Prashnottara - VNP017

ಮಡಿ ಮೈಲಿಗೆ


					 	

ಆಚಾರ್ಯರಿಗೆ ಪ್ರಣಾಮಗಳು, ಮಡಿ ಮೈಲಿಗೆ ಮುಸುರೆಗಳ ಬಗ್ಗೆ ಶಾಸ್ತ್ರೀಯ ಪ್ರಮಾಣಗಳ ಸಮೇತವಾಗಿ ತಿಳಿಸಿ ಹೇಳಿದರೆ ಮಹದುಪಕಾರ ಆಗುತ್ತದೆ 🙏 — ಆಶುತೋಷ್ ಪ್ರಭು ಈಗಾಗಲೇ ಮಡಿ-ಮೈಲಿಗೆಗಳ ಕುರಿತು ವಿಸ್ತಾರವಾಗಿ ಬರೆದಿದ್ದೇನೆ. ವಿಶ್ವನಂದಿನಿಯ Home page ನಲ್ಲಿಯೇ ಮಡಿ-ಮೈಲಿಗೆ ಎಂಬ ವಿಷಯವಿದೆ ನೋಡಿ. VNA097, VNA098 VNA099 VNA100 ನಂಬರಿನ ನಾಲ್ಕು ಲೇಖನಗಳು. ಅದರ ಕುರಿತು ಏನಾದರೂ ಪ್ರಶ್ನೆಯಿದ್ದಲ್ಲಿ ಅಲ್ಲಿಯೇ ಕಮೆಂಟಿನಲ್ಲಿ ಕೇಳಬಹುದು. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
6235 Views

Comments

(You can only view comments here. If you want to write a comment please download the app.)
 • Channakeshava S,Doddaballapura

  7:32 PM , 04/11/2021

  ಹೆಣ್ಣುಮಕ್ಕಳು ಪ್ರಥಮ ರಜೋದರ್ಶನವಾದಾಗ ಯಾರೆಲ್ಲ ಅಶೌಚ ಪಾಲಿಸಬೇಕು ಮತ್ತು ಎಷ್ಟು ದಿನಗಳ ಕಾಲ ಅಶೌಚವಿರುತ್ತದೆ
 • M VENKATARAMACHAR,Bengaluru

  7:56 PM , 18/02/2021

  Vnao0
 • Shridhar bhat,Shivamogga

  7:17 PM , 15/07/2017

  Hom pege
 • Sandeep R,Bangalore

  10:28 AM, 02/05/2017

  VNA097 hello siguttave

  Vishnudasa Nagendracharya

  ಮಾರ್ಗ - ಒಂದು. 
  
  ವಿಶ್ವನಂದಿನಿಯ Home Page ನ "ವಿಷಯಗಳು" tab ನಲ್ಲಿ ಮಡಿಮೈಲಿಗೆ ಎಂಬ ವಿಷಯವಿದೆ. ಅದನ್ನು ಒತ್ತಿ, ಅದರಲ್ಲಿನ ಲೇಖನಗಳ Tab ಅನ್ನು Open ಮಾಡಿದರೆ VNA097 ಸಿಗುತ್ತೆ. 
  
  ಮಾರ್ಗ - ಎರಡು 
  
  ವಿಶ್ವನಂದಿನಿಯ Navicon (ಮೇಲೆ ಎಡಭಾಗದಲ್ಲಿರುವ ಮೂರು ರೇಖೆಗಳು) ಒತ್ತಿದರೆ ಸಮಗ್ರ ಲೇಖನಗಳು ಎಂದಿರುತ್ತದೆ. ಅದನ್ನು ಒತ್ತಿದರೆ ಲೇಖನಗಳ ಕ್ರಮಸಂಖ್ಯೆಗೆ ಅನುಸಾರವಾಗಿ ಲೇಖನಗಳಿರುತ್ತವೆ. ಅಲ್ಲಿ ಸುಲಭವಾಗಿ VNA097 ಹುಡುಕಬಹುದು. ಅದನ್ನು ಒತ್ತಿದರೆ ನೇರವಾಗಿ ಲೇಖನ ದೊರೆಯುತ್ತದೆ. 
 • suraj sudheendra,bengaluru

  7:25 PM , 22/04/2017

  dhanyavada gurugale. . aadare keluvu baari hiriyaralle shishtaachaaravu bhinna vaagiruttade. . for eg : ondu muttadavaru avara peetaadhipatigalu helidante aacharisuttare. . athawa maneyalli makkalu tande helidante, gurukuladalli vidhyaarthigau gurugalu helidante. . heege paraspara bhinna aacharane iddalli sajjanaru yaava hiriyarannu paalisabeku? yaavudu vishnupreethikara vadaddu? prashneyannu innu vistaravaagi kelabeku aadare nanage helalu barutilla!!! dayamaadi idara hindina gondala vannu neeve artha maadikondu parihaara needabeku!!!

  Vishnudasa Nagendracharya

  ಒಂದು ಕರ್ಮಕ್ಕೆ ಶಾಸ್ತ್ರದಲ್ಲಿಯೇ ಭಿನ್ನಭಿನ್ನ ಕ್ರಮಗಳನ್ನು ಹೇಳಿದ್ದಾಗ ಆಗ ನಮ್ಮ ಮನೆಯ ಸಂಪ್ರದಾಯವನ್ನು ಪಾಲಿಸಬೇಕು. ಮನೆಯ ಸಂಪ್ರದಾಯ ಗೊತ್ತಿಲ್ಲದಿದ್ದಾಗ ಮಠದ ಸಂಪ್ರದಾಯ ಪಾಲಿಸಬೇಕು. ಮಠದ ಸಂಪ್ರದಾಯವೂ ಗೊತ್ತಿಲ್ಲದಿದ್ದಾಗ ಅಥವಾ ಗುರುಗಳ ಮನೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಇದ್ದಾಗ ಗುರುಗಳ ಸಂಪ್ರದಾಯವನ್ನು ಪಾಲಿಸಬೇಕು. 
  
  ನಮ್ಮ ಸಂಪ್ರದಾಯಕ್ಕೂ ಗುರುಗಳ ಸಂಪ್ರದಾಯಕ್ಕೂ ವಿರೋಧವಿದ್ದರೂ ಸಮಸ್ಯೆಇಲ್ಲದೇ ಇದ್ದಲ್ಲಿ ನಮ್ಮ ಸಂಪ್ರದಾಯವನ್ನೇ ಪಾಲಿಸಬೇಕು. ಉದಾಹರಣೆಗೆ ಚಿತ್ರಾಹುತಿ. ನಾವು ನಾಲ್ಕು ಚಿತ್ರಾಹುತಿ ಇಟ್ಟು ಗುರುಗಳು ಒಂದೇ ಇಟ್ಟರೂ ಸಮಸ್ಯೆಯಿಲ್ಲ. ಅದಕ್ಕಾಗಿ ಅದನ್ನು ಪಾಲಿಸಬೇಕು. 
  
  ಎಲ್ಲಿ ವಿರೋಧವಿದೆ ಅಲ್ಲಿ ಗುರುಗಳ ಸಂಪ್ರದಾಯವನ್ನು ಪಾಲಿಸಬೇಕು. ಉದಾಹರಣೆ ಏಕಾದಶಿ. ನಾವೊಂದು ದಿವಸ ಗುರುಗಳೊಂದು ದಿವಸ ಮಾಡುವದು ತಪ್ಪಾಗುತ್ತದೆ. ಅದಕ್ಕಾಗಿ ಗುರುಗಳ ಸಂಪ್ರದಾಯವನ್ನು ಅನುಸರಿಸಬೇಕು. ಮನೆಗೆ ಬಂದಾಗ ನಮ್ಮ ಮಠದ ಸಂಪ್ರದಾಯವನ್ನೇ ಅನುಸರಿಸಬೇಕು. 
  
  ಈಗ ಮುಂದಿನ ಹಂತ. 
  
  ನಾವು ಪಾಲಿಸುವ ಸಂಪ್ರದಾಯಕ್ಕಾಗಲೀ, ಗುರುಗಳು ಪಾಲಿಸುವ ಸಂಪ್ರದಾಯಕ್ಕಾಗಲೀ, ಮಠ ಪಾಲಿಸುವ ಸಂಪ್ರದಾಯಕ್ಕಾಗಲೀ ಶಾಸ್ತ್ರದ ಸ್ಪಷ್ಟ ವಿರೋಧ ತೋರಿ ಬಂದಲ್ಲಿ, ಹತ್ತಾರು ದೃಷ್ಟಿಗಳಿಂದ ನಿರ್ಣಯಿಸಿಕೊಂಡು ಶಾಸ್ತ್ರದ ದಾರಿಯನ್ನೇ ಅನುಸರಿಸಬೇಕು. 
  
  ಕಾರಣ, ಶಾಸ್ತ್ರ ನಮ್ಮ ಕುಲಕ್ಕಿಂತ, ಗುರುಗಳಿಗಿಂತ, ಮಠಕ್ಕಿಂತ ದೊಡ್ಡದು. 
  
  ಸಂಪ್ರದಾಯಗಳಲ್ಲಿ ಭಿನ್ನತೆ ಅವಶ್ಯವಾಗಿ ಇರಬಹುದು. ನಾವು ಕೇಶವಾಯ ಸ್ವಾಹಾ ಎಂದು ಮಂತ್ರಾಚಮನ ಮಾಡುತ್ತೇವೆ. ಉಡುಪಿಯ ಪ್ರಾಂತದವರು ಆಚಮನದಲ್ಲಿಯೇ ಶ್ರೇಷ್ಠವಾದ ಶ್ರೌತಾಚಮನವನ್ನು ಮಾಡುತ್ತಾರೆ. ಋಗ್ವೇದಾಯ ಸ್ವಾಹಾ ಎಂದು. ಸಂಪ್ರದಾಯ ಭಿನ್ನವಾಗಿದ್ದರೂ ವಿರೋಧವಿಲ್ಲ, ಸಮಸ್ಯೆಯಿಲ್ಲ. 
  
  ಆದರೆ, ಶಾಸ್ತ್ರದ ವಿರೋಧ ಸಂಪ್ರದಾಯಕ್ಕೆ ಬಂದಾಗ ಸಂಪ್ರದಾಯವನ್ನು ಬಿಟ್ಟು ಶಾಸ್ತ್ರವನ್ನೇ ಅನುಸರಿಸಬೇಕು. ಆದರೆ ಸಂಪ್ರದಾಯವನ್ನು ಬಿಡುವ ಮೊದಲು ಶಾಸ್ತ್ರವನ್ನು ಹತ್ತಾರು ಬಾರಿ ದೃಢವಾಗಿ ಪರಿಶೀಲಿಸಬೇಕು. 
 • suraj sudheendra,bengaluru

  4:14 PM , 22/04/2017

  gurugale. .dhaavaliyannu visheshavaagi madi yendu yellaru bhaavisuttare! adakke spashtavaada pramaanagalenaadaru iveya? haagu modalige adakke angadiya mailige iruttade, haagendu ogedare madige baruvudilla yendu kelavaru, kole aagiruva batte yendu matte matte ogedu upayogisa bohudu yendu kelavaru!! yaavudu sariyaadaddu yembudakke pramaanagalannu dayamaadi tilisuvira? heegeye yesto madi aacharaneye vishayagalu pramaanavilledde hodare. . adu bare mooda nambike aagodillave? nimma upanyaasagallalli tilisida haage teekaraayaru helidante naavene aacharisidaru adakke pramaana irabeku yendu!! dayamaadi samshayavannu pariharisi gurugale.

  Vishnudasa Nagendracharya

  ಧಾವಳಿಯ ವಿಷಯ ಧರ್ಮಶಾಸ್ತ್ರದ್ದು. ಧರ್ಮಶಾಸ್ತ್ರದಲ್ಲಿ ಹಿರಿಯರ ಸದಾಚಾರವೂ ಪ್ರಮಾಣ. ಇದನ್ನು ಶಿಷ್ಟಾಚಾರ ಎನ್ನುತ್ತಾರೆ. 
  
  ಧಾವಳಿಯನ್ನು ಕೆಲವು ಬ್ರಾಹ್ಮಣ ಮನೆತನಗಳಲ್ಲಿ ಮೊದಲಿಂದಲೂ ಮಡಿ ಎಂದು ಸ್ವೀಕರಿಸಿದ್ದಾರೆ.ನಾನು ಲೇಖನದಲ್ಲಿ ತಿಳಿಸಿದಂತೆ ಅದು ಒದ್ದೆ ಮಾಡಿ ಒಣಗಿ ಹಾಕಿದ ಬಟ್ಟೆಯ ಮಡಿಗೆ ಸಮಾನವಲ್ಲದಿದ್ದರೂ ಮಡಿ ಎಂದು ಸ್ವೀಕೃತವಾಗುತ್ತದೆ. 
  
  ಧಾವಳಿಯನ್ನು ಒಮ್ಮೆ ಒದ್ದೆ ಮಾಡುವವರೆಗೆ ಮಾತ್ರ ಮಡಿ. ಅದನ್ನು ತೋಯಿಸಿದ ನಂತರ ಮಡಿಗೆ ಬರುವದಿಲ್ಲ. ರಾತ್ರಿಯ ಹೊತ್ತು ಹಾಸಲು, ಹೊದೆಯಲು ಉಪಯೋಗಿಸಬಹುದಷ್ಟೆ. 
  
  ಅಂಗಡಿಯಿಂದ ತಂದಿರುತ್ತೇವೆ, ಮೈಲಿಗಯಲ್ಲವೇ ಎಂದು ಕೇಳಿದ್ದೀರಿ. ಧಾನ್ಯಗಳಿಗೆ, ವಸ್ತ್ರಗಳಿಗೆ ವಿಕ್ರಯಣಶುದ್ಧಿ ಇದೆ. ಅಂದರೆ, ಆ ವಸ್ತುವನ್ನು ನಾವು ಖರೀದಿ ಮಾಡಿದ ಬಳಿಕ ಅದು ಶುದ್ಧಿಯಾಗುತ್ತದೆ. ಹೀಗಾಗಿ ಧಾವಳಿಯನ್ನು ನಾವು ಖರೀದಿ ಮಾಡಿದ ಬಳಿಕ ಅವಶ್ಯವಾಗಿ ಶುದ್ಧಿಯುಂಟಾಗುತ್ತದೆ. 
 • M Ashutosh Prabhu,Mangalore

  2:22 PM , 22/04/2017

  ಆಚಾರ್ಯರೇ velvet ಬಟ್ಟೆ ಮಡಿಗೆ ಬರುತ್ತದೆಯೇ??

  Vishnudasa Nagendracharya

  baruvadilla.
 • Raghoottam Rao,Bangalore

  11:56 AM, 22/04/2017

  ಮಡಿ ಮೈಲಿಗೆಗಳ ಲೇಖನಗಳನ್ನು ಓದಿದೆ ಗುರುಗಳೇ. 
  
  ಅವುಗಳ ಬಗ್ಗೆ ಇದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿದ್ದಕ್ಕಾಗಿ ಧನ್ಯವಾದಗಳು. 
  
  ನಿಮ್ಮ ಕೃಪೆ ನಮ್ಮ ಮೇಲೆ ಹೀಗೇ ಇರಲಿ.
 • M Ashutosh Prabhu,Mangalore

  6:22 AM , 22/04/2017

  ಧನ್ಯವಾದಗಳು ಆಚಾರ್ಯರೇ🙏🙏