Prashnottara - VNP051

ಮಂತ್ರ ಜಪಿಸಲು ಉಪದೇಶ ಅನಿವಾರ್ಯವೇ?


					 	

ಪೂಜ್ಯ ಆಚಾರ್ಯರಿಗೆ ನಮಸ್ಕಾರಗಳು. ಮಂತ್ರಗಳ ಜಪ ಮಾಡಬೇಕಾದರೆ ಪಡೀಲೇಬೇಕು ಎಂದು ಕೆಲವರು. ಬ್ರಹ್ಮೋಪದೇಶ ಆಗಿದ್ರೆ ಯಾವ ಜಪವನ್ನಾದ್ರುವು ಮಾಡಬಹುದು ಎಂದು ಕೆಲವರು. ಏನು ಮಾಡಬೇಕು ತಿಳಿಸಿ. ಎಲ್ಲ ಮಂತ್ರಕ್ಕೂ ಉಪದೇಶ ಪಡೆಯುವದು ಕಷ್ಟ ಅಲ್ವಾ? — ರಂಗನಾಥ್, ಹಾವೇರಿ.


Download Article Share to facebook View Comments
5237 Views

Comments

(You can only view comments here. If you want to write a comment please download the app.)
 • Laxmi Padaki,Pune

  8:26 AM , 15/04/2022

  ಶ್ರೀ ಆಚಾರ್ಯರಿಗೆ ಧನ್ಯವಾದಗಳು.🙇🙇
 • Laxmi Padaki,Pune

  11:45 AM, 14/04/2022

  ಆಚಾರ್ಯರಿಗೆ ಕೋಟಿ ಕೋಟಿ ಪ್ರಣಾಮಗಳು.ನಮ್ಮ ಅತ್ತೆ ಮಾವ ಇರುವಾಗ ಸೊಸೆಯಂದಿರಿಗೆ ಮಾತ್ರ ಶ್ರೀ ಬ್ರಹ್ಮಚೈತನ್ಯರಿಂದ ಶ್ರೀ ರಾಮ ಜೈ ರಾಮ ಜೈ ಜೈ ರಾಮ, ಜಪದ ಉಪದೇಶ ಕೊಡಿಸಿದ್ದರು.ಈಗ ನಾವು ಅದನ್ನು ಮುಂದುವರೆಸಿಕೊಂಡು ಹೊರಟಿದ್ದೇವೆ. ಸರಿಯೇ ದಯವಿಟ್ಟು ತಿಳಿಸಿ ಎಂದು ವಿನಂತಿಸುವೆ.🙇🙇

  Vishnudasa Nagendracharya

  ಮುಂದುವರೆಸಿ. 
 • Kavyashree,Mysuru

  11:49 AM, 04/04/2022

  ಧನ್ಯವಾದಗಳು ಗುರುಗಳೆ.
 • Kavyashree,Mysuru

  8:39 PM , 03/04/2022

  ಪೂಜ್ಯರೇ ಹರಿ ಗುರುಗಳ ಅನುಗ್ರಹ ದೊರಕಿ ಮಂತ್ರ ದೀಕ್ಷೆ ಸಿಗುವವರೆಗೂ ಮಹಿಳೆಯರು
  ಹರೇ ರಾಮ ಹರೇ ರಾಮ
  ರಾಮ ರಾಮ ಹರೇ ಹರೇ
  ಹರೇ ಕೃಷ್ಣ ಹರೇ ಕೃಷ್ಣ 
  ಕೃಷ್ಣ ಕೃಷ್ಣ ಹರೇ ಹರೇ
  ಎಂದು ಭಗವನ್ನಾಮ ಜಪಿಸಬಹುದೇ? ಎಷ್ಟು ಬಾರಿ ಜಪಿಸಬೇಕು? ಈ ಮಂತ್ರ ಜಪಿಸಲು ದೀಕ್ಷೆ ಅಗತ್ಯ ಇದೆಯೇ? ದಯವಿಟ್ಟು ನಮ್ಮ ಸಂದೇಹ ನಿವಾರಣಿ ಮಾಡಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತಿದ್ದೇನೆ.

  Vishnudasa Nagendracharya

  ಶ್ರೀರಾಮ, ಶ್ರೀರಾಮ ಎಂಬ ಸರ್ವೋತ್ತಮ ಮಂತ್ರವನ್ನು ಜಪಿಸಿ. ನೀವು ಪಡೆಯಬೇಕಾದ ಎಲ್ಲ ಮಂತ್ರೋಪದೇಶಕ್ಕೂ ಅದು ನಿಮ್ಮನ್ನು ಅರ್ಹರನ್ನಾಗಿ ಮಾಡಿ ಆ ಮಂತ್ರೋಪದೇಶವನ್ನು ನಿಮಗೆ ನೀಡಿಸುತ್ತದೆ. 
 • Vasudhendra,Vijayapura

  12:33 PM, 15/02/2021

  ಗುರುಗಳೆ ಹಲವಾರು ಮಂತ್ರ ಉಪದೇಶ ಪಡೆದು ಯಾವುದಾದರೂ ಒಂದನ್ನು ಸಾಧನೆ ಮಾಡಲು ಹೇಗೆ ಆಯ್ಕೆ ಮಾಡ ಬೇಕು ಎಂದು ದಯವಿಟ್ಟು ತಿಳಿಸಿ.
 • Manjunatha,Bangalore

  11:15 PM, 11/05/2020

  ಪೂಜ್ಯ ಆಚಾರ್ಯರಿಗೆ ನಮಸ್ಕಾರಗಳು
  
  ಜಪವನ್ನು ಯಾವ ಮಾಲೆಯಿಂದ ಮಾಡಬೇಕು, ಏನಾದ್ರೂ ನಿಯಮ ಇದೆಯೇ? ವರ್ಣದವರಿಗೆ, ಆಶ್ರದವರಿಗೆ!? ತುಳಸಿ ಮಾಲೆಯಿಂದಲೋ, ಸ್ಪಟಿಕ, ಕಮಲಾಕ್ಷ , ರುದ್ರಾಕ್ಷಿ, ಅಥವಾ ಯಾವುದರಲ್ಲಿ ಮಾಡಬೇಕು ತಿಳಿಸಿಕೊಡಿ ಬಹಳ ಗೊಂದಲವಿದೆ.
  ದಯವಿಟ್ಟು
 • Vatsalya,

  12:40 PM, 29/10/2017

  Acharyarige Namaskara,
  
  Akasmat hennu makkala gandandirige upadesha koduvashtu Jnana athava yogyate illadiddare naavu yaranna Niyata gurugalu anta togobahudu? Vidhaveyaru, Divorceegalu inthavaru enu madabeku. 
  
  Dhanyavadagalu

  Vishnudasa Nagendracharya

  ನಿಯತಗುರುಗಳು ಯಾರು ಎಂದು ತಿಳಿಯುವ ಹಂತ ಏರಲು ಇನ್ನೂ ಬಹಳ ಸಾಧನೆ ಮಾಡಬೇಕು. 
  
  ಗಂಡನಿಗೆ ಜ್ಞಾನಾದಿಗಳು ಇಲ್ಲದೇ ಇದ್ದಾಗ, ಅಥವಾ ಗಂಡ ಇಲ್ಲದೇ ಇದ್ದಾಗ, ದೇವರಿಗೆ ಇನ್ನೂ ನನಗೆ ಮಂತ್ರೋಪದೇಶವನ್ನು ನೀಡುವ ಬಯಕೆಯಿಲ್ಲ, ಆ ಸ್ವಾಮಿ ಅನುಗ್ರಹವನ್ನು ಮಾಡಲಿ ಎಂದು ಪ್ರಾರ್ಥಿಸುತ್ತ ನಾಮಸ್ಮರಣೆಯಲ್ಲಿಯೇ ಆಸ್ತಕರಾಗಬೇಕು. ದೇವರ ಮಾಹಾತ್ಮ್ಯಶ್ರವಣ ಮತ್ತು ಪ್ರತೀನಿತ್ಯ ಶ್ರೀ ರಾಮಾಯ ನಮಃ ಶ್ರೀ ಕೃಷ್ಣಾಯ ನಮಃ ಇತ್ಯಾದಿ ದೇವರ ಹೆಸರುಗಳನ್ನು ಮಂತ್ರದಂತೆಯೇ ಜಪಿಸಬೇಕು. 
  
  ಇದು ಸಾತ್ವಿಕವಾದ ಮಾರ್ಗ. 
  
  ಮತ್ತೂ ಒಂದು ಮಾರ್ಗವಿದೆ -- 
  
  ಗಂಡನಿಗೆ ಮಂತ್ರೋಪದೇಶದ ಸಾಮರ್ಥ್ಯ ಇಲ್ಲದೇ ಇದ್ದಾಗ ಗುರುಗಳಿಂದ ಮಂತ್ರೋಪದೇಶವನ್ನು ಪಡೆಯಲು ಗಂಡನನ್ನು ವಿನಂತಿಸಬೇಕು. ಗುರುಗಳಿಂದ ಉಪದೇಶ ಪಡೆದ ಆತ ಅದನ್ನು ಕನಿಷ್ಠ ಹತ್ತು ಸಾವಿರ ಬಾರಿ ಜಪಿಸಿ ಹೆಂಡತಿಗೆ ಉಪದೇಶ ಮಾಡಬೇಕು. ಹೊರತು ನೇರವಾಗಿ ಪರಪುರುಷನಿಂದ (ಆ ವ್ಯಕ್ತಿ ಗುರುವಾಗಿರಲಿ, ಮಹಾಸಂನ್ಯಾಸಿಯಾಗಿರಲಿ, ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ ಆತ ಪರಪುರುಷನೇ) ಮಂತ್ರೋಪದೇಶ ಪಡೆಯಬಾರದು. 
  
  ಇನ್ನು ಗಂಡನಾದವನು ಇದನ್ನು ಮಾಡಲು ಸಾಧ್ಯವಿಲ್ಲದ ಪಕ್ಷದಲ್ಲಿ ಮತ್ತೊಂದು ದಾರಿ. ಗುರುಗಳು ಗಂಡನಿಗೆ ಉಪದೇಶ ಮಾಡಬೇಕು. ಗಂಡ ಹೆಂಡತಿಗೆ ಉಪದೇಶ ಮಾಡಬೇಕು. ಹೊರತು ನೇರವಾಗಿ ಪರಪುರುಷನಿಂದ ) ಮಂತ್ರೋಪದೇಶ ಪಡೆಯಬಾರದು. 
  
  ಮಂತ್ರೋಪದೇಶ ಬಹಿರಂಗವಾಗಿ ಮಾಡುವಂತದ್ದಲ್ಲ. ಏಕಾಂತದಲ್ಲಿಯೇ ಮಂತ್ರೋಪದೇಶ ನೀಡಬೇಕು. ಪರಪುರುಷನೊಂದಿಗೆ ಏಕಾಂತದಲ್ಲಿರುವದು ಸ್ತ್ರೀ-ಪುರುಷರಿಬ್ಬರಿಗೂ ಅನರ್ಥಕಾರಿ. 
  
  ವಿಧವೆಯೆಂದರೆ ಗಂಡನನ್ನು ಕಳೆದುಕೊಂಡವಳಷ್ಟೇ. ಗಂಡ ಸತ್ತಿರಲಿ, ಅಥವಾ ಗಂಡ ಸಂನ್ಯಾಸಿಯಾಗಿರಲಿ, ಆ ಗಂಡನ ಅಂತರ್ಯಾಮಿಯಾಗಿಯನ್ನಾಗಿಯೇ ಭಗವಂತನ ಚಿಂತನೆ ಮಾಡಬೇಕು. 
  
  ಒಂದು ಮಾತು ನೆನಪಿನಲ್ಲಿರಬೇಕು. ಮಂತ್ರೋಪದೇಶ ಅರ್ಹತೆ ಗಂಡನಿಗಿಲ್ಲ ಎಂದು ಗಂಡನನ್ನು ಜರಿಯುವದಲ್ಲ, ಮಂತ್ರೋಪದೇಶ ಮಾಡುವಂತಹ ಗಂಡನನ್ನು ಪಡೆಯುವ ಅರ್ಹತೆಯನ್ನು ನಾನಿನ್ನೂ ಪಡೆದಿಲ್ಲ, ಆ ಅರ್ಹತೆಯನ್ನು ಪಡೆಯಬೇಕು ಎಂದು ಸಾಧನೆ ಮಾಡಬೇಕು. 
  
 • Srinidhi Govind Joshi,

  12:55 PM, 29/10/2017

  Dhanyavadagalu gurugale
 • Sathyanarayana R B,

  12:28 PM, 29/10/2017

  Acharyare naavu upadesha padeyuva mantra upadesha maduvavarige siddhi agirabeku anthare....hagagi namage bekagiruva mantravellavannu hege avaru siddhi madikondiruttare??ega Gayatri mantravanne tegedukondaga...tandeyinda atava sanyasigalinda upadesha madisuttare....Gayatri mantra spurascharanege 24laksha agabeku endu heluttare innu siddhi agide endu hege tiliyuvudu???onduvele avarige siddhi agada mantravanna bereyavarige upadesha madalu baruttadeye...
  
  Nanna prashne tappagiddalli kshamisi...idu sathya tiliyuva ondu prayatna maatra

  Vishnudasa Nagendracharya

  ಸಿದ್ಧಿ ಪಡೆದ ಗುರುಗಳು ಮಂತ್ರೋಪದೇಶ ಮಾಡಿದಾಗ ಅದು ಮಹತ್ತರ ಫಲವನ್ನು ನೀಡುತ್ತದೆ. 
  
  ಇವತ್ತಿನ ದಿವಸ ಮಂತ್ರೋಪದೇಶ ಎನ್ನುವದು ಎಲ್ಲವೂ ಯಾಂತ್ರಿಕವಾಗುತ್ತದೆ. ಉಪನಯನದಲ್ಲಿ ಮಗನಿಗೆ ಉಪದೇಶ ಮಾಡಲೂ ಸಹ ಕೆಲವು ಬಾರಿ ತಂದೆಗೆ ಗಾಯತ್ರಿ ಗೊತ್ತಿರುವದಿಲ್ಲ. ಅಂತಹವರಿಂದ ಗಾಯತ್ರಿ ಉಪದೇಶ ಅಥವಾ ಯಾವುದೇ ಮಂತ್ರದ ಉಪದೇಶ ಪಡೆದರೆ ಏನೂ ಉಪಯೋಗವಿಲ್ಲ. 
  
  ಇವತ್ತಿನ ದಿವಸಕ್ಕೆ ಅನ್ವಯಿಸಿ ಹೇಳುವದಾದರೆ, ಉತ್ತಮ ವಿಷ್ಣುಭಕ್ತರಾದ ಗುರುಗಳಿಂದ ಮಂತ್ರೋಪದೇಶವನ್ನು ಪಡೆದು ಪ್ರತೀನಿತ್ಯ ಅದರ ಜಪ ಮಾಡುತ್ತಿರುವ ವಿಷ್ಣುಭಕ್ತನಿಂದಲಾದರೂ ಮಂತ್ರೋಪದೇಶವನ್ನು ಕ್ರಮಬದ್ಧವಾಗಿ ಪಡೆಯಬೇಕು. ಆಗ ಸ್ವಲ್ಪವಾದರೂ ಸಿದ್ಧಿ ಪಡೆಯಲು ಸಾಧ್ಯ. 
  
  ಸಾಮೂಹಿಕ ಮಂತ್ರೋಪದೇಶ, ಅಶುಚಿಯಾದ ಸ್ಥಳದಲ್ಲಿ ಜಪ ಇವೆಲ್ಲವೂ ಅಶಾಸ್ತ್ರೀಯ. 
 • Srinidhi Govind Joshi,

  12:29 PM, 29/10/2017

  Gurugalige namaskaragalu. Sri inda shurumadi namaha inda mugiyuva, udaharanege Sri gurubhyo namaha ennuvudu mantra japavaguttade mattu devata gurugala hesaru matra helikolluvudu nama japavaguttade allave gurugale. Dayavittu tilisikodi

  Vishnudasa Nagendracharya

  ಶ್ರೀ ಮತ್ತು ನಮಃ ಸೇರಿದ ಮಾತ್ರಕ್ಕೆ ಎಲ್ಲವೂ ಮಂತ್ರವಾಗುವದಿಲ್ಲ. ಸರ್ವಜ್ಞರಾದ ಗುರುಗಳು ಆ ರೀತಿಯಾದ ಮಂತ್ರವನ್ನು ವೇದಗಳಿಂದ ಉದ್ಧರಿಸಿ ನೀಡಬೇಕು. ಅಥವಾ ಆ ರೀತಿಯಾಗಿ ಮಂತ್ರತುಲ್ಯವನ್ನಾಗಿ ನಿರ್ಮಾಣ ಮಾಡುವ ಸಾಮರ್ಥ್ಯವಿರಬೇಕು. ಅದಕ್ಕೆ ನ್ಯಾಸ-ದೇವತೆ-ಧ್ಯಾನ ಇತ್ಯಾದಿಗಳನ್ನೂ ತಿಳಿಸಿರಬೇಕು. ಆಗ ಮಾತ್ರ ಮಂತ್ರವಾಗುತ್ತದೆ. 
  
  ಇಲ್ಲದಿದ್ದರೆ ಶ್ರೀ ಗೋವಿಂದಾಯ ನಮಃ ಇತ್ಯಾದಿಗಳು ಕೇವಲ ನಾಮಸ್ಮರಣೆಯ ವ್ಯಾಪ್ತಿಯಲ್ಲಿಯೇ ಬರುತ್ತದೆ. ಶ್ರೀ, ನಮಃ ಇದ್ದಿದ್ದರಿಂದ ನಾಮಸ್ಮರಣೆಗಿಂತಲೂ ವಿಶೇಷ ಫಲ ದೊರೆಯುತ್ತದೆ. 
 • Jayashree Karunakar,

  11:50 AM, 27/06/2017

  ಗುರುಗಳೆ 
  
  ನಮಗೆ ಉಪದೇಶ ಪಡೆಯಲು ಸಾಧ್ಯವಾಗದಿದ್ದರೆ
  
  ಆ ಎಲ್ಲ ಅನಾನುಕೂಲತೆಯನ್ನು ಭಗವಂತನಿಗೆ ಒಪ್ಪಿಸಿ, ಭಕ್ತಿಯಿಂದ ಪಠಿಸಿದರೆ ಭಗವಂತನು ಫಲಕೂಡುವುದಿಲ್ಲವೆ

  Vishnudasa Nagendracharya

  ಒಂದು ಸ್ತೋತ್ರವನ್ನು ಗುರುಗಳಿಂದ ಉಪದೇಶ ಪಡೆಯಲಿಕ್ಕಾದಷ್ಟು ಅನಾನುಕೂಲತೆ ಇವತ್ತಿನ ಪ್ರಪಂಚದಲ್ಲ ಇನ್ನೂ ಬಂದಿಲ್ಲ. ಸಾಧ್ಯವಾದಷ್ಟು ಪ್ರಯತ್ನಿಸಬೇಕು. ಸಾಧ್ಯವೇ ಇಲ್ಲದ ಪಕ್ಷದಲ್ಲಿ ಸ್ತೋತ್ರಗಳನ್ನು ಪಠಿಸಬೇಕು. ..
 • Shrikant,

  1:39 AM , 27/06/2017

  How about reciting Vishnusahsranama,Vayustuti,Yantroddharak Hanumat stotra....these are all required Guropadesha?

  Vishnudasa Nagendracharya

  ಯಾವುದೇ ಸ್ತೋತ್ರವನ್ನೂ ಗುರುಗಳಿಂದ ಉಪದೇಶ ಪಡೆದು ಪಠಿಸಿದಲ್ಲಿ ಶೀಘ್ರ ಮತ್ತು ಮಹತ್ತರ ಫಲಪ್ರಾಪ್ತಿಯಾಗುತ್ತದೆ. ನಾವಾಗೇ ಓದಿ ಪಠಿಸಿದರೆ ಬರುವ ಫಲ ಕಡಿಮೆ. ಕೆಲವು ಬಾರಿ ಫಲ ಬರುವದೂ ಇಲ್ಲ. 
 • chandu,

  8:58 PM , 19/06/2017

  ಗುರುಗಳೆ ಇತರಾದಿಗಳು ಶಾಸ್ತ್ರ ಪ್ರಕಾರ ಉಪದೇಶ ಪಡೆಯಬಹುದೆ?

  Vishnudasa Nagendracharya

  ರಾಮಮಂತ್ರವನ್ನು ಜಪಿಸಲು, ದೇವರ ನಾಮಮಂತ್ರಗಳನ್ನು ಜಪಿಸಲು ಸಕಲರಿಗೂ ಅಧಿಕಾರವಿದೆ. 
  
  ಆ ನಾಮಮಂತ್ರಗಳನ್ನು ಜ್ಞಾನಿಗಳಿಂದ ಉಪದೇಶ ಪಡೆದೇ ಜಪಿಸಬೇಕು. 
  
  ಯಾವ ಮಂತ್ರವನ್ನು ಜಪಿಸಲು ನಮಗೆ ಅರ್ಹತೆಯಿಲ್ಲವೋ ಆ ಮಂತ್ರವನ್ನು ಉಪದೇಶವನ್ನೂ ಪಡೆಯಬಾರದು/ನೀಡಬಾರದು. 
  
  ಉದಾಹರಣೆಗೆ, ಗೃಹಸ್ಥರಿಗೆ ಪ್ರಣವಾದಿಮಂತ್ರಗಳನ್ನು ಜಪಿಸುವ ಅರ್ಹತೆಯಿಲ್ಲ. ಹೀಗಾಗಿ ಅವರಿಗೆ ಅದನ್ನು ನೀಡಲೂಬಾರದು, ಅವರು ಪಡೆಯಲೂ ಬಾರದು. 
  
  ಹಾಗೆ, ನಮ್ಮನಮ್ಮ ವರ್ಣ ಆಶ್ರಮಗಳಿಗೆ ಯಾವ ಮಂತ್ರಗಳ ಜಪ ವಿಹಿತವೋ ಅವುಗಳ ಉಪದೇಶವನ್ನು ಪಡೆಯಬೇಕು. 
 • Gayathri ravindranath,

  1:30 PM , 19/06/2017

  Thank you for answering all these questions, please continue this.
 • srinivaasa korkahalli,udupi

  12:15 AM, 20/05/2017

  Uttama lekhana
 • Jayashree karunakar,

  4:24 PM , 19/05/2017

  Gurugale yava yava mantragalannu upadeshavillade patisabahudu dayavittu thilisi

  Vishnudasa Nagendracharya

  ಎಲ್ಲ ಮಂತ್ರಕ್ಕೂ ಉಪದೇಶ ಬೇಕೇ ಬೇಕು. 
  
  ದೇವರ ನಾಮಸ್ಮರಣೆಗೆ ಮಾತ್ರ ಉದಪೇಶ ಬೇಡ. 
  
  ರಾಮ ಎನ್ನುವದು ನಾಮವೂ ಹೌದು, ಮಂತ್ರವೂ ಹೌದು. 
  
  ರಾಮ ಎಂಬ ನಾಮಕ್ಕೆ ಉಪದೇಶ ಬೇಡ. ರಾಮ ಎಂಬ ಮಂತ್ರಕ್ಕೆ ಉಪದೇಶ ಬೇಕು. 
  
  ನಾಮಸ್ಮರಣೆ ಮಾಡಿಮಾಡಿ ಮಂತ್ರೋಪದೇಶವನ್ನು ಪಡೆಯುವ ಅರ್ಹತೆ ಮುಟ್ಟಿದಾಗ ನಮಗೆ ಉಪದೇಶ ದೊರತೇ ದೊರೆಯುತ್ತದೆ. 
 • Ajit,Dombivli

  8:57 AM , 15/05/2017

  In that case can we get at least some punnya by reciting the stotra learnt through those videos guruji?

  Vishnudasa Nagendracharya

  no doubt. 
  
  It is like patha. 
  
  there is a lot of difference in patha and upadesha. 
  
  By learning through these videos you get both punya and jnana. 
 • Manjunath,

  7:47 AM , 15/05/2017

  ಆಚಾರ್ಯರೆ ನೀವು ಈಗ ವಿಡಿಯೋ ಮೂಲಜ ಕಲಿಸುತ್ತಿರುವ ಸ್ತೋತ್ರಗಳು ಸಹ ನಮಗೆ ಗುರುಪದೇಶವಲ್ಲವೇ?

  Vishnudasa Nagendracharya

  ಈ ವಿಡಿಯೋಗಳು ನಿಮಗೆ ಕಲಿಯಲು ಒಂದು ಸಾಧನವಷ್ಟೇ. ಶಾಸ್ತ್ರೀಯ ದೃಷ್ಟಿಯ ಗುರೂಪದೇಶವಲ್ಲ.