Prashnottara - VNP086

ದಶಮಿ, ದ್ವಾದಶಿಗಳ ರಾತ್ರಿ ಏನನ್ನು ಸ್ವೀಕರಿಸಬಹುದು?


					 	

ದ್ವಾದಶಿಯ ದಿನ ಪಾರಣೆ ಆದ ನಂತರ ಏನನ್ನಾದರೂ ಸ್ವೀಕಾರ ಮಾಡಬಹುದೇ, ಇಲ್ಲವೇ? — ವಿಜಯ್ ಕುಮಾರ್. ಕೆ. ಪಾರಣೆಯ ನಂತರ ಪೂರ್ಣ ಉಪವಾಸ ಮಾಡುವದು ಅತ್ಯಂತ ಶ್ರೇಷ್ಠ. ಸಾಧ್ಯವಿಲ್ಲದ ಪಕ್ಷದಲ್ಲಿ ಮುಸುರೆಯಲ್ಲದ ಪದಾರ್ಥಗಳನ್ನು ಸ್ವೀಕರಿಸಬಹುದು. ತಿಂಡಿಯನ್ನು, ಫಲಾಹಾರವನ್ನು ಸ್ವೀಕರಿಸುವ ಪದ್ಧತಿ ಇದೆ. ಏಕಾದಶಿಯ ಪೂರ್ಣ ಫಲ ದೊರೆಯಬೇಕಾದರೆ ನಾಲ್ಕು ಊಟಗಳನ್ನು ತೊರೆಯಬೇಕು ಎಂದು ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ತಿಳಿಸುತ್ತಾರೆ — ಉಪವಾಸಫಲಪ್ರೇಪ್ಸುಃ ಜಹ್ಯಾದ್ ಭುಕ್ತಚತುಷ್ಟಯಮ್। ಪೂರ್ವಾಪರೇ ತು ಸಾಯಾಹ್ನೇ ಸಾಯಂಪ್ರಾತಸ್ತು ಮಧ್ಯಮೇ । ದಶಮಿ ಮತ್ತು ದ್ವಾದಶಿಗಳಲ್ಲಿ ರಾತ್ರಿಯ ಊಟವನ್ನು ತೊರೆಯಬೇಕು. ಏಕಾದಶಿಯಂದು ಎರಡೂ ಹೊತ್ತಿನ ಊಟವನ್ನು ತೊರೆಯಬೇಕು. ಆಗ ಏಕಾದಶಿಯ ಪೂರ್ಣ ಫಲ ದೊರೆಯುತ್ತದೆ ಎನ್ನುವದು ಈ ಶ್ಲೋಕದ ಅಭಿಪ್ರಾಯ. ದಶಮಿ ಮತ್ತು ದ್ವಾದಶಿಯ ರಾತ್ರಿಗಳಂದು ಅನ್ನದ ಮುಸುರೆಯನ್ನು ಸ್ವೀಕರಿಸದೇ, ಫಲಾಹಾರವನ್ನು ಸ್ವೀಕರಿಸಬಹುದು. ಶಕ್ತರು ಅದನ್ನೂ ತ್ಯಾಗ ಮಾಡಿದಲ್ಲಿ ಪರಿಪೂರ್ಣ ಫಲ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
4001 Views

Comments

(You can only view comments here. If you want to write a comment please download the app.)
 • Venkateshachaar kengal,

  12:16 PM, 09/12/2017

  ಧನ್ಯವಾದಗಳು ಆಚಾರ್ಯರಿಗೆ
 • M. Ullas Hegde,

  10:50 PM, 05/07/2017

  ನಾವು ತೊರೆದಿರುವ 4 ಊಟಗಳ ಪ್ರಮಾಣದ ಅಕ್ಕಿ, ತರಕಾರಿಗಳು ಮತ್ತು ಧಾನ್ಯಗಳನ್ನು ದಾನ ಅಥವ ಪ್ರಾಣಿಗಳಿಗೆ ಕೊಡುವನ ಕ್ರಮವೇನಾದರು ಇದೆಯಾ?

  Vishnudasa Nagendracharya

  ಹೌದು. ಏಕಾದಶಿಯ ದಿವಸ ಯಥಾಶಕ್ತಿ ಅಕ್ಕಿ ಬೇಳೆ ಮುಂತಾದ ಅಡಿಗೆಯ ಪದಾರ್ಥಗಳನ್ನು ಯೋಗ್ಯರಿಗೆ ದಾನ ಮಾಡಬೇಕು. ದ್ವಾದಶಿಯ ದಿವಸ ಒಬ್ಬ ಬ್ರಾಹ್ಮಣದಂಪತಿಗಳಿಗಾದರೂ ಭೋಜನ ನೀಡಿ ಊಟವನ್ನು ಮಾಡುವದು ಸತ್ಸಂಪ್ರದಾಯ. 
 • swapna guruprasad,

  12:38 AM, 03/07/2017

  Ratriya vutadalli mosarannu yake tinnabarada..hengasaru e niyamavannu patisabahude?

  Vishnudasa Nagendracharya

  ಊಟ ಮಾಡುವ ಪ್ರತಿಯೊಬ್ಬರಿಗೂ, “ರಾತ್ರಿ ಮೊಸರು ತಿನ್ನಬಾರದು” ಎಂಬ ನಿಯಮ ಅನ್ವಯಿಸುತ್ತದೆ. ರಾತ್ರಿ   ಮೊಸರು ತಿನ್ನುವದರಿಂದ ಅನಾರೋಗ್ಯ ಮತ್ತು ದಾರಿದ್ರ್ಯ ಉಂಟಾಗುತ್ತದೆ. ಹೀಗಾಗಿ ಗಟ್ಟಿ ಮೊಸರು ತಿನ್ನ ಬಾರದು. ನೀರು ಹಾಕಿ ಮಜ್ಜಿಗೆ ಮಾಡಿಕೊಂಡು ಉಣ್ಣಬೇಕು. 
 • Laxmi Nagavi,

  8:10 PM , 29/06/2017

  🙏🙏🙏
 • Vijay Kumar K,

  6:12 PM , 27/06/2017

  ಧನ್ಯವಾದಗಳು ಆಚಾರ್ಯರೇ, ಈ ಗೊಂದಲ ಬಹಳ ವರ್ಷಗಳ ತನಕ ಇತ್ತು, ಈಗ ಪರಿಹಾರ ಆಯಿತು.🙏🙏🙏🙏
 • Vijay Kumar K,

  6:12 PM , 27/06/2017

  ಧನ್ಯವಾದಗಳು ಆಚಾರ್ಯರೇ, ಈ ಗೊಂದಲ ಬಹಳ ವರ್ಷಗಳ ತನಕ ಇತ್ತು, ಈಗ ಪರಿಹಾರ ಆಯಿತು.🙏🙏🙏🙏
 • SHRIKAR,

  10:49 AM, 27/06/2017

  Nice information....👌