Prashnottara - VNP075

ಹನುಮಾನ್ ಚಾಲೀಸಾ ಪಠಿಸಬಾರದೇಕೆ ಮತ್ತು ಸಿದ್ಧಿಪ್ರದ ಹನುಮತ್ ಸ್ತೋತ್ರಗಳನ್ನು ತಿಳಿಸಿ.


					 	

ಗುರುಗಳಿಗೆ ನಮಸ್ಕಾರಗಳು. ಹನುಮಾನ್ ಚಾಳೀಸಾ ನಾವು ಏಕೆ ಪಠಿಸಬಾರದು ಎನ್ನುತ್ತಾರೆ. ದಯವಿಟ್ಟು ಕಾರಣ ತಿಳಿಸಿ. — ವೀಣಾ ಶ್ರೀಕಾಂತ್ ಆಚಾರ್ಯರೇ ನಮಸ್ಕಾರಗಳು, ಶ್ರೀ ಹನುಮಾನ್ ಚಾಳೀಸಾ ಓದುವವರಿಗೆ ನಮ್ಮ ಮಾಧ್ವ ಸಂಪ್ರದಾಯದಂತೆ ಶ್ರೇಷ್ಠವಾದ ಆದರೂ ಸರಳವಾದ ಶ್ರೀಮುಖ್ಯಪ್ರಾಣ ದೇವರ ಸ್ತೋತ್ರವನ್ನು ತಿಳಿಸಿರಿ. — ಗಣೇಶ್ ಕಾಮತ್


Download Article Share to facebook View Comments
8584 Views

Comments

(You can only view comments here. If you want to write a comment please download the app.)
 • samartha NR,Bangalore

  2:03 PM , 12/12/2021

  Achare idara bagge tumbha akshyepa ide halavaaru janara samshaya idara bagge ne ide..neeve ond ond aagi blog post madteera achare , mukhyaprana yaru avara avarltara enu antha
 • Manjunatha,Bangalore

  7:41 PM , 24/04/2020

  ಪೂಜ್ಯ ಆಚಾರ್ಯರೆ,‌ ಹನುಮಂತ ದೇವರು ವಾಯುದೇವರ ಅವತಾರ ಎಂದು ವೇದ ಗಳಿಂದ ರಾಮಾಯಣದ, ಮಹಾಭಾರತದಿಂದ ನಿರ್ಣಯವಾಗುತ್ತದೆ ಎಂದು ತಿಳಿಸಿದ್ದೀರಿ. ದಾಸರ ಪದ ಹನುಮಂತ ರುದ್ರ ದೇವರು ಎಂದು ಬಳಸುತ್ತಾರೆ‌‌
  
   ಏಕಾದಶಿಯ ರುದ್ರ
  ನೀ ಒಯ್ದ್ಯೋ ರಾಮರ ಮುದ್ರ
  
  ಸಕಲವಿದ್ಯಾಸಮುದ್ರ
  ನೀನ್ಹೌದೌದೋ ಬಲಭದ್ರ 
  
  
  ಈ ಸಾಲುಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ದಯವಿಟ್ಟು ತಿಳಿಸಿ ಕೊಡಿ ಎಂದು ನಿಮ್ನಲ್ಲಿ ವಿನಯ ಪೂರ್ವಕ ಪ್ರಾರ್ಥಿಸುತ್ತೇನೆ
 • ರಾಘವೇಂದ್ರ,ಬೆಂಗಳೂರು

  11:01 PM, 26/04/2019

  ಶ್ರೀ ಆಂಜನೇಯ ಅಷ್ಟೋತ್ತರದಲ್ಲಿ "ಶ್ರೀ ರುದ್ರವೀರ್ಯೋದ್ಬವಾಯ ನಮಃ" ಎಂದು ಪಾಲಿಸುತ್ತಾರೆ. ಇದರ ತಾತ್ಪರ್ಯ ದಯವಿಟ್ಟು ತಿಳಿಸಿ ಹೇಳಿ

  Vishnudasa Nagendracharya

  ಶಾಸ್ತ್ರವಿರುದ್ಧವಾದ ತಪ್ಪು ಪರಿಕಲ್ಪನೆ. 
 • Balakrishna B S,Bangalore

  11:47 PM, 30/03/2018

  ಗುರುಗಳಿಗೆ ನಮಸ್ಕಾರಗಳು, ನೀವು ಕೊಟ್ಟ ಲೇಖನ ತುಂಬ ಚೆನ್ನಾಗಿದೆ. ದಯಮಾಡಿ ಯಂತ್ರೋದ್ಧಾರಕ ಸ್ತೋತ್ರ ಮತ್ತು ವಾಯು ಸ್ತೋತ್ರದ ಬಗ್ಗೆ ಹೆಚ್ಚು ಮಾಹಿತಿಯನ್ನು ನೀಡಿ. ಹಾಗೆ ಸ್ತೋತ್ರವನ್ನು ಹೇಗೆ ಪಠಿಸಬೇಕು ದಯಮಾಡಿ ತಿಳಿಸಿ ಕೊಡಿ.
  
  - ಬಾಲಕೃಷ್ಣ
 • Veena Rao,

  10:15 PM, 13/06/2017

  ನಿಮ್ಮ ಉತ್ತರ ತುಂಬಾ ಉಪಯುಕ್ತವಾದುದು ಆಚಾರ್ಯರೆ. ತುಂಬಾ ಧನ್ಯವಾದಗಳು
 • Bindu madhava,

  6:04 PM , 08/06/2017

  ಆಚಾರ್ಯರೇ,ಹಾಗಾದರೆ ತುಲಸೀದಾಸರಿಗೆ ತತ್ವ ಶುದ್ಧಿ ಇಲ್ಲವೇ. ?

  Vishnudasa Nagendracharya

  ವಾದದ ಖಂಡನೆಯನ್ನು ವಾದಿಯ ನಿಂದೆ ಎಂದು ಎಂದಿಗೂ ಪರಿಗಣಿಸಬಾರದು. 
  
  ಪ್ರತಿಯೊಬ್ಬ ಜೀವನದೂ ಸಾಧನೆಯ ಒಂದೊಂದು ಹಂತವಿರುತ್ತದೆ. ಹಿಂದಿನ ತಪ್ಪನ್ನು ತಿದ್ದಿಕೊಂಡು ಮೇಲೇರುವದೇ ಸಾಧನೆ. 
  
  ಶ್ರೀ ತುಳಸೀದಾಸರು ಶ್ರೇಷ್ಠ ಭಕ್ತರು. ಆದರೆ ಜ್ಞಾನ ಎನ್ನುವದು ಎಲ್ಲರಲ್ಲಿಯೂ ವಿಕಾಸವಾಗಲೇಬೇಕು. 
  
  ತುಳಸೀದಾಸರ ಕಾಲಕ್ಕೆ ಯಾರಾದರೂ ಪ್ರಮಾಣಪುರಸ್ಸರವಾಗಿ ಪ್ರತಿಪಾದಿಸಿದ್ದರೆ, ಅಥವಾ ಆ ರೀತಿ ಪ್ರತಿಪಾದಿಸಿದ ಭಾಗವನ್ನು ಶ್ರೀ ತುಳಸೀದಾಸರು ನೋಡಿದ್ದರೆ ಅವಶ್ಯವಾಗಿ ಶುದ್ಧತತ್ವವನ್ನು ಸ್ವೀಕರಿಸುತ್ತಿದ್ದರು. ಆ ಪ್ರಾಂಜಲ ಮನಸ್ಸು ಅವರಲ್ಲಿದ್ದೇ ಇತ್ತು. 
  
  ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು, ಶ್ರೀ ಪದ್ಮನಾಭತೀರ್ಥರು, ಶ್ರೀ ಚೈತನ್ಯರು, ಇವರೆಲ್ಲ ತಾವು ಹಿಂದೆ ನಂಬಿದ ಸಿದ್ಧಾಂತಗಳನ್ನು ಬಿಟ್ಟು ಹೊಸತನ್ನು ಸ್ವೀಕರಿಸಿದವರೇ.. 
 • Ramesh,Bangalore

  11:12 PM, 07/06/2017

  Hare shreenivasa acharyarige nanna namaskaragalu, pavamana sookthada mahatwavada bagge tilisi, hare krishna
 • Dr.Guruprasad,

  6:49 PM , 07/06/2017

  ShriGurubhyo namaha
  Rama raksha stotra da bagge nu tilisabekagi vinanti.
  Yakendare adaralli melu notakke shastra virudha vada amsha tiliyuttilla.
  Aadaru madhwaru adannu virodhisuttare yake?
 • Manjunath,

  6:42 PM , 07/06/2017

  ಧನ್ಯವಾದಗಳು ಆಚಾರ್ಯರೆ 🙏🙏
 • Manjunath,

  6:31 PM , 07/06/2017

  ಆಚಾರ್ಯರೆ ಶಂಕರ ಎಂಬ ಪದದ ಅರ್ಥವೇನು
  ಶಂಕರ ಎಂದರೆ ಭಗವಂತ ಎಂದು ಏಕೆ ಅರ್ಥೈಸಲು ಸಾಧ್ಯವಿಲ್ಲ

  Vishnudasa Nagendracharya

  ಯಾವುದೇ ಒಂದು ಶಬ್ದಕ್ಕೆ ನಮ್ಮ ಮನಸ್ಸಿಗೆ ಬಂದಂತೆ ಅರ್ಥ ಹೇಳುವದಲ್ಲ. ಆ ವಾಕ್ಯವನ್ನು ಬರೆದವರಿಗೆ ಆ ಅರ್ಥ ಅಭಿಪ್ರೇತವಾಗಿರಬೇಕು. 
  
  ತುಳಸೀದಾಸರು ಹನುಮನನ್ನು ಶಿವಪುತ್ರ ಎಂದು ತಿಳಿದಿದ್ದಾರೆ. ಶಿವಪುರಾಣ ಮುಂತಾದವುಗಳಲ್ಲಿ ಆ ರೀತಿಯಾದಂತಹ ಉಲ್ಲೇಖವೂ ಇದೆ. 
  
  ರಚನೆ ಮಾಡಿದವರಿಗೆ ಅಭಿಪ್ರೇತವಲ್ಲದ ಅರ್ಥವನ್ನು ನಾವು ತಿಳಿಯುವದಾದರೆ, "ಶಂಕರ ಎಂದರೆ ಭಗವಂತ" ಎಂಬ ನಿಮ್ಮ ವಾಕ್ಯವನ್ನು ನೋಡಿ, ನಮ್ಮ ಮನೆಯಲ್ಲಿ ಕೆಲಸ ಮಾಡುವ ಶಂಕರ ಎಂಬ ಹುಡುಗನೇ ಭಗವಂತ ಎಂದು ಮಂಜುನಾಥ್ ಹೇಳುತ್ತಿದ್ದಾರೆ ಎಂದು ನಾವೇಕೆ ಅರ್ಥ ಮಾಡಿಕೊಳ್ಳಬಾರದು. ಮಾಡಿಕೊಳ್ಳಬಾರದು ಏಕೆಂದರೆ ನಿಮಗೆ ಆ ಅಭಿಪ್ರಾಯವೂ ಇಲ್ಲ, ನಿಮ್ಮ ಆ ವಾಕ್ಯಕ್ಕೆ ಆ ಅರ್ಥವೂ ಕೂಡುವದಿಲ್ಲ. 
  
  ಮತ್ತು ಶಂಕರ ಎನ್ನುವ ಶಬ್ದ ಪರಮಮುಖ್ಯವಾಗಿ ಶ್ರೀಹರಿಯನ್ನೇ ಹೇಳುತ್ತದೆ. ಅವನೇ ಅಲ್ಲವೇ ಸಮಸ್ತ ಜಗತ್ತಿಗೆ ಒಳಿತನ್ನುಂಟುಮಾಡುವ ಶಂ-ಕರ.