Prashnottara - VNP072

ವೃಂದಾವನದ ಮೃತ್ತಿಕೆ ಧರಿಸಬಹುದೇ?


					 	

ಆಚಾರ್ಯರಿಗೆ ನಮಸ್ಕಾರ. ಶ್ರೀಮಂತ್ರಾಲಯ ಪ್ರಭುಗಳ ಶ್ರೀಮದ್ವಾದಿರಾಜ-ಗುರುಸಾರ್ವಭೌಮರ ಗುರುಗಳ ವೃಂದಾವನದ ಮೃತ್ತಿಕೆ ಧಾರಣೆ ಮಾಡುವದು ಸರಿಯೇ? ಮೃತ್ತಿಕೆ ಯಾವಾಗ ಸ್ವೀಕರಿಸಬೇಕು. ಹೇಗೆ ಧಾರಣೆ ಮಾಡಬೇಕು? ಧನ್ಯವಾದಗಳೊಂದಿಗೆ — Ravi Kadagali


Download Article Share to facebook View Comments
3328 Views

Comments

(You can only view comments here. If you want to write a comment please download the app.)
 • Krishnamurthy Kulkarni,Bengaluru

  12:34 AM, 26/06/2017

  ಆಚಾರ್ಯರಿಗೆ ನಮಸ್ಕಾರ, 
  
  ಅಂಗಾರ ಅಕ್ಷತೆ ಹಚ್ಚಿಕೊಳ್ಳುವ ಸಂಪ್ರದಾಯ ಈಗ ಮೂರು ನಾಲ್ಕು ರೀತಿಗಳಾಗಿವೆ. ಕೆಲವರು ಬಿಡಿಸಿ ಹಚ್ಚಿದರೆ, ಕೆಲವರು ಕೂಡಿಸಿ ಹಚ್ಚಿಕೊಳ್ತಾರೆ. ಕೆಲವರು ಮೊದಲು ಅಂಗಾರ ಆಮೇಲೆ ಅಕ್ಷತೆ ಹಚ್ಚಿದರೆ ಇನ್ನೂ ಕೆಲವರು ಮೊದಲು ಅಕ್ಷತೆ ನಂತರ ಅಂಗಾರ ಹಚ್ಚಿಕೊಳ್ತಾರೆ. 
  
  ಇನ್ನು ಕೆಲವರು ವಾದ ಮಾಡುವ ಪ್ರಕಾರ ಶ್ರೀಮದಾಚಾರ್ಯರು ಅಕ್ಷತೆ ಅಂಗಾರಗಳ ಬಗ್ಗೆ ಹೇಳಿಲ್ಲವಾದ್ದರಿಂದ ಹಚ್ಚುವದಿಲ್ಲ ಎಂದು ಹೇಳುವರು. 
  
  ಅಕ್ಷತೆ ಅಂಗಾರವೂ ವಾಯುದೇವರ ಗದಾ ಸಂಕೇತವೋ ಅಥವಾ ಶ್ರೀಕೃಷ್ಣ ದೇವರ ಕಡಗೋಲಿನ ಸಂಕೇತವೋ? 
  
  ದಯವಿಟ್ಟು ತಿಳಿಸಿ.
  
  ಹರೇ ಕೃಷ್ಣ
 • Sangeetha prasanna,

  6:31 PM , 12/06/2017

  Hare shrinivasa.gurugalige namangalu.pitru stotrgalu endare yavudu .hennu makkalu pathisbahude tilisi. Namaskargalu.

  Vishnudasa Nagendracharya

  ರುಚಿ ಪ್ರಜಾಪತಿ ಮಾಡಿದಂತಹ ಸ್ತೋತ್ರವಿದೆ. ಮಾರ್ಕಂಡೇಯ ಪುರಾಣದಲ್ಲಿರುವ ದಿವ್ಯಾರ್ಥಗರ್ಭಿತವಾದ ಮತ್ತು ಸಿದ್ಧಿಪ್ರದವಾದ ಸ್ತೋತ್ರ. ಇದುವರೆಗೆ ಅದು ಪ್ರಕಾಶನಗೊಂಡಿಲ್ಲ. ಧರ್ಮಶಾಸ್ತ್ರದ ಗ್ರಂಥಗಳಲ್ಲಿ ಉಳಿದುಕೊಂಡಿದೆ.
  
  ಶ್ರೀ ವಿಜಯದಾಸಾರ್ಯರು ಪೈತೃಕಸುಳಾದಿಯನ್ನು ರಚಿಸಿದ್ದಾರೆ. ಶ್ರಾದ್ಧದಲ್ಲಿ ಸ್ಮರಿಸಬೇಕಾದ ಎಲ್ಲ ದೇವತೆಗಳನ್ನೂ ಭಾಗವತೋತ್ತಮರನ್ನೂ ಕೊಂಡಾಡುವ ಸುಳಾದಿ. 
  
  ಶ್ರೀ ಜಗನ್ನಾಥದಾಸಾರ್ಯರು ಹರಿಕಥಾಮೃತಸಾರದಲ್ಲಿ ಪಿತೃಗಣ ಸಂಧಿಯನ್ನು ರಚಿಸಿದ್ದಾರೆ. ಯ
  
  ಇವುಗಳ ಪಾರಾಯಣದಿಂದ ಪಿತೃಗಳು ಸಂತುಷ್ಟರಾಗುತ್ತಾರೆ. 
 • S NANDA,

  3:22 PM , 05/06/2017

  ಆಚಾರ್ಯರಿಗೆ ನಮಸ್ಕಾರಗಳು
  ನನ್ನ ಮಗಳ ಮದುವೆಯಲ್ಲಿ ಹಿರಿಯರಿದ್ದರೂ ಮಗನ ಹತ್ತಿರ ನಾಂದಿ ಸ್ಥಾಪನೆ ಮಾಡಿಸಿದ್ದರು .ಇದಕ್ಕೆ ಪರಿಹಾರ?

  Vishnudasa Nagendracharya

  ಪಿತೃಗಳ ಪ್ರೀತಿಗಾಗಿ ಯಥಾಶಕ್ತಿ ದಾನ, ಪಿತೃಸ್ತೋತ್ರಗಳ ಭಕ್ತಿಯುಕ್ತವಾದ ಜಪ ಮುಂತಾದವುಗಳನ್ನು ಮಾಡಬೇಕು. 
 • S NANDA,

  1:00 PM , 05/06/2017

  Acharyarige Namaskaragalu.shubhakarya maduvaga naandi sthapane yaru madabeku.Hiriyaru eruvaga makkalu madabahude?

  Vishnudasa Nagendracharya

  ತಂದೆ ಬದುಕಿರುವವರು ಯಾವ ರೀತಿಯ ಶ್ರಾದ್ಧವನ್ನೂ ಮಾಡುವಂತಿಲ್ಲ. ನಾಂದಿಶ್ರಾದ್ಧವನ್ನೂ ಮಾಡಬಾರದು. 
  
  ಮುಂಜಿ, ಮದುವೆ ಮುಂತಾದ ಶುಭಕಾರ್ಯದಲ್ಲಿ ನಾಂದೀಶ್ರಾದ್ಧ ಮಾಡುವ ಪ್ರಸಕ್ತಿ ಬರುತ್ತದೆ. ಆಗ ಯಜಮಾನನ ತಂದೆ ಬದುಕಿದ್ದರೆ ತಂದೆಯೇ ನಾಂದೀಸ್ಥಾಪನೆ ಮಾಡಬೇಕು. 
  
  ತಂದೆಯವರಿಗೆ ತೀರ ಅನಾರೋಗ್ಯಾದಿಗಳಿಂದ ಅಶಕ್ತಿ ಇದ್ದಲ್ಲಿ, ಚಿಕ್ಕಪ್ಪ ದೊಡ್ಡಪ್ಪರಿಂದ ಮಾಡಿಸಬೇಕು. 
  
  ಚಿಕ್ಕಪ್ಪ ದೊಡ್ಡಪ್ಪಂದಿರೂ ಇಲ್ಲದಿದ್ದಾಗ, ತಂದೆ ಇಲ್ಲದ ಆಚಾರ್ಯರೊಬ್ಬರನ್ನು ಪ್ರಾರ್ಥಿಸಿ, ತಂದೆಯ ಪರವಾಗಿ ನಾಂದೀಸ್ಥಾಪನೆಯನ್ನು ಮಾಡಿಸಬೇಕು. 
  
  
  
  
 • suraj sudheendra,

  8:18 AM , 05/06/2017

  gurugale ekadashiya divasa gandhaakshate galannu hachha baaradu yemba niyamaviruvudarinda ondu prashne ide. . gurugala mruttikkeyannuu hachha bohude atawa hachha baarade? haagu ekadishaya divasa horathu padisi ,ondomme poojeyannu maadalu aagadiddare atawa ati sanskipta poojeyalli, mrutikkeyannu nerinalli berasi adannu teertha roopadalli sveekarisabohude? haageye ekaadishaya divasa mrutikke teertha sveekarisabohude yendu dayamadi tilisabekendu prarthisuttene!

  Vishnudasa Nagendracharya

  ಮೃತ್ತಿಕೆ ಗಂಧದಂತಲ್ಲ. ಹೀಗೆ ಅವಶ್ಯವಾಗಿ ಏಕಾದಶಿಯ ದಿವಸ ಗುರುಗಳ ಮೃತ್ತಿಕೆಯನ್ನು ಧಾರಣೆ ಮಾಡಬಹುದು. 
  
  ಮೃತ್ತಿಕಾತೀರ್ಥವನ್ನು ದೇವರ ಪೂಜೆ ಮುಗಿದ ನಂತರ ತೆಗೆದುಕೊಳ್ಳಬಹುದು. 
  
  ಏಕಾದಶಿಯ ದಿವಸ ದೇವರ ನಿರ್ಮಾಲ್ಯ ತೀರ್ಥ, ದೇವರ ತೀರ್ಥ ಬಿಟ್ಟು ವಾಯುದೇವರ ತೀರ್ಥವನ್ನಾಗಲೀ, ಗುರುಗಳ ಪಾದೋದಕ-ಮೃತ್ತಿಕಾತೀರ್ಥವನ್ನಾಗಲೀ ಸ್ವೀಕರಿಸಬಾರದು. 
 • Ravi,

  10:30 PM, 04/06/2017

  Acharyrige dhanyawadagalu
  Aghyanandinda ada tappige kshame irali innu Munde lakshavahisi ee riti tappagadante nodikolluttene

  Vishnudasa Nagendracharya

  ತುಂಬ ಸಂತೋಷ. 
 • Karthik Joshi,

  9:58 PM , 04/06/2017

  Acharyare,
  Urdhwapundrada mele Angara hacchuvudu sammatave?

  Vishnudasa Nagendracharya

  ಅವಶ್ಯವಾಗಿ. 
  
  ಊರ್ಧ್ವಪುಂಡ್ರಗಳ ಮೇಲೆಯೇ ಅಂಗಾರವನ್ನು ಹಚ್ಚಬೇಕು. ಹಣೆಯ ಮೇಲಿನ ಊರ್ಧ್ವಪುಂಡ್ರದಲ್ಲಿ ಮಾತ್ರ ಮಧ್ಯದಲ್ಲಿ ರಂಧ್ರವಿರಬೇಕು. ಅಂದರೆ ಅಕ್ಕಪಕ್ಕದಲ್ಲಿ ಎರಡು ಗೆರೆಗಳಂತೆ ಊರ್ಧ್ವಪುಂಡ್ರವಿರಬೇಕು. ಗಂಧವೂ ಅದೇರೀತಿಯಲ್ಲಿ. ಮಧ್ಯದಲ್ಲಿ ಗದಾ ನಾರಾಯಣ ಮುದ್ರೆ. ಅದರ ಮೇಲೆ ಅಂಗಾರ ಅಕ್ಷತೆ.