Prashnottara - VNP010

ಪಿಶಾಚಿಗಳು ನಿಜವಾಗಿಯೂ ಇವೆಯಾ?


					 	

ನಮ್ಮ ಆತ್ಮೀಯ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು. ಈ ರೀತಿಯ ಪ್ರಶ್ನೆ ಕೇಳುತ್ತಿರುವದಕ್ಕೆ ದಯವಿಟ್ಟು ಕ್ಷಮಿಸಿ. ದೆವ್ವ ಭೂತಗಳು ಎನ್ನುವದು ನಿಜವಾಗಿ ಇವೆಯಾ? ನಮ್ಮ ಶಾಸ್ತ್ರಗಳು ಏನು ಹೇಳುತ್ತವೆ. ದಯವಿಟ್ಟು ಉತ್ತರಿಸಿ. ತಪ್ಪು ಕೇಳಿದ್ದರೆ ಕ್ಷಮಿಸಿ. — ವಾದಿರಾಜ, ರಾಯಚೂರು. ಪ್ರಶ್ನೆಯಲ್ಲಿ ಖಂಡಿತ ತಪ್ಪಿಲ್ಲ. ಸವಿಸ್ತೃತವಾದ ಉತ್ತರವನ್ನು ಪ್ರಕಟಿಸಿದ್ದೇನೆ. ಕೇಳಿ.


Play Time: 13:34, Size: 2.42 MB


Download Upanyasa Share to facebook View Comments
4670 Views

Comments

(You can only view comments here. If you want to write a comment please download the app.)
 • Krishnamurthy Kulkarni,Bangalore

  2:16 AM , 20/04/2020

  ಆಚಾರ್ಯರಿಗೆ ನಮಸ್ಕಾರಗಳು, 
  
  ಪಿಶಾಚಿಗಳು ಕಾಡಿನಲ್ಲಿ ಜೀವಿಸುತ್ತವೆ ಎಂತಾದರೆ ಶ್ರೀ ವಾದಿರಾಜ ಸ್ವಾಮಿಯವರ ಬೃಂದಾವನ ಕಾಡಿನಲ್ಲಿದೆ. ಅಲ್ಲಿ ಆರಾಧನೆಗೆ ಅನೇಕ ಜನ ಬರ್ತಾರೆ.‌ಅದರಲ್ಲಿ ದುರ್ಬಲ ಮನಸ್ಸಿನ ಅನೇಕ ಮಕ್ಕಳು ಬಂದಿರುತ್ತಾರೆ.‌ಕಾಡಿನಲ್ಲಿ ತಪೋವನ ನೋಡಲು ಹೋಗುತ್ತಾರೆ. ಇಂತಹ ಯಾವ ಪ್ರಸಂಗವೂ ನಾವು ನೋಡಿಲ್ಲ.‌ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ‌‌

  Vishnudasa Nagendracharya

  ಮೊದಲಿಗೆ, ಕಾಡಿನಲ್ಲಿ ಪಿಶಾಚಿಗಳು ಇರುತ್ತವೆ ಎಂದರೆ, ಎಲ್ಲ ಕಾಡಿನಲ್ಲಿಯೂ ಪಿಶಾಚಿಗಳು ಇದ್ದೇ ಇರುತ್ತವೆ ಎಂದಲ್ಲ. 
  
  ಎರಡನೆಯದು ಯಾವ ಪುಣ್ಯಾರಣ್ಯದಲ್ಲಿ ಋಜುಪುಂಗವರಾದ ಶ್ರೀಮದ್ವಾದಿರಾಜತೀರ್ಥಗುರುಸಾರ್ವಭೌಮರು ನೆಲೆಸಿದ್ದಾರೆಯೋ, ಶ್ರೀ ಭೂತರಾಜರು ಅವರ ಸೇವೆಯನ್ನು ಮಾಡುತ್ತ ನೆಲೆಸಿದ್ದಾರೆಯೋ ಅಲ್ಲಿ ಪಿಶಾಚಿಗಳು ಹೇಗಿರಲು ಸಾಧ್ಯ. 
  
  ಪಿಶಾಚಿಗಳ ಬಾಧೆಯಿದ್ದವರನ್ನು ಅಲ್ಲಿಗೆ ಕರೆದುಕೊಂಡು ಹೋಗಿ, ಅವರಿಗೆ ಶ್ರೀಭೂತರಾಜರ ತೀರ್ಥವನ್ನು ಪ್ರೋಕ್ಷಿಸಿದರೆ ಪಿಶಾಚಿಗಳ ಬಾಧೆಯೇ ಹೊರಟು ಹೋಗುತ್ತದೆ. ಸಾವಿರಾರು ಜನರ ಅನುಭವ ಇದಕ್ಕೆ ಸಾಕ್ಷಿಯಾಗಿದೆ. 
  
  ಕೇವಲ ಸ್ವಾದಿಯಲ್ಲಲ್ಲ, ಅಲ್ಲಿನಿಂದ ಶ್ರೀ ಭೂತರಾಜರ ತೀರ್ಥವನ್ನು ತಂದು ನಮ್ಮ ಮನೆಗೆ ವಾಹನಗಳಿಗೆ ಪ್ರೋಕ್ಷಣೆ ಮಾಡಿದರೆ ಸಕಲ ಆಪತ್ತುಗಳು ಪರಿಹಾರವಾಗುತ್ತವೆ. 
  
  
 • Sathyanarayana R B,Bangalore

  11:47 AM, 20/07/2017

  Sri Gurobhyo namaha.......
  Acharyare...Gayatri mantradinda namma prarbdha karmavanna kalkobahude...?

  Vishnudasa Nagendracharya

  ಗಾಯತ್ರೀ ಮಂತ್ರದ ಪಠಣೆಯಿಂದ ನಮ್ಮ ಪಾಪಗಳೂ ಅದರಿಂದ ಉಂಟಾಗುವ ಕಷ್ಟಗಳೂ ಅವಶ್ಯವಾಗಿ ದೂರವಾಗುತ್ತವೆ. 
 • Ashok Prabhanjana,

  9:46 AM , 07/05/2017

  ಯಾತನಾ ಶರೀರವು ಎಲ್ಲಾ ಜೀವರುಗಳಿಗೆ ಒಂದೇ ಆಕಾರದಲ್ಲಿ ಇರುತದೆಯ ಅಥವಾ ಸ್ವರೂಪಕ್ಕೆ ಅನುಗುಣವಾಗಿ ತದಾಕಾರದ ಯಾತನಾ ಶರೀರ ಜೀವರಿಗೆ ಬರುತದೆಯ ? ಉದಾ : ಸ್ವರೂಪತಹ ಒಬ್ಬ ಜೀವ ಹುಲಿ ಆಗಿದ್ದರೆ, ಕರ್ಮಾನುಸಾರ ಮನುಷ್ಯ ಯೋನಿಯಲ್ಲಿ ಹುಟ್ಟಿ ಆ ಮನುಷ್ಯ ದೇಹದ ನಿಯಾಣವಾದ ಮೇಲೆ ಆ ಜೀವದ ಯಾತನಾ ಶರೀರ ಹುಲಿ ಆಕಾರದಲ್ಲಿ ಇರುತದೆಯ ಅಥವಾ ಮನುಷ್ಯಾಕಾರದಲ್ಲೇ ಇರುತದೆಯ? ದಯವಿಟ್ಟು ತಿಳಿಸಿ ಕೊಡಿ ಗುರುಗಳೇ
 • Ashok Prabhanjana,

  10:22 PM, 06/05/2017

  ಹಾಗಾದರೆ ಯಾತನಾ ಶರೀರದಲ್ಲಿ ಇರುವ  ಎಲ್ಲಾ ಜೀವರುಗಳಿಗೆ ಸಂಸ್ಕೃತ ತಿಳಿದಿರುತದೆಯಾ ? ದಯವಿಟ್ಟು ತಿಳಿಸಿ ಗುರುಗಳೇ

  Vishnudasa Nagendracharya

  ತಿಳಿದಿರುತ್ತದೆ. 
  
  ಒಬ್ಬ ಜೀವ ಒಂದು ಹಾವಾಗಿ ಹುಟ್ಟಿದಾಗ ಹಾವಿಗೆ ಯಾವ ರೀತಿಯ ಜ್ಞಾನವಿರಬೇಕೋ ಆ ಜ್ಞಾನವನ್ನು ಹುಟ್ಟುತ್ತಲೇ ಪಡೆದಿರುತ್ತಾನೆಯೋ, ಅದೇ ಜೀವ ಹದ್ದಾಗಿ ಹುಟ್ಟಿದಾಗ ಹದ್ದಿನ ತಿಳುವಳಿಕೆ ಇರುತ್ತದೆಯೋ ಹಾಗೆ ಯಾತನಾಮಯ ಶರೀರವನ್ನು ಪಡೆದಾಗ ಆ ಶರೀರದಲ್ಲಿ ಎಷ್ಟು ಜ್ಞಾನವಿರಬೇಕೋ ಅಷ್ಟನ್ನು ಪಡೆಯುತ್ತಾನೆ. ಹೀಗಾಗಿ ಯಮದೂತಾದಿಗಳು ಮಾತನಾಡುವ ಮಾತು ಅರ್ಥವಾಗುವಷ್ಟು ಜ್ಞಾನ ಅವನಿಗಿರುತ್ತದೆ. 
 • Ashok Prabhanjana,

  4:16 PM , 06/05/2017

  ಗುರುಗಳೇ, ವಿಚಾರಣೆಗಾಗಿ ಯಮಧಎಳೆದುಕೊಂಡು ಯಮ ದೂತರಿಂದ ಎಳೆದುಕೊಂಡು ಜೀವರು, ಯಾವ ಭಾಷೆಯಲ್ಲಿ ಯಮದೇವರೊಡನೆ ಮಾತನಾಡುತಾರೆ? ಮೇಲಿನ ಲೋಕಗಳಲ್ಲಿ ಇಲ್ಲಿಯ ತರಹ ಒಂದು ನಿರ್ಧಿಷ್ಟ ಭಾಷೆ ಇರುವುದಿಲ್ಲ, ಅಲ್ಲಿ ಭಾವನೆಗಳಿಂದಲೆ ಮಾತು ಎಂದುಕೇಳಿದ್ದೆನೆ, ಅದು ನಿಜವೆ? ದಯವಿಟ್ಟು ತಿಳಿಸಿ ಗುರುಗಳೇ

  Vishnudasa Nagendracharya

  ಸಂಸ್ಕೃತದಲ್ಲಿ. 
  
  ಜೀವದ ಭಾಷೆ, ಸಂಸ್ಕೃತ. 
 • Praneshachar purohit,Koppal

  8:53 PM , 30/04/2017

  ಗುರುಗಳಿಗೆ ನಮಸ್ಕಾರಗಳು ಯಾಜ್ನ್ಯವಲ್ಕರು ಬ್ರಹ್ಮಾಂಶಸಂಭೂತರು ಹೌದೊ ಅಥವಾ ಅಲ್ಲ ತಿಳಿಸಿಕೊಡಿ          ಪ್ರಾಣೆಶಾಚಾರ್ ಕೊಪ್ಪಳ

  Vishnudasa Nagendracharya

  ಯಾಜ್ಞವಲ್ಕ್ಯರು ಶ್ರೇಷ್ಠ ಋಷಿಗಳು. ಸರ್ವಥಾ ಬ್ರಹ್ಮದೇವರಲ್ಲ. 
  
  ಬ್ರಹ್ಮದೇವರ ಸನ್ನಿಧಾನವನ್ನು ಹೊತ್ತ ಮಹಾಜ್ಞಾನದ, ಶ್ರೇಷ್ಠತಪಸ್ಸಿನ ಮಹಾನುಭಾವರು. 
 • siddaraju,nanjangud

  8:00 AM , 28/04/2017

  ತಾಮಸ ಜೀವಿಗಳು ದುಃಖ ಅನುಭವಿಸುತ್ತಿದ್ದರೂ ಅವರ ಅಂತಃಕರಣ ಆ ದುಃಖ ವನ್ನೇ ಸುಖ ಎಂಬ ಭ್ರಮೆ ಉಂಟು ಮಾಡುತ್ತದೆ ,ಎಂದು ವಾದಿರಾಜರು ಹೇಳಿದ್ದಾರೆ,ಎಂದು ಯಾವುದೋ ಪುಸ್ತಕ ದಲ್ಲಿ ಓದಿದ ನೆನಪು ,ಹೌದಾ ತಿಳಿಸಿ ಗುರುಗಳೇ
 • siddaraju,nanjangud

  7:37 PM , 27/04/2017

  ಗುರುಗಳೇ ಈ ಬೌತಿಕ ಜಗತ್ತಿನ ಪಿಶಾಚಿ ಗಳಂತೆ ಸ್ವರೂಪದಲ್ಲೇ ಪಿಶಾಚಿ ಜೀವರು ಶಾಶ್ವತ ತಮಸ್ಸಿಗೆ ಹೋದಾಗ ಈ ಪಿಶಾಚಿಗಳಂತೆಯೇ ಹಸಿವು ಬಾಯಾರಿಕೆ ಯಂತಹ ಹಿಂಸೆ ಆಗುವುದಾ, ಅಥವಾ ಅವರ ಸ್ವರೂಪ ಅಭಿವ್ಯಕ್ತಿ ಯೇ ಅವರಿಗೆ ಹಿತವಾಗಿರುತ್ತದಾ ದಯಮಾಡಿ ತಿಳಿಸಿ

  Vishnudasa Nagendracharya

  ಈ ಲೋಕದಲ್ಲಿ ಅನುಭವಿಸುವ ಹಿಂಸೆಗೂ ತಮೋಲೋಕದಲ್ಲಿ ಅನುಭವಿಸುವ ಹಿಂಸೆಗೂ ಒಂದು ಸಾಸಿವೆಗೂ ಬ್ರಹ್ಮಾಂಡಕ್ಕೂ ಇರುವಷ್ಟು ವ್ಯತ್ಯಾಸವಿದೆ. ತಮಸ್ಸಿನಲ್ಲಿ ಹಿತವೆನ್ನುವದಿಲ್ಲ, ಸುಖದ ಸೊಲ್ಲೇ ಇಲ್ಲ. ದುಃಖ, ದುಃಖ, ದುಃಖ ಕೇವಲ ದುಃಖ. ಕೊನೆಯಿಲ್ಲದ ನೋವಿನ ಆಗರ ಆ ತಮಸ್ಸು. 
  
  ಹೀಗಾಗಿ ಇಲ್ಲಿ ಆಗುವ ಹಿಂಸೆ ದುಃಖಗಳಿಗಿಂತ ಅನಂತಪಟ್ಟು ಮಿಗಿಲಾದ ಹಿಂಸೆ ದುಃಖಗಳು ತಮಸ್ಸಿನಲ್ಲಾಗುತ್ತದೆ, ಎಲ್ಲ ತಾಮಸ ಜೀವರಿಗೆ. 
 • Ashok Prabhanjana,

  10:32 PM, 25/04/2017

  Bhagavantha anadi Linga sharirada mele Anirudha Sharira vanne yake koDutane? direct aagi anadi Linga sharirada mele Sthula dehavannu koTTu sadhane maDisabahudalla? madyadalli Anirudha Sharira yethake interface maDutane? Anirudha Sharirada Pradhana KaryagaLu enu?? Daya maaDi idakke uttara tiLisi GurugaLe 🙏🙏🙏

  Vishnudasa Nagendracharya

  ಈ ಪ್ರಶ್ನೆಯನ್ನು ಪ್ರಶ್ನೋತ್ತರದಲ್ಲಿ ಕೇಳಿದ್ದೀರಿ. 
  
  ಇದಕ್ಕೆ ವಿಸ್ತಾರವಾದ ಉತ್ತರದ ಅಗತ್ಯವಿದೆ. ಸಮಯ ದೊರೆತ ತಕ್ಷಣ ನೀಡುತ್ತೇನೆ. 
 • Vijay Kumar,

  9:08 PM , 18/04/2017

  ವೆಂಕಟೇಶ ಮಹಾತ್ಮೆಯಲ್ಲಿ ರಾಜನಿಗೆ ಪಿಶಾಚ ಜನ್ಮ ಬಂದದ್ದು ಭಗವಂತನಿಗೆ ಛೇದ ಭೇದವಿದೆಯೆಂದುಕೊಂಡಿದ್ದಕ್ಕಲ್ಲವೆ?

  Vishnudasa Nagendracharya

  ಹೌದು. 
  
  ಭಗವಂತನನ್ನು ದುಃಖಿ ಎಂದು ತಿಳಿದಿದ್ದಕ್ಕಾಗಿ ದುಃಖಯುಕ್ತವಾದ ಅವನಿಗೆ ಜನ್ಮ ಬಂದಿತು. 
 • Madhvwshachar,Bangalore

  4:37 PM , 18/04/2017

  santruptha Samadhana. Namaskara Pujyare.
 • Madhvwshachar,Bangalore

  3:09 PM , 18/04/2017

  satvika jiva endigu satvik karyave maduvudu. hege Papa madalu sadhya? satvik jivanali iruva bhagavantha stvik gunavannu prerisuvanu. papad guna hege prerepisuvanu?

  Vishnudasa Nagendracharya

  ಸಾತ್ವಿಕ ಜೀವ ಸಾತ್ವಿಕರ್ಮವನ್ನೇ ಮಾಡಬೇಕು ಎಂದು ನಿಯಮವಿಲ್ಲ. 
  
  ಪ್ರಕೃತಿಯ ಪ್ರಭಾವದಿಂದ ಮತ್ತು ದೈತ್ಯರ ಆವೇಶದಿಂದ ಅವಶ್ಯವಾಗಿ ಸಾತ್ವಿಕರು ಪಾಪಕರ್ಮಗಳನ್ನು ಮಾಡುತ್ತಾರೆ. 
  
  ಕಲ್ಯಾವೇಶದಿಂದ ರುದ್ರದೇವರು ಅಪರಾಧ ಮಾಡಿದಂತೆ. 
  
  ಚಂದ್ರ ಸುಗ್ರೀವರು ಸ್ವೋಚ್ಛಸ್ತ್ರೀಗಮನ ಮಾಡಿದಂತೆ. 
  
  ವಿಶ್ವಾಮಿತ್ರರು ವಸಿಷ್ಠರ ಮಕ್ಕಳ ಸಾವಿಗೆ ಕಾರಣರಾದಂತೆ. 
  
  ಹೀಗಾಗಿ ಉತ್ತಮ ಜೀವರೂ ಅಧಮ ಕಾರ್ಯಗಳನ್ನು ಮಾಡುತ್ತಾರೆ. 
 • Madhvwshachar,Bangalore

  2:48 PM , 18/04/2017

  Acharrige Sashtang dandavath Pranam
  
  iga Bhagavantha ella karmagalu madisuvanu andamele hege ketta karyagalu madalaguthave? hege narakadali bhoktha papa hechu. triguna jivarigu pisachi janma untaguvuda? or tamasarige matrave na? dayavittu tilisi

  Vishnudasa Nagendracharya

  1. ದೇವರು ಏಕೆ ನಮ್ಮಿಂದ ಕೆಟ್ಟ ಕರ್ಮಗಳನ್ನು ಮಾಡಿಸುತ್ತಾನೆ ಎನ್ನುವದಕ್ಕೆ ಈಗಾಗಲೇ ಹರಿಭಕ್ತಿಸಾರದ ಉಪನ್ಯಾಸಗಳಲ್ಲಿ, ದೇವರ ಪಾತ್ರ ಎಂಬ ಲೇಖನದಲ್ಲಿ ಉತ್ತರಿಸಿದ್ದೇನೆ. ಜೀವಕರ್ತೃತ್ವದ ಕುರಿತು ಚರ್ಚಿಸುವಾಗ ಇನ್ನೂ ವಿಶದವಾಗಿ ತಿಳಿಸುತ್ತೇನೆ. 
  
  2. ಇಬ್ಬರು ಗಂಧರ್ವರು ಶಾಪದಿಂದ ಕರ್ಣ, ಘಂಟಾಕರ್ಣ ಪಿಶಾಚರಾಗಿ ಬದರೀಕ್ಷೇತ್ರದಲ್ಲಿ ಶ್ರೀಕೃಷ್ಣನ ಅನುಗ್ರಹದಿಂದ ಆ ಜನ್ಮಜದಿಂದ ಮುಕ್ತರಾದ ಘಟನೆಯನ್ನು ಶ್ರೀಮದಾಚಾರ್ಯರು ನಿರ್ಣಯಿಸಿದ್ದಾರೆ. ಬದರಿಯ ದೇವಸ್ಥಾನದಲ್ಲಿ ಇಂದಿಗೂ ಘಂಟಾಕರ್ಣನ ವಿಗ್ರಹ ಇದೆ.  ಪಿಶಾಚಿಯಾಗಿದ್ದ ದುಂಧುಕಾರಿಗೆ ಮೋಕ್ಷ ದೊರೆತ ಘಟನೆಯನ್ನು ಪದ್ಮಪುರಾಣ ದಾಖಲಿಸಿದೆ. ಹೀಗಾಗಿ, ಸಾತ್ವಿಕರಿಗೂ ಪಿಶಾಚಜನ್ಮ ಬರುತ್ತದೆ ಎನ್ನುವದು ಸಿದ್ಧವಾಯಿತು. 
  
  ತಾಮಸರಲ್ಲಂತೂ ಪಿಶಾಚಿಗಳು ಎಂಬ ಒಂದು ವಿಭಾಗವೇ ಇದೆ. ಅವರು ಶಾಶ್ವತವಾಗಿ ಪಿಶಾಚಜೀವರು. ಸ್ವರೂಪದಲ್ಲಿ ಆನೆ, ಕುದುರೆ, ಮನುಷ್ಯನಾಗಿರುವಂತೆ ಆ ಪಿಶಾಚಜೀವರು ಸ್ವರೂಪದಲ್ಲಿಯೂ ಪಿಶಾಚರಾಗಿರುತ್ತಾರೆ. ಸಾತ್ವಿಕರಲ್ಲಿ ಹಾಗಿಲ್ಲ. 
  
  ಸಾತ್ವಿಕರಿಗೂ ತಾಮಸರಿಗೂ ಪಿಶಾಚ ಜನ್ಮ ಇರುವದರಿಂದ ರಾಜಸರಿಗೂ ಪಿಶಾಚಜನ್ಮ ಇರುವದು ಸಿದ್ಧವಾಗುತ್ತದೆ. ಯಾವ ವಿರೋಧವೂ ಸಹ ಇಲ್ಲ. ಹೀಗಾಗಿ ಮೂರೂ ವಿಧ ಜೀವರು ತಮ್ಮ ಪಾಪಕರ್ಮಗಳಿಗನುಸಾರವಾಗಿ ಪಿಶಾಚಯೋನಿಯನ್ನು ಪಡೆಯುತ್ತಾರೆ. 
  
  
  
 • Vijay Kumar,

  6:51 AM , 18/04/2017

  ಆಚರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು. ಪಿಶಾಚಿಗಳ ದೇಹ ರಚನೆ ವಾಯುಪ್ರಚುರವೆ?

  Vishnudasa Nagendracharya

  ಆ ರೀತಿಯಾದ ಸ್ಪಷ್ಟವಾದ ವಾಕ್ಯ ನನಗಿನ್ನೂ ಕಂಡಿಲ್ಲ. 
  
  ಆದರೆ ಉಳಿದ ವಾಕ್ಯಗಳನ್ನು ನೋಡಿದಾಗ ವಾಯುಮಯವಾದ ಶರೀರವಿರಬೇಕು ಎಂದನಿಸುತ್ತದೆ. 
  
 • ಪ್ರಮೋದ,

  11:43 PM, 17/04/2017

  ಬಹಳ ಧನ್ಯವಾದಗಳು
 • ಪ್ರಮೋದ,

  10:49 PM, 17/04/2017

  ಪಿಶಾಚಿ ಜೀವನ ಮನಸ್ಸಿನ ಮೇಲೆ ಆಧಿಪತ್ಯ ನಡೆಸುತ್ತಾನೆ ಅಂದರೆ ಆ ದೇಹಿಯ ಮನೋನಿಯಾಮಕನಾದ ರುದ್ರ ದೇವರ ವ್ಯಾಪಾರಕ್ಕೆ ಏನು ಗತಿ?

  Vishnudasa Nagendracharya

  ಆಧಿಪತ್ಯ ನಡೆಸುತ್ತಾನೆ ಎಂದರೆ ಅದರ ಅಭಿಮಾನಿ ದೇವತೆಯಾಗುತ್ತಾನೆ ಅಂತ ಅರ್ಥವಲ್ಲ. 
  
  ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಮೇಲೆ ಆಧಿಪತ್ಯ ನಡೆಸುತ್ತಾನೆ ಎಂದರೆ ಅವನ ನಿಯಾಮಕ ದೇವತೆಯಾದ ಎಂದರ್ಥವಲ್ಲ. 
  
  ಪಿಶಾಚಿಯಲ್ಲಿಯೂ ತತ್ವಾಭಿಮಾನಿ ದೇವತೆಗಳಿದ್ದಾರೆ. ಜೀವನ ದೇಹದಲ್ಲಿಯೂ ಇದ್ದಾರೆ. ಪಿಶಾಚದ ಮುಖಾಂತರ ತತ್ವಾಭಿಮಾನಿ ದೇವತೆಗಳೇ ಆ ಕಾರ್ಯವನ್ನು ಮಾಡಿಸುತ್ತಾರೆ. 
  
  ನನ್ನ ಮನಸ್ಸನ್ನು ಚಂದ್ರದೇವರು ನಿಯಮಿಸುತ್ತಾರೆ ಎಂದರೆ ರುದ್ರದೇವರು ನಿಯಮಿಸುವದಿಲ್ಲ ಎಂದರ್ಥವಲ್ಲ. ರುದ್ರದೇವರ ಅಧೀನರಾಗಿ ಚಂದ್ರದೇವರು ನಮ್ಮ ಮನಸ್ಸಿಗೆ ವಿಕಾರಗಳನ್ನು ನೀಡುತ್ತಾರೆ. 
  
  ಹಾಗೆಯೇ ರಾಜ ಜನರನ್ನು ಪಾಲಿಸುತ್ತಾನೆ, ದಣಿ ಸೇವಕರನ್ನು ನಿಯಮಿಸುತ್ತಾನೆ ಎಂದರೆ ತತ್ವಾಭಿಮಾನಿ ದೇವತೆಗಳ ಹೊರತಾಗಿ ನಿಯಮಿಸುತ್ತಾರೆ ಎಂದು ಯಾರೂ ಅರ್ಥವನ್ನು ಮಾಡಿಕೊಳ್ಳುವದಿಲ್ಲ. 
  
  
 • D KRISHNA RAO,

  10:40 PM, 17/04/2017

  Very nice explanation sir
 • ಪ್ರಮೋದ,

  10:08 PM, 17/04/2017

  ಪಿಶಾಚಿಯು ಒಬ್ಬ ದುರ್ಲಭನ ದೇಹ ಪ್ರವೇಶಿಸಿದ ಸಮಯದಲ್ಲಿ ಆ ದುರ್ಲಭನ ದೇಹದಲ್ಲಿರುವ ಜೀವನ ಸ್ಥಿತಿ ಹೇಗೆ? ಅಲ್ಲಿ ಜೀವದ್ವಯರು( ಪಿಶಾಚ ದೇಹದ ಜೀವ ಮತ್ತು ದುರ್ಲಭನ ಜೀವ) ಇರುತ್ತಾರೆಯೆ?

  Vishnudasa Nagendracharya

  ಇಬ್ಬರೂ ಜೀವರು ಇದ್ದೇ ಇರುತ್ತಾರೆ. 
  
  ದೇಹದ ಮೇಲೆ, ಮತ್ತು ದೇಹದಲ್ಲಿರುವ ಜೀವನ ಮನಸ್ಸಿನ ಮೇಲೆ ಪಿಶಾಚ ಆಧಿಪತ್ಯವನ್ನು ಸ್ಥಾಪಿಸಿರುತ್ತದೆ. 
 • ಪ್ರಮೋದ,

  10:04 PM, 17/04/2017

  ಪಿಶಾಚಿಗಳಿಗೆ ಯಾವುದು ಅತ್ಯಂತ ದುರ್ಲಭವೋ, ಅಂಥಾದ್ದನ್ನು ಒಬ್ಬ ಆಚಾರಶೀಲನಾದ ಬ್ರಾಹ್ಮಣ ಆ ಪಿಶಾಚಿಗಳಿಗೆ ವಾಕ್ಶಕ್ತಿ ಕೊಡುವ ಸಾಮರ್ಥ್ಯ ಉಂಟಾ? ಅದಿಕ್ಕೆ ಕೇವಲ ಬ್ರಾಹ್ಮಣನ ಸಾಮರ್ಥ್ಯ ಸಾಲದು ಅಲ್ಲವೇ? ಅದಿಕ್ಕೆ ವಾಗಭಿಮಾನಿಯ ಅಸ್ತಿತ್ವ ಆ ಪಿಶಾಚ ದೇಹದಲ್ಲಿ ಇರಬೇಕು, ಜಿಹ್ವಾಭಿಮಾನಿಯ ಅನುಗ್ರಹಬೇಕಲ್ಲವೇ?
  ಆ ಪಿಶಾಚ ದೇಹದಲ್ಲೂ ತತ್ವ - ಇಂದ್ರಿಯಾಭಿಮಾನಿಗಳಿರುತ್ತಾರಾ? ದಯವಿಟ್ಟು ತಿಳಿಸಿ🙏

  Vishnudasa Nagendracharya

  ತತ್ವಾಭಿಮಾನಿ ದೇವತೆಗಳು ಇದ್ದೇ ಇರುತ್ತಾರೆ. 
  
  ಸಾಮಾನ್ಯ ಬ್ರಾಹ್ಮಣರಿಗೆ ಆ ಸಾಮರ್ಥ್ಯ ಇರುವದಿಲ್ಲ. ಆದರೆ ಪುರಾಣೋಕ್ತನಾದ ಆ ಬ್ರಾಹ್ಮಣ, ಮತ್ತು ಗೋಕರ್ಣ ಮುಂತಾದವರು ಮಹಾನುಭಾವರು ಎಂದು ಅಲ್ಲಿನ ವಾಕ್ಯಗಳಿಂದಲೇ ಸಿದ್ದವಾಗುತ್ತದೆ. 
  
  ವಿಷ್ಣು ವೈಷ್ಣವ ವಾಕ್ಯೇನ ಹಾನಿಃ ಪಾಪಸ್ಯ ಕರ್ಮಣಃ ಎಂದು ಶ್ರೀಮದಾಚಾರ್ಯರು ಹೇಳಿದ್ದಾರೆ. 
  
  ಯಾವುದನ್ನು ಕಳೆದುಕೊಳ್ಳಲು ಘೋರ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಅಂತಹ ಬ್ರಹ್ಮಹತ್ಯೆಯನ್ನೇ ಕಳೆಯವು ಸಾಮರ್ಥ್ಯ ವೈಷ್ಣವರ ವಾಕ್ಯಗಳಿಗೆ ಇದೆ ಎಂದು ಆಚಾರ್ಯರು ತಿಳಿಸುತ್ತಾರೆ. ಶ್ರೀಪಾದರಾಜಗುರುಸಾರ್ವಭೌಮರಲ್ಲಿ ಆ ಸಾಮರ್ಥ್ಯವಿದ್ದದ್ದನ್ನು ಶ್ರೀಮಚ್ಚಂದ್ರಿಕಾಚಾರ್ಯರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ಹೀಗಾಗಿ ಮಹಾನುಭಾವರಿಗೆ ಆ ಸಾಮರ್ಥ್ಯ ಇದ್ದೇ ಇರುತ್ತದೆ. 
  
 • Yogish Deshpande,Bangalore

  9:47 PM , 17/04/2017

  ನಮಸ್ಕಾರ ಆಚಾರ್ಯರೆ
  
  ಪಿಶಾಚಿಗಳು ಯಾವ ತರಹದ ವ್ಯಕ್ತಿಯ ದೇಹವನ್ನು ಪ್ರವೇಶ ಮಾಡುತ್ತವೆ?
  
  ಯಾವ ಪಾಪ ಕರ್ಮಗಳ ಆಚರಣೆಯಿಂದ ಮನುಷ್ಯ ಈ ತರಹದ ದುಃಖವನ್ನು ಅನುಭವಿಸುತ್ತಾನೆ 
  
  ದಯವಿಟ್ಟು ತಿಳಿಸಿ

  Vishnudasa Nagendracharya

  ಶೌಚ ಆಚಾರ ವಿಹೀನನಾದ 
  
  ದುಷ್ಟಕೆಲಸಗಳನ್ನು ಮಾಡುತ್ತ ದುರಾಚಾರರತನಾದ
  
  ದುರ್ಬಲ ಮನಸ್ಸು ದೇಹಗಳ ವ್ಯಕ್ತಿಯನ್ನು ಪಿಶಾಚಗಳು ಪ್ರವೇಶಿಸುತ್ತವೆ. 
  
  ಪಿಶಾಚ ಪ್ರವೇಶ ಮಾಡಿದಾಗ , ಸಮಾಜದಲ್ಲಿ ಪ್ರಸಿದ್ಧಿ ಇರುವಂತೆ, ಅವನು ಹಾರಾಡಿ ಕಿರುಚಾಡಿಯೆ ಇರಬೇಕಾಗಿಲ್ಲ. ಮತ್ತಷ್ಟು ಪಾಪಕರ್ಮಗಳನ್ನು ಹೀನಕೃತ್ಯಗಳನ್ನು ಮನುಷ್ಯ ಮಾಡುತ್ತಾನೆ. ತನ್ನ ಬುದ್ಧಿ ಮನಸ್ಸು ದೇಹಗಳ ಮೇಲೆ ಸ್ಥಿಮಿತವನ್ನು ಕಳೆದುಕೊಳ್ಳುತ್ತಾನೆ. 
  
  ಸತ್ತ ತಂದೆ ತಾಯಿಗಳ ಪೂರ್ವೀಕರ ಸಂಸ್ಕಾರವನ್ನು ದುರಂಹಕಾರದಿಂದ ಮಾಡದೇ ಇದ್ದಲ್ಲಿಯೂ ಮನುಷ್ಯ ಪಿಶಾಚಿಗಳ ಬಾಧೆಗೆ ಒಳಗಾಗುತ್ತಾನೆ ಎಂದು ಗರುಡಪುರಾಣ ತಿಳಿಸುತ್ತದೆ. 
  
  ಎಲ್ಲಿ ವಿಷ್ಣುನಾಮಸಂಕೀರ್ತನೆ ನಡೆಯುತ್ತದೆಯೋ, ಯಾರ ಮನೆಯ ಮುಂದೆ ತುಳಸೀವನವಿದೆಯೋ, ಯಾರ ಮನೆಯಲ್ಲಿ ನಿತ್ಯ ಅತಿಥಿ ಸತ್ಕಾರ ನಡೆಯುತ್ತದೆಯೋ, ಯಾರ ಮನೆಯಲ್ಲಿ ಸಾಲಿಗ್ರಾಮಗಳ ಪೂಜೆ ನಡೆಯುತ್ತದೆಯೋ, ಯಾರ ಮನೆಯಲ್ಲಿ ಮಹಾಭಾರತ ಭಾಗವತ ಸರ್ವಮೂಲ ಟೀಕಾ ಚಂದ್ರಿಕಾದಿ ಗ್ರಂಥಗಳಿವೆಯೋ ಆ ಮನೆಗೆ ಎಂದಿಗೂ ಪಿಶಾಚಗಳ ಬಾಧೆ ಇರುವದಿಲ್ಲ. 
  
  
  
  
 • ಪ್ರಮೋದ,

  9:19 PM , 17/04/2017

  ಆಚಾರ್ಯರೇ,
        ನೀವು ಹೇಳಿರುವ ಈ ಉಪನ್ಯಾಸ ಮಧ್ವವಿಜಯದ ಭಾಗವಲ್ಲವೇ.
  ಪಿಶಾಚಿಗೆ ಬಾಯಿ ಇರುವುದಿಲ್ಲ ಎಂದು ಹೇಳಿದ್ರಿ. ಆದರೆ, ಆ ಬ್ರಾಹ್ಮಣ ಆ ಪಂಚ ಪಿಶಾಚಿಗಳನ್ನು ಕೇಳಿದಾಗ, ಬಾಯಿಲ್ಲದ ಅವುಗಳು ತಮ್ಮ ಬಗ್ಗೆ ಹೇಳಿಕೊಂಡಿದ್ದಾದರೂ ಹೇಗೆ?
  ಪಿಶಾಚಿಗೂ ಬ್ರಹ್ಮರಾಕ್ಷಸನಿಗೂ ಇರುವ ವ್ತ್ಯತ್ಯಾಸವೇನು? 
  ದಯಮಾಡಿ ತಿಳಿಸಿ🙏🙏🙏

  Vishnudasa Nagendracharya

  ಹೌದು. ಶ್ರೀ ಮಧ್ವವಿಜಯದ ಉಪನ್ಯಾಸದ ಭಾಗ. 
  
  ಆ ಬ್ರಾಹ್ಮಣನ ಸಾಮರ್ಥ್ಯದಿಂದ ಪಿಶಾಚಗಳಿಗೆ ಮಾತನಾಡುವ ಶಕ್ತಿ ಒದಗಿಬರುತ್ತದೆ. ಹೇಗೆ ದುಂಧುಕಾರಿ ಪಿಶಾಚಿಯಾಗಿದ್ದಾಗ ಬಿದಿರಿನ ಕೋಲಿನಲ್ಲಿ ಕುಳಿತು ಶ್ರೀಮದ್ ಭಾಗವತದ ಶ್ರವಣವನ್ನು ಮಾಡುವ ಯೋಗ್ಯತೆಯನ್ನು ಗೋಕರ್ಣನ ಅನುಗ್ರಹದಿಂದ ಗಳಿಸಿಕೊಂಡನೋ ಹಾಗೆ. 
  
  ಪಿಶಾಚಿಗಳಲ್ಲಿಯೇ ಅಧಿಕವಾದ ಶಕ್ತಿ ಉಳ್ಳ ಒಂದು ಪ್ರಭೇದ ಬ್ರಹ್ಮರಾಕ್ಷಸ ಎನ್ನುವ ಪ್ರಭೇದ. ಇವುಗಳಿಗೆ ಮಹಾಶಕ್ತಿಯಿರುತ್ತದೆ. ಮಹಾಶಕ್ತಿವಂತರನ್ನೂ ಬಾಧಿಸಲ್ಲುದು. 
  
  ಬ್ರಹ್ಮಹತ್ಯೆ, ಸುರಾಪಾನ ಮಾಡಿದವರ ಸಾಂಗತ್ಯದಲ್ಲಿಯೇ ಇರುವದು, ಪರಸ್ತ್ರೀಯರನ್ನು ಅಪಹಾರ ಮಾಡುವದು, ಬ್ರಾಹ್ಮಣರ ಸ್ವತ್ತನ್ನು ಅಪಹಾರ ಮಾಡುವದು ಮುಂತಾದ ಮಹಾಕುಕರ್ಮಗಳಿಂದ ಮನುಷ್ಯ ಬ್ರಹ್ಮರಾಕ್ಷಸನಾಗುತ್ತಾನೆ ಎಂದು ಮನುಸ್ಮೃತಿ ತಿಳಿಸುತ್ತದೆ. 
  
  संयोगं पतितैर्गत्वा परस्यैव च योषितम् ।
  अपहृत्य च विप्रस्वं भवति ब्रह्मराक्षसः ॥
  
  
 • Sudheendra Kulkarni,Bangalore

  8:51 PM , 17/04/2017

  ಆ್ಯಕ್ಸಿಡಂಟಗಳಲ್ಲಿ ಆಕಸ್ಮಿಕ ಮರಣಕ್ಕೆ ಕಾರಣವಾದರೆ, ಇಂತಹ ಯೋನಿ ಬರುತ್ತದೆಯೆ..?

  Vishnudasa Nagendracharya

  ಎಲ್ಲ ದುರ್ಮರಣಗಳಿಂದಲೂ ಪಿಶಾಚಜನ್ಮ ಬರುವದಿಲ್ಲ. 
  
  ಆದರೇ ದುರ್ಮರಣ ಹೊಂದಿದಾಗ ಪ್ರೇತತ್ವ ಹೋಗುವದು ಸ್ವಲ್ಪ ಕಷ್ಟ. [ಪ್ರೇತ ಎಂದರೆ, ಜೀವ ಸತ್ತಿದ್ದಾನೆ, ಇನ್ನೂ ನರಕ/ಸ್ವರ್ಗದಲ್ಲಿರಬೇಕಾದ ಶರೀರ ಬಂದಿಲ್ಲ, ಅಂತಹ ವ್ಯಕ್ತಿ. ಪಿಶಾಚಗಳಿಗೆ ಪ್ರೇತ ಎಂದು ಹೆಸರುಂಟು. ಆದರೆ ಪ್ರೇತಗಳಿಗೆ ಪಿಶಾಚ ಎಂಬ ಹೆಸರಿಲ್ಲ.] 
  
  ಸಾಮಾನ್ಯವಾಗಿ ಸತ್ತ ಹತ್ತನೆಯ ದಿವಸ ಪ್ರೇತತ್ವ ಹೋಗಿಬಿಡುತ್ತದೆ. (ಮಹಾವಿಷ್ಣುಭಕ್ತರಿಗೆ ಇನ್ನೂ ಬೇಗ ಹೋಗುತ್ತದೆ) ಆದರೆ ದುರ್ಮರಣ ಹೊಂದಿದವರಿಗೆ ಆ ಪ್ರೇತತ್ವ ಹೋಗಲಿಕ್ಕಾಗಿ ವಿಶೇಷ ಸಂಸ್ಕಾರಗಳನ್ನು ಮಾಡಬೇಕು. ಅಷ್ಟೆ. 
  
  ಪಿಶಾಚಜನ್ಮಕ್ಕೆ ಆತ್ಮಹತ್ಯೆಯೊಂದೇ ಕಾರಣವಲ್ಲ. ಅನೇಕ ಕಾರಣಗಳಿವೆ. ಉದಾಹರಣೆಗೆ, ಶಾಸ್ತ್ರದ ಅಧ್ಯಯನ ಅಧ್ಯಾಪನಗಳನ್ನು ಮಾಡುತ್ತಿರುವ ವ್ಯಕ್ತಿಗಳಿಗೆ ತೊಂದರೆ ಮಾಡಿ ಅಧ್ಯಯನ ನಿಲ್ಲಿಸುವದು, ದೇವರ ಮಾಹಾತ್ಮ್ಯದ ಕೀರ್ತನ ನಡೆಯುವಾಗ ವಿಘ್ನ ಮಾಡುವದು, ಕೆರೆಗಳನ್ನು ನಾಶ ಮಾಡುವದು, ಸಮಾಜಕ್ಕೆ ಹಿಂಸೆ ಮಾಡುವದು ಮುಂತಾದ ದುಷ್ಕರ್ಮಗಳಿಂದಲೂ ಪಿಶಾಚಜನ್ಮ ಬರುತ್ತದೆ ಎಂದು ಗರುಡ ಪುರಾಣ ತಿಳಿಸುತ್ತದೆ. ಆ ರೀತಿಯ ಪಾಪ ಮಾಡಿದ ಮನುಷ್ಯ ದುರ್ಮರಣದಿಂದ ಸತ್ತಾಗ ಪಿಶಾಚನಾಗಬಹುದು. 
  
  ಆದರೆ ದುರ್ಮರಣ ಹೊಂದಿದ ಎಲ್ಲರೂ ಪಿಶಾಚಿಗಳಾಗುತ್ತಾರೆ ಎಂಬ ನಿಯಮವಿಲ್ಲ. 
  
  ದುರ್ಮರಣ ಹೊಂದಿದವರ ಪ್ರೇತತ್ವ ಕಳೆಯಲು ನಾರಾಯಣಬಲಿ ಎಂಬ ವಿಶೇಷ ಸಂಸ್ಕಾರವಿದೆ. ಅದನ್ನು ಅವಶ್ಯವಾಗಿ ಮಾಡಬೇಕು. 
  
 • Ashok Prabhanjana,Bangalore

  8:26 PM , 17/04/2017

  GurugaLe neevu pishachigaLige anthardhana shakthi iruthadeyendu heLidiri, adaranthe avugaLige manusyara kaNNige kaaNisuva shakthi yu iruthadeya? avugaLannu naavu noDabahuda? mathe pishacha dehada gathra yeshTu? manushya ra kaNNige kaaNuvashTu sthulavaagiruthada? daya maaDi tiLisi

  Vishnudasa Nagendracharya

  ಪದ್ಮಪುರಾಣ ಪಿಶಾಚಿಗಳ ಕುರಿತು ನೀಡುವ ಮಾಹಿತಿ ಹೀಗಿದೆ -
  
  ಅವುಗಳಿಗೆ ನಿರ್ದಿಷ್ಟ ಆಕಾರ ಇರುವದಿಲ್ಲ. 
  
   ಯಾವುದಾದರೂ ವಿಚಿತ್ರ ಮಾಯಾ ರೂಪವನ್ನು ಪ್ರದರ್ಶಿಸುವ ಸಾಮರ್ಥ್ಯ ಇರುತ್ತವೆ. 
  
  ಸಾಮಾನ್ಯವಾಗಿ ಅವು ಮತ್ತೊಬ್ಬರಲ್ಲಿ ಪ್ರವೇಶಿಸಿ ಮನುಷ್ಯರ ಜೊತೆ ವ್ಯವಹರಿಸುತ್ತವೆ. (ಕಾಟ ಕೊಡುತ್ತವೆ) 
  
  ನಮಗೆ ಅವುಗಳನ್ನು ನೋಡಲು ಸಾಧ್ಯವಿಲ್ಲದಿದ್ದರೂ, ಅವುಗಳ ವೇಗ ಅನುಭವಕ್ಕೆ ಬರಲು ಸಾಧ್ಯವಿದೆ. ರೊಯ್ಯನೆ ಗಾಳಿ ಬೀಸಿದಂತೆ, ನಮ್ಮನ್ನು ತಳ್ಳಿಕೊಂಡು ಹೋದಂತ ಅನುಭವವಾಗುತ್ತದೆ. 
  
  
 • Vijay Kumar,

  7:12 PM , 17/04/2017

  shradda karmagalannu madade bittare ee thara pishach janma tande tayigalige baraba hude?

  Vishnudasa Nagendracharya

  ಶ್ರಾದ್ಧವಿಲ್ಲದೇ ಹೋದಾಗ ಪಿಶಾಚಜನ್ಮ ಬರುವದಿಲ್ಲ. ಆದರೆ ಅನ್ನ ನೀರಿಲ್ಲದೆ ತೊಂದರೆ ಅನುಭವಿಸುತ್ತಾರೆ. 
  
  ಸಂಸ್ಕಾರ ನಡೆಯದೇ ಹೋದಾಗ ಪ್ರೇತತ್ವದಿಂದ ಮುಕ್ತಿ ದೊರೆಯುವದಿಲ್ಲ. ಪ್ರೇತ ಬೇರೆ, ಪಿಶಾಚ ಬೇರೆ. ಪ್ರೇತ ಎಂದರೆ ಹಿಂದಿನ ಶರೀರ ಬಿಟ್ಟ, ಇನ್ನೂ ಯಾತನಾಮಯ ಶರೀರ ಪಡೆಯದ ಜೀವ. ಪಿಶಾಚ ಎಂದರೆ ತನ್ಮ ಕರ್ಮದಿಂದ ಪಡೆದ ಒಂದು ಯೋನಿ. 
  
  
  
  ಶ್ರಾದ್ಧವನ್ನು ಬಿಡುವದರಿಂದ ಕರ್ತೃವಿಗೆ ಪಿಶಾಚಜನ್ಮ ಬರುವ ಸಾಧ್ಯತೆ ಇದೆ. 
  
  ಅಂದರೆ ಈ ಜನ್ಮದಲ್ಲಿ ತಂದೆ ತಾಯಿಗಳಿಗೆ ಶ್ರಾದ್ಧ ಮಾಡದೇ ಬದುಕಿದೆವು. ಆ ಪಾಪ ಮುಂದೆ ಯಾವುದೋ ಜನ್ಮದಲ್ಲಿ ಆತ್ಮಹತ್ಯೆ ಮುಂತಾದವಕ್ಕೆ ಕಾರಣವಾಗಿ ನಮಗೆ ಪಿಶಾಚಜನ್ಮ ಒದಗಿಸುತ್ತದೆ. 
  
  
 • Vijay Kumar,

  7:08 PM , 17/04/2017

  tuba upayuktavada mahiti nididdira. tamma gnana dana karya adbhuta vadaddu. acharyarge mattomme bhakti purvaka namana. biduviddaga laya chintane bagge heli
 • Vijay Kumar,

  6:32 PM , 17/04/2017

  ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು. ಪಿಶಾಚಗಳಿಗೆ ಹೇಗೆ ವಿಷ್ಣುಭಕ್ತನ ಇರುವಿಕೆಯಿಂದ ಕ್ಷಣಕಾಲ ಆನಂದ ಸಿಕ್ಕಹಾಗೆ ಅದರ ಪರಿಹಾರವು ವಿಷ್ಣುಭಕ್ತನು ಕೂಡಬಹುದಲ್ಲವೆ

  Vishnudasa Nagendracharya

  ಅವಶ್ಯವಾಗಿ. 
  
  ಮಹಾ ವಿಷ್ಣುಭಕ್ತನಾದ ಗೋಕರ್ಣ ತನ್ನ ತಮ್ಮನಾದ ದುಂಧುಕಾರಿಗೆ ಪಿಶಾಚಜನ್ಮದಿಂದ ಮೋಕ್ಷವನ್ನು ನೀಡಿದ ಇತಿಹಾಸ ಪದ್ಮಪುರಾಣದಲ್ಲಿ ದಾಖಲಾಗಿದೆ. 
  
  ವಿಷ್ಣುಸ್ಮರಣೆಗೆ ವಿಷ್ಣುಭಕ್ತಿಗೆ ಅಸಾಧ್ಯವಾದ ಕಾರ್ಯವೇ ಇಲ್ಲ. 
  
  ಬ್ರಹ್ಮದೇವರು ಸಮಗ್ರ ಬ್ರಹ್ಮಾಂಡವನ್ನೇ ವಿಷ್ಣುಭಕ್ತಿಯ ಬಲದಿಂದ ಸೃಷ್ಟಿ ಮಾಡುತ್ತಾರೆ, ಆ ಬ್ರಹ್ಮಾಂಡವನ್ನು ವಿಷ್ಣುಭಕ್ತಿಯ ಬಲದಿಂದ ರುದ್ರದೇವರು ನಾಶ ಮಾಡುತ್ತಾರೆ. ಅಂದಮೇಲೆ ಪಿಶಾಚಜನ್ಮದಿಂದ ಮುಕ್ತಿಯನ್ನು ಅವಶ್ಯವಾಗಿ ವಿಷ್ಣುಭಕ್ತಿಯಿಂದ ಸಾಧಿಸಬಹುದು. 
  
  ನಮ್ಮ ಆತ್ಮೀಯರೊಬ್ಬರು ಆತ್ಮಹತ್ಯೆಯ ಸಾವನ್ನಪ್ಪಿದಾಗ ನಾವು ಭಕ್ತಿಯಿಂದ ಅವರಿಗಾಗಿ ವಿಷ್ಣುಸೇವೆ, ವಿಷ್ಣುಸ್ಮರಣೆ, ಸಂಕೀರ್ತನೆ ಮುಂತಾದವನ್ನು ಮಾಡಿದಾಗ ಅವಶ್ಯವಾಗಿ ಅವರಿಗೆ ಪಿಶಾಚಜನ್ಮದಿಂದ ಮುಕ್ತಿ ದೊರೆಯುತ್ತದೆ. 
  
 • Sangeetha prasanna,

  5:33 PM , 17/04/2017

  Gurugalige namaskargalu.aatmhatya madikondvarige maduv she add had of a kind avarige pishach janmdind bidugade doreyuvdillave.

  Vishnudasa Nagendracharya

  ಆತ್ಮಹತ್ಯೆ ಮಾಡಿಕೊಂಡವರು ಉದ್ದೃತರಾಗಲಿ, ಪಿಶಾಚ ಜನ್ಮ ಪಡೆಯದೇ ಇರಲಿ, ಪಡೆದಿದ್ದರೂ ಪರಿಹಾರವಾಗಲಿ ಎಂಬ ಉದ್ದೇಶದಿಂದ ಶ್ರೀಮದ್ ಭಾಗವತದ ಸಪ್ತಾಹವನ್ನು ಮಾಡಿದಲ್ಲಿ (ಕ್ರಮಬದ್ಧವಾದ ರೀತಿಯಲ್ಲಿ) ಪಿಶಾಚಜನ್ಮದಿಂದ ನಿವೃತ್ತಿ ದೊರೆಯುತ್ತದೆ. 
  
  ಗಯಾ ಬದರೀ ಶ್ರಾದ್ಧಗಳೂ ಸಹ ಪಿಶಾಚ ಜನ್ಮದಿಂದ ಮುಕ್ತಿಯನ್ನು ನೀಡುತ್ತವೆ. 
  
  ಪಿಶಾಚಜನ್ಮವನ್ನು ಪಡೆದ ದುಂಧುಕಾರಿಯನ್ನು ಗೋಕರ್ಣ ಭಾಗವತಸಪ್ತಾಹದಿಂದ ಉದ್ಧಾರ ಮಾಡಿದ ಇತಿಹಾಸ ಪುರಾಣದಲ್ಲಿ ಉಲ್ಲಿಖಿತವಾಗಿದೆ. 
 • ಭಾರದ್ವಾಜ್,ಬೆಂಗಳೂರು

  5:05 PM , 17/04/2017

  ಗುರುಗಳಿಗೆ ಪ್ರಣಾಮಗಳು🙏
  
  ಧನ್ಯವಾದ. ೮೪ ಲಕ್ಷ ಯೋನಿಯಲ್ಲಿ ಪಿಶಾಚವು ಒಂದು ಯೋನಿ ಯಾದರೆ ಎಲ್ಲ ಜೀವರಿಗು ಈ ಯೋನಿ ಬರುತ್ತಾ ?
  ಜೀವನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಪಾಪಗಳು ಯಾವು ?

  Vishnudasa Nagendracharya

  ಎಲ್ಲರಿಗೂ ಬರುವದಿಲ್ಲ. 
  
  ದೇವರ ನಿಗ್ರಹಕ್ಕೆ ಪಾತ್ರನಾಗುವದೇ ಪ್ರಧಾನ ಕಾರಣ. 
  
  विष्णोरिच्छावशेनैव हन्ति ह्यात्मानमात्मना ।
   स्वात्मानमप्रियं कृत्वा निरये पातयत्यपि ।।
  
   ಎಂದು ಶ್ರೀಮದಾಚಾರ್ಯರು ಹೇಳುತ್ತಾರೆ. ಅಂದರೆ, ಮನುಷ್ಯ ತನ್ನನ್ನು ತಾನು ಪ್ರೀತಿಸದೇ ಹೋದಾಗ, ತನ್ನ ಬಗ್ಗೆಯೇ ಅತೀ ಅಸಹ್ಯ ಹುಟ್ಟಿದಾಗ ಆತ್ಮಹತ್ಯೆಗೆ ಮುಂದಾಗುತ್ತಾನೆ. ಈ ರೀತಿ ತಾನು ತನಗೆ ಅಪ್ರಿಯನಾಗುವದು ಮಹಾಪಾಪಕರ್ಮಗಳಿಂದ. ಶ್ರೀಹರಿ ಗುರುಗಳ ಸೇವೆಯನ್ನು ಮಾಡಿ ಬದುಕುವ ಜನ ಈ ಆತ್ಮಹತ್ಯೆಯ ಆಲೋಚನೆಯಿಂದ ದೂರವಾಗುತ್ತಾರೆ.