Prashnottara - VNP014

ಕೃಷ್ಣಾರ್ಪಣ ಎನ್ನುವದು ಭೇದಚಿಂತನೆಯಲ್ಲವೇ?


					 	

ನಮಸ್ಕಾರ ಆಚಾರ್ಯರೆ, ಭಗವಂತನ ವಿವಿಧ ರೂಪಗಳಲ್ಲಿ ಭೇದ ಚಿಂತನೆ ಮಾಡಬಾರದು, ಹಾಗೆ ಮಾಡುವುದು ಶ್ರೇಯಸ್ಸಲ್ಲ ತಮಃ ಸಾಧಕವಾದದ್ದು ಎಂದು ನಿಮ್ಮ ಉಪನ್ಯಾಸಗಳಿಂದಲೇ ತಿಳಿದ ವಿಷಯ. ಹಾಗಿದ್ದರೆ ನಾವು ಮಾಡುವ ಪ್ರತಿಯೊಂದು ಕರ್ಮವನ್ನು ಶ್ರೀಕೃಷ್ಣಾರ್ಪಣಮಸ್ತು ಎಂದು ಕೃಷ್ಣ ರೂಪಿ ಭಗವಂತನಿಗೆ ಏಕೆ ಸಮರ್ಪಣೆ ಮಾಡಬೇಕು? ಭಗವಂತನ ಎಲ್ಲಾ ರೂಪಗಳೂ ಅಭಿನ್ನವಾಗಿದ್ದಲ್ಲಿ ವೇದವ್ಯಾಸಾರ್ಪಣಮಸ್ತು ಕಪಿಲಾರ್ಪಣಮಸ್ತು ಹಯಗ್ರೀವಾರ್ಪಣಮಸ್ತು ಎಂದು ಹೀಗೇ ಮುಂತಾಗಿ ಭಗವಂತನ ಬೇರೆ ಬೇರೆ ರೂಪಗಳಿಗೆ ಏಕೆ ಸಮರ್ಪಣೆ ಮಾಡಬಾರದು? ದಯವಿಟ್ಟು ತಿಳಿಸಿ ಕೊಡಿ. ಧನ್ಯವಾದಗಳು. ಗಾಯತ್ರೀ ಶ್ರೀನಿವಾಸ್, ಮುಳಬಾಗಿಲು


Play Time: , Size: 1.45 MB


Download Article Download Upanyasa Share to facebook View Comments
2629 Views

Comments

(You can only view comments here. If you want to write a comment please download the app.)
 • K V Aparna,Adoni

  8:52 PM , 30/06/2019

  Anatha anatha namaskaragalu 🙏🙏
 • K V Aparna,Adoni

  8:42 PM , 30/06/2019

  C
 • Manjunath,

  6:48 PM , 22/04/2017

  ಅನಂತ ಅನಂತ ಧನ್ಯವಾದಗಳು ಆಚಾರ್ಯರೆ ನಿಮ್ಮಿಂದ ನಮ್ಮಂತವರಿಗೆ ಇನ್ನು ಜ್ಞಾನದ ಬೆಳಕು ಚೆಲ್ಲಲಿ🙏🙏🙏🙏
 • Manjunath,

  6:05 PM , 22/04/2017

  ಧನ್ಯವಾದಗಳು ಆಚಾರ್ಯರೆ ಆದರೆ ಮೇಲೆ ಮತ್ತೊಂದು ಪ್ರಶ್ನೆ ಇತ್ತು ಹೋಟೆಲ್ ಅವರಿಗೆ ಪಾಪ ಇದ್ದೆ ಇರುತ್ತದೆ 
  ಅಲ್ಲವೆ ?

  Vishnudasa Nagendracharya

  ಅನ್ನ ಮಾರುವದು ಮಹಾಪಾಪ. ಏಕಾದಶಿಯಲ್ಲ, ಯಾವ ದಿವಸವೂ ಮಾರಾಟ ಮಾಡುವಂತಿಲ್ಲ. ಬ್ರಾಹ್ಮಣರಲ್ಲ, ಯಾವ ವರ್ಣದವರೂ ಮಾರಾಟ ಮಾಡುವಂತಿಲ್ಲ. 
  
  ಅದು ಹೋಟೆಲ್ಲಾಗರಲಿ, ಮಠವಾಗಿರಲಿ, ಅನ್ನಕ್ಕೆ ಬೆಲೆ ಕಟ್ಟುವಂತಿಲ್ಲ. 
  
  ಅನ್ನ ದಾನ ಮಾಡಬೇಕಾದ ವಸ್ತು. ಮಾರಾಟ ಮಾಡುವ ವಸ್ತುವಲ್ಲ. 
  
  ಅಟ್ಟಶೂಲಾ ಜನಪದಃ ಎಂದು ಕಲಿಯುಗದ ಜನರು ಅನ್ನವನ್ನೇ ಹಿಂಸಿಸುತ್ತಾರೆ ಎಂದು ಮಹಾಭಾರತ ಹೇಳುತ್ತದೆ. ಯಾವ ಭರತ ಭೂಮಿಯಲ್ಲಿ ಹೆಜ್ಜೆ ಹೆಜ್ಜೆಗೆ ಅನ್ನದಾನಕ್ಕಾಗಿ ಅರವಟ್ಟಿಗೆಗಳಿದ್ದವೋ, ಅನ್ನಛತ್ರಗಳಿದ್ದವೋ, ಮನೆಮನೆಗಳಲ್ಲಿ ಅತಿಥಿ ಸತ್ಕಾರ ನಡೆಯುತ್ತಿತ್ತೋ ಅಧೇ ಭರತ ಭೂಮಿಯಲ್ಲಿ ಇಂದು ಬೀದಿಗೆ ನಾಲ್ಕು ಅನ್ನಮಾರಾಟದ ಅಂಗಡಿಗಳಿವೆ. ಕೊನೆಗೆ ಮಠ, ದೇವಸ್ಥಾನಗಳಲ್ಲಿಯೂ ಹಣ ತೆಗೆದುಕೊಂಡು ಊಟ ಹಾಕುವ ಪರಿಸ್ಥಿತಿ ಬಂದಿದೆ. ತಪ್ಪನ್ನು ಯಾರು ಮಾಡಿದರೂ ತಪ್ಪೇ. 
 • Manjunath,

  3:41 PM , 22/04/2017

  ಆಚಾರ್ಯರೆ ಮತ್ತೊಂದು ಪ್ರಶ್ನೆ ತಮ್ಮಲ್ಲಿ ಏಕಾದಶಿ ಎಲ್ಲ ವರ್ಣದವರಿಗು ವಿಹಿತವಾದದ್ದು ಅಲ್ಲವೇ ಹಾಗೆ ಈ ಹೋಟೆಲ್ ನಡೆಸುವವರು ಏಕಾದಶಿಯಂದು ತಾವು ತಿನ್ನದೆ ಇದ್ದರು ಸಹ ಬೇರೆಯವರಿಗೆ ಕೊಟ್ಟರೆ ಪಾಪಕರ್ಮವಾಗುವುದೋ
  
  ಹಾಗೆ ಏಕಾದಶಿಯಂದು ಯಾರೋ ಒಬ್ವರು ಮರಣ ಹೊಂದುವ ಸಮಯದಲ್ಲಿ ಕೊನೆಯ ಬಾರಿಗೆ ನೀರು ಕೇಳಿದರೆ ಏನು ಮಾಡಬೇಕು ಕೊಟ್ಟವನಿಗೆ ಪಾಪವೋ ಅಥವಾ ಕುಡಿದವನಿಗೆ ಪಾಪವೋ ದಯಮಾಡಿ ತಿಳಿಸಿ

  Vishnudasa Nagendracharya

  ಮರಣಾಂತಿಕ ಸಂದರ್ಭದಲ್ಲಿ ಕೆಲವು ನಿಯಮಗಳು ಸಡಿಲವಾಗುತ್ತವೆ ಎಂದು ಧರ್ಮಶಾಸ್ತ್ರ ಹಾಗೂ ತತ್ವಶಾಸ್ತ್ರಗಳು ಒಪ್ಪಿದ ವಿಷಯ. ಶೌಚದ ವಿಷಯದಲ್ಲಿ ಆತುರೇ ನಿಯಮೋ ನಾಸ್ತಿ ಎಂದು ಮರಣ ಸನ್ನಿಹಿತವಾಗಿರುವ ನಿಶ್ಚಯವಿದ್ದಾಗ ನಿಯಮಗಳಿಲ್ಲ ಎಂದು ಹೇಳುತ್ತವೆ. (ಆತುರ ಎಂದರೆ ಇನ್ನೇನು ಮರಣ ಹೊಂದುವ ವ್ಯಕ್ತಿ ಎಂದರ್ಥ) 
  
  ಹಾಗೆ ಹಸಿವೆಯಿಂದ ಪ್ರಾಣವೇ ಹೋಗುವ ಸಂದರ್ಭದಲ್ಲಿ ಪ್ರಾಣ ಉಳಿಸಿಕೊಳ್ಳಲು ಅಭಕ್ಷ್ಯವನ್ನು ತಿಂದಲ್ಲಿ ಪಾಪವಿಲ್ಲ ಎನ್ನುವದನ್ನು ತತ್ವಶಾಸ್ತ್ರವೂ ಪ್ರತಿಪಾದಿಸಿದೆ. (ಹತ್ತಾರು ದಿವಸಗಳಿಂದ ತಿನ್ನಲೂ ಏನೂ ಇಲ್ಲದೆ ಇದ್ದು, ಸಾಯುತ್ತೇನೆ ಎಂದನಿಸಿದ ಸಂದರ್ಭದಲ್ಲಿ ಈ ನಿಯಮ, ಕಂಡಕಂಡದ್ದನ್ನು ತಿನ್ನುವ ಆಸೆಯಿಂದ ಸಾಯುವ ಸೋಗು ಹಾಕಿದಾಗಲ್ಲ) 
  
  ಮತ್ತೂ, ಶ್ರೀಮದಾಚಾರ್ಯರೂ ಸಹ ಅಶಕ್ತರು, ರೋಗಿಗಳು, ಏಕಾದಶಿಯಂದು ಅತ್ಯಲ್ಪ ಆಹಾರವನ್ನು ಸ್ವೀಕರಿಸಬಹುದು ಎಂದು ಹೇಳಿದ್ದಾರೆ. 
  
  ಹೀಗಾಗಿ ಏಕಾದಶಿಯಂದು ಸಾಯುತ್ತಿರುವ ವ್ಯಕ್ತಿಗೆ (ಆಕ್ಸಿಡೆಂಟ್ ಮುಂತಾದವುಗಳಿಗೆ ಒಳಗಾದವರು) ನೀರಿನ ಆವಶ್ಯಕತೆಯಿದ್ದಾಗ ನೀರು ನೀಡಿದರೆ ಕುಡಿಯುವ ವ್ಯಕ್ತಿಗೂ ದೋಷವಿಲ್ಲ. ನೀರು ನೀಡಿದವನಿಗೂ ದೋಷವಿಲ್ಲ. 
  
  ಸಾಯುತ್ತಿರುವ ವ್ಯಕ್ತಿ, ಈ ದಿನ ಏಕಾದಶಿ ಎಂದು ತಿಳಿದು ನೀರನ್ನೂ ಕುಡಿಯದೇ ಪ್ರಾಣ ಬಿಟ್ಟಲ್ಲಿ ಅವನು ಗಳಿಸುವ ಪುಣ್ಯವನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಅದರ ಫಲವಾಗಿ ಮುಂದಿನ ಜನ್ಮದಲ್ಲಿ ಮತ್ತೊಬ್ಬರಿಗೆ ಊಹಿಸಲೂ ಸಾಧ್ಯವಿಲ್ಲದ ಅಪಾರ ಜ್ಞಾನವನ್ನು ಗಳಿಸುತ್ತಾನೆ. 
  
  
  
 • Manjunath,

  8:56 PM , 21/04/2017

  ಧನ್ಯವಾದಗಳು ಆಚಾರ್ಯರೆ
 • suraj sudheendra,bengaluru

  5:31 PM , 21/04/2017

  gurugale ide visheyada mele innondu prashne ide aadare sankalpada kuritu. . istu divasa yaavude karmada sankalpadalli naavu 'srilakshminaarayana preraneya preetyartham' yendu helutiddevu. . aadare ittichige nammalli obbaru helidaru. . nimma nimma maneyadevarannu helikondu sankalpa maadabeku yendu. . eg: shrilakshmivenkatesha preraneya. . or . . shrilakshmi narasimha preranaya. . heege helabeku yendu (narayana, shreenivaasa, narasimha ityaadi yella paramaatmana onde roopavaadaru. . mane devara preethyarthavaagi sankalpisabeku). . dayamadi tatwa vannu tilisuvira?

  Vishnudasa Nagendracharya

  ಸಂಕಲ್ಪವನ್ನು ಮಾಡುವಾಗ ಯಾವೆಲ್ಲ ಭಗವಂತನ ರೂಪಗಳನ್ನು ಚಿಂತಿಸಬೇಕೋ ಅವೆಲ್ಲವನ್ನೂ ಚಿಂತಿಸಿ ಅವನ ಅಭೇದವನ್ನು ಶ್ರೀವಿಷ್ಣುವಿಗೆ ಹೇಳಿ ಶ್ರೀವಿಷ್ಣುಪ್ರೇರಣಯಾ ಶ್ರೀವಿಷ್ಣುಪ್ರೀತ್ಯರ್ಥಂ ಎಂದೇ ನಾವು ಹೇಳಬೇಕು. ಸಮರ್ಪಣೆಗೆ ಕೃಷ್ಣರೂಪವಿದ್ದಂತೆ ಸಂಕಲ್ಪಕ್ಕೆ ವಿಷ್ಣುರೂಪ. 
  
  ಇದಕ್ಕೆ ತುಂಬ ಮಹತ್ತ್ವದ ಕಾರಣವಿದೆ. ಸಂಕ್ಷೇಪವಾಗಿ ವಿವರಿಸುತ್ತೇನೆ. ನಾವು ವೈಷ್ಣವರು ಎಂದು ಕರೆದುಕೊಳ್ಳುತ್ತೇವೆ. ಅಂದರೆ ವಿಷ್ಣುವಿಗೆ ಸಂಬಂಧಿಸಿದವರು. ಪರಮಾತ್ಮನ ಎಲ್ಲ ರೂಪಗಳಿಗೆ ಅಭೇದವಿದ್ದರೂ ನಾವು ನಾರಾಯಣೀಯರು, ನಾವು ಮಾಧವೀಯರು, ನಾವು ಕೃಷ್ಣೀಯರು ಎನ್ನುವದಲ್ಲ, ನಾವು ವೈಷ್ಣವರು ಎಂದೇ ಹೇಳುತ್ತೇವೆ. 
  
  ಕಾರಣ ಸಮಸ್ತ ಶಾಸ್ತ್ರಗಳಿಂದ ಪ್ರತಿಪಾದ್ಯವಾದ ರೂಪ ವಿಷ್ಣುರೂಪ. ಸಮಸ್ತ ಶಾಸ್ತ್ರಗಳ ನಿರ್ಣೀತ ತತ್ವ ವಿಷ್ಣುತತ್ವ ಎಂಬ ಅನುಸಂಧಾನಕ್ಕಾಗಿಯೇ ನಮಗೆ ವೈಷ್ಣವರು ಎಂಬ ಹೆಸರು. ಇದಲ್ಲದೇ ಇನ್ನೂ ಅನೇಕ ಕಾರಣಗಳಿವೆ. 
  
  ಆದ್ದರಿಂದ, ಮಮ ಕುಲದೇವತಾ ಶ್ರೀ ಲಕ್ಷ್ಮೀವೇಂಕಟಶ್ವಾರಿಭಿನ್ನ, ಮಮ ಅಭೀಷ್ಟಮೂರ್ತಿ ಶ್ರೀ ವೇದವ್ಯಾಸಾಭಿನ್ನ, ಮಾಸನಿಯಾಮಕ ದಾಮೋದರಾಭಿನ್ನ ಎಂದು ಯಾವೆಲ್ಲ ರೂಪಗಳನ್ನು ಚಿಂತಿಸಬೇಕೋ ಅವೆಲ್ಲದರ ಅಭೇದವನ್ನು ಚಿಂತಿಸಿ ಶ್ರೀ ವಿಷ್ಣುಪ್ರೇರಣಯಾ ಶ್ರೀವಿಷ್ಣುಪ್ರೀತ್ಯರ್ಥಂ ಎಂದೇ ಸಂಕಲ್ಪ ಮಾಡಬೇಕು. 
  
  
 • Manjunath,

  5:27 PM , 21/04/2017

  ಆಚಾರ್ಯರೆ ಇಂದು ಮಠಗಳಲ್ಲಿ ನಡೆಯುವುದು ಪಂಕ್ತಿ ಭೇದವೋ ಅಥವಾ ಬ್ರಹ್ಮಣರು ಮತ್ತು ಇತರರ ನಡುವಿನ ತಾರತಮ್ಯವೋ 
  ಇದರ ಮಹತ್ವ ಏನು

  Vishnudasa Nagendracharya

  ವರ್ಣಗಳಿಗೆ ಅನುಸಾರಿಯಾಗಿ ಪ್ರತ್ಯೇಕವಾಗಿ ಬಡಿಸುವದು ಸರ್ವಥಾ ಪಂಕ್ತಿಭೇದವಲ್ಲ. 
  
  ಒಂದೇ ಪಂಕ್ತಿಯಲ್ಲಿ ಕುಳಿತವರಿಗೆ ಭೇದ ಮಾಡಿ ಬಡಿಸಬಾರದು ಎನ್ನುವದರ ಕುರಿತು ಇಲ್ಲಿ ಚರ್ಚೆ. 
  
  ಪಂಕ್ತಿಗಳನ್ನೇ ಬೇರೆ ಬೇರೆ ಹಾಕುತ್ತೀರಿ ಎನ್ನುವದು ನೀವು ಮಾಡುತ್ತಿರುವ ಪ್ರಶ್ನೆ. 
  
  ಗೀತೆ ಹೇಳಿದ ವರ್ಣಾಶ್ರಮಧರ್ಮ ಪರಿಪಾಲನೆ ಎಂದಿಗೂ ಪಂಕ್ತಿಭೇದವಲ್ಲ. 
  
  
 • Pramod s r,

  3:03 PM , 21/04/2017

  Danayavada gurugale
 • Jayashree karunakar,

  10:46 PM, 19/05/2017

  Acharyare anantha anantha dhanyavadgalu. Prashnothara thumba chennegide. Aneka adyatmada vicharagalannu thamma karunyadinda thilisuthidhira gurugale
 • Prabhanjana Rao K,

  9:36 AM , 19/05/2017

  ಸಮಂಜಸವಾಗಿ ಉತ್ತರಿಸಿದ್ದೀರಿ ಆಚಾರ್ಯರೆ.
 • Praveen Krishna,

  9:50 AM , 12/05/2017

  ಆಚಾರ್ಯರಿಗೆ ನಮಸ್ಕಾರಗಳು.
  ಕಲಿಯುಗದಲ್ಲಿ ನಾವು ಮಾಡುವ ಎಲ್ಲ ಕರ್ಮಗಳ್ಳನ್ನು ಕೃಷ್ಣ ರೂಪಿ
  ಭಗವಂತನಿಗೆ ಅರ್ಪಣೆ ಮಾಡಬೇಕು ಅಂತ ಭಾಗವತಾದಿ ಪುರಾಣಗಳು ತಿಳಿಸುತಿದೆ ಅಂತ ತಿಳಿಸಿದಿರಿ. ಹಾಗಾದರೆ ಕೃತ, ತ್ರೇತ, ದ್ವಾಪರ ಯುಗಗಳ್ಲಲಿ ಯಾರಿಗೆ ಸಮರ್ಪಣೆ ಮಾಡುತಿದ್ದರು