Prashnottara - VNP044

ಶೂದ್ರರು ಏಕಾದಶಿ ಆಚರಿಸುವ ಕ್ರಮ


					 	

ಆಚಾರ್ಯರಿಗೆ ನನ್ನ ನಮನಗಳು.ಆಚಾರ್ಯರೆ ನಾನು ಕುರುಬ ನನಗೆ ಏಕಾದಶಿ ಮಾಡುವ ಕ್ರಮವನ್ನು ದಯಮಾಡಿ ತಿಳಿಸಿ. — ರಾಜೇಶ್, ಮೈಸೂರು. ತುಂಬ ಸಂತೋಷ. ಶ್ರೀಮದಾಚಾರ್ಯರ ಕರುಣೆ ನಿಮ್ಮ ಮೇಲಿರಲಿ. ಮೊದಲು ದಶಮಿ, ಏಕಾದಶೀ, ದ್ವಾದಶಿಗಳು ಎಂದು ಎನ್ನುವದನ್ನು ಪಂಚಾಂಗಗಳಿಂದ, ಬ್ರಾಹ್ಮಣರಿಂದ ತಿಳಿದುಕೊಳ್ಳಿ. ದಶಮಿಯ ದಿವಸ ಬೆಳಿಗ್ಗೆ ಸ್ನಾನವಾದ ಬಳಿಕ ದೇವರಿಗೆ ನಮಸ್ಕಾರ ಮಾಡಿ ದಶಮೀ, ಏಕಾದಶೀ, ದ್ವಾದಶೀ ವ್ರತಗಳನ್ನು ಆಚರಿಸುತ್ತೇನೆ, ನಿರ್ವಿಘ್ನವಾಗಿ ಆಗುವಂತೆ ಅನುಗ್ರಹಿಸು ಎಂದು ದೇವರನ್ನು ಪ್ರಾರ್ಥಿಸಿ. ದಶಮಿಯ ದಿವಸ ಮಧ್ಯಾಹ್ನ ಮಾತ್ರ ಊಟ ಮಾಡಬೇಕು. ದಶಮೀ ರಾತ್ರಿ ಅನ್ನದ ಪದಾರ್ಥಗಳನ್ನು ತಿನ್ನಬಾರದು. ಚಪಾತಿ ಉಪ್ಪಿಟ್ಟು ರೀತಿಯ ತಿಂಡಿಗಳನ್ನು ಸ್ವೀಕರಿಸಬಹುದು. ಕೇವಲ ಹಣ್ಣು ಹಾಲು ಸ್ವೀಕರಿಸುವದು ಉತ್ತಮ ಪಕ್ಷ. ಏಕಾದಶಿಯ ದಿವಸ ಬೆಳಿಗ್ಗೆ ಸ್ನಾನವಾದ ಬಳಿಕ ದೇವರಿಗೆ ನಮಸ್ಕಾರ ಮಾಡಿ “ನಿನ್ನ ಪ್ರೀತಿಯನ್ನು ಪಡೆಯಲು, ನಿನ್ನ ಆಜ್ಞೆಯಂತೆ ಇಂದು ಉಪವಾಸ ಮಾಡುತ್ತೇನೆ, ಅನುಗ್ರಹಿಸು” ಎಂದು ಪ್ರಾರ್ಥಿಸಿ, “ದೇವರೇ ನನ್ನಲ್ಲಿ ನಿಂತು ಮಾಡಿಸುತ್ತಿದ್ದಾನೆ” ಎಂದು ಚಿಂತಿಸಿತ್ತ ಇಡಿಯ ದಿವಸ ಉಪವಾಸ ಮಾಡಬೇಕು. ಹತ್ತಿರದಲ್ಲಿ ಬ್ರಾಹ್ಮಣರ ಮನೆಯಿದ್ದರೆ, ಅಥವಾ ಮಠವಿದ್ದರೆ ಹೋಗಿ ತೀರ್ಥವನ್ನು ಸ್ವೀಕರಿಸಬೇಕು. ಹಸಿವು, ಬಾಯಾರಿಕೆ ಜಾಸ್ತಿಯಾದಾಗ ಶ್ರೀಹರಿಯನ್ನು ವಿಶೇಷವಾಗಿ ನೆನೆದು “ಸ್ವಾಮಿ, ನಿನಗಾಗಿ ಉಪವಾಸವಿದ್ದೇನೆ, ಪ್ರೀತನಾಗು, ನಿನ್ನ ಚರಣಗಳಲ್ಲಿ ಭಕ್ತಿಯನ್ನು ನೀಡು, ನಿನ್ನ ಕುರಿತ ತಿಳುವಳಿಕೆಯನ್ನು ಅನುಗ್ರಹಿಸು, ಲೌಕಿಕ ವಿಷಯಗಳಲ್ಲಿ ಆಸಕ್ತಿಯನ್ನು ತಗ್ಗಿಸು” ಎಂದು ಪ್ರಾರ್ಥಿಸಬೇಕು. ದ್ವಾದಶಿಯ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಎದ್ದು ಸ್ನಾನ ಮುಗಿಸಿ, ದೇವರಿಗೆ ನಮಸ್ಕರಿಸಿ, ಸೂರ್ಯೋದಯವಾಗುತ್ತಿದ್ದಂತೆ ಹತ್ತಿರದ ಬ್ರಾಹ್ಮಣರ ಮನೆಯಲ್ಲಿ ಅಥವಾ ಮಠದಲ್ಲಿ ತೀರ್ಥವನ್ನು ಸ್ವೀಕರಿಸಿ ಊಟವನ್ನು ಮಾಡಬೇಕು. ಆ ನಂತರ ದೇವರಿಗೆ ನಮಸ್ಕರಿಸಿ, “ಶ್ರೀಹರೇ, ನೀನೇ ನನ್ನಲ್ಲಿ ನಿಂತು ಮಾಡಿಸಿದ ಏಕಾದಶಿಯ ಉಪವಾಸ ಮತ್ತು ದ್ವಾದಶಿಯ ಪಾರಣೆಯಿಂದ ಪ್ರೀತನಾಗು” ಎಂದು ಸಮರ್ಪಿಸಬೇಕು. ದ್ವಾದಶಿಯ ರಾತ್ರಿಯೂ ದಶಮಿಯ ರಾತ್ರಿಯಂತೆ ನಿಯಮ. ಅನ್ನಾದಿಗಳನ್ನು ಸ್ವೀಕರಿಸಬಾರದು. ತಿಂಡಿ, ಫಲಾಹಾರಗಳನ್ನು ಸ್ವೀಕರಿಸಬಹುದು. ಆ ನಂತರ ದೇವರಿಗೆ ನಮಸ್ಕರಿಸಿ, ಮೂರು ದಿನಗಳ ವ್ರತವನ್ನು ಸಮರ್ಪಿಸಬೇಕು. ಸಂಕಲ್ಪ ಸಮರ್ಪಣೆಗಳಲ್ಲಿ ಬ್ರಾಹ್ಮಣರು ಮಂತ್ರಗಳನ್ನು ಹೇಳಿಯೇ ಕರ್ಮಾಚರಣೆ ಮಾಡಬೇಕು. ಶೂದ್ರರು ಮಂತ್ರವಿಲ್ಲದೆಯೇ ಮಾಡಬೇಕು. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
4462 Views

Comments

(You can only view comments here. If you want to write a comment please download the app.)
 • Asha Kotian,Mumbai

  3:56 PM , 26/07/2020

  Namaste Guruji. Guruji nanobba shudra. Guruji arishad vargadinda gelluva upaya tilissi pls. mattu makkalanna susanskrutarannagi hege belesabeku.. Pls suggest
 • Sumanyu Jayateertha Katageri,Vijayapur

  7:59 PM , 18/04/2020

  ನಮಸ್ಕಾರ ಗುರುಗಳೇ, 
  
  ನನ್ನಲ್ಲಿ ಏಕಾದಶಿಯ ಕುರಿತು ಒಂದೆರಡು ಪ್ರಶ್ನೆಗಳಿವೆ. ಈ ಸಲ ಪೂರ್ಣ ವ್ರತ ಮಾಡಬೇಕೆಂಬ ಅಲೋಚನೆ ಭಗವಂತನ ಕೃಪೆಯಿಂದ ಒದಗಿಬಂದಿದೆ. ಅಜ್ಞಾನದಿಂದ ಆಗುವ ಯಾವುದೋ ಒಂದು ತಪ್ಪಿನಿಂದ ಅನರ್ಥವಾಗಬಾರದು ಎಂಬ ಕಾಳಜಿಯಿಂದ ಈ ಪ್ರಶ್ನೆಯನ್ನು ಕೇಳಿದ್ದೇನೆ.‌ ದಯವಿಟ್ಟ ತಿಳಿಸಿ. 
  
  ೧) ದಶಮಿ ಮತ್ತು ದ್ವಾದಶಿಗಳಂದು ಒಂದು ಹೊತ್ತು ಊಟ ಮಾಡಿ ಇನ್ನೊಂದು ಹೊತ್ತು ಉಪವಾಸವಿದ್ದರೆ ಏಕಾದಶಿ ಪರಿಪೂರ್ಣವಾಗುತ್ತದೆ ಎಂದು ತಿಳಿಸಿದ್ದಿರಿ. ಆ ಉಪವಾಸದ ಹೊತ್ತಿನಲ್ಲಿ ಫಲಾಹಾರಗಳನ್ನು ಬಿಟ್ಟು ಕೇವಲ ನೀರನ್ನು ಕುಡಿದರೆ ವ್ರತ ಪರಿಪೂರ್ಣವಾಗುತ್ತದೆಯೇ?
  
  ೨) ಏಕಾದಶಿಯ ರಾತ್ರಿ ಜಾಗರಣೆ ಮಾಡಿದಾಗ ನಾವು ಆ ಸಮಯವನ್ನು ಯಾವ ರೀತಿಯಿಂದ ದೇವರ ಸೇವೆಯಲ್ಲಿ ವಿನಿಯೋಗಿಸಬಹುದು? 
  
  ೩) ಏಕಾದಶಿಯ ದಿನ ಸಂಜೆ ಅಥವಾ ರಾತ್ರಿಯಲ್ಲಿ ಜಪ ಮತ್ತು ಪಾರಾಯಣಗಳನ್ನು ಮಾಡುವುದಕ್ಕಾಗಿ ಸ್ನಾನ ಮಾಡಬಹುದೇ?

  Vishnudasa Nagendracharya

  1. ದಶಮಿ ದ್ವಾದಶಿಗಳ ರಾತ್ರಿಯಲ್ಲಿ ಅನ್ನ, ಹುಳಿ ಮುಂತಾದವನ್ನು ಸರ್ವಥಾ ಉಣ್ಣಬಾರದು. ಅಶಕ್ತರು ಉಪ್ಪಿಟ್ಟು ಚಪಾತಿ ಅವಲಕ್ಕಿ ಮುಂತಾದವನ್ನು ತೆಗೆದುಕೊಳ್ಳಬಹುದು. ಕೇವಲ ಹಣ್ಣು ಹಾಲು ಮಜ್ಜಿಗೆ ತೆಗೆದುಕೊಳ್ಳುವದು ಅದಕ್ಕಿಂತ ಶ್ರೇಷ್ಠ. ಕೇವಲ ನೀರನ್ನು ಕುಡಿದಿರುವದು ಅದಕ್ಕಿಂತಲೂ ಉತ್ತಮ. ದಶಮಿ, ದ್ವಾದಶಿಗಳು ನೀರನ್ನು ಕುಡಿದರೆ ಸರ್ವಥಾ ವ್ರತಭಂಗವಾಗುವದಿಲ್ಲ. 
  
  ೨. ಪ್ರವಚನಗಳನ್ನು ಕೇಳುವದು, ದೇವರ ಹಾಡುಗಳನ್ನು ಹಾಡುವದು, ಕೇಳುವದು, ದೇವರ ಕುರಿತು ಬರೆಯುವದು ಇತ್ಯಾದಿ ಸತ್ಕರ್ಮಗಳಿಂದ ಜಾಗರಣೆಯನ್ನು ಮಾಡಬೇಕು. 
  
  ೩. ಸೂರ್ಯಾಸ್ತವಾದ ಮೇಲೆ ಸ್ನಾನ ಮಾಡತಕ್ಕದ್ದಲ್ಲ. ಏಕಾದಶಿಯಂದು ಬೆಳಿಗ್ಗೆ ಮಧ್ಯಾಹ್ನ ಸಂಜೆ (ಸೂರ್ಯಾಸ್ತದ ಒಳಗೆ) ಅವಶ್ಯವಾಗಿ ಮೂರು ಬಾರಿಯೂ ಸ್ನಾನ ಮಾಡಬಹುದು. 
  
 • Meenakshi,Mangalore

  11:02 PM, 16/01/2019

  Today solve my doubts for dashami Acharane and Ekadashi. You are giving suggestions for all varnas. Thank you.
 • Krishna,Bellary

  11:26 AM, 12/08/2018

  Acharayare Namaskara galu...😃🙏🙏
  Can we take Butter Milk on ekadashi . Instead of milk
 • Gopalakrishna,

  10:18 AM, 31/10/2017

  Dhanyosmi gurugale
 • Sathyanarayana R B,

  9:13 AM , 31/10/2017

  Excellent
 • Mukund,

  2:02 PM , 12/05/2017

  You are inspiration to others
 • Sangeetha prasanna,

  4:44 PM , 11/05/2017

  ಪ್ರತಿಯೊಬ್ಬರಿಗು ದಾರಿದೀಪವಾಗಿರುವ ಗುರುಗಳಿಗೆ ನಮ್ಮ ಅನಂತಾನಂತ ನಮಸ್ಕಾರಗಳು 🙏🙏
 • Ashwathnarayan deshpande,

  7:45 PM , 10/05/2017

  ಮಧುಮೇಹಿಗಳು ಏಕಾದಶಿ ವ್ರತವನ್ನು ಹೇಗೆ ಅಚೇರಿಸಬೇಕು ದಯಮಾಡಿ ತಿಳಿಸಿ

  Vishnudasa Nagendracharya

  ಏಕಾದಶಿಯಲ್ಲಿ ವಿನಾಯಿತಿ ಇರುವದು ಅಶಕ್ತರಿಗೆ ಮತ್ತು ರೋಗಿಗಳಿಗೆ. 
  
  ಅಶಕ್ತರು ಎಂದರೆ ಎಂಟು ವರ್ಷದ ಒಳಗಿನ ಮಕ್ಕಳು, ಎಂಭತ್ತು ವರ್ಷದ ನಂತರದ ವೃದ್ಧರು, ಬಸುರಿಯರು ಮತ್ತು ಬಾಣಂತಿಯರು. 
  
  ಉಪವಾಸ ಮಾಡಲು ಸಾಧ್ಯವಿಲ್ಲದ ಖಾಯಿಲೆ ಇರುವವರು ರೋಗಿಗಳು. 
  
  ಇಬ್ಬರಿಗೂ ಈ ರೀತಿ ನಿಯಮಗಳು - 
  
  ೧. ಅನ್ನ ಮುಂತಾದ ಯಾವುದೇ ಬೇಯಿಸಿದ ಪದಾರ್ಥಗಳನ್ನು ಸರ್ವಥಾ ತಿನ್ನಬಾರದು. 
  
  ೨. ನೀರು ಕುಡಿದು ಇರಲು ಪ್ರಯತ್ನಿಸಬೇಕು, ಅದರಿಂದ ಸಾಧ್ಯವಿಲ್ಲದಿದ್ದರೆ ಹಾಲು, ಅದೂ ಸಾಧ್ಯವಿಲ್ಲದಿದ್ದರೆ ಹಣ್ಣು.
  
  ಅದೂ ಸಹ ನಿತ್ರಾಣವಾಗದಿರಲು ಎಷ್ಟೋ ಅಷ್ಟು ಮಾತ್ರ. ಹೊಟ್ಟೆ ತುಂಬುವಷ್ಟು ಸರ್ವಥಾ ಅಲ್ಲ. 
  
  ಇನ್ನು, ಖಾಯಿಲೆ ಅತೀ ಉಲ್ಬಣವಾಗಿ ಮಾತ್ರೆಗಳನ್ನು ತೆಗೆದುಕೊಳ್ಳಲು ಬೇಯಿಸಿದ ಪದಾರ್ಥವನ್ನು ತಿನ್ನಲೇಬೇಕಾದ ಪರಿಸ್ಥಿತಿ ಇದ್ದಾಗ, ಅಕ್ಕಿ, ಬೇಳೆ ಮುಂತಾದವುಗಳನ್ನು ತೆಗೆದುಕೊಳ್ಳದೇ ರವೆಯ ಗಂಜಿ ರೀತಿಯ ಪದಾರ್ಥಗಳನ್ನು ತೆಗೆದುಕೊಳ್ಳಬಹುದು. 
  
  ಪ್ರಾಮಾಣಿಕತೆ ಅತ್ಯಂತ ಮುಖ್ಯ. ನಾವು ಮತ್ತೊಬ್ಬರಿಗೆ ಸಮಜಾಯಿಷಿ ನೀಡಬೇಕಾಗಿಲ್ಲ, ನಮ್ಮ ಅಂತಃಸಾಕ್ಷಿ ನಾವು ಮಾಡಿದ್ದನ್ನು ಒಪ್ಪಬೇಕು ಮತ್ತು ನಮ್ಮ ಅಂತರ್ಯಾಮಿ ನಾವು ಮಾಡಿದ್ದನ್ನು ಮನ್ನಿಸುವಂತಿರಬೇಕು. ರುಚಿಗಾಗಿ, ಬಯಕೆಗಾಗಿ ತಿನ್ನುತ್ತಿರುವದಲ್ಲ, ದೇಹದ ಅನಿವಾರ್ಯತೆಯಿಂದ ತೆಗೆದುಕೊಳ್ಳುತ್ತಿರುವದು ಎನ್ನುವದು ನಮಗೇ ಗೊತ್ತಿರಬೇಕು. 
  
  ಏಕಾದಶಿಯ ಆಚರಣೆಯಿಂದ ದೊರೆಯುವ ಪುಣ್ಯ, ಪಡೆಯುವ ಫಲವನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಶ್ರೀ ಮಧ್ವಶಾಸ್ತ್ರದ ತಿಳುವಳಿಕೆ ಬರುವದೇ ಏಕಾದಶಿಯ ಉಪವಾಸದಿಂದ. ಅಂತಹ ಮಹತ್ತರ ಫಲವನ್ನು ತಿಂಡಿ ಊಟಗಳ ಮೇಲಿನ ಬಯಕೆಯಿಂದ ಕಳೆದುಕೊಳ್ಳಬಾರದು. 
  
  ಹೀಗಾಗಿ ಎಷ್ಟನ್ನು ಸ್ವೀಕರಿಸಿದಾಗ ದೇಹ ತೊಂದರೆಯಿಲ್ಲದೇ ಇರಬಹುದೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಬಹುದು. 
  
 • ಭಾರದ್ವಾಜ್,

  11:10 AM, 10/05/2017

  ಗುರುಗಾಳಿಗೆ ಸಾಷ್ಟಾಂಗ ಪ್ರಣಾಮಗಳು.
  
  ಬ್ರಾಹ್ಮಣರು ದಶಮಿ, ದ್ವಾದಶಿ ರಾತ್ರಿ ಫಲಾಹಾರ ಸ್ವೀಕರಿಸಬಹುದೆ ? ದಯವಿಟ್ಟು ತಿಳಿಸಿ.

  Vishnudasa Nagendracharya

  ಅವಶ್ಯವಾಗಿ. 
  
  ದಿನತ್ರಯಗಳ ಊಟ, ಉಪವಾಸ ಎಲ್ಲರಿಗೂ ಸಮಾನ. 
  
  
 • Shridhar K Patil,

  10:56 AM, 10/05/2017

  ಶ್ರೀಹರಿ, ಏಕಾದಶಿ ಪ್ರತಿಯೊಬ್ಬರೂ ಮಾಡಲೇ ಬೇಕಾದ ಶ್ರೇಷ್ಠವಾದಂತಹ ವ್ರತ.