Prashnottara - VNP012

ಯಾವುದು ದೇವರ ಪೂಜೆ?


					 	

ಸಾಲಿಗ್ರಾಮಕ್ಕೆ ಪೂಜೆ ಮಾಡುವದು ಮಾತ್ರ ಪೂಜೆಯೇ? ಬೇರೆ ಪೂಜೆಯಿಲ್ಲವೇ?


Play Time: 04:10, Size: 3.92 MB


Download Upanyasa Share to facebook View Comments
4572 Views

Comments

(You can only view comments here. If you want to write a comment please download the app.)
 • ASB,...

  10:48 PM, 23/05/2022

  ಹರೇ ಶ್ರೀನಿವಾಸ ಗುರುಗಳೆ 🙏
  ಸತ್ಯನಾರಾಯಣ ಪೂಜೆಯನ್ನು ಸರಿಯಾದ ಕ್ರಮದಲ್ಲಿ ಮಾಡಿಸಿ ಕೃತಾರ್ತರಾಗುವುದಾದರೂ ಹೇಗೆ ? ವಾಸ ಪ್ರದೇಶದಲ್ಲಿ ಯೋಗ್ಯ ಪಂಡಿತರ ಮಾರ್ಗದರ್ಶನ ಇಲ್ಲವಾದುದರಿಂದ ತಮ್ಮಲ್ಲಿ ಉತ್ತರಕ್ಕಾಗಿ ಹಂಬಿಲಿಸಿರುವೆ 🙏
 • LAKSHMI VENKATADASA SHARMA,BENGALURU

  12:25 PM, 22/10/2021

  ಗುರುಗಳೇ
  ತಿರುಮಲ ತಿರುಪತಿ ಸ್ವಾಮಿಯ ದರ್ಶನಕ್ಕೆ ದಿನಾಂಕ 21-12-2021 ಟಿಕೆಟ್ ದೊರೆತಿದೆ. ನಾನು ತಲೆ ಮುಡಿ ಕೊಡಬೇಕೆಂದು ದೀಕ್ಷೆ ಬಿಟ್ಟಿದ್ದೇನೆ. ದರ್ಶನ ಮಂಗಳವಾರವಾಗಿರುವುದರಿಂದ ಕ್ಷೇತ್ರದಲ್ಲಿ ಮುಡಿ ಕೊಡಬಹುದೇ? ದಯವಿಟ್ಟು ಸಂಶಯ ನಿವಾರಣೆ ಮಾಡಿ
 • Madhusudhan Kandukur,Bangalore

  4:23 PM , 02/06/2017

  ಆಚಾರ್ಯರೇ! ಉತ್ತಮವಾದ ವಿಶ್ಲೇಷಣೆ.
 • H V SREEDHARA,

  6:56 PM , 23/04/2017

  Excellent definition.
 • Vijay Kumar,

  12:28 PM, 20/04/2017

  ಧನ್ಯವಾದಗಳು. ತಮ್ಮದು ಮಹದೋಪಕಾರ
 • Vijay Kumar,

  11:12 AM, 20/04/2017

  ಧನ್ಯವಾದಗಳು ಆಚಾರ್ಯರೆ. ಆದರೆ ಬ್ರಾಹ್ಮಣನಾಗಿ ಹುಟ್ಟಿ ತನ್ನದಲ್ಲದ ಕರ್ಮಗಳನ್ನು ಅಂದರೆ ವಾಣಿಜ್ಯ ಕರ್ಮದಲ್ಲಿರುವರಿಗೆ ಏನಾದರು ದೋಷವಿದೆಯೆ? ಇದು ಪೂಜೆಯೆಂದು ಕರೆಯಲಾಗುವದಿಲ್ಲವಲ್ಲ

  Vishnudasa Nagendracharya

  ಬ್ರಾಹ್ಮಣನಿಗೆ ಮಹತ್ತರ ಆಪತ್ತು ಬಂದೊದಗಿದಾಗ ಅವನು ವೈಶ್ಯವೃತ್ತಿಯನ್ನು ಮಾಡಬಹುದು ಎಂದು ಆಚಾರ್ಯರು ಗೀತಾತಾತ್ಪರ್ಯನಿರ್ಣಯ ಮತ್ತು ಮಹಾಭಾರತತಾತ್ಪರ್ಯನಿರ್ಣಯಗಳಲ್ಲಿ ನಿರ್ಣಯಿಸಿದ್ದಾರೆ. ಮಹಾಪದಿ ವಿಶಾಂ ಧರ್ಮೈಃ ಎಂದು. 
  
  ಅದರಲ್ಲಿಯೂ ಕೆಲವು ನಿಯಮಗಳಿವೆ. ಹೆಂಡ, ಎಣ್ಣೆ, ಉಪ್ಪು, ಹಾಲು, ಮೊಸರು, ತುಪ್ಪ ಮುಂತಾದವನ್ನು ಬ್ರಾಹ್ಮಣ ಸರ್ವಥಾ ಮಾರಾಟ ಮಾಡಬಾರದು. ಈ ರೀತಿಯ ವಸ್ತುಗಳ ಮಾರಾಟದಿಂದ ಬ್ರಾಹ್ಮಣ ತನ್ನ ಬ್ರಾಹ್ಮಣತ್ವವನ್ನೇ ಕಳೆದುಕೊಳ್ಳುತ್ತಾನೆ. ಮಾಸೇನ ಶೂದ್ರೋ ಭವತಿ ಬ್ರಾಹ್ಮಣೋ ರಸವಿಕ್ರಯಾತ್ ಎಂಬ ಮಾತನ್ನು ಶ್ರೀ ಮಂತ್ರಾಲಯಪ್ರಭುಗಳು ತಮ್ಮ ವ್ಯಾಖ್ಯಾನದಲ್ಲಿ ಉದಾಹರಿಸಿದ್ದಾರೆ. ಧರ್ಮಶಾಸ್ತ್ರದಲ್ಲಿ ನೂರಾರು ವಚನಗಳು ಸುಸ್ಪಷ್ಟವಾಗಿ ಈ ತತ್ವವನ್ನು ತಿಳಿಸುತ್ತವೆ. 
  
  ಜೀವನಕ್ಕೆ ಎಷ್ಟು ಅತೀವ ಆವಶ್ಯಕತವೋ ಅಷ್ಟನ್ನು ಶುದ್ಧವಾದ ವಾಣಿಜ್ಯವೃತ್ತಿಯಿಂದ ಸಂಪಾದಿಸಿ ಆ ನಂತರದಲ್ಲಿ ಪರಿಶುದ್ಧ ಬ್ರಾಹ್ಮಣನ ರೀತಿಯಲ್ಲಿ ಬದುಕಬೇಕು. ಇಡಿಯ ಜೀವನ ಅದನ್ನೇ ಮಾಡುತ್ತಿರಬಾರದು. 
  
  ಆಪದ್ ಧರ್ಮಗಳೂ ಧರ್ಮವೇ. ಅಧರ್ಮವಲ್ಲ. ಆದರೆ ಆಪತ್ತು ಇರುವಾಗ (ನಮ್ಮ ನೈಜವೃತ್ತಿಯಿಂದ ಜೀವನ ನಡೆಸಲು ಅಸಾಧ್ಯವಾಗಿರುವಾಗ ಎಂದರ್ಥ) ಮಾಡುವ ಧರ್ಮ ಆಪದ್ ಧರ್ಮ. 
  
  ಹೀಗಾಗಿ ಆಪತ್ತಿನಲ್ಲಿ ಬ್ರಾಹ್ಮಣ ಕ್ಷಾತ್ರವೃತ್ತಿಯನ್ನು, ವೈಶ್ಯವೃತ್ತಿಯನ್ನು ಮಾಡುವದು ಹರಿಪೂಜೆಯೇ. 
  
  ಆದರೆ ಆಪತ್ತು ಮುಗಿದ ಬಳಿಕವೂ ಮಾಡುತ್ತಿದ್ದರೆ ಅದು ಧರ್ಮವಾಗುವದಿಲ್ಲ. ಪರಧರ್ಮವಾಗುತ್ತದೆ. ಅದನ್ನು ಮಾಡುವದು ಅಪರಾಧವಾಗುತ್ತದೆ. 
 • Vijay Kumar,

  7:34 AM , 20/04/2017

  ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು ಅದ್ಭುತವಾದ ವಿವರಣೆ. ನೀಚ ಅಧಿಷ್ಟಾನದಲ್ಲಿ ಮಾಡಿದ ಉಪಚಾರವಾಗಲಿ, ಸತ್ಕಾರವಾಗಲಿ ವ್ಯರ್ಥವೇ?. ಅದು ಪಾಪ ಸಂಚಿತಕ್ಕೆ ಕಾರಣವೇ?

  Vishnudasa Nagendracharya

  ನೀಚರನ್ನು ಉತ್ತಮರು ಎಂದು ತಿಳಿದು ಪೂಜಿಸುವದು ಅವಶ್ಯವಾಗಿ ಅನರ್ಥಕ್ಕೆ ಸಾಧನ. ಆದರೆ, ನೀಚರೊಳಗೆ ಭಗವಂತನ ಚಿಂತನೆ ಮಾಡಲೇಬೇಕು. ತನಗಿಂತ ನೀಚರ ಅರ್ಹತೆಗೆ ತಕ್ಕಂತೆ ಅವರನ್ನು ಕಾಣುವದು ಶ್ರೀಹರಿಯ ಪೂಜೆಯಾಗುತ್ತದೆ. 
  
  ಉದಾಹರಣೆ ನೀಡುತ್ತೇನೆ - 
  
  ಗುರುಗಳು ತಮ್ಮ ಮನೆಯಲ್ಲಿ ಶಿಷ್ಯರನ್ನಿಟ್ಟುಕೊಂಡು ಅನ್ನ ವಸತಿಗಳನ್ನು ಕೊಟ್ಟು ವಿದ್ಯೆ ನೀಡುತ್ತಾರೆ. ಹಸಿದವರಿಗೆ ಅನ್ನ ನೀಡುವದೂ ದೇವರ ಪೂಜೆಯೇ. ಗುರುಗಳು ತಮ್ಮ ಶಿಷ್ಯರಿಗೆ ಅನ್ನ ನೀಡುವದೂ ದೇವರ ಪೂಜೆಯೇ. ಆದರೆ, ನಮಸ್ಕಾರಾದಿಗಳನ್ನು ಮಾಡಿ ನೀಡುವಂತಿಲ್ಲ. 
  
  ಹಾಗೆಯೇ ಅನ್ನ ಬಯಸುವ ಯಾವುದೇ ವ್ಯಕ್ತಿಗೆ, ಅಥವಾ ಪ್ರಾಣಿಗೆ ಅನ್ನ ನೀಡುವದು ಶ್ರೇಷ್ಠವಾದ ದೇವರ ಪೂಜೆ. ಆದರೆ, ಉತ್ತಮರಾದ ಜನರಿಗೆ ಅನ್ನ ನೀಡುವಾಗ ನಮಸ್ಕಾರಾದಿಗಳನ್ನು ಮಾಡಿ ನೀಡುವಂತೆ ನಾಯಿ ಮೊದಲಾದ ಪ್ರಾಣಿಗಳಿಗೆ ನಮಸ್ಕಾರ ಮಾಡಿ ನೀಡುವಂತಿಲ್ಲ. 
  
  ಶಿಷ್ಯರು ಗುರುಗಳಿಗೆ ನೀಚ ಅಧಿಷ್ಠಾನ. ಅವರಿಗೆ ಅನ್ನ ನೀಡುವದು ಮಹಾ ಪೂಜೆ. ಹಾಗಂತ ನಮಸ್ಕಾರಾದಿಗಳನ್ನು ಮಾಡಿ ನೀಡುವಂತಿಲ್ಲ. 
  
  ಯಾವುದೇ ವ್ಯಕ್ತಿಯನ್ನು ಅವನ ಅರ್ಹತೆಗಿಂತ ಮಿಗಿಲಾಗಿ ಪೂಜೆ ಮಾಡಿದರೆ ಅದು ಪಾಪಕ್ಕೆ ಕಾರಣವೇ. 
  
  ನಾವು ವಾಯುದೇವರನ್ನು ಅನನ್ಯಭಕ್ತಿಯಿಂದ ಆರಾಧಿಸುತ್ತೇವೆ. ಆದರೆ, ವಾಯುದೇವರನ್ನು ಸ್ವತಂತ್ರ ಸರ್ವೋತ್ತಮ ಚೇತನ ಎಂದು ತಿಳಿದು ಪೂಜಿಸಿದರೆ ಅಂಧಂತಮಸ್ಸು ನಿಶ್ಚಿತ. 
 • Raghoottam Rao,

  11:49 PM, 19/04/2017

  ತಮ್ಮ ಮಾತು ಕೇಳುವದೇ ಒಂದು ಸೊಗಸು. 
  
  ಸರಸ್ವತೀಪುತ್ರರು ತಾವು.🚩
 • Sangeetha prasanna,Bangalore

  10:30 PM, 19/04/2017

  ಅಧ್ಬುತವಾದ ವಿವರಣೆ ಗುರುಗಳೆ 🙏🙏