Prashnottara - VNP039

ಶ್ರೀ ನರಸಿಂಹ ಸುಪ್ರಭಾತ ಪಂಚಕಮ್ — 1


					 	

ಈ ಬಾರಿಯ ನರಸಿಂಹ ಜಯಂತಿಯನ್ನು ಒಂದು ನರಸಿಂಹ ಸ್ತೋತ್ರವನ್ನು ಶ್ರೀಹರಿಗೆ ಸಮರ್ಪಿಸುವದರೊಂದಿಗೆ ಆಚರಿಸೋಣ. ಶ್ರೀ ಹರಿ ಗುರುಗಳಿಗೆ ಪ್ರೀತಿಯಾಗುತ್ತದೆ. ಶ್ರೀ ಚಿಂತಲವಾಡಿ ನರಸಿಂಹನನ್ನು ಮನೆದೇವರಾಗಿ ಪಡೆದ ಕುಲದಲ್ಲಿ ಶ್ರೀ ಅಹೋಬಿಲ ನರಸಿಂಹನ ಅನುಗ್ರಹದಿಂದ ಹುಟ್ಟಿ ಶ್ರೀ ನಾಮಗಿರಿ ನರಸಿಂಹನ ವಿಶಿಷ್ಟ ಸೇವೆಯನ್ನು ಮಾಡಿ ಮೂರು ಬಾರಿ ಆ ಸ್ವಾಮಿಯ ದರ್ಶನವನ್ನು ಪಡೆದು ಶ್ರೀಮದ್ ವ್ಯಾಸರಾಜಸಂಸ್ಥಾನದ ಅಧಿಪತಿಗಳಾಗಿ ಶ್ರೀಮಟ್ಟೀಕಾಕೃತ್ಪಾದರು ಮತ್ತು ಶ್ರೀ ಭಾಷ್ಯದೀಪಿಕಾಚಾರ್ಯರು ಅರ್ಚಿಸಿದ ಎರಡು ಲಕ್ಷ್ಮೀ ನರಸಿಂಹ ದೇವರ ಪ್ರತಿಮೆಗಳನ್ನು ಪೂಜೆ ಮಾಡಿ, ಹೀಗೆ ಒಟ್ಟು ಐದು ನರಸಿಂಹ ರೂಪಗಳ ವಿಶಿಷ್ಟ ಆರಾಧಕರಾದ ಶ್ರೀಮದ್ ವಿದ್ಯಾರತ್ನಾಕರತೀರ್ಥಶ್ರೀಪಾದಂಗಳವರು ರಚನೆ ಮಾಡಿರುವ ಶ್ರೀ ನರಸಿಂಹ ಸುಪ್ರಭಾತ ಪಂಚಕ. ಇದನ್ನು ಸಮಗ್ರ ಕಲಿತು ಶ್ರೀ ನರಸಿಂಹ ಜಯಂತಿಯ ದಿವಸ ಶ್ರೀ ನರಸಿಂಹ ದೇವರಿಗೆ ಸಮರ್ಪಿಸಿ. ವಿಶ್ವನಂದಿನಿಯ ಸ್ತೋತ್ರಪಾಠ ಗಣಪತಿಯ ಸ್ತೋತ್ರದೊಂದಿಗೆ ಆರಂಭವಾಗಿ, ನರಸಿಂಹಸ್ತೋತ್ರದೊಂದಿಗೆ ಎರಡನೆಯ ಹೆಜ್ಜೆಯನ್ನಿಡುತ್ತಿದೆ. ಸಂಪೂರ್ಣ ಸಂಸ್ಕೃತದ ಕಲಿಕೆಗೆ ಇದು ಬುನಾದಿ. ಶ್ರೀಹರಿ ವಾಯು ದೇವತಾ ಗುರುಗಳು ನಿರ್ವಿಘ್ನವಾಗಿ ನಡೆಸಲಿ ಎಂದು ಪ್ರಾರ್ಥಿಸುತ್ತ ಸ್ತೋತ್ರವನ್ನು ಕಲಿಯಲು ಆರಂಭಿಸಿ. ಈ ಸ್ತೋತ್ರವನ್ನು ಹೆಣ್ಣುಮಕ್ಕಳೂ ಕಲಿತು ಪಠಿಸಬಹುದು. ವಿಶ್ವನಂದಿನಿಯ ಎಲ್ಲ ಬಾಂಧವರಲ್ಲಿಯೂ ದೇವವಾಣಿ ನಾಲಿಗೆಯಲ್ಲಿ ನೆಲೆಗೊಳ್ಳಲಿ ಎಂಬ ಹಾರೈಕೆಯೊಂದಿಗೆ — ವಿಷ್ಣುದಾಸ ನಾಗೇಂದ್ರಾಚಾರ್ಯ


Watch Video Share to facebook View Comments
3552 Views

Comments

(You can only view comments here. If you want to write a comment please download the app.)
 • Sowmya,Bangalore

  3:50 PM , 22/09/2021

  🙏🙏🙏
 • Manjunath,Bangalore

  6:12 PM , 11/05/2017

  ಶ್ರೀ ಗುರುಭ್ಯೋ ನಮಃ
  
  ಆಚಾರ್ಯರೆ ನೀವು ಸಮಗ್ರ ಮಾಧ್ವ ಸಮಾಜದ ಮೇಲೆ ಹಿಂದು ಧರ್ಮದ ಮೇಲೆ ಮಾಡಿರುವ ಕರುಣೆ ಅನಂತ ಅನಂತವಾದದ್ದು
  
  ಇಂತಹ ಕಾಲದಲ್ಲು ನಿಮ್ಮಂತಹ ನಿಸ್ವಾರ್ಥ ಸೇವೆ ಮಾಡುವವರನ್ನು ನೋಡಿ ನಿಜಕ್ಕೂ ಬಹಳ ಸಂತಸವಾಗುತ್ತಿದೆ
  ಅಂದು ಶ್ರೀಮದಾಚಾರ್ಯರು ಅಂಧಕಾರದಲ್ಲಿ ಮುಳುಗಿದ್ದ ಸಜ್ಜನರನ್ನು ಬೆಳಜಿನೆಡೆಗೆ ಕರೆತರಲು ಅವತರಿಸಿದರು
  
  ಇಂದು ಸಂಸ್ಕೃತವನ್ನೆ ಮರೆತ ಜನರಿಗೆ ಮತ್ತೆ ಅದರ ಮಹಾತ್ಮ್ಯವನ್ನು ತಿಳಿಸಿ ಅದನ್ನು ಕಲಿಸುವ ಜವಾಬ್ದಾರಿಯನ್ನು ಶ್ರೀಮದಾಚಾರ್ಯರು ನಿಮಗೆ ಕೊಟ್ಟು ಕಳುಹಿಸಿದ್ದಾರೇನೋ ಎಂಬುದು ನಮ್ಮ ಭಾವನೆ
  
  
  ನೀವು ಕಲಿಸುವ ಸ್ತೋತ್ರಗಳ ಜೊತೆಗೆ ಪುರುಷ ಸೂಕ್ತ ನಾರಾಯಣ ಸೂಕ್ತಗಳನ್ನು ಕಲಿಸಿಕೊಡಿ 
  ನೀವು ಕಲಿಸುವ ರೀತಿ ಬಹಳ ಬೇಗ ಕಲಿಯಲು ಉಪಕಾರವಾಗುತ್ತಿದೆ
  ದಯವಿಟ್ಟು ಇದನ್ನು ಹೀಗೆ ಮುಂದುವರೆಸಿ
  🙏🙏🙏🙏🙏🙏🙏🙏

  Vishnudasa Nagendracharya

  ಕರುಣೆ, ಅನುಗ್ರಹಗಳೆಂಬ ದೊಡ್ಡ ಮಾತು ಖಂಡಿತ ಬೇಡ. 
  
  ಶ್ರೀಮದಾಚಾರ್ಯರ ಪಾದಧೂಳಿಯಲ್ಲ ಅವರ ದಾಸಾನುದಾಸರ ದಾಸರ ಧೂಳಿಗೂ ಸಮನಲ್ಲ ನಾನು. 
  
  ಆ ಎಲ್ಲ ಮಹಾಗುರುಗಳು ನನ್ನ ಮೇಲೆ ಪರಮಾನುಗ್ರಹ ಮಾಡಿ ನನಗೆ ನೀಡಿರುವ ಕರ್ತವ್ಯವನ್ನು ನಾನು ಮಾಡುತ್ತಿದ್ದೇನೆ.