ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏
ಸೃಷ್ಟಿಯ ಮುಂಚೆ ಭಗವಂತ ಒಬ್ಬನೇ ಇದ್ದನಾ? ಅನ್ಯ ವಸ್ತುಗಳು ಇದ್ದರೆ ಅವು ಯಾವವು? ಯಾವ ಸ್ಥಿತಿಯಲ್ಲಿ ಇದ್ದವು? ಅವಕ್ಕು ಭಗವಂತನಗೊ ಯಾವ ಸಂಬಂಧ ?
ದಯವಿಟ್ಟು ತಿಳಿಸಿ🙏
— ಭಾರದ್ವಾಜ್ ಕರಣಮ್
ಹರೇ ಶ್ರೀನಿವಾಸ . ಮಾನುಷೋತ್ತಮರು ಯಾರು .ಹಾಗು ಮಧ್ಯಮ ಮತ್ತು ಅಧಮ ಜೀವರು ಎಂದರೆ ಯಾರು ಎಂದು ತಿಳಿಸಿಕೊಡಿ .🙏🙏
Vishnudasa Nagendracharya
ಅನೇಕ ರೀತಿಗಳಲ್ಲಿ ನಾವು ಜೀವರ ವಿಭಾಗವನ್ನು ಕಾಣಬಹುದು.
ಉತ್ತಮ ಜೀವರು, ಮಧ್ಯಮ ಜೀವರು ಅಧಮ ಜೀವರು ಎಂದು.
ದೇವರಲ್ಲಿ ಭಕ್ತಿಯನ್ನು ಮಾಡುವವರು ಉತ್ತಮರು,
ದೇವರಲ್ಲಿ ದ್ವೇಷವನ್ನು ಮಾಡುವವರು ಅಧಮರು,
ದೇವರಲ್ಲಿ ಭಕ್ತಿಯನ್ನೂ ಮಾಡದೇ, ದ್ವೇಷವನ್ನೂ ಮಾಡದೇ ಸಾಂಸಾರಿಕ ಸುಖ ದುಃಖಗಳನ್ನೇ ಅನುಭವಿಸುತ್ತಿರುವವರು ಮಧ್ಯಮರು.
ಉತ್ತಮರಲ್ಲಿ ಐದು ವಿಧ - ದೇವ, ಋಷಿ, ಪಿತೃ, ಚಕ್ರವರ್ತಿ ಮತ್ತು ಮನುಷ್ಯರು ಎಂದು.
ಮಧ್ಯಮರಲ್ಲಿ ಒಂದೇ ವಿಧ - ಮನುಷ್ಯರು ಎಂದು.
ಅಧಮರಲ್ಲಿ ಅನೇಕ ವಿಧ - ಮನುಷ್ಯರು, ಪಿಶಾಚಗಳು, ರಾಕ್ಷಸರು, ಯಾತುಧಾನರು, ದೈತ್ಯರು, ದಾನವರು ಇತ್ಯಾದಿ.
ಅಂದರೆ, ಮನುಷ್ಯಜೀವರು ಉತ್ತಮವಿಭಾಗದಲ್ಲಿಯೂ ಇದ್ದಾರೆ, ಮಧ್ಯಮ ವಿಭಾಗದಲ್ಲಿಯೂ ಇದ್ದಾರೆ, ಅಧಮವಿಭಾಗದಲ್ಲಿಯೂ ಇದ್ದಾರೆ.
ಭಕ್ತಿಯನ್ನು ಮಾಡಿ ಮೋಕ್ಷವನ್ನು ಪಡೆಯುವವರು ಮನುಷ್ಯೋತ್ತಮರು.
ದೇವರಲ್ಲಿ ಉದಾಸೀನರಾಗಿದ್ದು ಲೋಕಸುಖದಲ್ಲಿ ಮಾತ್ರ ಆಸಕ್ತರಾದವರು ಮನುಷ್ಯಮಧ್ಯಮರು.
ದೇವರಲ್ಲಿ ದ್ವೇಷ ಮಾಡಿ ತಮಸ್ಸನ್ನು ಪಡೆಯುವ ಮನುಷ್ಯರು ಮನುಷ್ಯಾಧಮರು.
Aditya C S,
1:00 AM , 14/06/2017
Acharyare,
Pranamagalu,
Taratamya kramadalli manushyaru 32ne kaksheyavaru. Ella manushyarigu mokshavagutta?
Athava bari manushyottamanige maatra mokshavagutta?
Bari manushyottamanige moksha anta aadare, Ella manushyaru aneka janmagala sadhane madi manushyottamaraguttara?
Mattu, Ananta kaaladavarege samsaradalle iruvu manushya jeevaru iddara?
Vishnudasa Nagendracharya
ಮನುಷ್ಯೋತ್ತಮರಿಗೆ ಮಾತ್ರ ಮೋಕ್ಷ. ಮಧ್ಯಮ ಮತ್ತು ಅಧಮಜೀವರಾಶಿಗಳ ಲೆಕ್ಕಕ್ಕೆ ಸೇರುವ ಮನುಷ್ಯರಿಗೆ ಮೋಕ್ಷವಾಗುವದಿಲ್ಲ.
ಕರ್ಮದಿಂದ ಮನುಷ್ಯೋತ್ತಮರಾಗುವದಲ್ಲ. ಸ್ವಾಭಾವಿಕವಾಗಿ ಮನುಷ್ಯೋತ್ತಮರಾಗಿರಬೇಕು.
ಅಂದರೆ ಮನುಷ್ಯ ಜೀವ ಸ್ವಾಭಾವಿಕವಾಗಿ ಉತ್ತಮನಾಗಿದ್ದಾಗ ಮನುಷ್ಯೋತ್ತಮ ಎಂದು ಕರೆಸಿಕೊಳ್ಳುತ್ತಾನೆ. ಅವನು ಸಾಧನೆ ಮಾಡಿ ಮೋಕ್ಷವನ್ನು ಗಳಿಸುತ್ತಾನೆ.
Jayashree karunakar,
9:54 AM , 14/06/2017
ಗುರುಗಳೇ ಒಂದು ವೇಳೆ ನಮಗೆ ಮೋಕ್ಷಕ್ಕೆ ಹೋಗುವ ಅಹ೯ತೆ ಇಲ್ಲದ ಪಕ್ಷದಲ್ಲಿ
ನಾವು ಎಷ್ಟೇ ಪ್ರಯತ್ನಪಟ್ಟರೂ ಮತ್ತು ಅಪೇಕ್ಷೆ ಪಟ್ಟರೂ ದೂರೆಯುವದಿಲ್ಲವೇ?
ಅಥವಾ ನಮಗೆ ಅಹ೯ತೆ ಇಲ್ಲವೆಂದಾದಲ್ಲಿ ದೇವರು ನಮಗೆ ಮೋಕ್ಷದ ಅಪೇಕ್ಷೆಯನ್ನೇ ಕೂಡುವುದಿಲ್ಲವೇ ?
Vishnudasa Nagendracharya
ಮೋಕ್ಷಯೋಗ್ಯರಲ್ಲದ ಜೀವರಿಗೆ ಮೋಕ್ಷದ ಸಾತ್ವಿಕ ಅಪೇಕ್ಷೆ ಎಂದಿಗೂ ಬರುವದಿಲ್ಲ. ಮೋಕ್ಷದಲ್ಲಿನ ಸುಖದ ಬಯಕೆ ಇರಬಹುದು. ಆದರೆ ಶಾಸ್ತ್ರ ತಿಳಿಸಿದ ಕ್ರಮದಲ್ಲಿ ಮೋಕ್ಷವನ್ನು ಪಡೆಯುತ್ತೇನೆ ಎಂದು ಅವರು ಪ್ರಯತ್ನ ಪಡುವದಿಲ್ಲ. ವಕ್ರವಾದ ಮಾರ್ಗದಿಂದ ಮೋಕ್ಷವನ್ನು ಬಯಸಬಹುದು.
ಉತ್ತಮರಾದ ಜೀವರಿಗೆ ಮೋಕ್ಷದ ಸಾತ್ವಿಕ ಅಪೇಕ್ಷೆ ಮೂಡುತ್ತದೆ. ಶಾಸ್ತ್ರ ತಿಳಿಸಿದ ಕ್ರಮದಲ್ಲಿ ಪ್ರಯತ್ನ ಮಾಡಿ, ಹರಿಯ ಕಾಲಿಗೆರಗಿ ಜ್ಞಾನ ಭಕ್ತಿ ವೈರಾಗ್ಯಗಳಿಂದ ಹರಿಯನ್ನು ಒಲಿಸಿಕೊಂಡು ಮೋಕ್ಷ ಪಡೆಯುತ್ತಾರೆ.
Sangeetha prasanna,
8:28 AM , 14/06/2017
ಹರೇ ಶ್ರೀನಿವಾಸ .ಗುರುಗಳಿಗೆ ಅನಂತಾನಂತ ನಮಸ್ಕಾರಗಳು .🙏🙏
Kiran Kumar kr,
9:30 PM , 13/06/2017
ಆಚಾರ್ಯರೆ, ಒಂದು ವೇಳೆ ಜೀವ ಮಧ್ಯಮನಾಗಿದ್ದರೆ ಅವನು ಮೋಕ್ಷಕ್ಕೆ ಹೋಗುವುದಕ್ಕೆ ಸಾಧ್ಯವಿಲ್ಲವೆ ತಿಳಿಸಿ.
Vishnudasa Nagendracharya
ಅಧಮ ಜೀವನಾದರೂ ಸಹ ಶ್ರೀಹರಿಯ ಕಾಲಿಗೆರಗಿ ಮಾಡಿದೆಲ್ಲ ತಪ್ಪಿಗೆ ಕ್ಷಮೆ ಕೇಳಿ ಹರಿಯ ಭಕ್ತಿಯನ್ನು ಮಾಡಿದಲ್ಲಿ ಮೋಕ್ಷ ಪಡೆಯುತ್ತಾನೆ.
ಆದರೆ, ಅಧಮ ಮಧ್ಯಮ ಜೀವರು ಆ ರೀತಿಯಾಗಿ ಎಂದಿಗೂ ಮಾಡುವದಿಲ್ಲ.
ಅವರಿಗೆ ಮೋಕ್ಷದ ಅಪೇಕ್ಷೆಯೇ ಇರುವದಿಲ್ಲ. ಹೀಗಾಗಿ ಅದಕ್ಕೆ ಪ್ರಯತ್ನವನ್ನೂ ಮಾಡುವದಿಲ್ಲ.
ಮಧ್ಯಮರಿಗೆ ಇಲ್ಲಿನ ಬದುಕಿನ ಬಗ್ಗೆ ಚಿಂತೆಯೇ ಹೊರತು, ಎಂದಿಗೂ ಮೋಕ್ಷದ ಅಪೇಕ್ಷೆಯೂ ಇರುವದಿಲ್ಲ, ಅದಕ್ಕಾಗಿ ಸಾಧನೆಯನ್ನೂ ಮಾಡುವದಿಲ್ಲ. ಹರಿಯಲ್ಲಿ ಭಕ್ತಿಯನ್ನೂ ಮಾಡುವದಿಲ್ಲ.
Kiran Kumar kr,
8:35 PM , 13/06/2017
ಆಚಾರ್ಯರೆ,ನಮಸ್ಕಾರಗಳು. ಒಬ್ಬ ಮಾನವ ಉತ್ತಮ ಜೀವನೋ,ಮಧ್ಯಮ ಜೀವನೋ ಅಥವಾ ಅಧಮ ಜೀವನೋ ಎಂದು ಅವನು ಹೇಗೆ ತಿಳಿಯುವುದು ? ದಯಮಾಡಿ ತಿಳಿಸಿ
Vishnudasa Nagendracharya
ಮೇಲ್ನೋಟದಿಂದ ಅಷ್ಟು ಸುಲಭವಾಗಿ ತಿಳಿಯಲು ಸಾಧ್ಯವಿಲ್ಲ.
ಜೀವನಿಗೆ ಎರಡು ಮನಸ್ಸಿರುತ್ತವೆ. ಒಂದು ಸ್ವರೂಪಭೂತವಾದ ಮನಸ್ಸು ಮತ್ತೊಂದು ಸಾಂಸಾರಿಕವಾದ ಮನಸ್ಸು. ಈ ಎರಡು ಮನಸ್ಸುಗಳಲ್ಲಿನ ವ್ಯತ್ಯಾಸವನ್ನು ತಿಳಿಯುವ ಯೋಗ್ಯತೆಯನ್ನು ಮುಟ್ಟಿದಾಗ ಗೊತ್ತಾಗುತ್ತದೆ.
ವಿಷ್ಣುಭಕ್ತರು. ಪರೋಪಕಾರಿಗಳು, ಸಜ್ಜನರು. ಸದ್ಗುಣವುಳ್ಳವರು ಉತ್ತಮಜೀವರು.
ತನ್ನ ಮತ್ತು ತನ್ನವರ ಹಿತವನ್ನಷ್ಟೇ ಬಯಸುವ, ದೇವರಲ್ಲಿ ಭಕ್ತಿಯನ್ನೂ ಮಾಡದ, ದ್ವೇಷವನ್ನೂ ಮಾಡದವರು ಮಧ್ಯಮರು.
ಸಮಾಜದ ಲೋಕದ ವಿನಾಶವನ್ನು ಬಯಸುವ ದುರ್ಜನರು, ಅಧಮಜೀವರು
ಎನ್ನುವದು ನಿಯಮ.
ಆದರೆ, ಕರ್ಮಾದಿಗಳಿಗೆ ವಶನಾಗಿ ಉತ್ತಮನೂ ಮಧ್ಯಮ ಅಧಮರಂತೆ ನಡೆದುಕೊಳ್ಳಬಲ್ಲ.
ಮಧ್ಯಮ, ಅಧಮರೂ, ಉತ್ತಮರ ಸಂಪರ್ಕಕ್ಕೊಳಗಾಗಿ ಉತ್ತಮರಂತೆ ನಡೆದುಕೊಳ್ಳಬಲ್ಲರು.
ಇಡಿಯ ಜೀವನ ಪಾಪಕರ್ಮ ಮಾಡಿದ ಅಜಾಮಿಳ, ದುಂಧುಕಾರಿಗಳು ಮೋಕ್ಷ ಪಡೆಯಲಿಲ್ಲವೇ ?
ಸಜ್ಜನರಂತೆ ವರ್ತಿಸುವ ದುರ್ಜನರನ್ನು ಪುರಾಣೇತಿಹಾಸಗಳು ಸಾಕಷ್ಟು ದಾಖಲಿಸಿವೆ. ಉದಾಹರಣೆಗೆ ಮಾರೀಚ.
ಹೀಗಾಗಿ ಮೇಲ್ನೋಟದಿಂದ ನಿರ್ಧರಿಸಲು ಸಾಧ್ಯವಿಲ್ಲ.
ಕಷ್ಟದ ಪರಿಸ್ಥಿತಿ ಉತ್ತಮರ ಸ್ವಭಾವವನ್ನು ಅನಾವರಣ ಗೊಳಿಸುತ್ತದೆ.
ಸುಖದ ಪರಿಸ್ಥಿತಿ ಅಧಮರ ಸ್ವಭಾವವನ್ನು ಅನಾವರಣಗೊಳಿಸುತ್ತದೆ. ಇದೂ ಸಹ ಸ್ಥೂಲವಿವರಣೆಯೇ.
ನಾವು ಉತ್ತಮರು ಹೌದೋ ಅಲ್ಲವೋ ಎನ್ನುವದನ್ನು ನಿರ್ಣಯಿಸಲು ಸಾಕಷ್ಟು ಎತ್ತರವನ್ನು ನಾವೇರಬೇಕು. “ನಿರ್ಮಲ ಮತ್ತು ನಿಶ್ಚಲವಾದ” ವಿಷ್ಣುಭಕ್ತಿ ನಮ್ಮಲ್ಲಿದೆ ಎಂದಾದಲ್ಲಿ ಉತ್ತಮರು ಎಂದು ನಿರ್ಧರಿಸಬಹುದು.
ಭಾರದ್ವಾಜ್,ಬೆಂಗಳೂರು
5:31 PM , 13/06/2017
ಹಾಗೆ, ಮುಕ್ತರಾದ ಜೀವರಾಶಿಗಳು ನಿದ್ರೆ ಮಾಡು್ತ್ತಾರಾ ?
Vishnudasa Nagendracharya
ಶ್ರಮವಿದ್ದವರಿಗೆ ನಿದ್ರೆ. ಮುಕ್ತರಿಗೆ ಶ್ರಮವೇ ಇಲ್ಲ ನಿದ್ರೆಯೂ ಇಲ್ಲ.
ನಿದ್ರೆ ಅವಿದ್ಯೆಯ ಕಾರ್ಯ. ಅವಿದ್ಯೆಯನ್ನು ದಾಟಿದವರಿಗೆ ನಿದ್ರೆಯಿಲ್ಲ.
ಹಿಂದಿನ ಕಲ್ಪಗಳಲ್ಲಿ ಮುಕ್ತರಾದವರು ತಮ್ಮ ಸ್ವರೂಪಾನಂದವನ್ನು ಅನುಭವಿಸುತ್ತ, ಶ್ರೀಹರಿಯನ್ನು ಧ್ಯಾನ ಮಾಡುತ್ತ ಇರುತ್ತಾರೆ.
ಈಗ ತಾನೇ ವಿರಜಾನದಿಯಲ್ಲಿ ಸ್ನಾನ ಮಾಡಿಬಂದವರು ಶ್ರೀಹರಿಯ ಧ್ಯಾನಾಸಕ್ತರಾಗಿ ಇರುತ್ತಾರೆ.
ಮುಕ್ತರಾದ ತಾಮಸರು ತಮ್ಮ ಸ್ವರೂಪದ ದುಃಖವನ್ನು ಅನುಭವಿಸುತ್ತಿರುತ್ತಾರೆ.
ಒಟ್ಟಾರೆ ಮುಕ್ತರಾದ ಯಾರಿಗೂ ನಿದ್ರೆಯ ಕಾಟವಿಲ್ಲ.
ಭಾರದ್ವಾಜ್,ಬೆಂಗಳೂರು
5:17 PM , 13/06/2017
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
ತುಂಬ ಸರಳವಾಗಿ ಉತ್ತರಿಸಿದ್ದಿರಿ. ಸಾಷ್ಟಾಂಗ ಪ್ರಣಾಮಗಳು.
ಜೀವರ ಸಂಸ್ಕಾರಕ್ಕು, ಜೀವರ ಕರ್ಮಕ್ಕು ಏನು ವ್ಯತ್ಯಾಸ?
Vishnudasa Nagendracharya
ಕರ್ಮ ಎಂದರೆ ನಾವು ಮಾಡಿರುವ ಕ್ರಿಯೆ. ನಾವು ಮಾಡಿದ ಸಕಲ ಕರ್ಮಗಳೂ ನಮ್ಮೊಡನೆ ಇರುತ್ತವೆ.
ಕರ್ಮವನ್ನು ಮಾಡಿದಾಗ ನಮ್ಮ ಮನಸ್ಸಿನಲ್ಲಿ ಉಂಟಾಗುವ ಒಂದು ವಿಶಿಷ್ಟ ವಿಕಾರಕ್ಕೆ ಸಂಸ್ಕಾರ ಎನ್ನುತ್ತಾರೆ. ಈ ಸಂಸ್ಕಾರದಿಂದಲೇ ನಮಗೆ ನೆನಪು ಉಂಟಾಗುವದು.
ಸುದರ್ಶನ ಶ್ರೀ. ಲ.,
3:36 PM , 13/06/2017
ಅನಂತ ಪ್ರಣಾಮಗಳು ಗುರುಗಳೆ🙏😊
ಸುದರ್ಶನ ಶ್ರೀ. ಲ.,
3:36 PM , 13/06/2017
ಅನಂತ ಪ್ರಣಾಮಗಳು ಗುರುಗಳೆ🙏😊
ಸುದರ್ಶನ ಶ್ರೀ. ಲ.,
1:02 PM , 13/06/2017
ಪ್ರಲಯದ ಅವಶ್ಯಕತೆಯಾದರು ಯಾಕೆ ಗುರುಗಳೆ🙏
ಹೀಗೆ ಎಲ್ಲ ರೀತಿಯ ಪ್ರಲಯಗಳ ಬಗ್ಗೆ ತಿಳಿಸಿ ಗುರುಗಳೆ🙏
Vishnudasa Nagendracharya
ಟೀಕಾಕೃತ್ಪಾದರು ತತ್ವನಿರ್ಣಯದ ವ್ಯಾಖ್ಯಾನದಲ್ಲಿ ಈ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.
ನಾವೇಕೆ ನಿದ್ರೆ ಮಾಡುತ್ತೇವೆ? ಹಗಲೆಲ್ಲ ದುಡಿದು ಶ್ರಮವಾಗಿರುತ್ತದೆ. ಆ ಶ್ರಮದ ಪರಿಹಾರಕ್ಕಾಗಿ ನಿದ್ರೆ ಮಾಡುತ್ತೇವೆ. ಹಾಗೆ, ಇಡಿಯ ಸೃಷ್ಟಿಕಾಲದಲ್ಲಿ ಹುಟ್ಟು ಸಾವುಗಳ ಸಂಕೋಲೆಯಲ್ಲಿ ದಣಿದ ಜೀವನಿಗೆ ಶ್ರಮಪರಿಹಾರ ಮಾಡಲು ಭಗವಂತ ಅವರಿಗೆ ಪ್ರಲಯಕಾಲದಲ್ಲಿ ಸುದೀರ್ಘನಿದ್ರೆಯನ್ನು ನೀಡುತ್ತಾನೆ.
ಮತ್ತು ಬ್ರಹ್ಮಾದಿದೇವತೆಗಳು ಜಗತ್ತಿನ ಸೃಷ್ಟ್ಯಾದಿಗಳನ್ನು ಮಾಡಿ ಸಾಧನೆ ಮಾಡಿಕೊಳ್ಳಬೇಕು. ಒಬ್ಬ ಬ್ರಹ್ಮದೇವರು ಸೃಷ್ಟಿ ಮಾಡಬೇಕೆಂದರೆ ಹಿಂದೆ ಸೃಷ್ಟಿಯಾದದ್ದು ನಾಶವಾಗಬೇಕು. ಅದಕ್ಕಾಗಿಯೂ ಪ್ರಲಯ ಆವಶ್ಯಕ.
ಸುದರ್ಶನ ಶ್ರೀ. ಲ.,
1:00 PM , 13/06/2017
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು 🙏😊
ನಮ್ಮ ಅಸ್ತಿತ್ವವನ್ನು ಭಗವಂತ ಕರುಣಿಸುವುದು ಎಂದರೆ ಏನು?
ಅಸ್ತಿತ್ವದ ಅಭಿವ್ಯಕ್ತಿಯೆ ? ಜೀವರಾಶಿ ಅನಾದಿ ಕಾಲದಿಂದಲೂ ಇವೆ ಎಂದು ಕೇಳಿದ್ದೇನೆ. ದಯಮಾಡಿ ತಿಳಿಸಿ ಗುರುಗಳೆ🙏
Vishnudasa Nagendracharya
ದೇವರು ನಮಗೆ ಬಿಂಬನಾಗಿ ಇದ್ದಾಗ ಮಾತ್ರ ನಾವು ಇರಲು ಸಾಧ್ಯ. ದೇವರು ನಾನು ಬಿಂಬನಾಗುವದಿಲ್ಲ ಎಂದು ಅಪೇಕ್ಷೆ ಪಟ್ಟಲ್ಲಿ ನಮ್ಮ ಅಸ್ತಿತ್ವವೇ ಇರುವದಿಲ್ಲ. ಆದರೆ ಸತ್ಯಸಂಕಲ್ಪನಾದ ಭಗವಂತ ಎಂದಿಗೂ ಆ ರೀತಿ ಅಪೇಕ್ಷೆ ಪಡುವದಿಲ್ಲ. ಅನಾದಿ ಕಾಲದಿಂದ ಅನಂತಕಾಲದ ವರೆಗೂ ನಮಗೆ ಬಿಂಬನಾಗಿಯೇ ಇರುತ್ತಾನೆ. ಈ ರೀತಿಯಾಗಿ ಬಿಂಬನಾಗಿರುವದೇ ನಮಗೆ ಅಸ್ತಿತ್ವವನ್ನು ಕರುಣಿಸುವದು.