Prashnottara - VNP027

ಜೀವನ ಸ್ವಭಾವ ಬದಲಾಗುತ್ತದೆಯೇ?


					 	

ಆಚಾರ್ಯರೆ, ಸ್ವಭಾವತಃ ದುಷ್ಟರಾದ ಜೀವ ಯಾರಾದರೂ ಅತಿಶಯವಾದ ಭಗವದಾರಾಧನೆ ಮಾಡಿ ಆನಂದದ ಮೋಕ್ಷ ಪಡೆದಿರಯವ ಉದಾಹರಣೆಗಳು ಪುರಾಣಗಳಲ್ಲಿ ಇವೆಯಾ? ಜೀವನ ಸ್ವಭಾವದಲ್ಲಿ ಬದಳಾವಣೆ ಬರಲಿಕ್ಕೆ ಸಾಧ್ಯತೆ ಇದೆಯೆ? — ರೂಪಾ ಇಲ್ಲ. ದೇವರು ಜೀವರ ಸ್ವಭಾವವನ್ನು ಎಂದಿಗೂ ಬದಲಿಸುವದಿಲ್ಲ. ದುಷ್ಟರಾದ ಜೀವರು ಎಂದಿಗೂ ಭಗವದಾರಧನೆ ಮಾಡುವದಿಲ್ಲ. ಮಹಾಪಾಪಗಳನ್ನು ಮಾಡಿದ ಸಜ್ಜೀವರು ಅನನ್ಯವಾಗಿ ಭಗವದಾರಾಧನೆ ಮಾಡಿ ಮುಕ್ತಿಯನ್ನು ಪಡೆದ ಸಾವಿರಾರು ದೃಷ್ಟಾಂತಗಳಿವೆ. ಆದರೆ ಒಬ್ಬ ದುರ್ಜೀವನೂ ದೇವರಿಗೆ ಶರಣಾಗುವದಿಲ್ಲ, ದೇವರ ಆರಾಧನೆ ಮಾಡುವದಿಲ್ಲ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
2832 Views

Comments

(You can only view comments here. If you want to write a comment please download the app.)
 • M. Ullas Hegde,Mangalore

  4:16 PM , 16/10/2019

  ಒಂದು ತಾಮಸಜೀವ ಅಂಧತಮಸ್ ಗೆ ಹೊಗುಥದೆ ಯೆಂದರೆ ಅದು ಆ ಜೀವದ ಸಫಲತೆಯಉ ಅಲ್ಲವೋ?
 • Vikram Shenoy,Doha

  10:47 AM, 16/10/2019

  ಮೊಟ್ಟ ಮೊದಲ ಕರ್ಮಕ್ಕೆ ಜೀವ ತಾರತಮ್ಯ ಕಾರಣವೇ ??🙏🙏
 • Jayashree Karunakar,

  1:47 PM , 30/06/2017

  ಗುರುಗಳೆ ನನ್ನ ಪ್ರಶ್ನೆ ಇಂದಿನ ಕಮ೯ಕ್ಕೆ ಹಿಂದಿನ ಕಮ೯ ಮತ್ತು ಸ್ವಭಾವ ಕಾರಣ ಎಂದಿರಲ್ಲ ಅದು ನನ್ನ ಗೂಂದಲ

  Vishnudasa Nagendracharya

  ಮತ್ತೊಮ್ಮೆ ವಿವರಿಸುತ್ತೇನೆ. 
  
  ಇಂದಿನ ನಮ್ಮ ಪ್ರತಿಯೊಂದು ಕರ್ಮಕ್ಕೂ ಹಿಂದಿನ ಕರ್ಮ ಕಾರಣವಿರಲಬೇಕು. ಕರ್ಮ ಎನ್ನುವದು ಸರಪಳಿಯಂತೆ. ಹಿಂದಿನ ಕರ್ಮ ಬೇಕೇ ಬೇಕು. 
  
  ಪರಮಾತ್ಮ ಜೀವರ ಸ್ವಭಾವದ ಅ ಭಿವ್ಯಕ್ತಿಗಾಗಿಯೇ ಜೀವರಿಂದ ಕರ್ಮಗಳನ್ನು ಮಾಡಿಸುತ್ತಾನೆಯಾದ್ದರಿಂದ ನಾವು ಮಾಡುವ ಎಲ್ಲ ಕರ್ಮಗಳಿಗೆ ನಮ್ಮ ಸ್ವಭಾವವೂ ಕಾರಣ. 
  
  ಆದರೆ, ಜೀವನ ಸ್ವಭಾವ ಎನ್ನುವ ವಸ್ತು ಮತ್ತು ಆರಂಭಕಕರ್ಮ ಎನ್ನುವ ಮೊಟ್ಟಮೊದಲ ಕರ್ಮ ಇವರೆಡಕ್ಕೂ ಮೇಲಿನ ನಿಯಮ ಅನ್ವಯಿಸುವದಿಲ್ಲ. ಅವು ಅನಾದಿಯಿಂದ ಇವೆ. ಅಂದರೆ ಮೊದಲ ಕರ್ಮಕ್ಕೆ ಸ್ವಭಾವ ಕಾರಣವಲ್ಲ. ಅದು ಇದೆ, ಅಷ್ಟೆ. ಲಿಂಗದೇಹದಂತೆ. 
  
  ಎರಡನೆಯ ಕರ್ಮದಿಂದ ಆರಂಭಿಸಿ ಸಕಲ ಕರ್ಮಗಳಿಗೂ ಹಿಂದಿನ ಕರ್ಮ ಮತ್ತು ಸ್ವಭಾವ ಎರಡೂ ಕಾರಣ. 
  
  ಒಂದು ದೃಷ್ಟಾಂತ ನೀಡುತ್ತೇನೆ. ವೃಕ್ಷಕ್ಕೆ ಬೀಜ ಬೇಕು. ಬೀಜಕ್ಕೆ ವೃಕ್ಷ ಬೇಕು. ಆದರೆ ಸೃಷ್ಟಿಯ ಆದಿಯಲ್ಲಿ ಬಂದ ಬೀಜಕ್ಕೆ ವೃಕ್ಷ ಬೇಡ. ಅದು ಪ್ರಕೃತಿಯಿಂದ ಹಾಗೆಯೇ ನಿರ್ಮಾಣವಾಗಿ ಬರುತ್ತದೆ. ಹಾಗೆ ಮೊದಲ ಕರ್ಮಕ್ಕೆ ಕಾರಣ ಬೇಡ, ಅದು ಹಾಗೆಯೇ ಅಸ್ತಿತ್ವದಲ್ಲಿದೆ, ದೇವರಂತೆ, ಜೀವರಂತೆ. ಹೇಗೆ ಮೊದಲಿನ ಬೀಜಕ್ಕೆ ವೃಕ್ಷದ ಆವಶ್ಯಕತೆಯಿಲ್ಲವೋ ಹಾಗೆ ಮೊದಲಿನ ಕರ್ಮಕ್ಕೆ ಕಾರಣವಾದ ಮತ್ತೊಂದು ಕರ್ಮ ಬೇಡ. ಇಷ್ಟೇ ವ್ಯತ್ಯಾಸ, ಬೀಜ ಹುಟ್ಟುತ್ತದೆ. ಮೊದಲ ಕರ್ಮ ಹುಟ್ಟಿಲ್ಲ, ಅನಾದಿಯಿಂದ ಅಸ್ತಿತ್ವದಲ್ಲಿದೆ. 
 • Jayashree Karunakar,

  1:26 PM , 30/06/2017

  ಹಾಗದರೆ ಕೆಳಗಿನ ಶ್ರೀಕಾಂತಅವರ ಪ್ರಶ್ನಗೆ ಉತ್ತರವಾಗಿ ಕಮ೯ದ ಆಚರಣೆಗೆ ಜೀವನ ಸ್ವಬಾವವೇ ಕಾರಣ ಎಂದಿರಲ್ಲ ಅದು ಹೇಗಾಗುತ್ತದೆ.

  Vishnudasa Nagendracharya

  ಯಾಕೆ ಅರ್ಥ ಮಾಡಿಕೊಳ್ಳದೇ ಪ್ರಶ್ನೆ ಮಾಡುತ್ತೀರಿ. ಪ್ರಶ್ನೆ ಮಾಡುವ ಮುನ್ನ ದಯವಿಟ್ಟು ಒಂದೆರಡು ಬಾರಿ ಓದಿ ಪ್ರಶ್ನೆ ಮಾಡಿ.. 
  
  ಇಂದಿನ ಕರ್ಮಕ್ಕೆ ಹಿಂದಿನ ಕರ್ಮ ಮತ್ತು ಸ್ವಭಾವ ಕಾರಣ. 
  
  ಸ್ವಭಾವ ಮತ್ತು ಮೂಲಕರ್ಮಕ್ಕೆ ಯಾವ ಕಾರಣವೂ ಇಲ್ಲ. 
  
  ಕರ್ಮವು ಲೇಪವಾಗುವ ವಿಷಯದಲ್ಲಿ ಸ್ವಭಾವದ ಪಾತ್ರ ಏನೂ ಇಲ್ಲ. ಕರ್ಮವನ್ನು ಮಾಡಿದಾಗ ಅದು ಲೇಪವಾಗುತ್ತದೆ. 
 • Srikanth Joshi,Hyderabad

  7:10 AM , 30/06/2017

  Gurugalige Namaskara . Hagadare Devaru namma swabhava mathu hindina karmagala anusaravarigi olleya illave ketta kelasa galannu maadisutana ? Hagadare Jeevada swabhava ve mula karanave ? Naham karta harih karta - arthamadisi endu praratane .

  Vishnudasa Nagendracharya

  ಇವತ್ತಿನ ಕರ್ಮದ ಆಚರಣೆಗೆ ಹಿಂದಿನ ಕರ್ಮ, ಜೀವನ ಸ್ವಭಾವವೇ ಕಾರಣ. 
 • Jayashree Karunakar,

  1:05 PM , 30/06/2017

  ಸ್ವಭಾವದ ಅಸ್ತಿತ್ತ್ವಕ್ಕೆ ಕಾರಣವಿಲ್ಲ ಎಂದಾದರೆ , ಸ್ವಭಾವಕ್ಕೆ ಕಮ೯ದ ಕಮ೯ಲೇಪವನ್ನು ಯಾವ ಲೆಕ್ಕದ ಮೇಲೆ ಭಗವಂತ ನೀಡುತ್ತಾನೆ.

  Vishnudasa Nagendracharya

  ಕರ್ಮವನ್ನು ಮಾಡುವದರಿಂದ ಕರ್ಮದ ಲೇಪವನ್ನು ಪಡೆಯುತ್ತೇವೆ. ಸ್ವಭಾವದ ಪಾತ್ರ ಏನೂ ಇಲ್ಲ.. 
 • Jayashree Karunakar,

  9:48 AM , 30/06/2017

  ದೇವರು ಜೀವರ ಸ್ವಭಾವವನ್ನು ಬದಲಿಸುವುದಿಲ್ಲ ಎಂದಾದರೆ, ಆ ಜೀವರ ಮೂಲ ಸ್ವಭಾವಕ್ಕೆ ಎನು ಕಾರಣ. ಹಿಂದಿನ ಕಮ೯ವೆಂದಾದಲ್ಲಿ, ಅದರ ಮೂಲಕ್ಕೆ ಯಾರು ಪ್ರೇರಣೆ.

  Vishnudasa Nagendracharya

  ಜೀವರ ಸ್ವಭಾವ, ಮೂಲಕರ್ಮ, (ಇದನ್ನು ಆರಂಭಕಕರ್ಮ ಎಂದು ಶ್ರೀ ಸುರೋತ್ತಮತೀರ್ಥಶ್ರೀಪಾದಂಗಳವರು ಕರೆಯುತ್ತಾರೆ)  ಲಿಂಗದೇಹ ಇವುಗಳ ಅಸ್ತಿತ್ವಕ್ಕೆ ಕಾರಣವಿಲ್ಲ. 
  
  ದೇವರ ಅಸ್ತಿತ್ವಕ್ಕೆ ಹೇಗೆ ಕಾರಣವಿಲ್ಲವೋ, ಅಂದರೆ ಯಾರಿಂದರೂ ದೇವರು ಹುಟ್ಟಿ ಬಂದಿಲ್ಲವೋ ಹಾಗೇ ಮೇಲೆ ಹೇಳಿದ ಪದಾರ್ಥಗಳಿಗೂ ಕಾರಣವಿಲ್ಲ. ಅಂದರೆ ಯಾರಿಂದಲೂ ಹುಟ್ಟಿಲ್ಲ. 
  
  ಕಾರಣವಿಲ್ಲವಾದ್ದರಿಂದಲೇ ಅವನ್ನು ಅನಾದಿ ಎನ್ನುತ್ತೇವೆ. 
  
  ಅವು ಅನಾದಿಕಾಲದಿಂದ ಇವೆ. ಇರುವದನ್ನು ಹರಿ ನಿಯಮಿಸುತ್ತಾನೆ ಅಷ್ಟೆ. 
 • Anilkumar B Rao,

  8:12 PM , 14/06/2017

  ಕಹಿ ಸತ್ಯ 😔
 • Anilkumar B Rao,

  6:04 PM , 14/06/2017

  ಈ ಜೀವ ದ್ವಯದ ಹಿನ್ನೆಲೆಯಲ್ಲಿ ನಮ್ಮ ಜೊತೆ ಇರುವ ಜನ ಸ್ವಭಾವತಃ ದುಷ್ಟರೊ ಸಜ್ಜನರೋ ಅಂತ ಹೇಗೆ ತಿಳಿಯುತ್ತದೆ

  Vishnudasa Nagendracharya

  ವಿಷ್ಣುಭಕ್ತಿ, ವಿಷ್ಣುದ್ವೇಷಗಳಿಂದಲೇ ತಿಳಿಯಬೇಕು.
  
  ಸಾಮಾನ್ಯರಿಗೆ ಸಾಧ್ಯವಿಲ್ಲ. 
  
  
 • Pramod Kulkarni,

  10:41 PM, 30/04/2017

  ಆಚಾರ್ಯರಿಗೆ ನಮಸ್ಕಾರಗಳು...
  ಜೀವಸ್ವಭಾವವನ್ನು ಎಂದಾದರು,ಯಾರಾದರು ತಿಳಿಯಲು ಸಾಧ್ಯವೇ?

  Vishnudasa Nagendracharya

  ಸಾಧನೆಯ ಒಂದೊಂದೆ ಮೆಟ್ಟಿಲನ್ನು ಏರುತ್ತ ಹೋದಂತೆ ನಮ್ಮ ಸ್ವಭಾವ ನಮಗೆ ತಿಳಿಯುತ್ತ ಹೋಗುತ್ತದೆ. 
  
  ಶಾಸ್ತ್ರಗಳಿಂದ ವಾಯುದೇವರು ಮಂತಾದ ಚೇತನರ ಸ್ವಭಾವವನ್ನು ತಿಳಿಯುತ್ತೇವೆ. 
 • ಪ್ರಮೋದ,

  9:04 PM , 30/04/2017

  ಋಷಭಾಸುರನೂ ದುಷ್ಟನಾಗಿದ್ದನಲ್ವಾ?
  ಅವನನ್ನು ನರಹರಿ ಸುದರ್ಶನ ಚಕ್ರದಿಂದ ಸಂಹರಿಸಿ, ಮೋಕ್ಷ ಕರುಣಿಸಿದನಲ್ವಾ?

  Vishnudasa Nagendracharya

  ಮೋಕ್ಷ ಕರುಣಿಸಿದ್ದಾನೆ ಎಂದರೆ ಸಜ್ಜೀವನೇ ತಾನೆ? 
  
  ವೃಷಭಾಸುರನಲ್ಲಿ [ಋಷಭಾಸುರ ಅಲ್ಲ] ಜೀವದ್ವಯರು. ಒಬ್ಬ ಸಜ್ಜೀವ ಮತ್ತೊಬ್ಬ ದುರ್ಜೀವ. ಸಜ್ಜೀವ ಭಗವದಾರಾಧನೆ ಮಾಡಿ ಮೋಕ್ಷ ಪಡೆದ. ದುರ್ಜೀವ ವೈಷ್ಣವದ್ವೇಷವನ್ನು ಮಾಡಿ ತಮಸ್ಸನ್ನು ಪಡೆದ. 
  
  ವಿಷ್ಣುದ್ವೇಷ, ವಿಷ್ಣುಭಕ್ತಿ ಎಂಬ ಎರಡು ವಿರುದ್ಧ ಗುಣಗಳು ಅವನಲ್ಲಿ ಕಂಡಿದ್ದರಿಂದಲೇ ಅವನಲ್ಲಿ ಜೀವದ್ವಯರು ಎನ್ನುವದು ಸಿದ್ಧವಾಗುತ್ತದೆ. 
 • ಪ್ರಮೋದ,

  9:02 PM , 30/04/2017

  ಹಾಗಾದರೆ, ವೃಷಭಾಸುರ ನರಸಿಂಹನ ಸಾಲಿಗ್ರಾಮಕ್ಕೆ ತನ್ನ ತಲೆಯನ್ನೇ ಕತ್ತರಿಸಿ, ಪುಷ್ಪವನ್ನಾಗಿ ಪರಿವರ್ತಿಸಿ ಅರ್ಪಿಸುತ್ತಿದ್ದ ಅಲ್ವಾ?
  ಯಾವ ಅಸುರರೂ ಭಗವದಾರಾಧನೆ ಮಾಡುವುದಿಲ್ಲ ಎಂದ ಮೇಲೆ, ಅಸುರನಾದ ಋಷಭಾಸುರ ಹೇಗೆ ಭಗವಂತನನ್ನ ಆರಾಧಿಸಿದ? ದಯವಿಟ್ಟು ತಿಳಿಸಿ
 • Sangeetha prasanna,

  8:05 PM , 30/04/2017

  Gurugalige namaskargalu.vaishakh masad jalkumbh danad bagge. Tilisikodi.dankoduvag jaldalli enannu hakbeku.

  Vishnudasa Nagendracharya

  ಅಕ್ಷಯತೃತೀಯಾದ ಲೇಖನದಲ್ಲಿ [VNA241] ಜಲಕುಂಭದಾನದ ಶ್ಲೋಕ ಶ್ಲೋಕಾರ್ಥ ಎರಡನ್ನೂ ನೀಡಿದ್ದೇನೆ. 
 • Sangeetha prasanna,

  8:05 PM , 30/04/2017

  Gurugalige namaskargalu.vaishakh masad jalkumbh danad bagge. Tilisikodi.dankoduvag jaldalli enannu hakbeku.
 • Sangeetha prasanna,Bangalore

  6:30 PM , 11/05/2017

  ಅನಂತಾನಂತ ಧನ್ಯವಾದಗಳು .🙏🙏
 • Sangeetha prasanna,

  4:54 PM , 11/05/2017

  ಗುರುಗಳಿಗೆ ನಮಸ್ಕಾರಗಳು .ಜೀವನು ಸ್ವಭಾವತಹ ಸಜ್ಜೀವನಾದರು ಕೂಡಾ ಯಾಕಾಗಿ ಪಾಪಗಳನ್ನು ಮಾಡುತ್ತಾನೆ .ದಯವಿಟ್ಟು ತಿಳಿಸಿಕೊಡಿ 🙏🙏

  Vishnudasa Nagendracharya

  ಅವಿದ್ಯೆಯ ಪ್ರಭಾವಕ್ಕೆ ಒಳಗಾಗಿರುವದರಿಂದ. ಅರ್ಥಾತ್ ಸಂಸಾರದಲ್ಲಿರುವದರಿಂದ. 
  
  ನೀರಿನ ಸ್ವಭಾವ ತಣ್ಣಗಿರುವಂತಹದು. ಬೆಂಕಿಯ ಸಂಪರ್ಕಕ್ಕೆ ಬಂದಾಗ ಬಿಸಿಯಾಗುತ್ತದೆ. ಬೆಂಕಿಯ ಸಂಪರ್ಕ ಹೋದಾಗ ಮತ್ತೆ ತಣ್ಣಗಾಗುತ್ತದೆ. ಹಾಗೆ ಸ್ವಭಾವತಃ ಉತ್ತಮನಾದ ಜೀವ ಸಂಸಾರದಲ್ಲಿ ಬಿದ್ದಾಗ ದುಷ್ಟಕರ್ಮಗಳನ್ನು ಮಾಡುತ್ತಾನೆ. ಹಾಗೂ ಸಂಸಾರದಿಂದ ಮುಕ್ತನಾದಾಗ ಎಂದಿಗೂ ಕುಕರ್ಮವನ್ನು ಮಾಡುವದಿಲ್ಲ.