ಬ್ರಾಹ್ಮಣರನ್ನು ಸಾಕಲೆಂದೇ ನಾವು ವಿದೇಶಕ್ಕೆ ಹೋಗುವದು
ನಮಸ್ಕಾರ ಆಚಾರ್ಯರೇ, ಈ ಜಾಗತೀಕರಣದ ಯುಗದಲ್ಲಿ, ವಿಶ್ವದ ಬೆಳವಣಿಗೆಗೆ ಭಾರತವೂ ಕೊಡುಗೆಯನ್ನು ಸಲ್ಲಿಸುತ್ತಿರುವಾಗ ನಾವು ಬ್ರಾಹ್ಮಣರಾಗಿ ಇನ್ನೂ ಹಳೆಯ “ವಿದೇಶ ಯಾತ್ರೆ ನಿಷಿದ್ಧ” ಎಂಬ ಮಾತಿಗೆ ಅಂಟಿಕೊಂಡು ಕುಳಿತಿರಬೇಕೆ? ಅವಕ್ಕೆ ಅಂಟಿಕೊಂಡಿದ್ದರೆ ಈ ಹೊಸಯುಗದಲ್ಲಿ ನಾವು ಬೆಳೆಯುವದು ಹೇಗೆ? ಮೀಸಲಾತಿಯಿಂದ ಈಗಾಗಲೇ ನಾವು ತುಳಿತಕ್ಕೆ ಒಳಗಾಗಿದ್ದೇವೆ? ನಾವು ಫಾರಿನ್ನಿಗೆ ಹೋದರೆ ವೇದಗಳಿಂದ ದೂರವಾಗುತ್ತವೆ ಎಂದು ಹೇಳುತ್ತೀರಿ. ನಾವೇನು ಮಾಡಬೇಕು. ಇವತ್ತು ಪಂಡಿತರು, ಪುರೋಹಿತರು ಹೆಚ್ಚುಹೆಚ್ಚು ದಕ್ಷಿಣೆಗಳನ್ನು ಕೇಳುತ್ತಿದ್ದಾರೆ. ನಾವು ಹೊರಗೆ ಹೋಗಿ ದುಡಿಯದಿದ್ದಲ್ಲಿ, ಇವರಿಗೆಲ್ಲ ನೀಡುವದು ಹೇಗೆ. ನಾವು ನೀಡದಿದ್ದರೆ ಅವರ ಜೀವನ ಹೇಗೆ. ನಾವು ಏಕೆ ಕಾಲದಿಂದ ಕಾಲಕ್ಕೆ ನಿಯಮಗಳನ್ನು ಬದಲಾಯಿಸಬಾರದು. ವಾಸ್ತವವನ್ನು ನೋಡಿ. ನಾವು ಬ್ರಾಹ್ಮಣರು ದಿವಸದಿಂದ ದಿವಸಕ್ಕೆ ತುಳಿತಕ್ಕೆ ಒಳಗಾಗುತ್ತಿದ್ದೇವೆ. ಬೇರೆ ಜನಾಂಗದವರು ಬೇಕಾದ ಹಾಗೆ ಬೆಳೆಯುತ್ತಿದ್ದಾರೆ. ದಯವಿಟ್ಟು ಉತ್ತರಿಸಿ. — ವಿಶಾಲ್ ಕುಲಕರ್ಣಿ.