Prashnottara - VNP064

ಮಾಟ ಮಂತ್ರಗಳು ಸತ್ಯವೇ? ಪರಿಹಾರ ಹೇಗೆ


					 	

ಶ್ರೀ ಗಣೇಶಾಯ ನಮಃ. ಗುರುಗಳಿಗೆ ಪ್ರಣಾಮ. ಗುರುಗಳೆ ತಂತ್ರ.ಮಾಟ.ಮೊಡಿ ನಿಜನಾ ಇವು ವ್ಯಕ್ತಿಗೆ ಹಾನಿಕಾರಕವೆ ಹಾಗಾದರೆ ಅದರಿಂದ ಉಳಿಯುವ ಸುಲಭ ಉಪಾಯಗಳಾವವು? — ಮಂಜುನಾಥ ಯಾದವಾಡೆ


Download Article Share to facebook View Comments
7894 Views

Comments

(You can only view comments here. If you want to write a comment please download the app.)
 • Subrahmanya mayya,Kasaragod

  2:10 PM , 18/02/2019

  Narayana kavacha da bagge hagu upasaneya bagge thilisi gurugale
 • Subrahmanya mayya,Kasaragod

  2:09 PM , 18/02/2019

  Reki videshadhu adru kuda tantra shastrada Dali samyate idhe anta anistade....nav basma ityadi galige japa madudhu idella reki moola anta kantade
 • Vinay hossur seshachalam,

  5:21 AM , 09/02/2018

  Vamachara dalli hechinavaru handhi or pig balasutare maneyavalage handiya rakta gorasu kobbu koodalu hakidare elige illade guru daivagalu kai hidiyadanthagi nasavagibiduthare maneya tulasigida vanagibiduthade , adakke pariharavagi narasimha swami & MAHA sudarshana chakravanna shukla pakshada ekadasi yandhu burjapatra belli or tamrada tagadinalli bareyisi a dinave maneyallitti poojisalu mane praveshisida vasthugalu kannige gocharavaguthave inthaha vasthugalanna vayyasadavaru matra mutbeku maneindha a vasthugalanna horage haaki agni sparsha madi gangeyalli serisabeku , maneya horage hasuvina ganjala beresida neeralli mindhu maneyolage praveshisabeku , mathu narasimhadevarige vandhisabeku . & Vugram veteran... E mantradinda gangeyannu abhimantrisi maneyolage horage sutha sproksisabeku , namo narasimha
 • Pawan,

  1:34 AM , 06/02/2018

  Gurugale bhootarajara stotra dayapalisiri 
  
     Jai vijayara
 • Sathyanarayana R B,

  11:52 PM, 14/11/2017

  Sri Gurubhyonamaha.... excellent acharyare
 • Shantha.raghothamachar,Bangalore

  11:18 PM, 27/08/2017

  ನಮಸ್ಕಾರ. ಸ್ತ್ರೀಯರು ಯಾವರೀತಿಯ ಪರಿಹಾರ ವನ್ನು ಕಂಡು ಕೋಳ್ಳಬೇಕು?
 • Ramesh,Bangalore

  1:23 PM , 25/06/2017

  Acharyarige nanna namaskaragalu, trivikrama panditacharyaru rachisida nrusimha stuti yaava prasangadalli yetakkagi idanna rachisidaru, avarigu enadaru vaamaachaaravagitte?

  Vishnudasa Nagendracharya

   ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ಆಚಾರ್ಯರ ಶಿಷ್ಯತ್ವವನ್ನು ವಹಿಸಿದ್ದನ್ನು ಸಹಿಸದ ಕೆಲವು ದುಷ್ಟರು ಶ್ರೀ ಪಂಡಿತಾಚಾರ್ಯರ ಮೇಲೆ ಆಭಿಚಾರಿಕ ಪ್ರಯೋಗವನ್ನು ಮಾಡಿ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಾರೆ. ಮುಂದೆ ಬರುವ ಸಮಸ್ತ ಸಜ್ಜನರು ಈ ರೀತಿಯ ಆಪತ್ತುಗಳಿಂದ ಪರಿಹಾರವಾಗಲು, ಆಗ ನೃಸಿಂಹಸ್ತೃತಿಯನ್ನು ರಚಿಸಿ ಶ್ರೀ ಪಂಡಿತಾಚಾರ್ಯರು ಆ ಅಪತ್ತನಿಂದ ಸಹಜವಾಗಿ ಪಾರಾಗುತ್ತಾರೆ. 
  
  ಶ್ರೀ ಪಂಡಿತಾಚಾರ್ಯರ ಸಾಮರ್ಥ್ಯದಿಂದ ಇಂದಿಗೂ ಸಹ ಆ ಸ್ತೋತ್ರ ಪಠಣೆ ಮಾಡುವ ಸಜ್ಜನರ ಸಮಸ್ತ ದುಷ್ಟಶಕ್ತಿಗಳನ್ನು ನಿವಾರಿಸುತ್ತಿದೆ. 
 • Srinath,

  8:48 AM , 02/06/2017

  ನಮಸ್ಕಾರ ಆಚಾಯ೯ರೆ.
  
  ಮಾಟ ಮಂತ್ರಕ್ಕೆ ನಾರಾಯಣವಮ೯ ದಿಂದ ಪರಿಹಾರ ಇದೆಯಾ

  Vishnudasa Nagendracharya

  ಅವಶ್ಯವಾಗಿ. 
  
  ನಾರಾಯಣವರ್ಮ ಅಸಾಮಾನ್ಯ ಮಾಟಗಳನ್ನೂ ಪರಿಹಾರ ಮಾಡುವ, ಮುಂದೆ ಬೇರೆ ಮಾಟಗಳ ಪರಿಣಾಮವಾಗದಂತೆ ತಡೆಯುವ ಶಕ್ತಿಯುಕ್ತ ಸ್ತೋತ್ರ.
 • Ramesh,Bangalore

  6:31 PM , 26/05/2017

  ಧನ್ಯವಾದಗಳು,
 • Seshagiri Rao Desai,

  11:00 PM, 27/05/2017

  ಗುರುಗಳ ಪಾದಾರವಿಂದಗಳಿಗೆ ಕೋಟಿ ಕೋಟಿ ಪ್ರಣಾಮಗಳು
 • Madhusudan,

  7:28 PM , 24/05/2017

  Gurugale manasika vyadhigalannu mattu itara dodda.rogagallanu matadinda barisabahude.athava ivugalige

  Vishnudasa Nagendracharya

  ನಮ್ಮ ಎಲ್ಲ ಕಷ್ಟಗಳಿಗೂ ಪೂರ್ವಜನ್ಮದ ಪಾಪವೇ ಕಾರಣ. ಇಂದು ಮಾಟ ಮಾಡಿಸಿದ್ದಾರೆ ಎಂದರೆ ಆ ಮಾಟದ ಪರಿಣಾಮವನ್ನು ಪಡೆಯಲೂ ನಮಗೊಂದು ಕರ್ಮವಿರಬೇಕಲ್ಲ. ಹೀಗಾಗಿ ನಮ್ಮ ಕರ್ಮವಿರಲೇಬೇಕು. 
  
  ಮಾಟಗಳಿಂದ ಮಾನಸಿಕರೋಗ ಹಾಗೂ ದೈಹಿಕರೋಗ ಎರಡೂ ಉಂಟಾಗಲು ಸಾಧ್ಯವಿದೆ. 
 • Madhusudan,

  7:31 PM , 24/05/2017

  Ivugalu poorvajanmada phalagale?
 • Sangeetha prasanna,

  7:03 AM , 25/05/2017

  ಹರೇ ಶ್ರೀನಿವಾಸ .ದಯವಿಟ್ಟು ರೇಖಿಯ ಬಗ್ಗೆ ತಿಳಿಸಿ .ರೇಖಿವಿದ್ಯಇಂದ ಸಮಸ್ಯಗಳು ಬಗೆ ಹರಿಯುತ್ತವೆ ಏನ್ನುವುದು ನಿಜವೆ .ಸಂದೇಹವನ್ನು ಪರಿಹರಿಸಿ .🙏🙏

  Vishnudasa Nagendracharya

  ರೇಖಿ ವಿದ್ಯೆ ನಮ್ಮ ಭಾರತೀಯ ವಿದ್ಯೆಯಲ್ಲ. ಜಪಾನ್ ಮೂಲದ ಒಬ್ಬ ವ್ಯಕ್ತಿ 20ನೆಯ ಶತಮಾನದ ಆದಿಯಲ್ಲಿ ಪ್ರಚಾರಕ್ಕೆ ತಂದ ಒಂದು ಪದ್ಧತಿ. 
 • Vadiraj,

  5:32 AM , 25/05/2017

  If the mata or mantra is applied to our near or dear ones, what can be done to remove that effects. Also if that affected person is not "darmika" / not willing to worship the god.

  Vishnudasa Nagendracharya

  ಯಾರ ಮೇಲೆ ಪ್ರಯೋಗವಾಗಿದೆಯೋ ಅದರ ಪರಿಹಾರಕ್ಕಾಗಿ ಮತ್ತೊಬ್ಬರು ದೇವರ ಸೇವೆ, ಪಾರಾಯಣಗಳನ್ನು ಮಾಡಬಹುದು. 
  
  ಆ ವ್ಯಕ್ತಿ ನೇರವಾಗಿ ದೇವರನ್ನು ಭಜಿಸದೇ ಇದ್ದರೂ, ನೀವು ಮಾಡುವ ಸೇವೆ ಕ್ರಮಬದ್ಧವಾಗಿದ್ದಲ್ಲಿ ಈ ವಾಮಾಚಾರದ ಪರಿಣಾಮ ಕಡಿಮೆಯಾಗಲು ಸಾಧ್ಯ. 
  
  
 • Manjunath,

  11:05 PM, 24/05/2017

  ಆಚಾರ್ಯರೆ ಕೆಲವು ಮಾಂತ್ರಿಕರು ಊರಿನ ದೇವಾಲಯಗಳಲ್ಲಿ ಕದ್ದು ಬಂದು ದೇವರ ವಿಗ್ರಹಗಳಿಗೆ ಬಾಯಿ ಕಟ್ಡಿಹಾಕಿರುತ್ತಾರೆ ಇದು ನಿಜವಾಗಿಯು ಸಾಧ್ಯವೇ ದೇವತೆಗಳನ್ನು ಕಟ್ಟಿಹಾಕುಉ ಸಾಧ್ಯವೇ
  
  ಮತ್ತು .ಇನ್ನೊಂದು ಗೊಂಬೆಗಳ ಮೇಲೆ ಪ್ರಯೋಗಿಸಿ ಬೇರೋರ್ವ ವ್ಯಕ್ತಿಯ ಮೇಲೆ ಹಿಂಸಿಸಲು ಸಾಧ್ಯವೇ ಇವೇಲ್ಲವು ಸತ್ಯವಾ

  Vishnudasa Nagendracharya

  ದೇವತೆಗಳ ಮೇಲೆ ವಾಮಾಚಾರದ ಪ್ರಯೋಗ ಮಾಡಲು ಸಾಧ್ಯವಿಲ್ಲ. 
  
  ದೇವಸ್ಥಾನದಲ್ಲಿ ಪೂಜಾ ಉತ್ಸವ ಮುಂತಾದ ಕಾರ್ಯಕ್ರಮಗಳು ನಡೆಯದಂತೆ ಮಾಡುತ್ತಾರೆ, ಕೆಲವು ನೀಚರು. 
 • Shridhar K Patil,

  8:33 PM , 24/05/2017

  ನಮಸ್ಕಾರಗಳು, ತುಂಬಾ ಸಾತ್ವಿಕ ರೀತಿಯ ಹಾಗೂ ಫಲದಾಯಕ ಪರಿಹಾರ.
 • Ramesh,

  3:05 PM , 26/05/2017

  ಹರೇ ಶ್ರೀನಿವಾಸ, ಆಚಾರ್ಯರಿಗೆ ನನ್ನ ನಮಸ್ಕಾರಗಳು, 
  ಪರಮಾತ್ಮನ ಇಚ್ಚೆಯಿಲ್ಲದೆ ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ, ಜೀವಿಯು ಅಸ್ವತಂತ್ರನಾದುದರಿಂದ ಕರ್ಮದ ಲೇಪ ಹೇಗೆ ಜೀವಿಗೆ ಬಂದೋದಗುತ್ತದೆ. ಮತ್ತೆ ವಾಮಾಚಾರದ ಪರಿಹಾರದ ಬಗ್ಗೆ ಮತ್ತಷ್ಟು ತಿಳಸಬೇಕೆಂದು ವಿನಂತಿಸುತ್ತೇನೆ.
  ರಮೇಶ ಬೆಂಗಳೂರು

  Vishnudasa Nagendracharya

  ದೇವರು ಯಾರೊಳಗೆ ನಿಂತು ಯಾವ ಕರ್ಮವನ್ನು ಯಾರಿಂದ ಮಾಡಿಸುತ್ತಾನೆಯೋ ಆ ಕರ್ಮದ ಫಲವನ್ನು ಅವರು ಪಡೆಯುತ್ತಾರೆ. 
  
  ದುಷ್ಟಫಲ ಬರಬಾರದು ಎಂದರೆ ಮೋಕ್ಷವೂ ಬರಬಾರದಲ್ಲವೇ. ಸುಖವೂ ಉಂಟಾಗಬಾರದಲ್ಲವೇ. 
  
  ನಾವು ಮಾಡಿದ ಕರ್ಮದ ಫಲ ನಮಗೆ ಬರಬಾರದು ಎಂದರೆ, ಮಾಡಿದ ಊಟದಿಂದ ಹೊಟ್ಟೆ ತುಂಬಬಾರದು, ದುಡಿಯುವದರಿಂದ ಹಣ ಬರಬಾರದು, ಓದುವದರಿಂದ ವಿದ್ಯೆ ಬರಬಾರದು, ಸತ್ಕರ್ಮಗಳಿಂದ ಮೋಕ್ಷವೂ ದೊರೆಯಬಾರದಲ್ಲವೇ. ಅವುಗಳಿಗೆ ಮಾತ್ರ ಪ್ರಶ್ನೆ ಮಾಡದೇ ನಾವು, ದುಷ್ಟಕರ್ಮಗಳಿಗೆ ಮಾತ್ರ ಯಾಕೆ ಪ್ರಶ್ನೆ ಮಾಡುತ್ತೇವೆ. ಆಗ ಮಾತ್ರ ದೇವರೇ ಮಾಡಿಸುತ್ತಿದ್ದಾನೆ ಎಂಬ ಮಾತು ಯಾಕೆ. 
  
  ಪರಮಾತ್ಮ ಯಾರಲ್ಲಿ ನಿಂತು ಯಾವ ಕರ್ಮ ಮಾಡಿಸುತ್ತಾನೆಯೋ ಆ ಕರ್ಮದ ಫಲ ಅವರಿಗೆ. 
  
  ನಮ್ಮ ಸ್ವಭಾವದ ಅನುಸಾರವಾಗಿ ಸತ್ಕರ್ಮ, ದುಷ್ಕರ್ಮ ಎರಡನ್ನೂ ದೇವರು ಮಾಡಿಸುತ್ತಾನೆ.
  
  ತಪ್ಪು ಯಾಕೆ ಮಾಡಿಸುತ್ತಾನೆ, ಕಷ್ಟ ಯಾಕೆ ನೀಡುತ್ತಾನೆ ಎನ್ನುವದಕ್ಕೆ ಈಗಾಗಲೇ VNA038 ರಲ್ಲಿ ಉತ್ತರಿಸಿದ್ದೇನೆ. 
  
  ವಾಮಾಚಾರದ ಪರಿಹಾರ, ಹರಿ-ದೇವತಾ-ಗುರುಗಳ ಆರಾಧನೆಯಿಂದಲೇ. ಮತ್ತೊಂದು ದಾರಿಯನ್ನು ನಾವು ಅನುಸರಿಸಬಾರದು. 
  
 • Manjunath,

  3:14 PM , 25/05/2017

  ಆಚಾರ್ಯರೆ ಸುದರ್ಶನ ಹೋಮ‌ ಮಾಡಿಸಿದವರ ಮನೆಗೆ ಮತ್ತು ಸುದರ್ಶನ ಸಾಲಿಗ್ರಾಮ ಇರುವ ಮನೆಗೆ ವಾಮಾಚಾರದ ಪ್ರಭಾವ ಬೀರುವುದಿಲ್ಲ ಎಂದು ಕೇಳಿದ್ದೇನೆ ಇದರ ಉಲ್ಲೇಖವೇನಾದರು ಇದೆಯೇ
 • ಸುದರ್ಶನ ಎಸ್. ಎಲ್.,

  10:45 AM, 25/05/2017

  ಶ್ರೀ ನಾರಾಯಣ ಪಂಡಿತಾಚಾರ್ಯರ ಕೃತಿ ನರಸಿಂಹ ಸ್ತುತಿ ಎಂದು ಕೇಳಿದ್ದೇನೆ ಗುರುಗಳೆ. ಇದರ ಕೊನೆಯ ಶ್ಲೋಕದ ಅನುವಾದವನ್ನು ದಯವಿಟ್ಟು ತಿಳಿಸಿ 🙏