ತೀರ್ಥವನ್ನು ನೀರಿನಂತೆ ಕುಡಿಯಬಹುದೇ?
ಆಚಾರ್ಯರಿಗೆ 🙏🙏 ಶಾಲಿಗ್ರಾಮದ ತೀರ್ಥವನ್ನು ನಾವು ಪ್ರತಿನಿತ್ಯ ಕುಡಿಯುವ ನೀರಿನಲ್ಲಿ ಹಾಕಿ ಅದನ್ನು ಸ್ವೀಕರಿಸಬಹುದೇ? ಶಾಲಗ್ರಾಮದ ತೀರ್ಥದಿಂದ ಆಚಮನ ಮಾಡಬಾರದು ಅಂತ ಕೇಳಿದ್ದೇನೆ, ಇದು ನಿಜವೇ? ತೀರ್ಥದಿಂದ ಪರಿಷೇಚನ ಮಾಡಬಹುದೇ? ತಿಳಿಸಿ. — ಮೋಹನ್ ಕುಲಕರ್ಣಿ. ತೀರ್ಥವನ್ನು ನೀರಿನಲ್ಲಿ ಹಾಕಿ ಕುಡಿಯಬಾರದು, ಹಾಗೆಯೂ ಕುಡಿಯಬಾರದು. ತೀರ್ಥದಿಂದ ಆಚಮನವನ್ನು ಮಾಡಬಾರದು. ಪರಿಷೇಚನೆಯನ್ನೂ ಮಾಡಬಾರದು. — ವಿಷ್ಣುದಾಸ ನಾಗೇಂದ್ರಾಚಾರ್ಯ