Prashnottara - VNP021

ಹರಿವಾಸರ ಎಂದರೇನು?


					 	

ಗುರುಗಳಿಗೆ ನಮಸ್ಕಾರಗಳು.. ದಯವಿಟ್ಟು ಹರಿವಾಸರದ ಬಗ್ಗೆ ತಿಳಿಸಿಕೊಡಿ. — ಹರಿಪ್ರಸಾದ್ ಹರಿವಾಸರವನ್ನು ತಿಳಿಯಲು ದಶಮೀವೇಧದ ಕುರಿತು ಮೊದಲು ತಿಳಿಯಬೇಕು. ದಶಮೀವೇಧ ಎಂದರೇನು. ಸೂರ್ಯೋದಯಕ್ಕಿಂತ ಮುಂಚಿನ 96 ನಿಮಿಷಗಳನ್ನು ಅರುಣೋದಯ ಎನ್ನುತ್ತಾರೆ. ಈ ಅರುಣೋದಯಕ್ಕಿಂತ ಮುಂಚಿನ 32 ನಿಮಿಷಗಳಲ್ಲಿ, ಅಂದರೆ ಸೂರ್ಯೋದಕ್ಕಿಂತ ಮುಂಚೆ 2 ಗಂಟೆ 8 ನಿಮಿಷಗಳಲ್ಲಿ ದಶಮೀ ಇರಬಾರದು. ಅದಕ್ಕಿಂತ ಮುಂಚೆಯೇ ದಶಮೀ ಮುಗಿದು ಬಿಟ್ಟಿರಬೇಕು. ವಿದ್ಧೈಕಾದಶಿಯಂದು ಹರಿವಾಸರ ಬಂದೇ ಬರುತ್ತದೆ. ಹರಿವಾಸರ ಆರಂಭವಾಗುವಷ್ಟರಲ್ಲಿ ಆ ದಿವಸ ಪಲಾಹಾರವನ್ನು ಮುಗಿಸಬೇಕು. ಹರಿವಾಸರದ ಸಂದರ್ಭದಲ್ಲಿ ಏನನ್ನೂ ಉಣ್ಣಬಾರದು, ಕುಡಿಯಬಾರದು. ಏಕಾದಶಿಗಿಂತಲೂ ಮಿಗಿಲಾದ ಕಾಲ, ಹರಿವಾಸರದ ಕಾಲ ಎಂದು ಶ್ರೀಮದಾಚಾರ್ಯರು ತಿಳಿಸಿದ್ದಾರೆ. ಹರಿವಾಸರ ಎಂದರೇನು ಏಕಾದಶೀ ಆರಂಭವಾಗುವ ಘಳಿಗೆಯಿಂದ, ಮುಗಿಯುವ ಘಳಿಗೆಯವರಿಗೆ ಎಷ್ಟು ಸಮಯ ಇದೆ ಎಂದು ತಿಳಿದು ಕೊಳ್ಳಬೇಕು. ಇದನ್ನು ಆದ್ಯಂತಘಳಿಗೆಗಳು ಎನ್ನುತ್ತಾರೆ. ಇದನ್ನು ನಾಲ್ಕು ಭಾಗ ಮಾಡಬೇಕು. ಏಕಾದಶಿಯ ಆದ್ಯಂತ 60 ಗಳಿಗೆ ಇದೆ ಎಂದುಕೊಳ್ಳೋಣ. ಅದರಲ್ಲಿ 15 ಘಳಿಗೆಗಳ ನಾಲ್ಕು ಭಾಗಗಳಾದವು. ಈ ನಾಲ್ಕರಲ್ಲಿ ಕಡೆಯ 15 ಗಳಿಗೆಗಳು ಹರಿವಾಸರ ಎಂದು ಕರೆಸಿಕೊಳ್ಳುತ್ತದೆ. (ಹಾಗೆಯೇ ದ್ವಾದಶಿಯ ಹರಿವಾಸರವನ್ನು ತೆಗೆಯಲು. ದ್ವಾದಶೀ ತಿಥಿಯ ಆದ್ಯಂತ ಘಳಿಗೆಗಳನ್ನು ತೆಗೆಯಬೇಕು. ಇದನ್ನೂ ನಾಲ್ಕು ಭಾಗ ಮಾಡಬೇಕು. ದ್ವಾದಶಿಯ ಆದ್ಯಂತ 56 ಘಳಿಗೆ ಎಂದಿಟ್ಟುಕೊಳ್ಳೋಣ. ಆಗಲ 14 ಗಳಿಗೆಗಳ ನಾಲ್ಕು ಭಾಗಗಳಾದವು. ದ್ವಾದಶಿಯ ಮೊದಲ ಪಾದ ಹರಿವಾಸರ ಎಂದು ಕರೆಸಿಕೊಳ್ಳುತ್ತದೆ. ) ಈ ಏಕಾದಶಿಯ ಹರಿವಾಸರದ ಗಳಿಗೆ ಪಳಗಳು ಎಷ್ಟಿರುತ್ತವೆಯೋ ಅಷ್ಟನ್ನು, ಆ ದಿಪಸ ಸೂರ್ಯೋದಯದಿಂದ ಇರುವ ಏಕಾದಶಿಯ ಗಳಿಗೆ ಪಳಗಳಲ್ಲಿ ಕಳೆಯಬೇಕು. ಉಳಿದ ಗಳಿಗೆ ಪಳಗಳು ಯಾವಾಗ ಮುಗಿಯುತ್ತದೆಯೋ ಅಲ್ಲಿಂದ ಹರಿವಾಸರ ಆರಂಭ. ಹರಿವಾಸರ ಪ್ರತೀ ಏಕಾದಶಿಯಲ್ಲಿಯೂ ಬರುತ್ತದೆ. ಆದರೆ ಸಾಮಾನ್ಯವಾಗಿ ಏಕಾದಶಿಯ ರಾತ್ರಿಯಲ್ಲಿ ಮುಗಿದು ಹೋಗುತ್ತದೆ. ವಿದ್ಧೈಕಾದಶಿಯಿದ್ದಾಗ ದಶಮಿಯ ರಾತ್ರಿಯಂದೇ ಹರಿವಾಸರ ಬರುತ್ತದೆ. ಕಾರಣ ಏಕಾದಶಿಯಂದು ನಾವು ಊಟ ಮಾಡಿರುತ್ತೇವೆ. ಏಕಾದಶಿಯ ಕಡೆಯ ಪಾದ ರಾತ್ರಿಯ ವೇಳೆಗೆ ಆರಂಭವಾಗಿಯೇ ಆಗುತ್ತದೆ. ಏಕಾದಶಿಯ ಕಡೆಯ ಪಾದ ಆರಂಭವಾಗುವದರ ಒಳಗೆ ನಾವು ದಶಮಿ ರಾತ್ರಿಯ ಫಲಾಹಾರವನ್ನು ಮುಗಿಸಬೇಕು. ಕೆಲವು ಸಂದರ್ಭದಲ್ಲಿ ದ್ವಾದಶಿಯ ಮೊದಲ ಪಾದವು ದ್ವಾದಶಿ ಸೂರ್ಯೋದಯದ ನಂತರವೂ ಇರುತ್ತದೆ. ಆಗ ಅದು ಮುಗಿಯುವವರೆಗೆ ದೇವರಿಗೂ ಪಂಚಾಮೃತ ಅಭಿಷೇಕ, ನೈವೇದ್ಯವನ್ನು ಮಾಡುವಂತಿಲ್ಲ. ಆ ಹರಿವಾಸರದ ಕಾಲ ಮುಗಿದ ಬಳಿಕ, ಪಂಚಾಮೃತ ಅಭಿಷೇಕ ನೈವೇದ್ಯ, ಹಸ್ತೋದಕಗಳನ್ನು ಮಾಡಬೇಕು. ದ್ವಾದಶಿಯ ಮೊದಲ ಪಾದದವರೆಗೆ ನಮ್ಮ ಉಪವಾಸದ ನಿಯಮವಿರುವದರಿಂದ ಸೂರ್ಯೋದಯದ ವೇಳೆಗೆ ಪಾರಣೆ ಮಾಡದಿದ್ದರೂ ದೋಷವಿಲ್ಲ. ದ್ವಾದಶಿಯ ಮೊದಲ ಪಾದ, ಅರ್ಥಾತ್ ಹರಿವಾಸರ ಮುಗಿದ ಬಳಿಕವೇ ನೈವೇದ್ಯ, ಹಸ್ತೋದಕ, ಪಾರಣೆಗಳು. ಸಂಶಯವಿದ್ದರೆ ಕೇಳಿ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
9715 Views

Comments

(You can only view comments here. If you want to write a comment please download the app.)
 • Krishna,Banglore

  7:51 PM , 26/04/2022

  ಏಕಾದಶಿ ಏಕೆ ಆರ್ಯಭಟ ರೀತಿಯಿಂದ ಲೆಕ್ಕ ಮಾಡಬೇಕು.
  ಪ್ರಮಾಣ ತಿಳಿಸಿ ಆಚಾರ್ಯ 🙏🙏🙏🙏

  Vishnudasa Nagendracharya

  ಸದಾಚಾರಸ್ಮೃತಿಯ ಅನೇಕ ವ್ಯಾಖ್ಯಾನಕಾರರು "ವಿಷ್ಣುವ್ರತೇಷು ಯೋsಧಿಕಃ", "ಆರ್ಯೇಣೈವ ವಿನಿರ್ಣಯಃ" ಎಂದೆಲ್ಲ ಹೇಳಿದ್ದಾರೆ. ನಾನೂ ಸಹ ಹಾಗೆಯೇ ತಿಳಿದಿದ್ದೆ. 
  
  ಆದರೆ, ಆರ್ಯಮಾನವನ್ನು ಗ್ರಹಿಸಬೇಕು ಎಂದು ಶ್ರೀಮದಾಚಾರ್ಯರು, ಶ್ರೀ ಮಧ್ವಾನುಜಾಚಾರ್ಯರು, ಶ್ರೀಮತ್- ತ್ರಿವಿಕ್ರಮಪಂಡಿತಾಚಾರ್ಯರು ಮತ್ತು ಭಾವಿಸಮೀರ ಶ್ರೀಮದ್ವಾದಿರಾಜತೀರ್ಥ ಗುರುಸಾರ್ವಭೌಮರು ಎಲ್ಲಿಯೂ ತಿಳಿಸಿಲ್ಲ. ಶ್ರೀಮತ್-ತ್ರಿವಿಕ್ರಮಪಂಡಿತಾಚಾರ್ಯರು ರಚಿಸಿರುವ ತಿಥಿನಿರ್ಣಯವಂತೂ ಶ್ರೀಸೂರ್ಯಸಿದ್ಧಾಂತಗ್ರಂಥವನ್ನು ಆಧರಿಸಿಯೇ ನಿರ್ಮಾಣವಾಗಿದೆ. 
  
  ಮತ್ತು ಪಂಚಾಂಗಗಣಿತವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಆರ್ಯಭಟೀಯ ಗಣಿತವು ವೇದಗಣಿತಕ್ಕೆ ವಿರುದ್ಧವಾಗಿದೆ ಎಂದು ನಿರ್ಣಯವಾಯಿತು ಮತ್ತು ಅದರ ವ್ಯಾಖ್ಯಾನದಲ್ಲಿ ಭಗವದ್ಗೀತೆ ಭಾಗವತಗಳನ್ನು ನೇರವಾಗಿ ಖಂಡಿಸಲಾಗಿದೆ. ಹೀಗಾಗಿ ಅದು ಸನಾತನ ಪದ್ಧತಿಯಲ್ಲ ಎಂದು ಸುಸ್ಪಷ್ಟವಾಗಿ ನಿರ್ಣಯವಾಗುತ್ತದೆ. ಮತ್ತು ಆರ್ಯಭಟೀಯದ ಗಣಿತದ ರೀತಿಯಲ್ಲಿ ಗ್ರಹಸಂಚಾರವಿಲ್ಲ ಎನ್ನುವದೂ ಸಹ ಸುಸ್ಪಷ್ಟವಾಗುತ್ತದೆ. 
  
  ಆದ್ದರಿಂದ ಸೂರ್ಯಸಿದ್ಧಾಂತವನ್ನೇ ಸರಿಯಾಗಿ ಲೆಕ್ಕ ಹಾಕಬೇಕು, ಸೂರ್ಯಸಿದ್ಧಾಂತವೇ ದೃಗ್ಗಣಿತ. ಬೇರೊಂದು ದೃಗ್ಗಣಿತ ಇಲ್ಲವೇ ಇಲ್ಲ. 
  
  ಈ ಸೂರ್ಯಸಿದ್ಧಾಂತದಿಂದ ದೊರೆಯುವ ಲೆಕ್ಕಕ್ಕೆ ಶ್ರೀ ಪಂಡಿತಾಚಾರ್ಯರು ತಿಳಿಸಿರುವ ಹೆಚ್ಚಿನ ಲಿಪ್ತಿಗಳನ್ನು ಸೇರಿಸಿ ಏಕಾದಶಿಯನ್ನು ನಿರ್ಣಯಿಸಿಕೊಳ್ಳಬೇಕು. 
 • Surekha Anil Kumar,Dharmapuri

  8:48 AM , 26/04/2022

  ಹರಯೆ ನಮಃ ಗುರುಗಳೇ
  ನನ್ನಂಥ ಅಲ್ಪ ಜ್ಞಾನ ಇರುವವರಿಗೆ ಇನ್ನ ಸ್ವಲ್ಪ ಅರ್ಥ ಆಗುವ ರೀತಿಯಲ್ಲಿ ಸಂಕ್ಷಿಪ್ತ ವಾಗಿ ಹೇಳ್ತೀರಾ🙏
  ತಿಳಿದು ಕೊಳ್ಳುವ ಬಯಕೆ ಇರುವ ಕಾರಣ ಕೇಳ್ತಾ ಇದೀನಿ.

  Vishnudasa Nagendracharya

  ಏಕಾದಶಿ ತಿಥಿಯ ಒಟ್ಟು ಅವಧಿಯನ್ನು ನಾಲ್ಕು ಭಾಗ ಮಾಡಬೇಕು. 
  
  ದ್ವಾದಶಿ ತಿಥಿಯ ಒಟ್ಟು ಅವಧಿಯನ್ನು ನಾಲ್ಕು ಭಾಗ ಮಾಡಬೇಕು. 
  
  ಏಕಾದಶಿಯ ನಾಲ್ಕನೆಯ ಭಾಗ, ದ್ವಾದಶಿಯ ಮೊದಲನೆಯ ಭಾಗ ಇವೆರಡೂ ಸೇರಿ ಹರಿವಾಸರ ಎಂದು ಕರೆಸಿಕೊಳ್ಳುತ್ತವೆ. 
  
 • Prathibha,Udupi

  1:18 PM , 31/05/2021

  ದೇವರಿಗೆ ಏಕಾದಶಿಯಂದು ಬೇಯಿಸಿದ ನ್ನು ಸರ್ವಥಾ ನೇವೇದ್ಯ ಮಾಡಬಾರದೆಂದು ನೀವು ಹೇಳಿದ್ದೀರಿ. ದಯವಿಟ್ಟು ಇದಕ್ಕೆ ಶ್ರೀಮದಾಚಾರ್ಯರ ಪ್ರಮಾಣವನ್ನು ನೀಡುವಿರಾ?
 • Shrinidhi Walvekaf,Bengeluru

  10:54 AM, 09/03/2021

  Gurugalige namaskaragalu,
  Ee eradu ekadashiyalli yavudakke navu bahala prominence kodabeku....🙏
 • ಭಾರ್ಗವ ಎಂ ಆರ್,ಮಂಡ್ಯ

  6:14 AM , 27/12/2018

  ಆಚಾರ್ಯ ಹರಿವಾಸರದ ಬಗೆಗೆ ಸ್ಪಷ್ಟವಾಗಿ ತಿಳಿಸಿದ್ದೀರಾ ಧನ್ಯವಾದಗಳು.
  
  ಪಂಚಾಂಗದಲ್ಲಿ
  
  ತಿಥಿ  ಘ.ವಿ  ಗಂ. ನಿ
  ಪ್ರತಿ 38 55 22 15
  
  ಇದರಲ್ಲಿ ಹೇಗೆ ಗಂಟೆ ನಿಮಷಗಳಿಗೆ ತರುವುದು. ಸ್ವಲ್ಪ ವಿಸ್ತಾರವಾಗಿ ಹೇಳಿ.
  
  Type maadodu kashtavaadalli. Ondu Upnyaasa upload maadi.

  Vishnudasa Nagendracharya

  ಆದ್ಯಂತವನ್ನು ವಿಸ್ತಾರವಾಗಿ ತಿಳಿಸಬೇಕು. 
  
  ಇದು ಸುಲಭ. ಒಂದು ಗಳಿಗೆ ಎಂದರೆ 24 ನಿಮಿಷ. ಒಂದು ಪಳ ಎಂದರೆ 24 ಸೆಕೆಂಡುಗಳು. 
 • Sathyanarayana,Mysuru

  2:59 PM , 20/09/2018

  ಹುವ್ವೀನಿಂದ ನಾರು ಸಹ ಸ್ವರ್ಗಕ್ಕೆ ಹೋಯ್ತ ಅಂತಾರೆ ನಿಮ್ಮನ್ನು ಅನುಸರಿಸಿ ನಾವೂ ಸಹ .....
 • Prathap,Cedar Rapids, Iowa

  6:39 PM , 14/09/2018

  Hare namaH. srimadAnanda yheertha gurbyonamaH. Niyatha gurubyonamaH hariH om.
  GurugaLe, nanu US nalli iddini. Ekadashi vupavasa vratha vannu nanu India panchanga prakara follow madthiddini.
  
  Illirivu sajjanaru US panchanga da prakara mafuthiddarry. Dayavittu thelisi nanu nanna mathtubhomi panchanga anusari beko, athava..US kalamana prakara anusarisi beko.
  
  dhanyavadagaLu.
 • Suraj Sudheendra,

  6:50 AM , 08/08/2018

  Gurugale 1.panchangadinda aadyaanta ghalige galannu tilidu kolluvudu hege yendu tilisabeku.eg : ontikoppal panchanga.2. Haagu Aaryabhatada prakara lekka haakabeku yendare namage yenenu gottirabeku.

  Vishnudasa Nagendracharya

  Tumba vistaravagi tilisabekada vishayagaLu. Samaya doreta nantara bareyuttene
 • Vijayrao kulkarni,

  5:56 PM , 07/08/2018

  ಗುರುಗಳಿಗೆ ನಮಸ್ಕಾರಗಳು, ಏಕಾದಶಿಯಂದು ತಿರುಮಲದಲ್ಲಿ ನೇವೇಥ್ಯ ಆಗುತ್ತದೆ ಆಂತ ಕೇಳಿ ದ್ದೀವಿ ಹಾಗಾದರೆ ಯಾವುದು ಸರಿ. ತಪ್ಪು ಇದ್ದಲ್ಲಿ ಕ್ಷಮಿಸಿ

  Vishnudasa Nagendracharya

  ಏಕಾದಶಿಯ ದಿನ ದೇವರಿಗೆ ಹಾಲು ಹಣ್ಣು ನೀರುಗಳನ್ನು ಮಾತ್ರ ನೈವೇದ್ಯ ಮಾಡಬೇಕು. ಬೇಯಿಸಿದ್ದನ್ನು ಸರ್ವಥಾ ನೈವೇದ್ಯ ಮಾಡಬಾರದು. ದೇವಸ್ಥಾನಗಳು ಮಠಗಳು ಸ್ವಾಮಿಗಳು ಪಂಡಿತರು ಮಾಡಿದ್ದೆಲ್ಲವೂ ಪ್ರಮಾಣವಲ್ಲ. ಶಾಸ್ತ್ರಗಳು ಹೇಳಿದ್ದನ್ನು ಸರಿಯಾಗಿ ತಿಳಿದುಕೊಂಡು ಅವರು ಆಚರಿಸಿದಾಗ ಮಾತ್ರ ಅದು ಅನುಕರಣೀಯ.
 • Sathyanarayana R B,

  5:42 PM , 07/08/2018

  ಅದ್ಭುತವಾದ ವಿಶ್ಲೇಷಣೆ..... ಧನ್ಯವಾದಗಳು
 • H V SREEDHARA,Bengaluru

  8:31 PM , 04/07/2017

  ಆಚಾರ್ಯರಿಗೆ ನಮಸ್ಕಾರಗಳು. ನಾಳೆಯ ಹರಿವಾಸರ ಮುಗಿಯುವ ಸಮಯ ದಯವಿಟ್ಟು ತಿಳಿಸಿ. ಬೇರೆ ಬೇರೆ ಪಂಚಾಂಗ ಗಳಲ್ಲಿ ಒಂದೊಂದು ಸಮಯ ಇದೆ. ಯಾವುದು ಸರಿ ಎಂದು ಗೊಂದವವಿದೆ.
 • Srikanth b v,Bangalore

  3:05 PM , 03/07/2017

  ಅಚಾರ್ಯರೇ ಇನ್ನು ವಿಸ್ತೃತ ವಾಗಿ ಅತಿರಿಕ್ತ ಉಪವಾಸ ಮತ್ತು ಹರಿವಾಸರದ ವ್ಯತ್ಯಾಸ ತಿಳಿಸಿ
 • Hariprasad,

  12:24 PM, 28/04/2017

  ಆಚಾರ್ಯರೆ ದಯವಿಟ್ಟು ಅಕ್ಷಯ ತೃತೀಯ ಹಬ್ಬದ ಬಗ್ಗೆ ತಿಳಿಸಿಕೊಡಿ..

  Vishnudasa Nagendracharya

  ಅಕ್ಷಯತೃತೀಯಾದ ಆಚರಣೆಯ ಕುರಿತು ಲೇಖನ [VNA241] ಪ್ರಕಟವಾಗಿದೆ. 
 • Sangeetha prasanna,

  3:55 PM , 25/04/2017

  Gurugalige namaskargalu.Navy shaleyalliddaga bhagvadgeetheya purushottama yogo nama15ne addhyayavannu kalisi kottiddaru.aadare hennu makklu pathisbaradu ennuttare. Namage sampoorn Geethe tilidukolluv aase ide.Kannada arthdalli. Dayavittu anugrahisihi

  Vishnudasa Nagendracharya

  ಖಂಡಿತ.
 • SHRIKAR,

  1:42 PM , 24/04/2017

  Thank you very much....For the clarification....
 • Hariprasad,

  7:35 AM , 24/04/2017

  ಆಚಾರ್ಯರಿಗೆ ತುಂಬಾ ಧನ್ಯವಾದಗಳು..
 • Laxmi Nagavi,Mumbai

  10:21 PM, 23/04/2017

  Nice 🙏
 • Achyut P Kulkarni,Belgaum

  2:52 PM , 23/04/2017

  Crystal Clear. 
  
  we are blessed to have you as our GurugaLu.
 • Anil Shenvi,

  1:29 PM , 23/04/2017

  Request to add the date on which this was posted. Since the Monday referred to in this article pertains to which date

  Vishnudasa Nagendracharya

  That redundant paragraph is removed. 
 • Shamala R,Bangalore

  7:42 AM , 23/05/2017

  ಗುರುಗಳೇ... ಆಹಿತ ಪ್ರತಿಮೆಗಳು ಎಂದರೇನು??? ಹ.ಕ.ಸಾ.18/19