Prashnottara - VNP078

ಅನಿರುದ್ಧ ಶರೀರದ ಆವಶ್ಯಕತೆಯೇನು?


					 	

ಭಗವಂತ ಅನಾದಿ ಲಿಂಗಶರೀರದ ಮೇಲೆ ಅನಿರುದ್ಧಶರೀರವನ್ನು ಏಕೆ ಕೊಡುತ್ತಾನೆ. ನೇರವಾಗಿ ಅನಾದಿಲಿಂಗಶರೀರದ ಮೇಲೆ ಸ್ಥೂಲದೇಹವನ್ನು ಕೊಟ್ಟು ಸಾಧನೆ ಮಾಡಿಸಬಹುದಲ್ಲ? ಮಧ್ಯದಲ್ಲಿ ಅನಿರುದ್ಧಶರೀರವನ್ನೇತಕ್ಕೆ interface ಮಾಡುತ್ತಾನೆ? ಅನಿರುದ್ಧಶರೀರದ ಪ್ರಧಾನ ಕಾರ್ಯವೇನು? ದಯಮಾಡಿ ಇದಕ್ಕೆ ಉತ್ತರ ತಿಳಿಸಿ ಗುರುಗಳೇ. 🙏🙏🙏 — ಅಶೋಕ್ ಪ್ರಭಂಜನ್


Download Article Share to facebook View Comments
3365 Views

Comments

(You can only view comments here. If you want to write a comment please download the app.)
 • Krishna Achar,Ballari

  6:48 PM , 15/04/2021

  ಲಿಂಗ ಮತ್ತು ಅನಿರುದ್ಧ ಶರೀರಗಳ ಮಧ್ಯೆ ಜೀವಾಚ್ಛಾದಿಕ ಮತ್ತು ಪರಮಾಚ್ಛಾದಿಕ ಇವೆ ಎಂದು ಕೆಲವರು ಹೇಳುತ್ತಾರೆ .
  ಇವುಗಳ ಕುರಿತು ದಯಮಾಡಿ ತಿಳಿಸಿ .

  Vishnudasa Nagendracharya

  ಶ್ರೀಮದ್ ಭಾಗವತದ ಉಪನ್ಯಾಸಗಳಲ್ಲಿ ಈಗಾಗಲೇ ಅನೇಕ ಬಾರಿ ಇವುಗಳ ಅಸ್ತಿತ್ವ, ಕಾರ್ಯ, ವಿನಾಶದ ಕುರಿತ ವಿವರಣೆ ಬಂದಿದೆ. 
  
  ಭಾಗವತದ 18 ಮತ್ತು 19ನೆಯ ಉಪನ್ಯಾಸಗಳನ್ನು (ಶ್ರೀಮದ್ ಭಾಗವತಮ್ - 01 Folder) ಕೇಳಿ. 
  
  
 • Jayashree Karunakar,

  9:22 PM , 29/08/2017

  ಅಥವಾ ಗಜೇಂದ್ರನು ಮೊದಲು ತೋರಿದ ದಪ೯ವೆಲ್ಲವೂ ಭಗವಂತನಲ್ಲಿ ಪೂಣ೯ ಶರಣಾದಾಗ ಅವೆಲ್ಲವೂನಾಶವಾಗಿ ಅವನು ಮೊಕ್ಷಕ್ಕೆ ಯೋಗ್ಯನಾಗಿದ್ದೆ ತಿಳಿಸಿ ಗುರುಗಳೆ.

  Vishnudasa Nagendracharya

  ಗಜೇಂದ್ರಜನ್ಮಪ್ರಾಪ್ತಿಗೆ ಕಾರಣವಾದ ಪಾಪ ಗಜೇಂದ್ರಜನ್ಮವನ್ನು ಪಡೆದು ಅನುಭವಿಸುವದರಿಂದಲೇ ಮುಗಿಯುತ್ತದೆ. 
 • Jayashree Karunakar,

  9:11 PM , 29/08/2017

  ಗುರುಗಳೆ
  
  ಚರಮದೇಹದಲ್ಲಿರುವ ದೇಹ ಪ್ರಾಣಿಯದಾಗಿದ್ದರೆ, ಅದರಲ್ಲಿ ಮೊಕ್ಷಕ್ಕೆ ಬೇಕಾದ ಸಾಧನೆಯ ಬಗೆ ಹೇಗೆ.
  
  ಗಜೇಂದ್ರನದ್ದು ಚರಮ ದೇಹವೆ.
  
  ಇಲ್ಲ ಎಂದಾದರೆ ಅದಕ್ಕೆ ಗಜೇಂದ್ರ ಮೊಕ್ಷಅಂತ ಯಾಕೆ ಹೇಳುವುದು. 
  
  ಚರಮದೇಹವಾದರೆ ಅವನು ತೋರಿದ ದಪ೯ ಅಹಂಕಾರಗಳ ಫಲಗಳಿಗನುಗುಣವಾದ ಕಮ೯ವನ್ನು ಅನುಭವಿಸಲು ಮತ್ತೊಂದು ಜನ್ಮತಾಳಿದನೆ ?

  Vishnudasa Nagendracharya

  ಸ್ವರೂಪದಲ್ಲಿ ಪ್ರಾಣಿ ಪಕ್ಷಿಗಳಾಗಿರುವವರೂ ಮನುಷ್ಯಜನ್ಮವನ್ನು ಪಡೆದು ಜ್ಞಾನವನ್ನು ಪಡೆಯುತ್ತಾರೆ. ಉಪಾಸನೆಯನ್ನು ಮನುಷ್ಯಜನ್ಮಗಳಲ್ಲಿಯೂ ಮಾಡುತ್ತಾರೆ, ಪ್ರಾಣಿ ಪಕ್ಷಿ ಜನ್ಮಗಳಲ್ಲಿಯೂ ಮಾಡುತ್ತಾರೆ (ಗರುಡ, ನಂದಿ, ಐರಾವತ, ಮೂಷಿಕ ಮುಂತಾದವಂತೆ. ಇವರೆಲ್ಲರೂ ಭಗವಂತನ ಸಾಕ್ಷಾತ್ಕಾರ ಪಡೆದವರು. ಪಡೆಯಲಿಕ್ಕಿಂತ ಮುಂಚೆಯೂ ಪ್ರಾಣಿ ಪಕ್ಷಿ ಜನ್ಮಗಳಲ್ಲಿ ಸಾಧನೆಯುಂಟು. ಖಾಂಡವವನದಾಹದಲ್ಲಿ ಉಳಿದುಕೊಳ್ಳುವ ನಾಲ್ಕು ಪಕ್ಷಿಗಳಂತೆ) ಚರಮದೇಹದಲ್ಲಿ ನಿಯಮಿತವಾಗಿ ಸ್ವರೂಪ ಹೇಗಿದೆಯೋ ಆ ರೀತಿಯ ದೇಹ. 
  
  ಗಜೇಂದ್ರನದು ಚರಮದೇಹವಲ್ಲ. ಶಾಪದಿಂದ ಬಂದದ್ದು. 
  
  ಗಜೇಂದ್ರಮೋಕ್ಷ ಎಂದರೆ ಗಜೇಂದ್ರನನ್ನು ಮೊಸಳೆಯ ಬಂಧನದಿಂದ ಮೋಕ್ಷಗೊಳಿಸಿದ್ದು, ಅಜ್ಞಾನಾದಿಗಳಿಂದ ಮೋಕ್ಷಗೊಳಿಸಿದ್ದು ಎಂದರ್ಥ. 
  
  ಇದರ ವಿವರ ಭಾಗವತಮಾಹಾತ್ಮ್ಯದ ಎಂಟನೆಯ ಉಪನ್ಯಾಸದಲ್ಲಿ ಬರುತ್ತದೆ. ಧುಂಧುಕಾರಿ, ಗೋಕರ್ಣ, ಗಜೇಂದ್ರ ಮುಂತಾದವರು ವಿಮಾನದಲ್ಲಿ ಕುಳಿತು ಮೇಲಿನ ಲೋಕಕ್ಕೆ ಹೋದರು ಎಂದು ಕೇಳುತ್ತೇವಲ್ಲ, ಅದನ್ನು ಅರ್ಥ ಮಾಡಿಕೊಳ್ಳುವ ರೀತಿಯನ್ನು ಆ ಪ್ರಸಂಗದಲ್ಲಿ ವಿವರಿಸಿದ್ದೇನೆ. 
 • H. Suvarna kulkarni,

  2:43 PM , 11/08/2017

  ಗುರುಗಳಿಗೆ ಪ್ರಣಾಮಗಳು ಪ್ರಶ್ನೆ ಉತ್ತರಗಳು ಸ್ವಾರಸ್ಯಕರ ವಾಗಿವೆಜಿಜ್ಞಾಸುಗಳಿಗೆ ರಸದೌತಣ ಧನ್ಯವಾದಗಳು
 • Jayashree Karunakar,

  2:42 PM , 21/06/2017

  ಸ್ವರೂಪದೇಹಕ್ಕೆ ಉತ್ಪತ್ತಿಯೂ ಇಲ್ಲ ವಿನಾಶವೂ ಇಲ್ಲ ಎಂದಿರಿ ಹಾಗದರೆ ಅದು ಪರಮಾತ್ಮನ ಸರಿಸಮಾನವೆ.

  Vishnudasa Nagendracharya

  ಪರಮಾತ್ಮನೂ ಅನಾದಿಕಾಲದಿಂದ ಅನಂತಕಾಲದವರೆಗೆ ಇದ್ದಾನೆ, ಲಕ್ಷ್ಮೀ ಮೊದಲಾದ ಅನಂತ ಚೇತನರೂ ಇದ್ದಾರೆ, ಇಷ್ಟು ಅಂಶದಲ್ಲಿ ಸಾಮ್ಯವಿದೆ. 
  
  ಆದರೆ ನಾವು ಅವನ ಅಧೀನರು, ಅವನು ಸ್ವತಂತ್ರ. 
  
  ನಾನೂ ಮನುಷ್ಯ, ಪ್ರಧಾನ ಮಂತ್ರಿಯೂ ಮನುಷ್ಯ ಹೀಗಾಗಿ ನಾವು ಇಬ್ಬರೂ ಸಮಾನರು ಎಂದರೆ ಹೇಗೋ ಹಾಗೆ. ಇಬ್ಬರೂ ಮನುಷ್ಯರು ನಿಜ. ಆದರೆ ಅಧಿಕಾರ, ವಿದ್ಯೆ, ಗುಣಗಳು ಎಲ್ಲದರಲ್ಲಿಯೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಹಾಗೆ ನಾವೂ ಚೇತನರು, ದೇವರೂ ಚೇತನ ಇಬ್ಬರೂ ಸಮಾನರು ಎಂದು ಹೇಗೆ ವ್ಯವಹರಿಸುವದು. ನಾವು ಕ್ಷುದ್ರಚೇತನರು. ಅವನು ಚೇತನೋತ್ತಮ. 
  
  ಜಗತ್ತಿನಲ್ಲಿಯೂ ಗುಣಗಳಿಂದ ಸಾಮ್ಯ ಆಧಿಕ್ಯ ಲೆಕ್ಕಕ್ಕೆ ಬರುತ್ತದೆಯೇ ಹೊರತು, ನಾನೂ ಮನುಷ್ಯ ಪ್ರಧಾನಿಯೂ ಮನುಷ್ಯ ಎಂದು ಪ್ರಧಾನಿಯ ಅಧಿಕಾರವನ್ನು ಸಾಮಾನ್ಯ ಮನುಷ್ಯ ಅನುಭವಿಸಲು ಸಾಧ್ಯವಿಲ್ಲ. 
  
  ಮನುಷ್ಯತ್ವದ ಸಾಮ್ಯ ಆಹಾರ-ನಿದ್ರೆ ಮುಂತಾದವುಗಳಲ್ಲಷ್ಟೇ. ಹಾಗೆ ಕಾಲದಿಂದ ಸಾಮ್ಯ ಮತ್ತು ಚೇತನತ್ವದಿಂದ ಸಾಮ್ಯ ಅಸ್ತಿತ್ವದಲ್ಲಷ್ಟೇ. ಅದೂ ಸಹ ಅತ್ಯಂತ ಕ್ಷುದ್ರ. ಕಾರಣ, ದೇವರ ಅಸ್ತಿತ್ವ ಇಡಿಯ ಜಗತ್ತಿನ ಅಸ್ತಿತ್ವಕ್ಕೆ ಕಾರಣ. ನಮ್ಮ ಅಸ್ತಿತ್ವವೇ ಅವನ ಅಧೀನ. ಹೀಗಾಗಿ ಅತ್ಯಂತ ನಗಣ್ಯವಾದ ಸಾಮ್ಯ. 
 • Ashok Prabhanjana,

  12:45 PM, 21/06/2017

  ಗುರುಗಳೇ, ಅನಿರುದ್ಧ ಶರೀರ ಯಾವ ಆಕಾರದಲ್ಲಿ ಇರುತದೆ? ಪ್ರಸ್ಥುತ ಜನ್ಮದ ಸ್ಥೂಲದೇಹ ಯಾವ ಆಕಾರದಲ್ಲಿ ಇರುತದೆಯೋ ಆ ಆಕರದಲ್ಲಿಯೇ ಇರುತದೆಯ? ಹೇಗೆ? ನಮ್ಮ ಪ್ರತಿ ಜನ್ಮಕ್ಕೆ ಅದರ ಆಕಾರ ಬದಲಾಗುತದೆಯಾ? ದಯವಿಟ್ಟು ತಿಳಿಸಿ ಕೊಡಿ ()

  Vishnudasa Nagendracharya

  ಸೃಷ್ಟಿಗೆ ಬಂದ ಮೇಲೆ ನಾವು ಅನಂತ ಸ್ಥೂಲದೇಹಗಳನ್ನು ಪಡೆಯತ್ತೇವೆ. ಹೀಗಾಗಿ ಈಗಿನ ಸ್ಥೂಲದೇಹದಂತೆ ಅನಿರುದ್ಧದೇಹ ಇರಬೇಕಾಗಿಲ್ಲ, ಇರುವದಿಲ್ಲ. 
  
  ಸ್ವರೂಪದೇಹ, ಲಿಂಗದೇಹ ಮತ್ತು ಅನಿರುದ್ಧದೇಹಗಳು ಸಮಾನ ಆಕಾರದವು. 
  
  ಸ್ವರೂಪದೇಹ ಅಪ್ರಾಕೃತವಾದದ್ದು, ಸ್ವಾಭಾವಿಕವಾದ ಶರೀರ. ಇದಕ್ಕೆ ಉತ್ಪತ್ತಿಯೂ ಇಲ್ಲ, ವಿನಾಶವೂ ಇಲ್ಲ. 
  
  ಲಿಂಗದೇಹ ಪ್ರಕೃತ್ಯಾತ್ಮಕವಾದದ್ದು, ಇದಕ್ಕೆ ಉತ್ಪತ್ತಿಯಿಲ್ಲ, ಆದರೆ ವಿನಾಶವಿದೆ. 
  
  ಅನಿರುದ್ಧದೇಹ ಪ್ರಕೃತಿನಿರ್ಮಿತವಾದದ್ದು. ಇದಕ್ಕೆ ಸೃಷ್ಟಿಯ ಆದಿಯಲ್ಲಿ ಉತ್ಪತ್ತಿ. ಪ್ರಳಯದಲ್ಲಿ ನಾಶ. 
  
  ಸ್ಥೂಲದೇಹ ಪಂಚಭೂತಾತ್ಮಕವಾದದ್ದು. (ತತ್ವಾಭಿಮಾನಿಗಳಲ್ಲಿ ಮಾತ್ರ ತಾತ್ವಿಕವಾದದ್ದು) ಇದು ಕರ್ಮಗಳ ಅನುಭವಕ್ಕಾಗಿ ಹುಟ್ಟುತ್ತದೆ. ಕರ್ಮದ ಅನುಭವ ತೀರಿದ ಮೇಲೆ ನಾಶವಾಗುತ್ತದೆ. 
  
 • Jayashree Karunakar,

  11:20 AM, 21/06/2017

  ಪ್ರತೀಬಾರಿ ಓದಿದಾಗಲೂ ಹಲವಾರು ಪ್ರಶ್ನೆಗಳು.
  
  ವಿಷಯವು ಸರಿಯಾಗಿ ಅಥ೯ವಾಗುತ್ತಿಲ್ಲ.
  
  ತಿಳಿದುಕೂಳ್ಳುವ ಹಂಬಲ, ಚಡಪಡಿಕೆ ಜಾಸ್ತಿಯಾಗುತ್ತದೆ.
 • Jayashree Karunakar,

  10:41 AM, 21/06/2017

  ಮನಸಿನ ಎಲ್ಲಾ ಪ್ರಶ್ನೆಗಳನ್ನು ಗಣನೆಗೆ ತಂದು ಈ ವಿಷಯದಲ್ಲಿ ಇನ್ನಷ್ಟು ದೀಘ೯ವಾದ ಲೇಖನ ಅಥವ ಉಪನ್ಯಾಸವನ್ನು ಆದಷ್ಟು ಬೇಗ ಕರುಣಿಸಿ ಗುರುಗಳೆ.
 • KRISHTACHARYA,

  3:42 AM , 21/06/2017

  ಆಚಾರ್ಯರೆ, ನಿಮ್ಮ ಉತ್ತರದ ಕೊನೆಯಲ್ಲಿ ಬರೆದ ಹಾಗೆ ಸ್ವರ್ಗ ಮತ್ತು ನರಕದಲ್ಲೂ ಜನ್ಮವೆನ್ನುವದು

  Vishnudasa Nagendracharya

  ನಿಮ್ಮ ಪ್ರಶ್ನೆ ಪರಿಪೂರ್ಣವಾಗಿಲ್ಲ. 
  
  ಪ್ರಾಯಃ ಹೀಗಿರಬಹುದು- ಸ್ವರ್ಗ ಮತ್ತು ನರಕದಲ್ಲೂ ಜನ್ಮವೆನ್ನುವದು ಇದೆಯೇ ಎಂದು. 
  
  ಹೌದು. ಇದೆ. ಆದರೆ, ನಮ್ಮ ಭೂಮಿಯಲ್ಲಿದ್ದಂತೆ ಇಲ್ಲ. 
  
  ಇಲ್ಲಿ ಗರ್ಭವಾಸದ ನಂತರ ಜನ್ಮ, ನರಕಕ್ಕೆ ಹೋಗಬೇಕಾದರೆ ಕರ್ಮದಿಂದ ಪಡೆಯುವ ಯಾತನಾಶರೀರ. ಹಾಗೂ ಸ್ವರ್ಗಕ್ಕೆ ಭೋಗಶರೀರ. 
  
  ಇನ್ನು ಸ್ವರ್ಗದಲ್ಲಿಯೇ ಇರುವ ದೇವತೆಗಳಿಗೂ ಮಕ್ಕಳಿದ್ದಾರೆ. ಇಂದ್ರದೇವರಿಗೆ ಜಯಂತ ಇದ್ದಂತೆ. 
  
  ಆದರೆ, ಅಲ್ಲಿನ ಸೃಷ್ಟಿಕ್ರಮ ಅತ್ಯಂತ ವಿಭಿನ್ನವಾದದ್ದು. ಕೇವಲ ಸಂಕಲ್ಪದಿಂದ, ಸ್ಪರ್ಶದಿಂದ ಅವರು ಮಕ್ಕಳನ್ನು ಪಡೆಯಬಲ್ಲರು. ಕದಾಚಿತ್ ಗರ್ಭವಾಸದ ಮುಖಾಂತರ ಮಕ್ಕಳನ್ನು ಪಡೆದರೂ ಅಲ್ಲಿ ಗರ್ಭವಾಸದ ದುಃಖವಿಲ್ಲ. ದೇವತಾಸ್ತ್ರೀಯರ ಗರ್ಭದಲ್ಲಿ ಜನ್ಮ ಪಡೆದರೆ ಗರ್ಭವಾಸದ ದುಃಖವಿಲ್ಲ. 
  
  ಇದಕ್ಕೆ ಪ್ರಮಾಣ - ಅಷ್ಟವಸುಗಳನ್ನು ಮಕ್ಕಳಾಗಿ ಪಡೆದು ಕೊಲ್ಲಬೇಕು ಎಂಬ ಇಚ್ಛೆಯಿಂದ ಗಂಗಾದೇವಿ ದೇವತಾರೂಪದಿಂದಲೇ ಬಂದು ಶಂತನುಮಹಾರಾಜರನ್ನು ಮದುವೆಯಾಗುತ್ತಾರೆ. ಶಂತನುಮಹಾರಾಜರು ಮನುಷ್ಯದೇಹ. ಗಂಗೆಯದು ದೇವತಾದೇಹ. ಆ ದೇಹದಲ್ಲಿ ಪಡೆದ ಏಳು ಜನ ಮಕ್ಕಳನ್ನು ಗಂಗಾದೇವಿ ಆ ವಸುಗಳ ಇಚ್ಛೆಯಂತೆಯೇ ಕೊಲ್ಲುತ್ತಾರೆ. ಎಂಟನೆಯವರೇ ಭೀಷ್ಮ. ಭೀಷ್ಮಾಚಾರ್ಯರು ಶರತಲ್ಪದಲ್ಲಿ ಮಲಗಿ ಎಂಟು ಜನರ ಗರ್ಭವಾಸದ ದುಃಖವನ್ನು ಅನುಭವಿಸಬೇಕು ಎಂದು ಶಾಪ. ಭೀಷ್ಮರೇ ಎಂಟನೆಯವರು, ಅವರು ಗಂಗೆಯ ಗರ್ಭದಲ್ಲಿ ದುಃಖವನ್ನು ಅನುಭವಿಸಿದ್ದರೆ ಮತ್ತೇಕೆ ಅನುಭವಿಸಬೇಕು. ಅನುಭವಿಸಿದ್ದಾರೆ ಆದ್ದರಿಂದಲೆ ಅವರಿಗೆ ಗಂಗೆಯ ದೇಹದಲ್ಲಿ ಗರ್ಭವಾಸದ ದುಃಖವಿಲ್ಲ ಎಂದು ಸಿದ್ಧವಾಗುತ್ತದೆ. ಆಚಾರ್ಯರು ತಾತ್ಪರ್ಯನಿರ್ಣಯದಲ್ಲಿ ಈ ತತ್ವವನ್ನು ವಿಶದಪಡಿಸಿದ್ದಾರೆ. 
  
  ಹೀಗಾಗಿ ಸ್ವರ್ಗದಲ್ಲಿ ಜನನ ಮರಣಗಳಿವೆ. ಆದರೆ ನಮ್ಮ ಲೋಕದಂತೆ ಮಹತ್ತರದುಃಖಯುಕ್ತವಾದದ್ದಲ್ಲ. 
  
  ಮೋಕ್ಷದಲ್ಲಿ ಜನನ ಮರಣಗಳೇ ಇಲ್ಲ. 
 • Jayashree Karunakar,

  9:58 AM , 21/06/2017

  ಈ ತತ್ವಗಳನ್ನು ಅಥ೯ ಮಾಡಿಕೋಳ್ಶಲು ಸ್ವಲ್ಪ ಕಷ್ಟ ಆಗುತ್ತದೆ ಗುರುಗಳೆ. ಮತ್ತೆ ಮತ್ತೆ ಮನಸಿನಲ್ಲಿ ಪ್ರಶ್ನೆಗಳು ಎಳುತ್ತವೆ.

  Vishnudasa Nagendracharya

  ಇವೆಲ್ಲವನ್ನು ಒಂದು ವ್ಯವಸ್ಥಿತವಾದ ಕ್ರಮದಲ್ಲಿ ಕಲಿಸಬೇಕು. ಸಮಯ ಬರಲಿ ಅದಕ್ಕಾಗಿ ಪ್ರಯತ್ನಿಸುತ್ತೇನೆ. 
  
  ಆರಂಭಿಕ ಹಂತದ ವಿಷಯಗಳು ತಿಳಿಯದೇ ಇದ್ದಾಗ ಮುಂದಿನ ವಿಷಯಗಳು ತಿಳಿಯುವದು ತುಂಬ ಕಷ್ಟವಾಗುತ್ತದೆ. 
 • Jayashree Karunakar,

  9:39 PM , 20/06/2017

  ಅಪ್ರಾಕೃತ ಅಂದರೆ ಏನು ಗುರುಗಳೆ

  Vishnudasa Nagendracharya

  ಪ್ರಕೃತಿಗೆ ಸಂಬಂಧ ಪಡದೇ ಇರುವದು. 
  
  ದೇವರು, ಲಕ್ಷ್ಮೀ, ಸಮಸ್ತ ಉತ್ತಮ-ಅಧಮ-ಮಧ್ಯಮ ಜೀವರು ಈ ಮೂರೂ ಜನ ಅಪ್ರಾಕೃತರು. 
  
 • KRISHTACHARYA,

  3:42 AM , 21/06/2017

  ಆಚಾರ್ಯರೆ, ನಿಮ್ಮ ಉತ್ತರದ ಕೊನೆಯಲ್ಲಿ ಬರೆದ ಹಾಗೆ ಸ್ವರ್ಗ ಮತ್ತು ನರಕದಲ್ಲೂ ಜನ್ಮವೆನ್ನುವದು
 • Jayashree Karunakar,

  9:58 PM , 20/06/2017

  ಅಂದರೆ ಅಪ್ರಾಕೃತದೇಹ ಯಾವ ಮೂಲ ವಸ್ತುಗಳಿಂದ ಆಗಿದ್ದು
 • Jayashree Karunakar,

  4:50 PM , 20/06/2017

  ಗುರುಗಳೆ ದೇಹ ಅಂದರೆ ಪಂಚೇಂದ್ರೀಯ ಕಮೆ೯ಂದ್ರೀಯಗಳು ಇರುವಂತದ್ದು ಮತ್ತು ಪಂಚ ಭೂತಗಳಿಂದಾದದ್ದು ಅಲ್ಲವೆ.ಹಾಗಾದರೆ ಅನಿರುಧ್ದದೇಹ ಕ್ಕೂ ಅದು ಇದೆಯ? ಸ್ವರೂಪ ದೇಹ ಅಂದರೆ ನಮ್ಮ ಮೂದಲ ಜನ್ಮವ .ಮತ್ತು ಲಿಂಗದೇಹ ಪ್ರಕೃತ್ಯಾತ್ಮಕವಾದದ್ದು ಎಂದಿರಿ. ಹಾಗಾದರೆ ಅದಕ್ಕೆ ದೇಹ ಅಂತ ಯಾಕೆ ಹೆಸರು.

  Vishnudasa Nagendracharya

  ದೇಹ ಎಂದರೆ ಇಂದ್ರಿಯಗಳಿರಬೇಕು. ಆದರೆ ಪಂಚಭೂತಗಳಿಂದಲೇ ನಿರ್ಮಿತವಾಗಿರಬೇಕು ಎಂಬ ನಿಯಮ ಬ್ರಹ್ಮಾಂಡದ ಒಳಗೆ ಮಾತ್ರ. 
  
  ಪ್ರಳಯಕಾಲದಲ್ಲಿ ನಮಗೆ ಅನಿರುದ್ಧ ದೇಹವೂ ಇರುವದಿಲ್ಲ, ಸ್ಥೂಲದೇಹವೂ ಇರುವದಿಲ್ಲ. ಕೇವಲ ಲಿಂಗದೇಹ ಇರುತ್ತದೆ. 
  
  ಸ್ವರೂಪದೇಹ ಅಪ್ರಾಕೃತವಾದದ್ದು, ಲಿಂಗದೇಹ ಶುದ್ಧ ಪ್ರಕೃತ್ಯಾತ್ಮಕವಾದದ್ದು,ಸ್ಥೂಲದೇಹ ಪಂಚಭೂತಾತ್ಮಕವಾದದ್ದು. 
  
  ಪ್ರಕೃತ್ಯಾತ್ಮಕವಾದರೆ ದೇಹ ಎಂಬ ಹೆಸರು ಬರಬಾರದು ಎಂದೇನಿಲ್ಲ. ಅದು ದೇಹವಾದ್ದರಿಂದ ದೇಹ ಎಂಬ ಹೆಸರು. 
 • Ashok Prabhanjana,

  12:22 PM, 20/06/2017

  ಗುರುಗಳೇ, ಲಿಂಗ ಅನಿರುದ್ಧ ಮತ್ತು ಸ್ಥೂಲ ದೇಹದ ನಿರ್ಯಾಣದ ನಂತರ ಬರುವ ಯಾತನಾ ಶರೀರವು ಸ್ವರೂಪಾಕರವೆ ಇರುತದೆಯಾ? ಉದಾ : ಒಬ್ಬ ಜೀವ ಸ್ವರೂಪತಹ ಆನೆ ಆಗಿದ್ದರೆ, ಲಿಂಗ ಅನಿರುದ್ಧ ಮತ್ತು ಯಾತನಾ ಶರೀರಗಳು ಆನೆ ಆಕಾರದಲ್ಲಿ ಇರುತ್ತದೆಯಾ? ದಯವಿಟ್ಟು ತಿಳಿಸಿ ಕೊಡಿ ಗುರುಗಳೇ ()

  Vishnudasa Nagendracharya

  ಇಲ್ಲ. ಯಾತನಾಶರೀರವಾಗಲೀ, ಭೋಗಶರೀರವಾಗಲೀ ಎರಡೂ ಸಹ ಕರ್ಮದಿಂದ ಬರುವಂತಹದ್ದು. ಹೀಗಾಗಿ ನಮ್ಮ ಕರ್ಮ ಯಾವ ರೀತಿಯಾಗಿದೆಯೋ ಆ ರೀತಿಯ ಯಾತನಾ/ಭೋಗ ಶರೀರವನ್ನು ಪಡೆಯುತ್ತೇವೆ. 
  
  ಸ್ವರೂಪದೇಹದಂತೆ ಇರುವ ದೇಹ ಎರಡು. ಒಂದು ಲಿಂಗದೇಹ. 
  
  ಎರಡನೆಯದು ಚರಮದೇಹ. 
  
  ಚರಮದೇಹದ ವಿವರಣೆಯನ್ನು ಇದರ ಕೆಳಗಿನ ಕಾಮೆಂಟಿಗೆ ಉತ್ತರವಾಗಿ ನೀಡಿದ್ದೇನೆ. 
  
  ಯಾವ ದೇಹ ಭೂಲೋಕದಲ್ಲಿ ಕಡೆಯ ದೇಹವೋ ಅದು ಚರಮದೇಹ. ಆ ಚರಮದೇಹ ನಮ್ಮ ಸ್ವರೂಪದೇಹದ ಆಕಾರದಲ್ಲಿಯೇ ಇರುತ್ತದೆ. ಅಂದರೆ ನಾವು ಸ್ವರೂಪದಲ್ಲಿ ಹಕ್ಕಿಯಾಗಿದ್ದರೆ ಚರಮದೇಹವೂ ಹಕ್ಕಿಯ ಜನ್ಮವೇ ಆಗಿರುತ್ತದೆ. ನಾವು ಸ್ವರೂಪದಲ್ಲಿ ಶೂದ್ರರಾಗಿದ್ದರೆ ಚರಮದೇಹದಲ್ಲಿಯೂ ಶೂದ್ರರಾಗಿಯೇ ಇರುತ್ತೇವೆ. 
  
  ಸ್ವರೂಪದ ವರ್ಣ, ಆಶ್ರಮ, ಆಕಾರಗಳು ಚರಮಸ್ಥೂಲದೇಹದಲ್ಲಿರುತ್ತವೆ. 
  
  ಮತ್ತೊಂದು ವಿಷಯ, ಯಾತನಾ/ಭೋಗಶರೀರಗಳೂ ಸಹ ಸ್ಥೂಲ ಶರೀರಗಳೇ. ಸ್ಥೂಲ ಶರೀರದ ಪ್ರಭೇದವಷ್ಟೇ ಅದು. 
  
  
 • Anilkumar B Rao,

  5:50 PM , 14/06/2017

  Acharyarige AnEka namaskaaragaLu, ಚರಮ ದೇಹ ಅಂತಾರಲ್ಲ ಅದು ಯಾವ ಹಂತದಲ್ಲಿ ಬರತ್ತೆ ?

  Vishnudasa Nagendracharya

  ಚರಮ ಎಂದರೆ ಕಡೆಯದು. ಚರಮ ದೇಹ ಎಂದರೆ ಕಡೆಯ ದೇಹ. ಕಡೆಯ ದೇಹ ಕಡೆಯಲ್ಲಿಯೇ ಬರುತ್ತದೆ. 
  
  ಯಾವ ಜನ್ಮದಲ್ಲಿ ನಾವು ಮತ್ತೊಮ್ಮೆ ಈ ಭೂಮಿಯಲ್ಲಿ ಹುಟ್ಟುವ ಕರ್ಮವನ್ನು ಕಳೆದುಕೊಳ್ಳುತ್ತೇವೆಯೋ, ನಾವು ಜನ್ಮ ಮರಣಗಳ ಸಂಕೋಲೆಯಿಂದ ಪೂರ್ಣವಾಗಿ ಮುಕ್ತರಾಗುತ್ತೇವೆಯೋ ಅದೇ ಕಟ್ಟ ಕಡೆಯ ಜನ್ಮ, ಚರಮ ಜನ್ಮ. ಆಗಿರುವ ದೇಹವೇ ಚರಮದೇಹ. 
  
  ಉದಾಹರಣೆಗೆ - ಪರೀಕ್ಷಿದ್ ಮಹಾರಾಜರಿಗೆ ಪರೀಕ್ಷಿತನಾಗಿ ಹುಟ್ಟಿ ಬಂದ ಜನ್ಮವೇ ಕಡೆಯದ್ದು. 
 • Jayashree karunakar,

  2:00 PM , 13/06/2017

  ಹಾಗಾದರೆ ಮಹತ್ ತತ್ವ ಎಂದರೇನು ? ಅಹಂಕಾರ ತತ್ವಕ್ಕೆ ಬೇಕಾದ ಪದಾ೯ಥವೇ

  Vishnudasa Nagendracharya

  ಹೌದು. 
 • Jayashree karunakar,

  9:57 AM , 13/06/2017

  ಗುರು ಗಳೆ
  1.ಸತ್ವ ರಜಸ್ ತಮೋ ಗುಣಗಳಿಂದ ಮಹದಾದಿ ತತ್ವ ಉತ್ಪತ್ತಿ ಎಂದಿರಿ. ಅದೆಲ್ಲವು ಮನುಷ್ಯನ ಗುಣಗಳಲ್ಲವೆ ಅದರಿಂದ ಮಹದಾದಿತತ್ವ ಎಂಬ ವಸ್ತುವು ಹೇಗೆ ಉಂಟಾಗುತ್ತದೆ.
  
  ೨. ಲಿಂಗದೇಹಕ್ಕೂ ಅನಿರುಧ್ದ ದೇಹಕ್ಕೂ ಎನು ವೆತ್ಯಾಸ. ಆ ದೇಹದಲ್ಲಿದ್ದಾಗ ನಮಗೆ ಅರಿವಿರುತ್ತದೆಯೇ ಮತ್ತು ಸ್ವಾತಂತ್ಯ್ರವಿರುತ್ತದೆಯೇ.
  
  ೩.ವಿರಜಾ ನದಿಯಲ್ಲಿ ಸ್ನಾನ ಮಾಡವುದು ಎಂದರೇನು ದಯವಿಟ್ಟು ತಿಳಿಸಿ ಗುರುಗಳೆ.

  Vishnudasa Nagendracharya

  ಮೂಲಪ್ರಕೃತಿಯಿಂದ ಸತ್ವ ರಜಸ್ ತಮೋ ಗುಣಗಳು ಹುಟ್ಟುತ್ತವೆ. ಆ ಗುಣಗಳಿಂದಲೇ ಮಹದಾದಿ ತತ್ವಗಳು ಹುಟ್ಟುತ್ತವೆ ಮತ್ತು ಸಮಗ್ರ ಜೀವಸಂಕುಲದ ಮೇಲೆ ಆ ಗುಣಗಳು ಪರಿಣಾಮ ಬೀರುತ್ತವೆ. 
  
  ಲಿಂಗದೇಹ ಶುದ್ಧ ಪ್ರಕೃತ್ಯಾತ್ಮಕವಾದದ್ದು. ಅನಿರುದ್ಧದೇಹ ನಮ್ಮ ಕರ್ಮಾತ್ಮಕವಾದದ್ದು. ಅಂದರೆ ನಮ್ಮ ಕರ್ಮಗಳಿಂದ ನಿರ್ಮಿತವಾದ ಶರೀರ. ಲಿಂಗದೇಹ ನಮ್ಮನ್ನು ಸಂಸಾರದಲ್ಲಿರುವಂತೆ ಮಾಡುತ್ತದೆ. ಅನಿರುದ್ಧದೇಹ ನಮಗೆ ಆ ಸಂಸಾರವನ್ನು ಅನುಭವಿಸುವಂತೆ, ಅರ್ಥಾತ್ ಸ್ಥೂಲದೇಹವನ್ನು ಪಡೆದು ಸುಖ ದುಃಖಾದಿಗಳನ್ನು ಅನುಭವಿಸುವಂತೆ ಮಾಡುತ್ತದೆ. 
  
  ಅಪರೋಕ್ಷಜ್ಞಾನವನ್ನು ಪಡೆದು ಉತ್ಕ್ರಾಂತಿಯನ್ನು ಪಡೆದ ಜೀವರಾಶಿಗಳು, ಮತ್ತೆ ಸಂಸಾರಕ್ಕೆ ಬರುವ ಕರ್ಮವನ್ನು ಕಳೆದುಕೊಂಡವರು, ಬ್ರಹ್ಮಪ್ರಳಯದ ಕಟ್ಟ ಕಡೆಯ ಘಟ್ಟದಲ್ಲಿ ಬ್ರಹ್ಮದೇವರೊಂದಿಗೆ ವಿರಜಾನದಿಯಲ್ಲಿ ಸ್ನಾನ ಮಾಡುತ್ತಾರೆ. ಬ್ರಹ್ಮಾಂಡದ ಮೇಲಿರುವ ಎಲ್ಲ ಆವರಣಗಳ ಕಡೆಯಲ್ಲಿ (52ನೇ ಪ್ರಶ್ನೋತ್ತರದಲ್ಲಿ ವಿವರಿಸಿದ್ದೇನೆ. ) ಹರಿಯುತ್ತಿದೆ. ಅಂದರೆ ಸತ್ವಗುಣ ಮತ್ತು ಮೂಲಪ್ರಕೃತಿಗಳ ಮಧ್ಯದಲ್ಲಿ ಹರಿಯುತ್ತಿರುವ ನದಿ. ಮಹಾಲಕ್ಷ್ಮ್ಮೀದೇವಿಯೇ ಆ ರೂಪದಲ್ಲಿ ಹರಿಯುತ್ತಿದ್ದಾರೆ. ಅಲ್ಲಿ ಸ್ನಾನ ಮಾಡಿದಾಗ ಜೀವನ ಲಿಂಗದೇಹ ಜೀವನಿಂದ ವಿಯೋಗಗೊಳ್ಳುತ್ತದೆ. ಆ ನಂತರ ಪರಮಾತ್ಮನ ಉದರವನ್ನು ಸೇರಿ, ಮುಂದಿನ ಸೃಷ್ಟಿಯ ಆರಂಭದಲ್ಲಿ ಈ ಜೀವರು ಮುಕ್ತಿಯನ್ನು ಅನುಭವಿಸುತ್ತಾರೆ. 
 • Vijay Kumar,Bengaluru

  10:14 PM, 12/06/2017

  ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು. ಶ್ರೀ ಜಗನ್ನಾಥದಾಸರು ಶ್ರೀ ಪ್ರಾಣದೇವರನ್ನು ಭೂತತ್ರಯ ವಪುಷಾ ಎಂದಿದ್ದಾರೆ. ಎನಿದರ ಅರ್ಥಾ.

  Vishnudasa Nagendracharya

  ಶ್ರೀಮದಾಚಾರ್ಯರು ಶ್ರೀಮದ್ ಭಾಗವತ ತಾತ್ಪರ್ಯನಿರ್ಣಯದಲ್ಲಿ ತಿಳಿಸಿದ ಪ್ರಮೇಯವಿದು. 
  
  ಪ್ರಾಣಸ್ಯ ವಾಯುರೂಪಸ್ಯ 
  ಭೂತತ್ರಯಕೃತಂ ವಪುಃ ।
  ಯತೋ ಹಿ ಪಾರ್ಥಿವಂ ನಾತ್ರ 
  ಖಂ ಚಾತ್ಯಲ್ಪಮುದಾಹೃತಮ್ ।।
  
  ಎಂದು ಆಚಾರ್ಯರು ವಚನ. 
  
  ಮುಖ್ಯಪ್ರಾಣದೇವರ ವಾಯುರೂಪದ ಶರೀರ ವಾಯು, ಜಲ, ಅಗ್ನಿಗಳಿಂದ ನಿರ್ಮಿತವಾಗಿದೆ. ಆಕಾಶದ ಅಂಶವಿದ್ದರೂ ತುಂಬ ಸ್ವಲ್ಪ ಇರುವದರಿಂದ ಅದನ್ನು ಗಣನೆಗೆ ತೆಗೆದುಕೊಂಡಿಲ್ಲ. ಭೂಮಿಯ ಅಂಶ ಇಲ್ಲವೇ ಇಲ್ಲ. 
  
  ಹೀಗೆ, ವಾಯುರೂಪದ ಶರೀರ ಅಗ್ನಿ, ಜಲ, ವಾಯು ಎಂಬ ಮೂರು ಭೂತಗಳಿಂದ ನಿರ್ಮಿತವಾಗಿರುವ ಕಾರಣಕ್ಕೆ ಭೂತತ್ರಯವಪುಷ ಎಂದು ಶ್ರೀ ಜಗನ್ನಾಥದಾಸಾರ್ಯರು ಕರೆದಿದ್ದಾರೆ. 
 • ಸುದರ್ಶನ ಶ್ರೀ. ಲ.,

  9:41 PM , 12/06/2017

  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏😊
  
  ಈ ಪಾಂಚಭೌತಿಕ ಶರೀರ ಭೂಮಿಗೆ ಸಂಬಂಧಪಟ್ಟಿದ್ದೆ ?
  ಒಂದೊಂದು ಲೋಕಕ್ಕೂ ಒಂದು ರೀತಿಯ ಶರೀರವೇ ?
  
  ಶುದ್ಧಪ್ರಕೃತಿ ಎಂದರೇನು ?
  
  ದಯಮಾಡಿ ತಿಳುಹಿಸಿ ಗುರುಗಳೆ🙏

  Vishnudasa Nagendracharya

  ಹೌದು. ಒಂದೊಂದು ಲೋಕಕ್ಕೂ ಒಂದೊಂದು ರೀತಿಯ ಶರೀರವಿದೆ. 
  
  ಭೂಲೋಕದಲ್ಲಿ ನೂರು ವರ್ಷ ಬದುಕುವ ಶರೀರ. (ಇಲ್ಲಿಯೂ ಕಾಲವ್ಯತ್ಯಾಸದಿಂದ ಸಾವಿರ, ಹತ್ತುಸಾವಿರ ವರ್ಷ ಬದುಕುವ ಶರೀರ ದೊರೆಯುತ್ತದೆ) 
  
  ಸ್ವರ್ಗಲೋಕದಲ್ಲಿ ಒಂದು ಮನ್ವಂತರದ ಕಾಲ ಬದುಕುವ ಶರೀರ. 
  
  ಮಹರ್ಲೋಕದಲ್ಲಿ ಒಂದು ಕಲ್ಪಕಾಲ ಬದುಕುವ ಶರೀರ. 
  
  ಹಾಗೆಯೇ ಪಾತಾಳಾದಿ ಲೋಕಗಳಲ್ಲಿ ಸೂರ್ಯನ ಬೆಳಕಿಲ್ಲದೇ ಬದುಕುವ ಶರೀರ.
  
  ಬ್ರಹ್ಮಾಂಡದ ಒಳಗಿನ ಎಲ್ಲ ಲೋಕಗಳಲ್ಲಿಯೂ ಇರುವದು ಪಂಚಭೂತಗಳಿಂದ ನಿರ್ಮಿತವಾದ ಶರೀರಗಳೇ. 
  
  ಪೃಥ್ವಿಯಲ್ಲಿ ಪಾರ್ಥಿವ, ದೇವಲೋಕದಲ್ಲಿ ದಿವ್ಯ ಎಂದು ಕರೆಸಿಕೊಳ್ಳುತ್ತವೆ. 
  
  ಪಂಚಭೂತಗಳ ವಿಶಿಷ್ಟ ಸಮ್ಮೇಲನದಿಂದ ಈ ದೇಹಗಳು ರೂಪುಗೊಳ್ಳುತ್ತವೆ. ದಿವ್ಯಶರೀರಗಳಲ್ಲಿ ಭೂಮಿಯ ಅಂಶ ತುಂಬ ಕಡಿಮೆ ಇರುತ್ತದೆ. ಪಾರ್ಥಿವಶರೀರದಲ್ಲಿ ಭೂಮಿಯ ಅಂಶವೇ ಅಧಿಕವಾಗಿರುತ್ತದೆ. ದಿವ್ಯದೇಹದಲ್ಲಿ ಬ್ರಹ್ಮ ವಾಯ್ವಾದಿಗಳ ಶರೀರಕ್ಕೂ ಸಾಮಾನ್ಯ ದೇವತೆಗಳ ಶರೀರಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. 
  
  
 • ಪ್ರಮೋದ,

  9:45 PM , 12/06/2017

  Aacharyare, shuddha prakruthi andhare enu?
  Linga dehakke uthpatthine illa andha mele,adhu shuddha prakruthithyaathmaka annuvudhu hege koodutthadhe?
  Dhayamaadi thilisi🙏🙏🙏

  Vishnudasa Nagendracharya

  ಲಿಂಗದೇಹಕ್ಕೆ ಉತ್ಪತ್ತಿ ಇಲ್ಲ ನಿಜ. ಆದರೆ ಅದು ಶುದ್ಧಪ್ರಕೃತಿಯ ಒಂದು ರೂಪ. 
  
  ಹೇಗೆ ಭಗವಂತನ ಶರೀರಕ್ಕೆ ಉತ್ಪತ್ತಿ ಇಲ್ಲದಿದ್ದರೂ ಅದು ಚಿದಾನಂದಾತ್ಮಕ, ಅಪ್ರಾಕೃತ ಎಂದು ಕರೆಸಿಕೊಳ್ಳುತ್ತದೆಯೋ, ಹಾಗೆ, ಲಿಂಗದೇಹವು ಉತ್ಪನ್ನವಾಗದಿದ್ದರೂ ಅದು ಪ್ರಕೃತ್ಯಾತ್ಮಕ ಎಂದು ಕರೆಸಿಕೊಳ್ಳುತ್ತದೆ. 
  
  ಪ್ರಕೃತಿಯಿಂದ ಸತ್ವ ರಜಸ್ ತಮೋ ಗುಣಗಳು ಹುಟ್ಟುವಂತೆ ಲಿಂಗದೇಹ ಹುಟ್ಟುವದಿಲ್ಲ. ಶುದ್ಧಪ್ರಕೃತಿಯ ಅನಂತಾನಂತ ಲಿಂಗಶರೀರಗಳ ರೂಪದಲ್ಲಿ ಅನಾದಿ ಕಾಲದಿಂದ ಇದೆ. ವಿರಜಾನದಿಯ ಸ್ನಾನದಿಂದ ಅದು ಜೀವನಿಂದ ವಿಯೋಗಗೊಳ್ಳುತ್ತದೆ. 
  
  
 • ಪ್ರಮೋದ,

  9:45 PM , 12/06/2017

  Aacharyare, shuddha prakruthi andhare enu?
  Linga dehakke uthpatthine illa andha mele,adhu shuddha prakruthithyaathmaka annuvudhu hege koodutthadhe?
  Dhayamaadi thilisi🙏🙏🙏

  Vishnudasa Nagendracharya

  ಶುದ್ಧ ಪ್ರಕೃತಿ ಎಂದರೆ ಪ್ರಕೃತಿಯ ಮೂಲಸ್ವರೂಪ. 
  
  ಪ್ರಕೃತಿಯಿಂದ ಸತ್ವ ರಜಸ್ ತಮೋ ಗುಣಗಳು ಹುಟ್ಟುತ್ತವೆ. 
  
  ಆ ಗುಣತ್ರಯಗಳಿಂದ ಮಹತ್ ತತ್ವ, ಅದರಿಂದ ಅಹಂಕಾರ ತತ್ವ, ಅದರಿಂದ ಪಂಚಭೂತಗಳು ಹುಟ್ಟುತ್ತವೆ. 
  
  ಇವೆಲ್ಲದಕ್ಕೂ ಮೂಲವಾದ ಪ್ರಕೃತಿಯನ್ನು ಶುದ್ಧಪ್ರಕೃತಿ ಎನ್ನುತ್ತಾರೆ. 
 • Vijay Kumar,

  9:21 PM , 12/06/2017

  ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು. ಸಕಲ ದೇವತೆಗಳ ಅನಿರುದ್ಧಶರೀರದ ಮೇಲೆ ಮತ್ತೆನಾದರು ಶರೀರವುಂಟೆ. ಜೀವರಿಗೆ ಭೋಗಶರೀರ ಮತ್ತು ಯಾತನಾಶರೀರ ವಿರುತ್ತಲ್ಲಾ ಅದು ಏನು.

  Vishnudasa Nagendracharya

  ದೇವತೆಗಳ ದಿವ್ಯ ಶರೀರ, ಮನುಷ್ಯರ ಪಾರ್ಥಿವ ಶರೀರ, ಸ್ವರ್ಗದ ಭೋಗಶರೀರ, (ಇದೂ ದಿವ್ಯದೇಹವೇ. ಆದರೆ ದೇವತೆಗಳ ದಿವ್ಯದೇಹಕ್ಕೂ ಪುಣ್ಯವಂತರು ಸ್ವರ್ಗಕ್ಕೆ ಹೋದಾಗ ಪಡೆಯುವ ದಿವ್ಯದೇಹಕ್ಕೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ) ನರಕದ ಯಾತನಾಮಯಶರೀರ ಎಲ್ಲವೂ ಸ್ಥೂಲದೇಹಗಳೇ. 
  
  ಹೀಗಾಗಿ ದೇವತೆಗಳಿಗೂ ಅನಿರುದ್ಧಶರೀರದ ಮೇಲೆ ಸ್ಥೂಲದೇಹವೇ ಇದೆ. ಮತ್ತೊಂದು ಬೇರೆ ಶರೀರವಿಲ್ಲ.