Prashnottara - VNP037

ಜಪ/ಪೂಜೆ ಯಾವ ಮಣೆ ಉಪಯೋಗಿಸಬೇಕು?


					 	

ಆಚಾರ್ಯರೇ ಪೂಜೆ / ಜಪ ಮಾಡುವಾಗ ಮಣೆ ಉಪಯೋಗಿಸಬಹುದೇ? ಯಾವ ಮರದ ಮಣೆ ಉಪಯೋಗಿಸಬೇಕು? — ಕೆ. ವಿ. ಸುರೇಶ ಕೇವಲ ನೆಲದ ಮೇಲೆ ಕುಳಿತು ಯಾವತ್ತೂ ಜಪ ಮಾಡಬಾರದು. ಮಣೆಯ ಮೇಲೆ, ದರ್ಭಾಸನದ ಮೇಲೆ, ಅಥವಾ ಕೃಷ್ಣಾಜಿನ-ವ್ಯಾಘ್ರಾಜಿನಗಳ ಮೇಲೆ ಕುಳಿತು ಜಪ ಮಾಡಬೇಕು. ಮಣೆಯ ಮೇಲೆ ಕೃಷ್ಣಾಜಿನಾದಿಗಳನ್ನು ಹಾಕಿಕೊಂಡು ಜಪ ಮಾಡುವದು ಇನ್ನೂ ಶ್ರೇಷ್ಠ. ದೇವದಾರುವಿನ (Teak) ಮಣೆ ಶ್ರೇಷ್ಠ. ನೂರಾರು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಹೀಗಾಗಿ ನೀವು ಮಾಡಿಸಿಟ್ಟರೆ ನಿಮ್ಮ ಮೊಮ್ಮಕ್ಕಳು ಮರಿಮಕ್ಕಳು ಸಹ ಉಪಯೋಗಿಸಬಹುದು. ಹಲಸು, ಮಾವು, ಬೇವು ಮುಂತಾದ ಯಾವುದೇ ವಿಹಿತ ಮರದ ಹಲಗೆಗಳನ್ನೂ ಬಳಸಬಹುದು. ಮಣೆಯನ್ನು ಮಾಡಿಸಬೇಕಾದರೆ, ತುಂಬ ಸಮಯ ಕುಳಿತುಕೊಳ್ಳಲು ಅನುಕೂಲವಾಗುವಂತೆ ಮಾಡಿಸಿಕೊಳ್ಳಬೇಕು. ಕಾಲ್ಗಳು ಮಣೆಯಿಂದ ಕೆಳಗೆ ಬರುವಂತಿದ್ದರೆ, ಬಹಳ ಹೊತ್ತು ಕೂಡಲಾಗುವದಿಲ್ಲ. ಕಾಲ್ಗಳಿಗೆ ಮಣೆ ಒತ್ತುವದರಿಂದ ನೋವಾಗುತ್ತದೆ. ಹೀಗಾಗಿ ಅನುಕೂಲವಾಗಿ ಕುಳಿತುಕೊಳ್ಳುವಂತೆ ಮಣೆ ಇರಬೇಕು. ನಾವು ಕೂಡುವ ಆಸನ(ಮಣೆ) ಮತ್ತು ಕುಳಿತುಕೊಳ್ಳುವ ಆಸನ (ಪದ್ಮಾಸನ, ಸ್ವಸ್ತಿಕಾಸನ) ಮುಂತಾದವು ನಮ್ಮ ದೇಹಕ್ಕೆ ಹಿತವಾಗಿರಬೇಕು ಎನ್ನುವದು ಶಾಸ್ತ್ರ. ಆಸನವೇ ಸರಿಯಿಲ್ಲದಾಗ ಮನಸ್ಸನ್ನು ಪೂಜೆ, ಜಪ, ಧ್ಯಾನಗಳಲ್ಲಿ ಕೇಂದ್ರೀಕರಿಸಲು ಸಾಧ್ಯವಾಗುವದಿಲ್ಲ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
3402 Views

Comments

(You can only view comments here. If you want to write a comment please download the app.)
 • ASB,...

  10:47 PM, 23/05/2022

  ಹರೇ ಶ್ರೀನಿವಾಸ 🙏🙏🙏
  ನಮಸ್ಕಾರಗಳೂಂದಿಗೆ , ದೇವರ ಮಂಟಪವನ್ನು ಮರದ ಪ್ಲೌಡದಿಂದ ಮಾಡಿಸಬಹುದೆ ? 
  ಆ ಮಂಟಪ ಅಥವಾ ಆಸನದಲ್ಲಿ ದೇವರ ಪ್ರತಿಮೆಯ ಜೊತೆ ಗ್ರಂಥಗಳನ್ನು ಇಟ್ಟು ಪೂಜಿಸಬಹುದೆ ? ದಯಮಾಡಿ ಮಾರ್ಗದರ್ಶನ ನೀಡಬೇಕೆಂದು ವಿನಂತಿ
 • ASB,...

  10:49 PM, 30/04/2022

  ಆಚಾರ್ಯರಿಗೆ ಅನಂತ ನಮಸ್ಕಾರಗಳು 🙏🙏🙏,
  ದೇವರ ಪೂಜಾಗೃಹದಲ್ಲಿ ದೇವತೆಯರನ್ನು ಸರಿಯಾಗಿ ,ತಾರತಮ್ಯದ ಪ್ರಕಾರದಲ್ಲಿ ಹೂಂದಿಸಿ ಪೂಜಿಸುವುದು ಹೇಗೆ ??
  
  ಜೀವನದಲ್ಲಿನ ಸಮಸ್ಯೆಗಳಿಗೆ ವಾಸ್ತುದೋಷಗಳು ಕಾರಣವೆ??
  ವಾಸ್ತುಶಾಸ್ತು ಶಾಸ್ತ್ರದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿರೆಂದು ಕಳಕಳಿಯ ವಿನಂತಿ 🙏🙏🙏🙇‍♂️🙇‍♂️🙇‍♂️

  Vishnudasa Nagendracharya

  ಶ್ರೀ ಲಕ್ಷ್ಮೀನಾರಾಯಣರು
  
  ಹನುಮಂತದೇವರು,
  
  ಸರಸ್ವತೀದೇವಿಯರು
  
  ರುದ್ರದೇವರು ಪಾರ್ವತೀದೇವಿ
  
  ಗಣಪತಿ
  
  ಗುರುಗಳು
  
  ಈ ಕ್ರಮದಲ್ಲಿ ಪೂಜಿಸಿ. 
  
 • Madhvwshachar,Bangalore

  4:14 PM , 09/05/2017

  modalige aasanada avashyakathe enu Acharyare?

  Vishnudasa Nagendracharya

  ದೇವರನ್ನು ಧ್ಯಾನಿಸಲು ಮನಸ್ಸು ಸ್ಥಿರವಾಗಿರಬೇಕು. 
  
  ಮನಸ್ಸು ಸ್ಥಿರವಾಗಲು ದೇಹ ಸ್ಥಿರವಾಗಿರಬೇಕು. 
  
  ದೇಹ ಸ್ಥಿರವಾಗಲು ಆಸನವೇ ಸಾಧನ. 
  
  
 • Ramesh,Bangalore

  11:39 PM, 07/05/2017

  ಆಚಾರ್ಯರಿಗೆ ನನ್ನ ನಮಸ್ಕಾರಗಳು, ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ರಚಿಸಿದ ದ್ವಾದಶ ಸ್ತೋತ್ರದ ಮಹತ್ವವನ್ನು ತಿಳಿಸಬೇಕು ಎಂದು ವಿನಂತಿಸುತ್ತೇನೆ.
  
  ರಮೇಶ, ಬೆಂಗಳೂರು, ಸಂಜಯನಗರ

  Vishnudasa Nagendracharya

  ಈಗ ಕೈಗೆತ್ತಿಕೊಂಡಿರುವ ಕಾರ್ಯಗಳು ಮುಗಿದಂತೆ ಶ್ರೀಮದ್ ದ್ವಾದಶಸ್ತೋತ್ರದ ಅನುವಾದದ ಸೌಭಾಗ್ಯದ ಕಾರ್ಯವನ್ನು ಆರಂಭಿಸುತ್ತೇನೆ. 
 • Prasannasimha Rao,

  8:41 PM , 07/05/2017

  Aacharyare Navu Guruvara RayarT astottara helutteve. Ade reethi Bramhanya theerthara pancharathna maalika stotra heluvudakke yava Dina shresta.

  Vishnudasa Nagendracharya

  ತಿಥಿಗಳಲ್ಲಿ ದಶಮೀ ಏಕಾದಶೀ ದ್ವಾದಶಿಗಳು ಶ್ರೇಷ್ಠ. 
  
  ಶ್ರೀ ಬ್ರಹ್ಮಣ್ಯತೀರ್ಥಗುರುರಾಜರು ಸೂರ್ಯನ ಅವತಾರವಾದ ಕಾರಣಕ್ಕೆ ಭಾನುವಾರ ಪಠಿಸುವದು ಶ್ರೇಯಸ್ಕರ ಮತ್ತು ಮಹಾಫಲಪ್ರದ. 
 • Amanda Teertha,Chitra Durga

  9:46 AM , 07/05/2017

  Thank you very much for the information
 • ಪ್ರಮೋದ,ಬೆಂಗಳೂರು

  9:06 AM , 07/05/2017

  ಬಹಳ ಸಮರ್ಪಕವಾದ ಉತ್ತರ
  ನಮೋ ನಮಃ🙏🙏🙏
 • Pranesh ಪ್ರಾಣೇಶ,

  11:18 PM, 11/05/2017

  ಆಚಾರ್ಯ ನೀವು ನಮಗೆ ನಿತ್ಯಕೊಡುತ್ತಿರುವ ವಿದ್ಯೆ ಆದರ ಋಣ ನಿತ್ಯ ಹೆಚ್ಚಾಗುತ್ತಿದೆ🙏🙏🙏
 • Pranesh ಪ್ರಾಣೇಶ,

  11:03 PM, 09/05/2017

  ಆಚಾರ್ಯ ಸ್ವಸ್ತಿಕಾಸನ ಶಾಸ್ತ್ರದಲ್ಲಿ ಉಲ್ಲೇಖ ಇಲ್ಲವೆಂದು ಕೇಳಿದ್ದೇನೆ
  ನಿಮಗೆ ತಿಳಿದಂತೆ ಉಲ್ಲೇಖ ಇದೆಯಾ

  Vishnudasa Nagendracharya

  ಸ್ವಸ್ತಿಕಾಸನದ ಉಲ್ಲೇಖ ಅವಶ್ಯವಾಗಿ ಶಾಸ್ತ್ರದಲ್ಲಿದೆ. ಶ್ರೀಮಟ್ಟೀಕಾಕೃತ್ಪಾದರು ಉಲ್ಲೇಖಿಸಿದ ಎರಡು ಆಸನಗಳು - ಪದ್ಮ ಮತ್ತು ಸ್ವಸ್ತಿಕ. 
  
  ತಂತ್ರಸಾರಸಂಗ್ರಹದ ವ್ಯಾಖ್ಯಾನವಾದ ತತ್ವಕಣಿಕಾದಲ್ಲಿ ಶ್ರೀ ಶೇಷಚಂದ್ರಿಕಾಚಾರ್ಯರು ಸ್ವಸ್ತಿಕಾಸನದ ಉಲ್ಲೇಖ ಮಾಡಿ ಲಕ್ಷಣಗಳನ್ನು ತಿಳಿಸಿದ್ದಾರೆ. 
  
  ಪ್ರಥಮಂ ಸ್ವಸ್ತಿಕಂ ಪಾದತಲಯೋರುಭಯೋರಪಿ ।
  ಪೂರ್ವೋತ್ತರೇ ಜಾನುನೀ ದ್ವೇ ಕೃತ್ವಾಸನಮುದೀರಿತಮ್ ।।
  
  ಸೀವನ್ಯಾ ದಕ್ಷಿಣೇ ಪಾರ್ಶ್ವೇ ಸವ್ಯಂ ಸವ್ಯೇ ತು ದಕ್ಷಿಣಮ್ ।
  ಗುಲ್ಫಂ ಕೃತ್ವಾಸನಂ ತಚ್ಚ ಸ್ವಸ್ತಿಕಂ ಕಥ್ಯತೇ ಬುಧೈಃ ।।
  
  ಎಂದು.