Prashnottara - VNP067

ಜಾತಾಶೌಚ ಮೃತಾಶೌಚಗಳ ಆಚರಣೆ


					 	

ಪ್ರಣಾಮ ಆಚಾರ್ಯರೇ. ನನ್ನ ತಮ್ಮ ಇಂದು ತೀರಿಕೊಂಡಿದ್ದಾನೆ. ನಾನು ಸಂಧ್ಯಾವಂದನೆ ಮಾಡಬಹುದೇ? ದಯವಿಟ್ಟು ತಿಳಿಸಿ. — ಸುಬ್ರಹ್ಮಣ್ಯ ಭಾರದ್ವಾಜ ಜಾತಾಶೌಚ ಮೃತಾಶೌಚಗಳ ಕುರಿತು ತುಂಬ ಜನ ಪ್ರಶ್ನೆ ಕೇಳಿದ್ದಾರೆ. ಎರಡರ ಕುರಿತೂ ಲೇಖನದಲ್ಲಿ ವಿವರಿಸಿದ್ದೇನೆ.


Download Article Share to facebook View Comments
11691 Views

Comments

(You can only view comments here. If you want to write a comment please download the app.)
 • B Seetharam Pajithaya,Hyderabad

  11:09 AM, 25/01/2022

  ಮೃತ ಶೌಚದ ಸಮಯದ ಮದ್ಯದಲ್ಲಿ ಜಾತ ಶೌಚ ಉಂಟಾದರೆ ಆಚರಣೆಯ ನಿಯಮವೇನು.
 • Shankaranarayana Punichathaya,Bengaluru

  10:06 AM, 20/08/2021

  ಆಚಾರ್ಯರೇ ಪ್ರಣಾಮಗಳು.ನನ್ನ ಸಂದೇಹ.ವಿದೇಶ ದಲ್ಲಾದ ಜಾತಾ ಶೌತ ನಾವೂ 10 ದಿನ ಆಚರಿಸಬೇಕೆ?ಇಲ್ಲದಿದ್ದಲ್ಲಿ ಎಷ್ಟು ದಿನದ ನಂತರ ಶುದ್ಧ.ಈ ರೀತಿಯ ಸಂದರ್ಭಬಂದಿದೆ.ಕೃಪೆತೋರಿ ತಿಳಿಸಿ ಎಂದು ವಿನಮ್ರ ವಿನಂತಿ.
  
  ನಮಸ್ಕಾರಗಳು
  ಶಂ ನಾ ಕೊಲ್ಯ.ಬೆಂಗಳೂರು.
 • Arun,Banga

  9:13 AM , 04/11/2020

  ಗುರುಗಳೇ, ಪಕ್ಷಿಣ್ಯಾಶೌಚ ಅಂದರೇನು ಮತ್ತು ಅದು ಎಸ್ಟು ದಿವಸ ದಯವಿಟ್ಟು ತಿಳಿಸಿ

  Vishnudasa Nagendracharya

  ಪಕ್ಷ ಎಂದರೆ ರೆಕ್ಕೆ. ರೆಕ್ಕೆಗಳುಳ್ಳ ಕಾರಣಕ್ಕೇ ನಾವು ಹಕ್ಕಿಯನ್ನು ಪಕ್ಷಿ ಎಂದು ಕರೆಯುವದು. 
  
  ಹೇಗೆ ಪಕ್ಷಿಗಳಿಗೆ ಎರಡು ರೆಕ್ಕೆಗಳಿರುತ್ತವೆಯೋ, ಹಾಗೆ ಹಿಂದೆ ಮುಂದೆ ಎರಡು ಹಗಲುಗಳುಳ್ಳ ರಾತ್ರಿಗೆ ಪಕ್ಷಿಣೀ ಎಂಬ ಹೆಸರು ಎಂದು ಶ್ರೀ ಕೃಷ್ಣಾಚಾರ್ಯರು ಸ್ಮೃತಿಮುಕ್ತಾವಲಿಯಲ್ಲಿ ತಿಳಿಸುತ್ತಾರೆ — “ಉಭಯತಃ ಪಕ್ಷಾವಿಹ ಅಹನೀ ಯಸ್ಯಾ ರಾತ್ರೇಃ ಸಾ ಪಕ್ಷಿಣೀ” ಎಂದು. 
  
  ಶುದ್ಧಿತತ್ವದಲ್ಲಿ ಈ ಮಾತಿಗೆ ಆಧಾರವನ್ನೂ ಒದಗಿಸಿದ್ದಾರೆ — ದ್ವಾವಹ್ನಾವೇಕರಾತ್ರಿಶ್ಚ ಪಕ್ಷಿಣೀತ್ಯಭಿಧೀಯತೇ” ಎರಡು ಹಗಲು ಒಂದು ರಾತ್ರಿಯನ್ನು ಪಕ್ಷಿಣೀ ಎನ್ನುತ್ತಾರೆ ಎಂದು.
  
  ಈ ಪಕ್ಷಿಣೀ ಶಬ್ದವು ಅಧಿಕವಾಗಿ ಅಶೌಚದ ಪ್ರಸಂಗದಲ್ಲಿ ಬಳಕೆಯಾಗುತ್ತದೆ. (ಉತ್ಸರ್ಜನವಿಧಿಯಲ್ಲಿಯೂ ಇದೆ, ಪ್ರತ್ಯೇಕವಾಗಿ ತಿಳಿಯಬೇಕಾದ ವಿಷಯ) 
  
  ಪಕ್ಷಿಣೀ ಅಶೌಚ ಎಂದರೆ ಎರಡು ಹಗಲು ಒಂದು ರಾತ್ರಿಯ ಅಶೌಚ ಎಂದರ್ಥ. 
  
  ಗುರುವಾರ ಹಗಲಿನಲ್ಲಿ ಮರಣವಾದರೆ ಗುರುವಾರದ ಹಗಲು, ಗುರುವಾರದ ರಾತ್ರಿ ಮತ್ತು ಶುಕ್ರವಾರದ ಹಗಲು ಅಶೌಚ ಇರುತ್ತದೆ. ಶುಕ್ರವಾರ ಸೂರ್ಯಾಸ್ತದ ನಂತರ ಶುದ್ಧಿ. 
  
  ಗುರುವಾರ ರಾತ್ರಿಯಲ್ಲಿ ಮರಣವಾದರೂ ಸಹ ಹಿಂದಿನ ಹಗಲಿನ ಲೆಕ್ಕಕ್ಕೇ ಬರುವದರಿಂದ ಶುಕ್ರವಾರದ ಸೂರ್ಯಾಸ್ತದ ನಂತರವೇ ಶುದ್ಧಿ ಎಂದು ಶುದ್ಧಿತತ್ವ ತಿಳಿಸುತ್ತದೆ — ತತ್ರ ಪೂರ್ವದಿನರಾತ್ರೌ ತನ್ನಿಮಿತ್ತೇ ಜಾತೇ ಪೂರ್ವದಿವಸೀಯದಿನಮಾದಾಯೈವ ಪಕ್ಷಿಣೀ ವ್ಯವಹಾರಃ ಎಂದು. 
  
  ಕೆಲವರು ರಾತ್ರಿ ಮರಣವಾದರೆ ಆ ರಾತ್ರಿ, ಮಾರನೆಯ ಹಗಲು, ಮಾರನೆಯ ರಾತ್ರಿಯಂದು ಅಶೌಚವನ್ನು ಆಚರಿಸಿ ಸೂರ್ಯೋದಯದ ನಂತರ ಶುದ್ಧಿ ಮಾಡಿಕೊಳ್ಳುತ್ತಾರೆ. 
  
  ಇಲ್ಲಿ ತಿಳಿಯಬೇಕಾದ ಸಾಕಷ್ಟು ಅಂಶಗಳಿವೆ, ಮತ್ತು ಚರ್ಚೆಯಿದೆ. ನನ್ನ ಕಣ್ಣಿನ ಆರೋಗ್ಯ ಸರಿಯಾದ ಬಳಿಕ ಬರೆಯುತ್ತೇನೆ. 
 • Shravan Prabhu,Kumta taluk near gokarna

  11:00 PM, 27/08/2020

  ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು. ಅಚಾರ್ಯರೆ, ಮೃತ ಶೌಚದ ಸಂಧರ್ಬದಲ್ಲಿ, ಮನೆಯ ಯಾವುದೇ ವಸ್ತುವನ್ನು ಅಥವಾ ಬಟ್ಟೆಯನ್ನು, ಪಾತ್ರೆಗಳನ್ನು ಆದಷ್ಟು ಮುಟ್ಟಬಾರದು ಎಂದು ಹೇಳಿದ್ದೀರಿ. ಆಚಾರ್ಯರೆ, ಈ ನಿಯಮ ಕೇವಲ ಮನೆಯ ಒಳಗೆ ಮೃತರಾದರೆ ಮಾತ್ರ ಅನ್ವಯಿಸುತ್ತದೆಯೇ ಅಥವಾ ಎಲ್ಲರಿಗೂ ಅನ್ವಯಿಸುತ್ತದೆ?
  ಒಂದು ವೇಳೆ ನಮ್ಮ ಕುಟುಂಬದ ಒಬ್ಬ ವ್ಯಕ್ತಿ ಬೇರೆ ರಾಜ್ಯದಲ್ಲಿ ಅಥವಾ ಬೇರೆ ಊರಿನಲ್ಲಿ ಮೃತಾರದರೆ ನಾವು ಈ ಮೇಲಿನ ನಿಯಮವನ್ನು ಪಾಲಿಸಬೇಕೇ?
  ದಯವಿಟ್ಟು ತಿಳಿಸಿ ಕೊಡಬೇಕೆಂದು ವಿನಂತಿಸಿೊಳ್ಳುತ್ತೇನೆ.
  🙏🙏🙏

  Vishnudasa Nagendracharya

  ಸೂತಕ ಇರುವ ಎಲ್ಲರಿಗೂ ಅನ್ವಯಿಸುತ್ತದೆ. ಅಂದರೆ ಮನೆಯಲ್ಲಿ ಮೃತರಾದರೆ ಮಾತ್ರ ಮೈಲಿಗೆ ಎಂದಿಲ್ಲ. ನಮ್ಮ ಸಂಬಂಧಿಕರು ಎಲ್ಲಿಯೇ ಮೃತರಾದರೂ ನಾವು ನಮ್ಮ ಮನೆಯಲ್ಲಿ ಮೈಲಿಗೆಯ ಆಚರಣೆ ಮಾಡಬೇಕು. ಮನೆಯ ವಸ್ತುಗಳನ್ನು ಮುಟ್ಟಬಾರದು. 
 • Sreehari,Bangalore

  10:09 PM, 18/04/2020

  ಗುರುಗಳೇ ನಮಸ್ಕಾರಗಳು. ನನ್ನ ಪ್ರಶ್ನೆ ಮಾಗು ಹುಟ್ಟಿದ ನಂತರ ಮನೆಯಲ್ಲಿ ಮೈಲಿಗೆ ಅಂತ ಶಾಸ್ತ್ರದಲ್ಲಿ ಯಾಕೆ ಹೇಳುತ್ತಾರೆ. ನಮ್ಮ ದೊಡ್ಡಪ್ಪ ನಿಗೆ ಮೊಮ್ಮಾಗು ಆಗಿದೆ, ಅವರು ನಮ್ಮ ಮನೇಲಿ ಇರುವುದಿಲ್ಲ. ನಮ್ಮ ಮನೇಲಿ ಕೂಡ ಮೈಲಿಗೆ ಇರುತ್ತಾ? ದಯವಿಟ್ಟು ತಿಳಿಸಿ. ತುಂಬಾ ಧನ್ಯವಾದಗಳು

  Vishnudasa Nagendracharya

  ಹುಟ್ಟು ಸಾವುಗಳ ಸಂದರ್ಭದಲ್ಲಿ ಮೈಲಿಗೆ ಏಕೆ ಆಚರಿಸಬೇಕು ಎನ್ನುವ ಪ್ರಶ್ನೆಗೆ ತುಂಬ ವಿಸ್ತೃತ ಉತ್ತರದ ಆವಶ್ಯಕತೆಯಿದೆ. ಸಮಯ ದೊರೆತ ತಕ್ಷಣ ಪ್ರತ್ಯೇಕ ಲೇಖನವನ್ನು ಬರೆಯುತ್ತೇನೆ. 
  
  ದೊಡ್ಡಪ್ಪನವರ ಮನೆಯಲ್ಲಿ ಮೊಮ್ಮಗು ಹುಟ್ಟಿದಾಗ ಅವಶ್ಯವಾಗಿ ನಿಮಗೂ ಮೈಲಿಗೆ ಇರುತ್ತದೆ. ಹತ್ತು ದಿವಸ.
 • Ramakrishna,

  10:28 PM, 14/05/2018

  ,
 • Ramakrishna,

  10:28 PM, 14/05/2018

  ,
 • Mukunda S N,

  10:36 PM, 20/01/2018

  ನಮೋ ನಮಃ, ಆಚಾರ್ಯರೇ ಜಾತಾ ಶೌಚದಲ್ಲಿ 3ದಿವಸ ಬಾಕಿ ಇರುವಾಗ ಇನ್ನೊಂದು10ದಿವಸದ ಜಾತಾ ಶೌಚ ಬಂದಾಗ, ಶೌಚದ ಆಚರಣೆ ಹೇಗೆ ದಯವಿಟ್ಟು ತಿಳಿಸಿ.
 • Ganesh Prasad Nayak,Manjeshwar

  11:16 AM, 28/07/2017

  ಹಲವು ಕವಲುಗಳಿರುವ ದೊಡ್ಡ ಕುಟು0ಬಗಳಲ್ಲಿ... ಜನನ ಮರಣಗಳು ನಡೆದಾಗ ಮೃತ ವ್ಯಕ್ತಿ ನಮ್ಮ ಕುಟು0ಬಸ್ಥ ಅನ್ನುವುದು ಮಾತ್ರ ಗೊತ್ತಿದೆ, ಆ ವ್ಯಕ್ತಿಯಾರು,ನಮಗೆ ಸ0ಬಂಧಿ ಹೇಗೆ ಅನ್ನುವುದು ಗೊತ್ತಿಲ್ಲದಿದ್ದರೆ, ನಮಗೆ ಪರಿಚಯವೇ ಇಲ್ಲದವರಾಗಿದ್ದರೆ, ಸೂತಕಾದಿ ಆಚರಣೆ ಇದೆಯೇ. ನಮ್ಮದು ಹತ್ತಾರು ಕವಲು ಗಳಿರುವ ಸಾವಿರಾರು ಸದಸ್ಯರಿರುವ ಕುಟು0ಬ, ನಮ್ಮ ತ0ದೆಯವರ ಕವಲಿನವರ ಪರಿಚಯ ಮಾತ್ರ ನಮಗಿರುತ್ತದೆ... ಹೀಗಿರುವಾಗ ಶೌಚಾದಿಗಳು ಹೇಗೆ ಆಚರಿಸಬೇಕು. ಈ ವಿಚಾರ ಬಹಳ ಕಾಡುತ್ತಿದೆ. ದಯವಿಟ್ಟು ಪ್ರಮಾಣ ಸಹಿತ ತಿಳಿಸಿ ಗುರುಗಳೆ..

  Vishnudasa Nagendracharya

  ಸಂಬಂಧ ತಿಳಿಯದೇ ಅಶೌಚವನ್ನು ನಿರ್ಣಯಸಲು ಸಾಧ್ಯವಿಲ್ಲ. 
  
  ಪರಿಚಯ ಇರಲಿ, ಇಲ್ಲದಿರಲಿ, ಸಪಿಂಡರು ಮೃತರಾದಾಗ ಅಶೌಚ ಇದ್ದೇ ಇರುತ್ತದೆ. 
  
  
 • Nithinchandra,

  4:59 PM , 20/07/2017

  ಗೋಪಿಚಂದನ ಮಾತ್ರ ಧರಿಸಬೇಕು,ಅಂಗಾರ ಅಕ್ಷತೆಗಳ ಧಾರಣ ಇರುವದಿಲ್ಲ ಎಂದು ತಾವು page no 4 ದಾಗ ಹೇಳಿದ್ದೀರಿ.. ಅದಕ್ಕೆ ಈ ಪ್ರಶ್ನೆಯನ್ನು ಕೇಳಿದ್ದು ಗುರುಗಳೇ.. ಧನ್ಯವಾದಗಳು

  Vishnudasa Nagendracharya

  ಸ್ಪಷ್ಟವಾದ ವಾಕ್ಯಗಳನ್ನು ಈಗ ಸೇರಿಸಿದ್ದೇನೆ. ಗಂಧ, ಅಂಗಾರ, ಅಕ್ಷತೆಗಳ ಧಾರೆಯಿರುವದಿಲ್ಲ. 
  
  ಕೇವಲ ಹಣೆಯ ಮೇಲೆ ಅಂಗಾರವನ್ನು ಧರಿಸಬೇಕು. 
  
  Please delete the old pdf and download again. 
 • Nithinchandra,Atmakur

  7:00 AM , 14/07/2017

  ಅಂಗಾರ ಧಾರಣೆ ಮಾಡಬಾರದೆ ಮೃತಾಶೌಚ ವಿದ್ದಾಗ?

  Vishnudasa Nagendracharya

  ಅಶೌಚದಲ್ಲಿ ಅಂಗಾರ ಮಾತ್ರ ಹಚ್ಚಬೇಕು. ಅಕ್ಷತೆ ಹಚ್ಚಬಾರದು. 
 • Madhusudhan Kandukur,Bangalore

  12:23 PM, 03/06/2017

  ಆಚಾರ್ಯ ರೇ! ನಮ್ರ ವಿನಂತಿ ಏನೆಂದರೆ ತಿಲಾ ಹೋಮವನ್ನು ಏತಕ್ಕಾಗಿ ಮಾಡಬೇಕು? ದಯವಿಟ್ಟು ತಿಳಿಸಿ

  Vishnudasa Nagendracharya

  ವಿಸ್ತಾರವಾಗಿ ಬರೆಯಬೇಕು. ಸಮಯ ದೊರೆತ ತಕ್ಷಣ ಬರೆಯುತ್ತೇನೆ. 
 • Sheela M,

  4:45 PM , 03/06/2017

  Videekada devada devara pooje maaduvaga jaagate barisabarade

  Vishnudasa Nagendracharya

  ದೇವರ ಪೂಜೆಯ ಸಂದರ್ಭದಲ್ಲಿ ಅವಶ್ಯವಾಗಿ ಗಂಟೆ, ಜಾಗಟೆ ಬಾರಿಸಬೇಕು. ಅದರ ಹೊರತಾಗಿ ಬಾರಿಸಬಾರದು. 
 • Sheela M,

  4:43 PM , 03/06/2017

  Maneyalli yideka or paksha edda devasa baagilige arishina kunkuma ettu rangoli hakabarade mattu angalakke neeru haaki rangoli haaka baarade

  Vishnudasa Nagendracharya

  ಈಗಾಗಲೇ ಲೇಖನದಲ್ಲಿ ವಿವರಿಸಿದ್ದೇನೆ. 
  
  ಶ್ರಾದ್ಧವಿರುವ ದಿವಸ ಮನೆಯ ಮುಂದೆ ಸರ್ವಥಾ ರಂಗೋಲಿ ಹಾಕಬಾರದು. 
  
  ದೇವರ ಮಂಟಪದ ಮುಂದೆ ಮಾತ್ರ ಹಾಕಬಹುದು, ದೇವರ ಮನೆಯ ಮಂದೆಯೂ ಹಾಕಬಾರದು. 
  
  ತಳಿರು, ತೋರಣ ಕಟ್ಟಬಾರದು. ಹೊಸದಾಗಿ ಕಟ್ಟಬಾರದಷ್ಟೇ ಅಲ್ಲ, ಹಿಂದೆ ಕಟ್ಟಿರುವ ತೋರಣಗಳನ್ನೂ ತೆಗೆಯಬೇಕು. 
  
  ಹೊಸ್ತಿಲು, ಅಂಗಳ ಎಲ್ಲವನ್ನೂ ತೊಳೆಯಬೇಕು, ಅಲಂಕರಿಸಬಾರದು. 
 • M. Ullas Hegde,Mangalore

  10:54 AM, 02/06/2017

  Manasinka mathu daihika yendu nambidre adu atyantha hattirada snehita sathu hodare yaake e 10 divasada ashoucha viruvudilla....? 
  
  Namma duurada bandhuvigintalu atiyate hattirada geleyanalli naavu ettukondirutheve.... 
  
  Kelavomme yaaro-yeno endu gothillada sambandhi... jeevana dalli avara vishaya prathama baari keliddu anthavaru sathu hodaru athava vairi sambandhi eruthare avara mane yalli janana vaayithendu kaeli ashowcha paalane maduvudu hege sadhya.... manassadaru hege baruthade?

  Vishnudasa Nagendracharya

  ಸೂತಕದ ಆಚರಣೆಗೆ ರಕ್ತಸಂಬಂಧ ಪ್ರಧಾನ ಕಾರಣ. ಅದರ ಜೊತೆಯಲ್ಲಿ ಉಳಿದ ಕಾರಣಗಳು. 
  
  ನಾವು ಬೇಡವೆಂದರೂ ರಕ್ತ ಸಂಬಂಧ ಹೋಗುವದಿಲ್ಲ. 
  
  ಮತ್ತು ತುಂಬ ಉಪಕಾರ ಮಾಡಿದ ಬಂಧುಗಳ ಮರಣದಲ್ಲಿ ಶಾಸ್ತ್ರವೇ ಹೆಚ್ಚಿನ ಸೂತಕವನ್ನು ಹೇಳುತ್ತದೆ. 
  
  ಉದಾಹರಣೆಗೆ, ಸೋದರ ಮಾವ ಸತ್ತಾಗ ಸೋದರಳಿಯನಿಗೆ ಒಂದೂವರೆ ದಿವಸ ಸೂತಕ. ಆದರೆ, ಸೋದರಮಾವ ತನ್ನ ಮನೆಯಲ್ಲಿ ಮೃತನಾದರೆ, ಅಥವಾ ಸೋದರಮಾವನಿಂದ ತುಂಬ ಉಪಕಾರವಾಗಿದ್ದರೆ ಮೂರು ದಿವಸದ ಸೂತಕವನ್ನು ಶಾಸ್ತ್ರ ವಿಧಿಸುತ್ತದೆ. 
  
  ಹಾಗೆಯೇ, ಪಾಠ ಹೇಳಿದ ಗುರುಗಳು ರಕ್ತಸಂಬಂಧಿಯಲ್ಲದಿದ್ದರೂ ಅವರ ಮರಣದಲ್ಲಿ ಸೂತಕವಿದೆ. 
  
  ಮನೆಯಲ್ಲಿನ ಹಸು, ಕುದುರೆಗಳು ನಮಗೆ ಉಪಕಾರವನ್ನು ಮಾಡಿರುತ್ತವೆ. ಹೀಗಾಗಿ ಅವುಗಳ ಮರಣದಲ್ಲಿಯೂ ಸೂತಕವಿದೆ. 
  
  ಹಾಗೆಯೇ ಅತ್ಯಂತ ಉಪಕಾರ ಮಾಡಿದ ಸ್ನೇಹಿತರ, ಸಹಾಧ್ಯಾಯಿಗಳ ಮರಣದಲ್ಲಿಯೂ ಶಾಸ್ತ್ರ ಸೂತಕವನ್ನು ವಿಧಿಸುತ್ತದೆ. 
  
 • Pranesh ಪ್ರಾಣೇಶ,

  11:54 PM, 01/06/2017

  ಜಾತಾ ಶೌಚ ಮೃತಾ ಶೌಚದಲ್ಲಿ ಸಚೇಲ  (ಮಾಡ ಬಏಕೆ

  Vishnudasa Nagendracharya

  ಜಾತಾಶೌಚ, ಮೃತಾಶೌಚ ಅಷ್ಟೇ ಅಲ್ಲ, ಯಾವುದೇ ರೀತಿಯ ಮೈಲಿಗೆಯನ್ನು ಕಳೆದುಕೊಳ್ಳುವಾಗ ಸಚೈಲ ಸ್ನಾನವನ್ನೇ ಮಾಡಬೇಕು. 
  
  ಅಂದರೆ, ಮೈಲಿಗೆಯವರನ್ನು ಮುಟ್ಟಿದ ನಂತರ, ಕ್ಷೌರದ ನಂತರ, ಹೊಲಸು ಪದಾರ್ಥಗಳನ್ನು ಮುಟ್ಟಿದಾಗ, ಹೀಗೆ ಯಾವುದೇ ರೀತಿಯ ಮೈಲಿಗೆಯನ್ನು ಕಳೆದುಕೊಳ್ಳಬೇಕಾದರೂ ಸಚೈಲ ಸ್ನಾನ ಮಾಡಬೇಕು. 
  
  ಸಚೈಲ ಸ್ನಾನ - ಪ್ರತೀದಿವಸ ಸ್ನಾನ ಮಾಡಬೇಕಾದರೆ ಒಂದು ಬಟ್ಟೆಯನ್ನು ಮೊದಲು ಒದ್ದೆ ಮಾಡಿ ಅದನ್ನುಟ್ಟುಕೊಂಡು ಸ್ನಾನ ಮಾಡಬೇಕು. ಮೈಲಿಗೆಯಿದ್ದಾಗ, ಒದ್ದೆಯನ್ನುಡದೇ ಉಟ್ಟ ಬಟ್ಟೆಯಲ್ಲಿಯೇ ಸ್ನಾನಕ್ಕಿಳಿಯಬೇಕು. ಇದನ್ನು ಸಚೈಲ ಸ್ನಾನ ಎನ್ನುತ್ತಾರೆ. 
 • suraj sudheendra,bengaluru

  2:54 PM , 01/06/2017

  gurugale hosa version mattashtu upayuktavaagide!! bahala dhanyavaadagalu!! haage keluvu prashnegalive
  1. ashouchada samayadalli sandhyaanga arghya kotta mele sandhyavandaneya samarpane hege?
  2. kelavaru heluttare, ashouchaviruvavara maneyalli nanda deepa hachha baaradu, adige maadabaaradu antha! sariyaada maarga yaavudu?
  3. keluvomme ashoucha bandaaga yaarigella, yestella divasa mailige iruttade annuvudu tiliyade hoguttade. . adannu hege tiyuvudu yendu dayamaadi tilisuvira?

  Vishnudasa Nagendracharya

  1. ಅರ್ಘ್ಯ ಮುಗಿದ ಮೇಲೆ ಯಸ್ಯ ಸ್ಮೃತ್ಯಾ ಹೇಳಿ, ಸಂಧ್ಯಾವಂದನೆಯ ಸಮರ್ಪಣೆ. 
  
  2. ಅಶೌಚವಿದ್ದವರು ದೇವರ ಮನೆಗೆ ಹೋಗಿ ದೀಪವನ್ನು ಹಚ್ಚಬಾರದು. ಮೈಲಿಗೆ ಇಲ್ಲದ ಮತ್ತೊಬ್ಬರು ಮನೆಯಲ್ಲಿದ್ದಾಗ ಅವರು ದೀಪವನ್ನೂ ಹಚ್ಚಬಹುದು, ದೇವರ ಪೂಜೆಯನ್ನೂ ಮಾಡಬಹುದು, ಅಡಿಗೆಯನ್ನೂ ಮಾಡಬಹುದು. 
  
  3. ವಿಸ್ತಾರವಾಗಿ, ಪ್ರಮಾಣಗಳೊಂದಿಗೆ ತಿಳಿಸಬೇಕು. ಸಮಯ ದೊರೆತ ತಕ್ಷಣ ಮಾಡಿಕೊಡುತ್ತೇನೆ. 
 • Manjunath,Bangalore

  1:46 PM , 01/06/2017

  Acharyare hennu Makalu modala Bari pushpavathiyadaga manege ashoucha iruvudillava

  Vishnudasa Nagendracharya

  ಹೆಣ್ಣುಮಕ್ಕಳು ಪ್ರಥಮಬಾರಿಗೆ ಋತುಮತಿಯಾದಾಗ, ಅವರಿಗೆ ಮಾತ್ರ ಮೈಲಿಗೆ. ಮನೆಗೆ ಮೈಲಿಗೆ ಇರುವದಿಲ್ಲ. 
 • Madhusudhan Kandukur,Bangalore

  2:38 PM , 01/06/2017

  ಆಚಾರ್ಯ ರೇ! ಪ್ರಣಾಮಗಳು! ಮಾಸಿಕ ಗಳು ಮಾಡುವಾಗ ತಿಲಾ ಹೋಮ ವನ್ನು ಕಡ್ಡಾಯವಾಗಿ ಮಾಡಬೇಕಾ?

  Vishnudasa Nagendracharya

  ಕಡ್ಡಾಯವಿಲ್ಲ. 
 • Abhiram Udupa,

  11:59 AM, 01/06/2017

  All doubts cleared, GurugaLe. Pranamagalu.