ದುಬೈ ಶ್ರೀಲಂಕಾಗಳಿಗೆ ಹೋದರೆ ತಪ್ಪಿಲ್ಲವೇ?
ಆಚಾರ್ಯರೇ ನಮಸ್ಕಾರಗಳು. ದುಬಾಯ್.ಶ್ರೀಲಂಕಾ ಗೆ ಹೋಗಿಬಂದರೆ ಸಮುದ್ರೋಲಂಘನ ಆಗುವದಿಲ್ಲ ಅದ್ದರಿಂದ ಯಾವ ಪ್ರಾಯಶ್ಛಿತ್ತ ವಿಲ್ಲ ಅಮೇರಿಕಗೆ ಹೂಗಿಬಂದರೆ ಫ್ರಾಯಶ್ಛಿತ್ತ ವುಂಟು ಎಂದುಹೇಳುತ್ತಾರೆ ಯಾವುದು ಸರಿ ತಿಳಿಸಿ ಗುರುಗಳೆ — ಹೆಸರು ಬೇಡ ಹಿಮಾಲಯದಿಂದ ಕನ್ಯಾಕುಮಾರಿಯವರೆಗಿನ ಮತ್ತು ಪೂರ್ವ ಪಶ್ಚಿಮ ಸಮುದ್ರಗಳ ಮಧ್ಯಭಾಗ ಮಾತ್ರ ಕರ್ಮಭೂಮಿ. (ನೇಪಾಳ ಇವತ್ತು ಬೇರೆಯ ದೇಶವಾಗಿರಬಹುದು. ಆದರೆ ಶಾಸ್ತ್ರದ ದೃಷ್ಟಿಯಲ್ಲಿ ಅದೂ ಭಾರತವೇ) ಇದನ್ನು ಹೊರತು ಪಡಿಸಿ ಎಲ್ಲಿಗೂ ಹೋದರೂ ನಮ್ಮ ಬ್ರಾಹ್ಮಣ್ಯವನ್ನೇ ಕಳೆದುಕೊಳ್ಳುತ್ತೇವೆ. ಅರ್ಜುನ ಹೋಗಿದ್ದ, ರಾಮದೇವರು ಹೋಗಿದ್ದರು ಎಂದೆಲ್ಲ ಹೇಳುತ್ತಾರೆ. ಅರ್ಜುನ ರಾಮ ಎಲ್ಲರೂ ಕ್ಷತ್ರಿಯರು. ಸಮುದ್ರೋಲ್ಲಂಘನ ಮಾಡಬಾರದು ಎನ್ನುವದು ಬ್ರಾಹ್ಮಣರಿಗಿರುವ ನಿಷೇಧ. ಕ್ಷತ್ರಿಯರು, ವೈಶ್ಯರು, ಶೂದ್ರರಿಗೆ ನಿಷೇಧವಿಲ್ಲ. ಶ್ರೀಲಂಕ ಬೇಡ. ನೀವು ಮಂಗಳೂರಿನಲ್ಲಿ ಹಡಗನ್ನು ಹತ್ತಿ ದ್ವಾರಕೆಯಲ್ಲಿ ಪೋರಬಂದರಿನಲ್ಲಿ ಇಳಿದರೂ ಬ್ರಾಹ್ಮಣ್ಯ ಹೋಗುತ್ತದೆ. ಸಮುದ್ರಯಾನವೇ ಬ್ರಾಹ್ಮಣನಿಗೆ ನಿಷಿದ್ಧ. ದುಬಾಯಿ ಮುಂತಾದ ಪ್ರದೇಶಗಳು ಭೋಗಭೂಮಿಯೂ ಅಲ್ಲ, ಪಾಪಭೂಮಿ ಎಂದು ಉಪನಿಷತ್ತು ತಿಳಿಸುತ್ತದೆ. ಹೀಗಾಗಿ ಸರ್ವಥಾ ಹೋಗಬಾರದು. ಅನಂತ ಪುಣ್ಯದಿಂದ ದೊರೆತ ಬ್ರಾಹ್ಮಣಜನ್ಮವನ್ನು ಹಾಳು ಮಾಡಿಕೊಳ್ಳಬಾರದು. — ವಿಷ್ಣುದಾಸ ನಾಗೇಂದ್ರಾಚಾರ್ಯ [ಇದರ ಕಾಮೆಂಟಿನ ವಿಭಾಗದಲ್ಲಿ ಅತ್ಯುತ್ತಮ ಪ್ರಶ್ನೆಗಳನ್ನು ಕೇಳಿದ್ದಾರೆ, ತಪ್ಪದೇ ಓದಿ]