ಗಾಯತ್ರಿಯ ಜಪ ಮತ್ತು ಉಪದೇಶ
ಆಚಾರ್ಯರಿಗೆ ಪ್ರಣಾಮಗಳು.ಗಾಯತ್ರೀ ಮಂತ್ರ ಜಪವನ್ನು ಸ್ವರ ರಹಿತವಾಗಿಯೂ ಮಾಡಬಹುದೇ? ಉಪದೇಶ, ಸ್ವರ ರಹಿತವಾಗಿ ಆಗಿದ್ದರೆ, ಬೇರೆಯವರ ಬಳಿ ಸ್ವರಬದ್ಧವಾದ ಉಪದೇಶವನ್ನು ಉಪನಯನದ ಬಳಿಕ ಪಡೆಯಬಹುದೇ? ದಯವಿಟ್ಟು ತಿಳಿಸಿ. — ಗುರುರಾಜ್ ಗಾಯತ್ರಿಯನ್ನು ಎಂದಿಗೂ ಸ್ವರರಹಿತವಾಗಿ ಜಪಿಸಬಾರದು. ಮತ್ತೊಬ್ಬರಿಗೆ ಅದರ ಅರ್ಥವನ್ನು ತಿಳಿಸುವಾಗ ಸ್ವರರಹಿತವಾಗಿ ಹೇಳಬಹುದು, ಆದರೆ ಜಪಕಾಲದಲ್ಲಿ ಸ್ವರಸಹಿತವಾಗಿಯೇ ಪಠಿಸಬೇಕು. ಯಾರಿಂದ ಉಪದೇಶವಾಗಿದೆಯೋ ಅವರಿಗಿಂತ ಜ್ಞಾನದಲ್ಲಿ ಹಿರಿಯರಾದವರಿಂದ ಅವಶ್ಯವಾಗಿ ಮತ್ತೊಮ್ಮೆ ಉಪದೇಶ ಪಡೆಯಬಹುದು. — ವಿಷ್ಣುದಾಸ ನಾಗೇಂದ್ರಾಚಾರ್ಯ