ತುಳಸಿ ಮಣಿ ಮಾಲೆಯನ್ನು ಯಾವಾಗ ಧರಿಸಬೇಕು ಮತ್ತು ಯಾವಾಗ ಧರಿಸಬಾರದು?
ತುಳಸಿ ಮಣಿ ಮಾಲೆಯನ್ನು ಯಾವಾಗ ಧರಿಸಬೇಕು ಮತ್ತು ಯಾವಾಗ ಧರಿಸಬಾರದು? — ಕೃಷ್ಣಾಚಾರ್ಯ ತುಳಸೀಮಣಿಯ ಮಾಲೆಯನ್ನು ಇಂತಹ ಸಂದರ್ಭದಲ್ಲಿ ಧರಿಸಬಾರದು ಎಂದು ಎಂದಿಗೂ ನಿಷೇಧವಿಲ್ಲ. ಸಕಲ ಸಂದರ್ಭಗಳಲ್ಲಿಯೂ ಅದನ್ನು ಧರಿಸಿರಬೇಕು. ಮಲ ಮೂತ್ರ ವಿಸರ್ಜನೆಯ ಕಾಲದಲ್ಲಾಗಲೀ, ಜಾತಾಶೌಚ ಮೃತಾಶೌಚಗಳಲ್ಲಾಗಲೀ ಅದಕ್ಕೆ ಮೈಲಿಗೆಯಾಗುವದಿಲ್ಲ. ತುಳಸೀಮಣಿ ಸದಾಕಾಲದಲ್ಲಿಯೂ ಪವಿತ್ರ. ಮಲಮೂತ್ರವಿಸರ್ಜನೆಯ ಕಾಲದಲ್ಲಿ ತುಳಸಿಮಣಿಯನ್ನು ಬಲಗಿವಿಗೆ ಹಾಕಿಕೊಳ್ಳುವ ಆವಶ್ಯಕತೆಯಿಲ್ಲ. ಹಾಕಿಕೊಂಡರೆ ತಪ್ಪಿಲ್ಲ. ತೆಗೆದಿಟ್ಟು ಹೋದರೂ ತಪ್ಪಿಲ್ಲ. — ವಿಷ್ಣುದಾಸ ನಾಗೇಂದ್ರಾಚಾರ್ಯ