Prashnottara - VNP068

ಪೂಜ್ಯಾಯ ಎಂಬ ಶ್ಲೋಕ ಅಪರಿಪೂರ್ಣವೇ?


					 	

ಪೂಜ್ಯಾಯ ಎಂಬ ಶ್ಲೋಕ ಅಪರಿಪೂರ್ಣವೇ? ಪೂಜ್ಯಾಯ ಎಂಬ ಶ್ಲೋಕದಲ್ಲಿ ನಮಃ ಎನ್ನುವದಿಲ್ಲ ಎನ್ನುವ ಕಾರಣಕ್ಕೆ ಅದನ್ನು ಅಪರಿಪೂರ್ಣ ಎನ್ನುತ್ತಾರೆ. ಆ ಶ್ಲೋಕ ಹೇಳುವಾಗಲೆಲ್ಲ ದುರ್ವಾದಿಧ್ವಾಂತರವಯೇ ಎಂಬ ಮುಂದಿನ ಶ್ಲೋಕವನ್ನು ಹೇಳಲೇಬೇಕು ಎನ್ನುತ್ತಾರೆ. ಇದು ಸರಿಯೇ? ಎರಡನೆಯ ಪ್ರಶ್ನೆ — ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ ಎನ್ನುವದನ್ನು ಸಜ್ಜನೇಂದೀವರೇಂದವೇ ಎಂದು ಹೇಳುತ್ತಾರೆ. ನನಗಿರುವ ಅಲ್ಪಜ್ಞಾನದಲ್ಲಿ, ವೈಷ್ಣವನಾಗಿರಲಿ ಬಿಡಲಿ, ರಾಯರ ಭಕ್ತನಾಗಲು, ಅವರಿಂದ ಅನುಗ್ರಹ ಪಡೆಯಲು ತೊಂದರೆಯಿಲ್ಲ ಅಲ್ಲವೇ? ದಯವಿಟ್ಟು ತಿಳಿಸಿ. — ಪರಿಮಳ ರಾವ್.


Download Article Share to facebook View Comments
3889 Views

Comments

(You can only view comments here. If you want to write a comment please download the app.)
 • Sri Hari,Bangalore

  9:50 PM , 08/08/2020

  ಬನ್ನಂಜೆ ಗೋವಿಂದಾಚಾರ್ಯರು " ಸಜ್ಜನೇಂದೀವರೇಂದವೆ " ಎಂಬುದಾಗಿ ಪಾಠಾಂತರ ಇದೆ ಎಂದು ಹೇಳಿದ್ದಾರೆ.
 • Ganesh,Bangalore

  9:23 PM , 29/08/2018

  Give respect to sri bannanje govindacharyaru.🙏🙏🙏. Do not use singular sense.

  Vishnudasa Nagendracharya

  When that person calls all our GurugaLu - including Srimadacharyaru - in singuler, how is he suppossed to be respected in plural. Read my Bannanje Vimarsha to know such usages.
 • MAHADI SETHU RAO.,BENGALURU

  12:49 AM, 27/08/2018

  Excellent Explanations. Dhanyavadagalu. Guruji.
  HARE KRISHNA.
 • Vijayendra D Joshi,Bengaluru

  7:49 PM , 26/06/2017

  Pujyaya shlokada..koneyalli namatham kamadenuve embuvudarinda purnagolluthade...
  
  Elli shrihariya parama krupege patrarada baktharige vyasnavarendu kareyabahudu..
 • Pranesh ಪ್ರಾಣೇಶ,

  11:46 PM, 01/06/2017

  ರಾಯರ ಸ್ತೋತ್ರದ ಕೊನೆಯ ಶ್ಲೋಕ ಯಾವುದು

  Vishnudasa Nagendracharya

  ಶ್ರೀಮದಪ್ಪಣಾಚಾರ್ಯರು ರಚಿಸಿರುವ ಶ್ರೀ ರಾಘವೇಂದ್ರಸ್ತೋತ್ರಕ್ಕೆ ಶ್ರೀ ಧೀರೇಂದ್ರತೀರ್ಥಶ್ರೀಪಾದಂಗಳವರು ಒಂದು ವ್ಯಾಖ್ಯಾನ ರಚಿಸಿದ್ದಾರೆ. ಅದರಲ್ಲಿ "ಇತಿ ಶ್ರೀರಾಘವೇಂದ್ರಾರ್ಯಗುರುರಾಜಪ್ರಸಾದತಃ" ಎಂಬ ಶ್ಲೋಕವನ್ನೇ ಕಡೆಯ ಶ್ಲೋಕ ಎಂದು ಹೇಳಿದ್ದಾರೆ. ಹೀಗಾಗಿ ಅದು ಕಡೆಯ ಶ್ಲೋಕ ಎನ್ನುವದರಲ್ಲಿ ಸಂಶಯವೇ ಇಲ್ಲ. 
  
  ಆದರೆ, ಪೂಜ್ಯಾಯ ರಾಘವೇಂದ್ರಾಯ ಮತ್ತು ದುರ್ವಾದಿಧ್ವಾಂತರವಯೇ ಎನ್ನುವ ಶ್ಲೋಕಗಳನ್ನು ಆ ಸ್ತೋತ್ರದ ಒಟ್ಟಿಗೇ ಪಠಿಸುವ ಸಂಪ್ರದಾಯವು ಬಂದಿದೆ. 
 • Pradyumna,Bengaluru

  12:37 AM, 02/06/2017

  Sashtanga Namaskara Acharyare,
  
  Dayavittu ,Please clarify below questions about Shri Raghavendrateertha Gurusarvabhoumaru
  
  1. Is Raghavendra Swamygalu in Brindavana even now physically, because I had read Rayaru life span is 700 years, so some people say Rayaru will be physically in Brindavana for 700 years(after Brindavana Pravesha). So in this context,How should we do meditate/prarthana to guru Rayaru ?
  
  2. I have read that Raghavendra Swamygalu, after Brindavana Pravesha, entered into state of samadhi. Can you please explain us how this state of samadhi will be as per yoga shastra and various yogic states attained by guru Rayaru after Brindavana Pravesha ? 
  This knowledge will enhance our mahatmya Jnana chintana about Shri RaghavendraSwamygalu.
  
  Dhanyavaadagalu.

  Vishnudasa Nagendracharya

  ದೇಹತ್ಯಾಗ ಮಾಡಿದ ಯತಿಗಳು ವೃಂದಾವನದಲ್ಲಿ ತೇಜೋರೂಪದಿಂದ ಸನ್ನಿಹಿತರಾಗಿರುತ್ತಾರೆ. ಅಷ್ಟೇ ಅಲ್ಲ, ಅನೇಕ ಮಹಾನುಭಾವರು ತಮ್ಮ ಅದ್ಭುತವಾದ ಯೋಗಸಾಮರ್ಥ್ಯದಿಂದ ತಮ್ಮ ಆ ಪಾರ್ಥಿವದೇಹವನ್ನೂ ಕೆಡದಂತೆ ಕಾಪಾಡುವ ಮಹತ್ತರ ಸಾಮರ್ಥ್ಯವನ್ನು ಹೊಂದಿರುತ್ತಾರೆ. ವೃಂದಾವನಸ್ಥರಾದ ಅನೇಕ ಯತಿಗಳ ಸಾಕ್ಷಾದ್ ದರ್ಶನವನ್ನು ಪಡೆದವರ ಅನುಭವವೇ ಇದಕ್ಕೆ ಜ್ವಲಂತ ಸಾಕ್ಷಿ. 
  
  ಆದರೆ ಶ್ರೀಮದ್ವಾದಿರಾಜಗುರುಸಾರ್ವಭೌಮರು ಮತ್ತು ಶ್ರೀ ರಾಘವೇಂದ್ರತೀರ್ಥಗುರುಸಾರ್ವಭೌಮರು ಸಶರೀರವಾಗಿ ವೃಂದಾವನಪ್ರವೇಶ ಮಾಡಿದ ಅಲೌಕಿಕಸಾಮರ್ಥ್ಯದ ಮಹಾನುಭಾವರು. ಅಂದರೆ ಮಹಾಯೋಗಶಕ್ತಿಸಂಪನ್ನರಾದ ಅವರು ತಮ್ಮ ದೇಹಕ್ಕೆ ಮರಣ ಬಾರದಂತೆಯೂ ರಕ್ಷಿಸಬಲ್ಲರು. ಜನರ ಎದುರಿನಲ್ಲಿ ನೂರಾರು ವರ್ಷಗಳು ಇರುವದು ಕಲಿಯುಗದ ಧರ್ಮಕ್ಕೆ ವಿರುದ್ಧವಾದದ್ದರಿಂದ (ಆದ್ದರಿಂದಲೇ ಶ್ರೀ ಮಧ್ವಾನುಜಾಚಾರ್ಯರು ಜನರ ಕಣ್ಣಿಗೆ ಕಾಣದಂತೆ ಶ್ರೀ ಕುಮಾರಪರ್ವತದಲ್ಲಿ ತಪೋನಿರತರಾಗಿದ್ದಾರೆ) ವೃಂದಾವನವನ್ನು ಪ್ರವೇಶಿಸಿ ಅದರೊಳಗೆ ಇರುತ್ತಾರೆ. ವೃಂದಾವನಪ್ರವೇಶವಾದ ಬಳಿಕ ಅವರು ದೇಹತ್ಯಾಗವನ್ನು ಮಾಡಿಯೇ ಇರಬೇಕೆಂಬ ನಿಯಮವಿಲ್ಲ. ಆ ಮಹಾನುಭಾವರು ತಮಗಪೇಕ್ಷೆ ಇರುವಷ್ಟು ಕಾಲ ಜೀವಂತವಾಗಿಯೇ ಇರಬಲ್ಲರು. 
  
  ಸಮಾಧಿ ಎನ್ನುವದು ಧ್ಯಾನದ ಪರಿಪಾಕಾವಸ್ಥೆ. ಶ್ರೀ ರಾಘವೇಂದ್ರತೀರ್ಥಗುರುರಾಜರು ಭಗವಂತನ ಸಾಕ್ಷಾತ್ಕಾರ ಪಡೆದ ಮಹಾನುಭಾವರಾದ್ದರಿಂದ, ಅವರು ತಮ್ಮ ಹೃದಯದಲ್ಲಿ ತಮ್ಮ ಅಂತರ್ಯಾಮಿಯನ್ನು ಸಾಕ್ಷಾತ್ತಾಗಿ ಕಾಣಬಲ್ಲರು. ಅಷ್ಟೇ ಅಲ್ಲ ವಿವಿಧ ಭಗವದ್ರೂಪಗಳನ್ನು ನಿರಂತರವಾಗಿ ಕಾಣಬಲ್ಲರು. 
 • Raghavendra,

  9:35 AM , 02/06/2017

  ಶ್ರೀಹರಿಯನ್ನು ಸರ್ವೋತ್ತಮ ಎಂದು ತಿಳಿದ ಎಲ್ಲರೂ ವೈಷ್ಣವರೆ.... ಇದೊಂದು ಮಾತು ಎಲ್ಲಾ ಪ್ರಶ್ನೆಗೇ ಉತ್ತರ ಕೊಟ್ಟಿದೆ ...ಧನ್ಯವಾದಗಳು
 • Parimala Rao,Mysore

  11:28 PM, 01/06/2017

  Gurugale, Nimmage Ananta Dhanyavadagalu. Your answers have cleared my current questions plus my other thoughts that was bothering me about people altering the original texts/compositions.
 • Dr.Guruprasad,

  5:30 PM , 01/06/2017

  Sri gurubhyo namaha.
  E lekhanadalli uttamavaada vivaraneyondige sandeha pariharisiddiri.
  Aadare bannanjeyavare vayustuti ya naakivrundai yannu & kayena vacha slokada "prakriti" vannu nishedisiddare.
  Idara bagge nimma abhiprayavenu?
  Sumadhvavijaya noo ide 
  
  Adare bannanje bagge neevu helida vishaya nanage tilidiralilla.

  Vishnudasa Nagendracharya

  ನಖಸ್ತುತಿಯಲ್ಲಿ ಭಾವಿತಾ ನಾಕಿವೃಂದೈಃ ಮತ್ತು ಭಾವಿತಾ ಭೂರಿಭಾಗೈಃ ಎಂಬ ಎರಡು ಪಾಠಗಳಿವೆ. ಅಂದರೆ, ಪ್ರಾಚೀನ ಕೋಶಗಳಲ್ಲಿಯೇ ಆ ರೀತಿಯ ಎರಡು ಪಾಠಗಳು ದೊರೆತಿವೆ. ಹೊರತು ಬನ್ನಂಜೆ ಸೇರಿಸಿದ್ದಲ್ಲ. ಬನ್ನಂಜೆ ಸೇರಿಸಿದರೆ ಅದಕ್ಕೆ ಬೆಲೆಯೂ ಬರುವದಿಲ್ಲ. 
  
  ದುರ್ವಾದಿಧ್ವಾಂತರವಯೇ ಎನ್ನುವ ಶ್ಲೋಕವನ್ನು ಬರೆದದ್ದು ಶ್ರೀ ಅಪ್ಪಣಾಚಾರ್ಯರು. ಅದು ಸರಿಯಿಲ್ಲ ಎಂದರೆ ಬನ್ನಂಜೆ ಬೇರೆಯ ಶ್ಲೋಕ ಬರೆದುಕೊಳ್ಳಲಿ. ಆದರೆ, ಪ್ರಾಚೀನರ ಕೃತಿಗಳನ್ನು ತಿದ್ದುವ ಅಧಿಕಾರ ಬನ್ನಂಜೆಗೂ ಇಲ್ಲ, ಯಾರಿಗೂ ಇಲ್ಲ. 
  
  ಯಾವುದನ್ನು ಮಾಡಬಾರದು ಎಂದು ಶ್ರೀಮದಾಚಾರ್ಯರು ಆದೇಶ ಮಾಡಿದ್ದಾರೆಯೋ, ಅಂತಹ ಪ್ರಕ್ಷೇಪ ವ್ಯತ್ಯಾಸಗಳನ್ನು ಮಾಡಿ ನಾವು ಪಂಡಿತರು ಎಂದು ಓಡಾಡುತ್ತಿರುವದು ಮಾಧ್ವಸಮಾಜದ ಇಂದಿನ ದುರಂತ. 
 • Jayashree karunakar,

  5:50 PM , 01/06/2017

  Thumbha chennagi vivaraneyannu udaharaneyondige sulabhavagi arthamadisiddira gurugale
 • Vijay Kumar,

  5:30 PM , 01/06/2017

  ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು. ಅದ್ಭುತವಾದ ವಿವರಣೆ. ನನಗೂ ಸಂಶಯ ಪರಿಹಾರವಾಯಿತು. ಅನಂತ ಪ್ರಣಾಮಗಳು