Prashnottara - VNP018

ದೇವತೆಗಳು ದೈತ್ಯರಿಗೆ ವರ ಏಕೆ ಕೊಡುತ್ತಾರೆ?


					  	

ಗುರುಗಳಿಗೆ ನಮಸ್ಕಾರಗಳು. ತಮ್ಮ ದೇವರ ಪೂಜೆಯ ಉಪನ್ಯಾಸಗಳು ತುಂಬ ಪರಿಣಾಮಕಾರಿಯಾಗಿ ಮೂಡಿ ಬರುತ್ತಿವೆ. ಬಹಳ ದಿನಗಳಿಂದ ನನ್ನನ್ನು ಕಾಡುತ್ತಿರುವ ಒಂದು ಪ್ರಶ್ನೆಯಿದೆ. ಬ್ರಹ್ಮದೇವರು, ರುದ್ರದೇವರು ದೈತ್ಯರಿಗೆ ವರ ಕೊಡುತ್ತಾರೆ. ಆ ನಂತರ ಆ ದೈತ್ಯರು ಆ ವರಬಲದಿಂದ ಜನರಿಗೆ ತೊಂದರೆ ಕೊಡುತ್ತಾರೆ. ಅಷ್ಟೇ ಅಲ್ಲ, ದೇವತೆಗಳಿಗೇ ತೊಂದರೆ ಕೊಡುತ್ತಾರೆ. ತಮಗೂ ಸಜ್ಜನರಿಗೂ ಕಷ್ಟ ಉಂಟು ಮಾಡುವ ರಾಕ್ಷಸರಿಗೆ ದೇವತೆಗಳು ಯಾಕಾಗಿ ವರ ಕೊಡಬೇಕು? ವರ ಕೊಡದಿದ್ದರೆ ಆಯಿತಲ್ಲ. ದಯವಿಟ್ಟು ಉತ್ತರಿಸಿ. — ಶೇಷಾದ್ರಿ, ಸಕಲೇಶಪುರ. ಆತ್ಮೀಯರಾದ ಶೇಷಾದ್ರಿಯವರಿಗೆ, ಈ ಪ್ರಶ್ನೆಗೆ ಈಗಾಗಲೇ ಹರಿಭಕ್ತಿಸಾರದ ಉಪನ್ಯಾಸದಲ್ಲಿ VNU400 ಮತ್ತು ತ್ರಿಪುರಾಸುರಸಂಹಾರದ ಉಪನ್ಯಾಸದಲ್ಲಿ ಉತ್ತರ ನೀಡಿಯಾಗಿದೆ. ತ್ರಿಪುರಾಸಂಹಾರದಲ್ಲಿನ ಭಾಗವನ್ನು ಇಲ್ಲಿ ಪ್ರಕಟಿಸಿದ್ದೇನೆ. ದೈತ್ಯರಿಗೆ ವರವನ್ನು ನೀಡುವದು ಸಹಿತ ದೇವತೆಗಳು ಸಜ್ಜನರ ಮೇಲೆ ಮಾಡುವ ಅನುಗ್ರಹ ಎನ್ನುವ ವಿಷಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ. — ವಿಷ್ಣುದಾಸ ನಾಗೇಂದ್ರಾಚಾರ್ಯ


Play Time: , Size: 2.17 MB


Download Upanyasa Share to facebook View Comments
2220 Views

Comments

(You can only view comments here. If you want to write a comment please download the app.)
  • Kiran Kumar kr,Kanakapura

    1:42 PM , 22/04/2017

    ಆಚಾರ್ಯರೆ, ನಿಮಗೆ ನನ್ನ ನಮಸ್ಕಾರಗಳು.ನನ್ನ ಹೆಸರು ಕಿರಣ್.ಕನಕಪುರದಿಂದ.ನಿಮ್ಮ ಈ ಉತ್ತರದಿಂದ ನನಗೂ ಹಲವು ದಿನಗಳಿಂದ ಇದ್ದ ದೇವತೆಗಳ ಮತ್ತು ದೈತ್ಯರ ವರದ ಬಗೆಗಿನ ಗೊಂದಲ ಪರಿಹಾರವಾಯಿತು.ನಿಮಗೆ ಧನ್ಯವಾದಗಳು.