Prashnottara - VNP077

ಪುನರ್ಜನ್ಮ ಪಡೆದ ವ್ಯಕ್ತಿಗೆ ಶ್ರಾದ್ಧ ಹೇಗೆ ತಲುಪುತ್ತದೆ?


					 	

ಗುರುಗಳಿಗೆ ನಮಸ್ಕಾರ. ನನ್ನ ಪ್ರಶ್ನೆ, ಶ್ರಾದ್ಧ ಕರ್ಮಗಳ ಬಗ್ಗೆ. ನಾವು ಪಿತೃದೇವತೆಗಳಿಗೆ ಶ್ರಾದ್ಧಾದಿ ಕರ್ಮಗಳನ್ನು ಮಾಡುತ್ತೇವೆ. ಆದರೆ ನಮ್ಮಲ್ಲಿ ಪುನರ್ಜನ್ಮದ ಸಿದ್ಧಾಂತ ದ ಪ್ರಕಾರ ಅಳಿದ ವ್ಯಕ್ತಿ ಕರ್ಮಾನುಸಾರವಾಗಿ ಬೇರೆಯ ದೇಹ ಪಡೆಯುತ್ತಾನೆ. ಹಾಗಾದರೆ ನಾವು ಮಾಡುವ ಶ್ರಾದ್ಧಾದಿ ಕರ್ಮಗಳು ಯಾರಿಗೆ ಸೇರುತ್ತವೆ. — ಶ್ರೀಕಾಂತ್ ಜೋಷಿ. ಮೊದಲ ತತ್ವ — ನಾವು ಪಿತೃದೇವತೆಗಳಿಗೆ ಶ್ರಾದ್ಧ ಮಾಡುವದಿಲ್ಲ. ನಮ್ಮ ಪಿತೃಗಳಿಗೆ ಶ್ರಾದ್ಧ ಮಾಡುತ್ತೇವೆ. ನಮ್ಮ ಪಿತೃಗಳು ಎಂದರೆ, ಸತ್ತು ಹೋಗಿರುವ ನಮ್ಮ ತಂದೆ ತಾಯಿ ಮುಂತಾದ ಬಂಧುಗಳು. ಪಿತೃದೇವತೆಗಳು ಎಂದರೆ ಸತ್ತವರಿಗೆ ನಾವು ನೀಡುವ ಪದಾರ್ಥಗಳನ್ನು ತಲುಪಿಸುವ ದೇವತೆಗಳು. ವಿವರಗಳನ್ನು VNA144 ರಲ್ಲಿ ವಿಸ್ತಾರವಾಗಿ ನೀಡಿದ್ದೇನೆ. ನಿಮ್ಮ ಪ್ರಶ್ನೆಗೆ ಉತ್ತರ — ಸತ್ತು ಹೋದವರು ನರಕದಲ್ಲಿರಲಿ, ಸ್ವರ್ಗದಲ್ಲಿರಲಿ, ಭೂಮಿಯಲ್ಲಿ ಯಾವುದೇ ಪಶು,ಪಕ್ಷಿ, ಪ್ರಾಣಿ, ಮನುಷ್ಯದೇಹದಲ್ಲಿರಲಿ, ಅವರಿಗಾಗಿ ನಾವು ಶ್ರಾದ್ಧ ಮಾಡಿದಾ ನಾವು ನೀಡುವ ಪಿಂಡಾದಿಗಳನ್ನು ಅವರವರಿಗೆ ಯೋಗ್ಯವಾದ ಆಹಾರವನ್ನಾಗಿ ಪರಿವರ್ತಿಸಿ ನೀಡುವದು ಪಿತೃದೇವತೆಗಳ ಕೆಲಸ. ಸತ್ತು ಹೋದವರೂ ನಮ್ಮಂತೆಯೇ ಮನುಷ್ಯರು. ಅವರೇ ಬೇರೆ ಜನ್ಮ ಪಡೆದ ಬಳಿಕ ನಾವೆಲ್ಲಿದ್ದೇವೆ ಗೊತ್ತಾಗುವದಿಲ್ಲ. ಅವರೆಲ್ಲಿದ್ದಾರೆ ಗೊತ್ತಾಗುವದಿಲ್ಲ. ಆದರೆ ನಮ್ಮಿಬ್ಬರನ್ನೂ ಬಲ್ಲ ಪಿತೃದೇವತೆಗಳು ನಾವು ನೀಡುವ ಶ್ರಾದ್ಧವನ್ನು, ಆ ವ್ಯಕ್ತಿಗೆ ಆ ವ್ಯಕ್ತಿ ಇರುವ ದೇಹ, ಅವಸ್ಥೆಗೆ ತಕ್ಕಂತೆ ಅವರಿಗೆ ಒದಿಗಿಸುತ್ತಾರೆ. ಹೀಗಾಗಿ ನಮ್ಮ ಶ್ರಾದ್ಧ ಸರ್ವಥಾ ವ್ಯರ್ಥವಾಗುವದಿಲ್ಲ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
4765 Views

Comments

(You can only view comments here. If you want to write a comment please download the app.)
 • Niranjan,Ranibennur

  1:05 PM , 18/10/2018

  ಶ್ರಾದ್ದದಲ್ಲಿ ಬ್ರಾಹ್ಮಣಕ್ಕೆ ಕೂತ ವೇಕ್ತಿ ಅನುಷ್ಠಾನ ಏನು ಮಾಡಬೇಕು

  Vishnudasa Nagendracharya

  ತುಂಬ ವಿಸ್ತೃತವಾದ ವಿಷಯ. ಸಮಯ ದೊರತಂತೆ ಕೈಗೆತ್ತಿಕೊಳ್ಳುತ್ತೇನೆ. 
 • Venugopal Rao Chilamathur,BANGALORE

  7:17 PM , 21/12/2017

  Dhanurmasadalli maduva shraddhakke KUTAPA KALA anvayisuvudillave
 • Vadiraj,

  6:57 PM , 16/07/2017

  Acharyarige namaskaaragalu, Dayavittu Shraadaakke adhikaarigalu yaarendu thilisi. Like thande illadiddare maathra adhikaarigala? Athava enaadaru anivaaryathe inda adhikaara baruvude, like thande ashktharaadaaga or thande iddu hennu kotta maavanige gandu santhathi illadiddare. 
  Munji aagada maga thande mrutha raadare eenu maaduvudu...

  Vishnudasa Nagendracharya

  ಶ್ರಾದ್ಧ ಮತ್ತು ಔರ್ಧ್ವದೈಹಿಕ ಕ್ರಿಯೆಗಳನ್ನು ಮಾಡುವ ಅಧಿಕಾರ ತಂದೆ ಸತ್ತ ನಂತರವೇ. 
  
  ಇದಕ್ಕೆ ಎರಡು ಅಪವಾದ ಗಳಿವೆ. ತಂದೆ ಬದುಕಿರುವಾಗ ತಾಯಿ ಸತ್ತರೆ ಅವರ ಕ್ರಿಯೆಯನ್ನು ಮಗನೇ ಮಾಡಬೇಕು. 
  
  ಎರಡನೆಯದು, ತಂದೆ ಇದ್ದಾರೆ, ಮಗನ ಹೆಂಡತಿಯ ಸಾವಾಗಿದೆ. ಮಗನಿಗೆ ಮಕ್ಕಳಿಲ್ಲ. ಆ ಸಂದರ್ಭದಲ್ಲಿಯೂ ಮಗನೇ ತನ್ನ ಹೆಂಡತಿಯ ಕ್ರಿಯೆ, ಶ್ರಾದ್ಧಗಳನ್ನು ಮಾಡಬೇಕು. 
  
  ಎರಡೂ ಸಂದರ್ಭಗಳಲ್ಲಿ ಕೆಲವು ವಿಶೇಷ ನಿಯಮಗಳಿವೆ. ಜನಿವಾರವನ್ನು ಪೂರ್ಣ ಎಡಗಡೆಗೆ ಹಾಕಿಕೊಳ್ಳುವಂತಿಲ್ಲ, ತಿಲತರ್ಪಣವನ್ನು ನೀಡುವಂತಿಲ್ಲ, ಮತ್ತು ಪಕ್ಷವನ್ನು ಮಾಡುವಂತಿಲ್ಲ. 
  
  ತಂದೆಯವರು ಅಶಕ್ತರಾಗಿದ್ದಾಗ ಅವರನ್ನು ಕೂಡಿಸಿಕೊಂಡು ಪೂರ್ಣ ಸಹಾಯ ಮಾಡಿ ಶ್ರಾದ್ಧ ಮಾಡಿಸಬೇಕು. ಇನ್ನು ಅವರಿಗೆ ಕುಳಿತುಕೊಳ್ಳಲೂ ಸಾಮರ್ಥ್ಯವಿಲ್ಲ ಎಂದಾಗಿದ್ದಾಗ ಪುರೋಹಿತರಿಂದಲೇ ಶ್ರಾದ್ಧ ಮಾಡಿಸಬೇಕು. 
  
  ತಂದೆ ಬದುಕಿದ್ದು, ಗಂಡು ಸಂತತಿಯಿಲ್ಲದ ಮಾವ ಅಥವಾ ಯಾರೇ ಸತ್ತರೂ, ಕ್ರಿಯೆ ಮತ್ತು ಶ್ರಾದ್ಧಗಳನ್ನು ಮಾಡುವ ಅಧಿಕಾರ ಮಗನಿಗಿಲ್ಲ. ಸರ್ವಥಾ ಮಾಡಬಾರದು. 
  
  ತಂದೆ ಸತ್ತಿದ್ದಾರೆ, ಮುಂಜಿ ಆಗದ ಮಗನಿದ್ದಾನೆ ಎಂದರೆ ಆವನೇ ಕ್ರಿಯೆಗಳನ್ನು ಮಾಡಬೇಕು. ಆ ಕ್ರಿಯೆಗಳಿಗಾಗಿಯೇ ಅಧಿಕಾರ ನೀಡಿಸುವ ಒಂದು ಸಣ್ಣ ಪ್ರಕ್ರಿಯೆಯಿದೆ, ಅದನ್ನು ಮಾಡಿಕೊಂಡು ಅವನೇ ಕ್ರಿಯೆಯನ್ನು ಮಾಡಬೇಕು. 
  
  ಅಷ್ಟೇಕೆ, ಗಂಡುಕೂಸು ಇವತ್ತು ಹುಟ್ಟಿದೆ. ತಾಯಿಯೋ, ತಂದೆಯೋ ಸತ್ತು ಹೋಗಿದ್ದಾರೆ. ಮನೆಯಲ್ಲಿ ಕ್ರಿಯೆ ಮಾಡುವ ಅಧಿಕಾರವಿರುವ ಮತ್ತೊಬ್ಬರು ಆ ಹಸುಗೂಸನ್ನೇ ಶ್ಮಶಾನಕ್ಕೆ ಕರೆದುಕೊಂಡು ಹೋಗಿ ಆ ಕೂಸಿನ ಕೈಯಿಂದಲೇ ಅಗ್ನಿಸ್ಪರ್ಶ ಮಾಡಿಸಬೇಕು. 
  
  ಕಾರಣ, ತಂದೆ ತಾಯಿಯರ ಸಂಸ್ಕಾರ ಪರಿಪೂರ್ಣವಾಗುವದೇ ಗಂಡುಮಕ್ಕಳಿಂದ. ಅವರಿಲ್ಲದಿದ್ದರೆ ಬೇರೆಯವರು. 
  
  ಕಡೆಯಲ್ಲಿ ಹೇಳಿದ ಎರಡು ವಿಷಯಗಳು ಇನ್ನೂ ಧರ್ಮಶಾಸ್ತ್ರದಲ್ಲಿಯೇ ಉಳಿದಿವೆ. ಆಚರಣೆಗೆ ಬಂದಿಲ್ಲ.. 
  
  
 • Jayashree karunakar,

  1:50 PM , 09/06/2017

  ಅದು ಅವರ ಅಂತಯಾ೯ಮಿಗೆ ತಲುಪುತ್ತದೆಯಾ ಅಥವಾ ಯಾರಿಗೆ?

  Vishnudasa Nagendracharya

  ಮಕ್ಕಳು ಮಾಡಿದ ಶ್ರಾದ್ಧವನ್ನು ಅವರವರ ತಂದೆತಾಯಿಗಳಿಗೆ ಪಿತೃದೇವತೆಗಳ ಮುಖಾಂತರ ಅಂತರ್ಯಾಮಿ ತಲುಪಿಸುತ್ತಾನೆ. 
  
  ಶ್ರಾದ್ಧ ಮಾಡುವವರು - ಮಕ್ಕಳು/ಬಂಧುಗಳು. 
  
  ಶ್ರಾದ್ಧದ ಫಲ ಪಡೆಯುವವರು - ತಂದೆ ತಾಯಿ ಮುಂತಾದ ಮೃತರು. 
  
  ಶ್ರಾದ್ಧದ ಫಲವನ್ನು ಒಯ್ದು ನೀಡುವವರು - ಪಿತೃದೇವತೆಗಳು. 
  
  ಎಲ್ಲರೊಳು ನಿಂತೀ ಕಾರ್ಯವನು ಮಾಡಸುವವನು ಅಂತರ್ಯಾಮಿಯಾದ ಶ್ರೀಮನ್ನಾರಾಯಣ. 
  
  
 • Shravan Prabhu,

  8:34 AM , 10/06/2017

  Acharyarige sasthanga namaskaragalu.
  Acharyare, ondu vele aa punarjanma padeda vyaktiya kutumbadavaru shradhave madalillavadare ,aa punarjanma padeda vyaktiya jeevanadalli tondare untaguttadeye?

  Vishnudasa Nagendracharya

  ಹಿಂದಿನ ಜನ್ಮದ ಮಕ್ಕಳು ಶ್ರಾದ್ಧಾದಿಗಳನ್ನು ಮಾಡದಿದ್ದಲ್ಲಿ ಈ ಜನ್ಮದಲ್ಲಿ ಸರಿಯಾಗಿ ಊಟ ದೊರೆಯುವದಿಲ್ಲ. ಶ್ರಾದ್ಧವನ್ನು ಮಾಡಿಯೂ ಸರಿಯಾದ ಕ್ರಮದಲ್ಲಿ ಮಾಡದಿದ್ದರೆ, ತಿನ್ನಲು ಅನ್ನ ಇದ್ದರೂ ತಿನ್ನಲಿಕ್ಕಾಗದ ಪರಿಸ್ಥಿತಿ ಇರುತ್ತದೆ. 
  
  ಶ್ರಾದ್ಧ ಒಂದು ನಿಮಿತ್ತ ಅಷ್ಟೆ. ಆಹಾರವನ್ನು ಪಡೆಯಲು ಪ್ರಧಾನವಾದದ್ದು ನಮ್ಮ ಕರ್ಮಗಳೇ. ನಾವು ಅಪಾರ ಸತ್ಕರ್ಮವನ್ನು ಮುಖ್ಯವಾಗಿ ಅನ್ನದಾನವನ್ನು ಮಾಡಿದ್ದಲ್ಲಿ, ಮಕ್ಕಳು ಶ್ರಾದ್ಧ ಮಾಡದಿದ್ದರೂ ನಮಗೆ ಆಹಾರ ದೊರೆತೇ ದೊರೆಯುತ್ತದೆ. ಆದರೆ, ಶ್ರಾದ್ಧವನ್ನು ಮಾಡದಿದ್ದಕ್ಕಾಗಿ ಮಕ್ಕಳಿಗೆ ಪಾಪ ಬರುತ್ತದೆ. ನಾವು ಸತ್ಕರ್ಮವನ್ನೂ ಮಾಡಿದ್ದೇವೆ, ಮಕ್ಕಳೂ ಶ್ರಾದ್ಧವನ್ನು ಮಾಡುತ್ತಿದ್ದಾರೆ ಎಂದರೆ ಅತ್ಯುತ್ತಮವಾದ ಆಹಾರವನ್ನು ಪಡೆಯುತ್ತೇವೆ. (ಇಲ್ಲಿ ಆಹಾರದ ಉಲ್ಲೇಖ ಮಾತ್ರ ಪ್ರಧಾನವಾಗಿ ಮಾಡಿದ್ದೇನೆ. ವಸ್ತ್ರ, ಸೌಲಭ್ಯ, ಸುಖ ಎಲ್ಲದಕ್ಕೂ ಅನ್ವಯಿಸುತ್ತದೆ)
  
  ಹಾಗೆ, ನಾವು ಮಹತ್ತರ ಪಾಪ ಕರ್ಮ ಮಾಡಿದ್ದೇವೆ ಎಂದರೆ ಮಕ್ಕಳು ಶ್ರಾದ್ಧ ಮಾಡಿದ್ದರೂ ಅದರ ಪೂರ್ಣ ಫಲವನ್ನು ಪಡೆಯಲು ಸಾಧ್ಯವಾಗುವದಿಲ್ಲ. 
  
 • Pramoda Simha,Bengaluru

  10:14 AM, 12/06/2017

  Thumba dhanyavaadagalu..
 • GIRIDHAR SARAF,

  6:53 PM , 09/06/2017

  ಸರಿಯಾದ ಮಾತು ಗುರುಗಳೇ
 • Srikanth Joshi,

  1:45 PM , 09/06/2017

  Dhanyavadagalu Gurugale
 • Vijay Kumar,

  1:27 PM , 09/06/2017

  ಅವಸ್ಥೆಗೆ ತಕ್ಕಂತೆ ಎಂದಿರುವಿರಿ. ಕರ್ಮದ ಪ್ರಕಾರ ಅವಸ್ಥೆಗಳು ಅಲ್ಲವೆ ಆಚಾರ್ಯರೆ

  Vishnudasa Nagendracharya

  ಇಲ್ಲಿ ಅವಸ್ಥೆ ಎಂದರೆ ಬಾಲ್ಯ ಯೌವನ ವೃದ್ಧಾವಸ್ಥೆ ಮುಂತಾದ ಹತ್ತಾರು ದೇಹದ ಅವಸ್ಥೆಗಳು.