ಟ್ಯಾಂಕಿನ ನೀರನ್ನು ಪೂಜೆಗೆ ಬಳಸಲು ಏನಾದರೂ ಉಪಾಯವಿದೆಯೇ?
ಆಚಾರ್ಯರಲ್ಲಿ ಸಾಷ್ಟಾಂಗ ನಮಸ್ಕಾರಗಳು. ಅಪಾರ್ಟುಮೆಂಟುಗಳಲ್ಲಿ ನೀರು Overhead tank ನಿಂದ ಸರಬರಾಜು ಆಗುತ್ತದೆ. ಇಂತಹ ನೀರು ಪೂಜೆಗೆ ಅರ್ಹವೇ? — ಆನಂದ್ ರಾವ್. ಗುರುಗಳಿಗೆ ನಮಸ್ಕಾರಗಳು. ಆಚಾರ್ಯರೇ, ಶುದ್ಧ ನೀರು ಇಲ್ಲವೆಂದು ಪೂಜೆ ಬಿಡಬೇಕೋ, ಅಥವಾ ಟ್ಯಾಂಕಿನ ನೀರಿನಿಂದಾದರೂ ಪೂಜೆ ಮಾಡಬಹುದೋ? ಟ್ಯಾಂಕಿನ ನೀರನ್ನು ಶುದ್ಧ ಪಡಿಸುವ ದಾರಿ ಏನಾದರೂ ಇದೆಯೇ? — ವಾಸುದೇವ್ ದೇಶಪಾಂಡೆ ಆಚಾರ್ಯರೆ, ಪಕ್ಕದ ಬೀದಿಯಲ್ಲಿ ಬಾವಿಯಿದ್ದಾಗ ಕೆಲವರು ಅಲ್ಲಿಗೆ ಹೋಗಿ ಸ್ನಾನ ಮಾಡಿಕೊಂಡು ದೇವರ ಪೂಜೆಗೆ ನೀರು ತೆಗೆದುಕೊಂಡು ಬರುತ್ತಾರೆ. ಆದರೆ, ಬೀದಿಯಲ್ಲಿ ಹೋಗುವಾಗ ಕೊಳಕಾದ ರಸ್ತೆಯ ಮೇಲೇ ನಡೆದುಕೊಂಡು ಹೋಗಬೇಕು. ಕೇವಲ ಬಾವಿಯಲ್ಲಿ ಸ್ನಾನ ಮಾಡಿ, ಹೊಲಸು ರಸ್ತೆಯಲ್ಲಿ ನಡೆದು ಕೊಂಡು ಹೋದರೆ ಮಡಿಯಾಗುತ್ತದೆಯೇ. ಸಂಶಯ ಪರಿಹರಿಸಿ. — ನರಸಿಂಹಮೂರ್ತಿ.