Prashnottara - VNP081

ಲಕ್ಷದೀಪವ್ರತ ನಿಯಮಗಳೇನು?


					 	

ಗುರುಗಳಿಗೆ ನಮನ. ನನ್ನ ಮಡದಿ ತಾನೇ ಬತ್ತಿಯನ್ನು ಮಾಡಿ ಲಕ್ಷಬತ್ತಿಗಳ ದೀಪದ ವ್ರತವನ್ನು ಮಾಡುತ್ತಿದ್ದಾರೆ. ಇದನ್ನು ಹೇಗೆ ಮಾಡಬೇಕು ಮತ್ತು ಯಾವಾಗ ಆರಂಭಿಸಬೇಕು ಎನ್ನುವದನ್ನು ತಿಳಿಸಿ. ಈಗಾಗಲೇ ಮೂವತ್ತು ಸಾವಿರ ಬತ್ತಿಗಳಾಗಿವೆ. ಮಧ್ಯದಲ್ಲಿ ನಿಲ್ಲಿಸಿ, ಬತ್ತಿಗಳನ್ನು ಮಾಡಿಕೊಂಡು ಮುಂದುವರೆಸಬಹುದೇ? ದೀಪವನ್ನು ಹಚ್ಚಬೇಕಾದರೆ ಎರಡೆರಡು ಬತ್ತಿಗಳನ್ನು ತೆಗೆದುಕೊಂಡು ಹಚ್ಚುತ್ತಾರೆ. ಹೀಗಾಗಿ ಐವತ್ತುಸಾವಿರ ದೀಪಗಳನ್ನು ಹಚ್ಚಿದರೆ ಲಕ್ಷ ಬತ್ತಿಗಳನ್ನು ಹಚ್ಚಿದಂತಾಗುತ್ತದೆ. ಇದು ಸರಿಯೇ? — ಬಿ. ಶೇಷಗಿರಿ ಆಚಾರ್


Download Article Share to facebook View Comments
3672 Views

Comments

(You can only view comments here. If you want to write a comment please download the app.)
 • Lakshmi,Pune

  5:02 PM , 03/11/2021

  Gurugalige koti koti namaskargalu tamm lekhangalind devar bagge gnyan prapti aagta ide
 • jayashree,pune

  4:48 PM , 22/11/2019

  acharyarige namaskaragalu....
  dinalu devar munde akhand deepagalannu hachabahude??
 • Pratibha Joshi,

  11:36 AM, 23/01/2018

  Bogi endarenu? Ratha saptami Dina bogi kodabbahuda?
 • Meera jayasimha,Bengaluru

  10:08 PM, 28/10/2017

  Gurugalige anantha namaskaragalu.parijatha hoogalannu kevala bhagavanthanige poojisabeko athava Laxmi Devi .Mukhya pranadevaru mattu Rudradevarigu poojisabahudo. .dayavittu thilisi

  Vishnudasa Nagendracharya

  ಈ ಪ್ರಶ್ನೆಯನ್ನು ಈಗಾಗಲೇ VNP003 [ಸಂಸ್ಕೃತಸುರಭಿ ಯಾವಾಗ update ಆಗುತ್ತೆ] ಯಲ್ಲಿ ಕೇಳಿದ್ದೀರಿ. ನಾನು ಉತ್ತರವನ್ನೂ ನೀಡಿದ್ದೇನೆ. 
 • Vani s rao,Bangalore

  10:21 PM, 02/09/2017

  ಆಚಾರ್ಯರಿಗೆ ನಮನ ಲಕ್ಷ ದೀಪ ಹಚ್ಚಿದ ನಂತರ ಹೋಮ ಹವನ ಮಾಡಲು ಸಾಧ್ಯವಿಲ್ಲದಿದ್ದರೆ ಬೇರೆ ಏನು ಮಾಡಿದರೆ ಫಲ ದೊರಕುತ್ತದೆ ಎಂದು ತಿಳಿಸಿ
 • Vani s rao,Bangalore

  2:28 PM , 02/09/2017

  ಆಚಾರ್ಯರಿಗೆ ನಮನ ಲಕ್ಷ ದೀಪ ಹಚ್ಚಿದ ನಂತರ ಹೋಮ ಹವನ ಮಾಡಲು ಸಾಧ್ಯವಿಲ್ಲದಿದ್ದರೆ ಬೇರೆ ಏನು ಮಾಡಿದರೆ ಫಲ

  Vishnudasa Nagendracharya

  ಈ ಪ್ರಶ್ನೆಗೆ ಪದ್ಮಪುರಾಣದಲ್ಲಿ ಶ್ರೀ ವೇದವ್ಯಾಸದೇವರು ಉತ್ತರ ನೀಡಿದ್ದಾರೆ — 
  
  ಹೋಮಾಶಕ್ತೌ ತು ಹೌಮ್ಯಂ 
  ದದ್ಯಾತ್ ತತ್ಫಲಸಿದ್ಧಯೇ
  
  ಯಾವುದೇ ವ್ರತ ನಿಯಮದ ಉದ್ಯಾಪನೆಯ ಹೋಮವನ್ನು ಮಾಡುವ ಸಾಮರ್ಥ್ಯ ಮತ್ತು ಅನುಕೂಲತೆಗಳು ಇಲ್ಲದಿದ್ದಲ್ಲಿ, ಹೋಮದ ದ್ರವ್ಯಗಳನ್ನು (ತುಪ್ಪ, ಎಳ್ಳು, ಅಕ್ಕಿ ಮುಂತಾದ ಚರುಪದಾರ್ಥಗಳು) ಇವನ್ನು ದಾನ ಮಾಡಬಹುದು. 
  
  ಇದಕ್ಕೂ ಅನುಕೂಲತೆ ಒದಗಿಲ್ಲವಾದಲ್ಲಿ ದೇವರಿಗೆ ಭಕ್ತಿಯಿಂದ ನಮಸ್ಕಾರಗಳನ್ನು ಸಲ್ಲಿಸಬೇಕು. ಅದು ಹೋಮ, ದಾನಕ್ಕಿಂತಲೂ ಮಿಗಿಲಾದ ಫಲಗಳನ್ನು ನೀಡುತ್ತದೆ. 
 • Subramanya swamy gr,

  3:23 PM , 19/08/2017

  Namskara Gurugale .
  
  Vrathagalannu madidre kanditha vagiyu pala prapthiyaguththadeya?.idharabagge shastragalu enu heluththave..?dayamadi Tilisi.

  Vishnudasa Nagendracharya

  ವ್ರತ ಒಂದೇ ಅಲ್ಲ, ಎಲ್ಲ ಕರ್ಮಗಳಿಗೂ ಯಾವ ರೀತಿ ಫಲ ದೊರೆಯುತ್ತದೆ/ದೊರೆಯುವದಿಲ್ಲ ಎನ್ನುವದನ್ನು ಶ್ರೀಮದಾಚಾರ್ಯರು ಸರಳವಾಗಿ ತಿಳಿಸಿ ಹೇಳಿದ್ದಾರೆ. 
  
  ನಿಜಾನುಭಾವವರ್ಜಿತಾಃ
  ಹರೇರನುಗ್ರಹೋಜ್ಜಿತಾಃ
  ಮಹಾಪ್ರಯತ್ನವರ್ಜಿತಾಃ 
  ಜನಾ ನ ಜಗ್ಮುರುನ್ನತಿಮ್ 
  
  ನಿಜಾನುಭಾವವರ್ಜಿತಾಃ
  
  ಯಾವುದೇ ವ್ರತ ಪೂಜೆ ಮುಂತಾದ ಕರ್ಮ ಮಾಡುವದಕ್ಕಿಂತ ಮುಂಚೆ ಆ ಕರ್ಮವನ್ನು ಆಚರಿಸುವ ಅರ್ಹತೆಯನ್ನು ನಾವು ಪಡೆದಿದ್ದೇವೆಯಾ ಎಂದು ಆಲೋಚಿಸಬೇಕು. ಗಾಯತ್ರಿಯ ಉಪದೇಶವನ್ನೇ ಪಡೆಯದವನು ಎಷ್ಟು ಕೋಟಿ ಗಾಯತ್ರಿ ಯನ್ನು ಜಪಿಸಿದರೂ ಅದರ ಫಲ ಪಡೆಯಲು ಸಾಧ್ಯವಿಲ್ಲ. ಹಾಗೆ, ಉತ್ತಮ ರೀತಿಯ ಕುಲದಲ್ಲಿ ಹುಟ್ಟಿರುವದು, ವೈದಿಕ ಸಂಸ್ಕಾರಗಳನ್ನು ಉತ್ತಮ ರೀತಿಯಲ್ಲಿ ಪಡೆದಿರುವದು ಮುಂತಾದ ಅರ್ಹತೆಯನ್ನು ಪಡೆದಿರಬೇಕು. ಅರ್ಹತೆ ಇಲ್ಲದ ವ್ಯಕ್ತಿ ಕರ್ಮಾಚರಣೆ ಮಾಡಿದರೆ ಸತ್ಫಲವನ್ನು ಪಡೆಯುವದಿಲ್ಲ. ದುಷ್ಫಲವನ್ನು ಪಡೆಯುತ್ತಾನೆ. 
  
  ಹರೇರನುಗ್ರಹೋಜ್ಝಿತಾಃ
  
  ದೇವರಲ್ಲಿ ಭಕ್ತಿಯಿಲ್ಲದೇ, ಕೇವಲ ಪರೀಕ್ಷಾರ್ಥವಾಗಿ ಕರ್ಮಾಚರಣೆ ಮಾಡುವವರು ಫಲವನ್ನು ಪಡೆಯುವದಿಲ್ಲ. 
  
  ಉತ್ತಮ ಕುಲದಲ್ಲಿ ಹುಟ್ಟಿ, ಕರ್ಮಾಚರಣೆ ಅರ್ಹತೆ ಇದ್ದು, ಸರಿಯಾಗಿ ಕರ್ಮಾಚರಣೆ ಮಾಡಿದ್ದರೂ, ದೇವರ, ಗುರುಗಳ ದ್ರೋಹವನ್ನು ಮಾಡಿದ್ದಾಗ ಅದರ ಫಲವನ್ನು ಅವರು ಪಡೆಯುವದಿಲ್ಲ. 
  
  ಒಟ್ಟಾರೆ ತಾತ್ಪರ್ಯ, ದೈವನಿಗ್ರಹಕ್ಕೆ ಒಳಗಾದಲ್ಲಿ ಸತ್ಕರ್ಮಗಳ ಫಲ ಪಡೆಯಲು ಸಾಧ್ಯವಿಲ್ಲ. 
  
  
  ಮಹಾಪ್ರಯತ್ನವರ್ಜಿತಾಃ 
  
  ಉತ್ತಮ ಕುಲದಲ್ಲಿ ಹುಟ್ಟಿ, ವೈದಿಕ ಸಂಸ್ಕಾರಗಳನ್ನು ಪಡೆದು, ಎಲ್ಲ ರೀತಿಯಲ್ಲಿಯೂ ಅರ್ಹತೆಯನ್ನು ಪಡೆದು, ಪ್ರಾಮಾಣಿಕ ಹರಿಗುರುಭಕ್ತರಾಗಿದ್ದ ಮಾತ್ರಕ್ಕೆ, ಸರಿಯಾಗಿ ಕರ್ಮಾಚರಣೆ ಮಾಡದಿದ್ದರೆ ಫಲ ದೊರೆಯುವದಿಲ್ಲ. ಶಾಸ್ತ್ರದ ನಿಯಮಗಳನ್ನು ಮೀರಿ, (ಪ್ಲಾಸ್ಟಿಕ್ಕು, ಎಂಜಲು, ಅಶುದ್ಧಪದಾರ್ಥಗಳಬಳಕೆ ಮುಂತಾದವುಗಳಿಂದ) ಅಶುದ್ಧವಾದ ಕ್ರಮದಲ್ಲಿ ಕರ್ಮಾಚರಣೆ ಮಾಡಿದರೂ ಫಲ ದೊರೆಯುವದಿಲ್ಲ. 
  
  ಕರ್ಮ ಮಾಡಲು ಅರ್ಹರಾಗಿರಬೇಕು, ಹರಿಗುರುಭಕ್ತರಾಗಿರಬೇಕು, ಶಾಸ್ತ್ರ ತಿಳಿಸಿದ ಕ್ರಮವನ್ನು ತಪ್ಪದೇ ಭಕ್ತಿಯಿಂದ ಕರ್ಮಾಚರಣೆ ಮಾಡಿದಲ್ಲಿ ನಿಶ್ಚಿತವಾಗಿ ಫಲ ದೊರೆಯುತ್ತದೆ. 
 • Abhiram Udupa,

  10:55 AM, 21/06/2017

  ನಮ್ಮ ಎಲ್ಲ ರೀತಿಯ ತಪ್ಪು ಆಚರಣೆಗಳನ್ನು ತಿದ್ದುತ್ತಿರುವ ಪೂಜ್ಯ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು. 
  
  ತಮ್ಮ ಲೇಖನ ಉಪನ್ಯಾಸಗಳಿಂದ ಪ್ರಭಾವಿತರಾಗಿ ಮಠಗಳ ಮೇಲಿನ ದುರಭಿಮಾನ ಕಳೆಯುತ್ತಿದೆ. ಎಲ್ಲ ಮಠಗಳಲ್ಲಿ ಬಂದ ಜ್ಞಾನಿಗಳ ಮೇಲೆ ಭಕ್ತಿ ಹೆಚ್ಚುತ್ತಿದೆ. ಸುಧಾ ಗಿಧಾ, ಪೂಜೆ ಗೀಜೆ ಎಂಬ ಅಸಡ್ಡೆಯ ಮಾತುಗಳು ದೂರವಾಗಿವೆ. ನಮಗೆ ಎಲ್ಲ ರೀತಿಯ ಪಾಠ ಕಲಿಸುತ್ತಿರುವ ತಮಗೆ ಎಷ್ಟು ಕೃತಜ್ಞತೆಯನ್ನು ಸಲ್ಲಿಸಿದರೂ ಸಾಲದು. 
  
  ಕೆಳಗಿನ ಶ್ರೀ ಅಭಿಷೇಕ್ ರವರ ಮಾತಿನಿಂದ ನಾನೂ ಸ್ಫೂರ್ತಿಗೊಂಡು ಹಿಂದೆ ಮಾಡಿದ ತಪ್ಪುಗಳಿಗೆ ಕ್ಷಮೆ ಕೇಳುತ್ತಿದ್ದೇನೆ, ಗುರುಗಳೆ.

  Vishnudasa Nagendracharya

  ಶ್ರೀಮದಾಚಾರ್ಯರ ಕರುಣೆ ನಿಮ್ಮ ಮೇಲಿರಲಿ. 
 • Sheela M,

  4:18 PM , 19/06/2017

  Deenalu nanda deepavannu toledu deenalu beere batti haaki hachabeeke atava kappu tegadu hale battine hachabahude gurugale tilisikodi

  Vishnudasa Nagendracharya

  ಒಂದು ದೀಪ ಒಂದು ದಿವಸದಲ್ಲಿ ಉರಿಯಲಿಕ್ಕೆ ಎಷ್ಟು ಉದ್ದದ ಬತ್ತಿ ಬೇಕೋ ಅಷ್ಟನ್ನು ಮಾತ್ರ ಮಾಡಿ ಉರಿಸುವದು ಅತ್ಯುತ್ತಮ ಪಕ್ಷ. 
  
  ಎರಡು ಜೊತೆ ನಂದಾದೀಪಗಳನ್ನಿಟ್ಟುಕೊಂಡು ಈ ದಿವಸ ಒಂದು, ಮಾರನೆ ದಿವಸ ಮತ್ತೊಂದು ಎಂದು ಮಾಡಿಕೊಂಡು ಪ್ರತೀದಿವಸ ಹೊಸದಾಗಿ ಹಚ್ಚುವದು ಶ್ರೇಷ್ಠವಾದ ಸಂಪ್ರದಾಯ. 
  
  ದೀಪ ಶಾಂತವಾದಾಗ ಮತ್ತೆ ಹಚ್ಚುತ್ತೇವೆ. ಹಾಗೆ, ತುಂಬ ಅನಿವಾರ್ಯ ಸಂದರ್ಭಗಳಲ್ಲಿ ಮಾರನೆಯ ದಿವಸವೂ ನಂದಾದೀಪದಲ್ಲಿ ಅದೇ ದೀಪ- ಬತ್ತಿಯನ್ನು ಉರಿಸಿದರೆ ತಪ್ಪಿಲ್ಲ. 
  
  ಆದರೆ, ನಂದಾದೀಪವನ್ನು ತೊಳೆದು, ಉಪಯೋಗಿಸಿದ ಬತ್ತಿಯನ್ನೇ ಹಾಕಿ ಸರ್ವಥಾ ದೀಪವನ್ನು ಹಚ್ಚಬಾರದು. 
 • K Vijaya Simha,

  9:31 PM , 19/06/2017

  Gurugale Dhanyavadagalu...Very useful and informative answer. Namaskaragalu
 • ಆರ್. ಅಭಿಷೇಕ್,

  3:18 PM , 18/06/2017

  ಆಚಾರ್ಯರೆ.
  
  ಒಂದು ಕ್ಷಣದಲ್ಲಿ ಮೈಮರೆತು ಅಜ್ಞಾನದಿಂದ ಭಾವನಾತ್ಮಕವಾಗಿ react ಮಾಡಿದೆ. 
  
  ನನ್ನಿಂದ ತಪ್ಪಾಗಿದೆ. ದಯವಿಟ್ಟು ಕ್ಷಮಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

  Vishnudasa Nagendracharya

  ಶ್ರೀಮದಾಚಾರ್ಯರ, ಗುರುಪರಂಪರೆಯ ಕರುಣೆ ನಿಮ್ಮ ಮೇಲಿರಲಿ. ಹೀಗೆಯೇ ಸದಾ ಸನ್ಮಾರ್ಗದಲ್ಲಿರುವಂತಾಗಲಿ. 
  
  
 • Bindu madhava,

  11:41 AM, 18/06/2017

  "ಸಾಜ್ಯಾಮ್ ತ್ರಿವರ್ತಿ ಸಂಯುಕ್ತಮ್" ಮಂತ್ರದಲ್ಲಿ ೩ ಬತ್ತಿಯಿಂದ ದೀಪವನ್ನು ಹಚ್ಚಬೇಕೆನ್ನುತ್ತಾರೆ . ಆದರೆ ನೀವು ಎರಡು ಬತ್ತಿ ಎಂದಿದ್ದೀರಿ.ಯಾವುದು ಸರಿ?

  Vishnudasa Nagendracharya

  ಸಾಜ್ಯಂ ತ್ರಿವರ್ತಿಸಂಯುಕ್ತಂ ಎನ್ನುವದು ಧೂಪದ ನಂತರ ಮಾಡುವ ದೀಪಾರತಿಗೆ, (ಏಕಾರತಿಯ ಮಂಗಳಾರತಿಗೆ) ಸಂಬಂಧಿಸಿದ್ದು. 
  
  ನೈವೇದ್ಯಕ್ಕಿಂತ ಮುಂಚೆ, ಧೂಪವನ್ನು ಮಾಡಿ ತುಪ್ಪದಲ್ಲಿ ನೆನೆಸಿದ ಮೂರು ಬತ್ತಿಗಳನ್ನು ಹಲಗಾರತಿಯಲ್ಲಿ ಹಾಕಿ ದೇವರಿಗೆ ಮಂಗಳಾರತಿ ಮಾಡಬೇಕು. ಇದನ್ನು ಏಕಾರತಿ ಎನ್ನುತ್ತಾರೆ. ಅಲ್ಲಿಗೆ ಸಂಬಂಧಪಟ್ಟದ್ದಿದು. 
  
  ಇದರ ಕುರಿತು ಸಾಕಷ್ಟು ವಿಷಯಗಳನ್ನು ತಿಳಿಸಬೇಕು. ದೇವರ ಪೂಜೆಯ ಧೂಪ, ದೀಪಗಳ ಸಂದರ್ಭದಲ್ಲಿ ತಿಳಿಸುತ್ತೇನೆ. 
 • Jayashree Karunakar,

  12:18 PM, 18/06/2017

  ಯೋಗ್ಯತೆಗೆ ತಕ್ಕಂತೆ ಪೂಣ೯ಫಲ ಎಂಬುದನ್ನು ಉದಾಹರಣೆ ಕೊಟ್ಟು ತಿಳಿಸಿದ ರೀತಿ ಅಧ್ಬುತ ಗುರುಗಳೆ.ತಮ್ಮ ಕರುಣೆಗೆ ಧನ್ಯವಾದಗಳು.
 • Varuni Deshpande,

  10:56 PM, 17/06/2017

  Dhanyavadagalu acharyare.
 • ಆರ್. ಅಭಿಷೇಕ್,

  10:27 PM, 17/06/2017

  ಆಚಾರ್ಯರೆ.
  
  ಮುಕ್ತರಿಗೆಲ್ಲರಿಗೂ ಶ್ವೇತ ದ್ವೀಪ ವಾಸ ಇಲ್ಲ ಎಂದು ಹೇಳಿದ್ದೀರಿ.
  
  ಅಂದರೆ ಮೋಕ್ಷ ನೀಡುವುದರಲ್ಲಿಯೂ ತಾರತಮ್ಯ ಇದೆ ಎಂದು ಆಗುತ್ತದೆ. 😂😂
  
  ಹೌದಲ್ಲವೇ ಆಚಾರ್ಯರೆ.

  Vishnudasa Nagendracharya

  ಇದರಲ್ಲಿ ಅಪಹಾಸದ ಅಂಶ ಏನೂ ಇಲ್ಲ. 
  
  ಸಾಧನೆಗೆ ತಕ್ಕಂತೆ ಫಲವಿರುತ್ತದೆ. ಮೋಕ್ಷಕ್ಕಾಗಿ ನಮ್ಮ ಪ್ರಯತ್ನ ಹೇಗಿರುತ್ತದೆಯೋ ಆ ರೀತಿಯ ಫಲ ಪಡೆಯುತ್ತೇವೆ. 
  
  ಹತ್ತು ಜನ್ಮಗಳಲ್ಲಿ ಸಾಧನೆ ಮಾಡಿದ ವ್ಯಕ್ತಿ, ನೂರು ಬ್ರಹ್ಮಕಲ್ಪದಲ್ಲಿ ಸಾಧನೆ ಮಾಡುವ ಬ್ರಹ್ಮದೇವರಿಗೆ ದೊರೆಯುವ ಫಲವನ್ನು ಅಪೇಕ್ಷಿಸಿದರೆ ದುರಾಸೆಯಾಗುತ್ತದೆ. 
  
  ತಾರತಮ್ಯ ಸಂಸಾರದಲ್ಲಿಯೂ ಇದೆ, ಮುಕ್ತಿಯಲ್ಲಿಯೂ ಇದೆ. 
  
  ಅವರವರ ಯೋಗ್ಯತೆಕ್ಕೆ ತಕ್ಕಷ್ಟು ಪರಿಪೂರ್ಣವಾಗಿ ಎಲ್ಲರೂ ಪಡೆಯುತ್ತಾರೆ. 
  
  ಉದ್ದರಣೆಯ ತುಂಬ ನೀರು ತುಂಬಿದರೂ ಅಂದು ತುಂಬಿದ ನೀರೇ. 
  
  ಕಲಶದ ತುಂಬ ನೀರು ತುಂಬಿದರೂ ಅದು ತುಂಬಿದ ನೀರೇ. 
  
  ಬಿಂದಿಗೆಯ ತುಂಬ ನೀರು ತುಂಬಿದರೂ ಅದು ತುಂಬಿದ ನೀರೇ. 
  
  ಇಡಿಯ ಬ್ರಹ್ಮಾಂಡದಲ್ಲಿ ನೀರು ತುಂಬಿದರೂ ಅದು ತುಂಬಿದ ನೀರೇ. 
  
  ನಮ್ಮ ಯೋಗ್ಯತೆ ಉದ್ಧರಣೆ, ಬ್ರಹ್ಮದೇವರ ಯೋಗ್ಯತೆ ಬ್ರಹ್ಮಾಂಡದಂತೆ ಮಹತ್ತರ. 
  
  ದೇವರೂ ನಮ್ಮ ಯೋಗ್ಯತೆಗೂ ಪೂರ್ಣ ಫಲವನ್ನು ನೀಡುತ್ತಾನೆ, ಬ್ರಹ್ಮದೇವರ ಯೋಗ್ಯತೆಗೂ ಪೂರ್ಣ ಫಲ ನೀಡುತ್ತಾನೆ. 
  
  ಉದ್ಧರಣೆ ಯೋಗ್ಯತೆಯ ನಾವು ಬ್ರಹ್ಮಾಂಡದಷ್ಟು ನೀರನ್ನು ಅಪೇಕ್ಷಿಸುವದು ತಪ್ಪಾಗುತ್ತದೆ. 
  
  ತಾರತಮ್ಯ ಸ್ವರೂಪಕ್ಕೆ ಸಂಬಂಧಿಸಿದ್ದು. ಹೀಗಾಗಿ ಅದು ಸಂಸಾರದಲ್ಲಿಯೂ ಇರುತ್ತದೆ, ಮೋಕ್ಷದಲ್ಲಿಯೂ ಇರುತ್ತದೆ. 
  
  ಶಾಸ್ತ್ರದ ವಿಷಯಗಳ ಕುರಿತು ಪ್ರಶ್ನೆಯಿದ್ದರೆ ಜಿಜ್ಞಾಸೆಯಿಂದ ಕೇಳಿ, ತಿಳಿದಿದ್ದರೆ ಉತ್ತರಿಸುತ್ತೇನೆ. 
  
  ಶಾಸ್ತ್ರದ ಕುರಿತು ಆಕ್ಷೇಪ ಮಾಡುವದಾದರೆ, ದಿಟ್ಟತನದಿಂದ ಮಾಡಿ, ಹಾಗೆಯೇ ಉತ್ತರಿಸುತ್ತೇನೆ. 
  
  ಅದು ಬಿಟ್ಟು ಶಾಸ್ತ್ರೀಯ ತತ್ವಗಳ ಕುರಿತು ಈ ರೀತಿ ಅಪಹಾಸದ ನಗುವಿನ ಬೊಂಬೆಗಳನ್ನು ಹಾಕಬೇಡಿ. 
  
  ಶಾಸ್ತ್ರ ಅಪಾರ ಸಮುದ್ರದಂತೆ. ಅದನ್ನು ಅರಿಯಲು ಪ್ರಯತ್ನಿಸಬೇಕು. ಅಪಹಾಸ ಮಾಡಬಾರದು ಎಂದು ವಿನಂತಿಸುತ್ತೇನೆ. 
 • Varuni Deshpande,

  10:13 PM, 17/06/2017

  Battigalannu madiddra hachhabeke atava avvanu danavagi kodabahude.

  Vishnudasa Nagendracharya

  ಅವಶ್ಯವಾಗಿ ದಾನ ನೀಡಬಹುದು. ಅದಕ್ಕೂ ಮಹತ್ತರಫಲವಿದೆ. 
  
 • Abhiram Udupa,

  10:09 PM, 17/06/2017

  ನಮ್ಮ ಮನಸ್ಸಿನಲ್ಲಿ ಜ್ಞಾನದ ದೀಪ ಹಚ್ಚುತ್ತಿರುವ ತಮಗೆ ಸಾಷ್ಟಾಂಗ ನಮಸ್ಕಾರಗಳು. 
  
  ಒಂದು ದಿವಸ ತಮ್ಮ ಲೇಖನ ಉಪನ್ಯಾಸಗಳಿಲ್ಲ ಎಂದರೆ ಏನೋ ಕಳದುಕೊಂಡ ಭಾವ.