare