Prashnottara - VNP087

ಮುಸುರೆ ಎಂದರೇನು?


					 	

ಆಚಾರ್ಯರೇ, ಅನ್ನ ಮುಸುರೆ ಹೇಗೆ, ಮುಸುರೆ ಎಂದರೆ ಏನು, ದಯವಿಟ್ಟು ತಿಳಿಸಿ. ಉಳಿದ ಧಾನ್ಯಗಳ ಮುಸುರೆಯ ಬಗ್ಗೆಯೂ ತಿಳಿಸಿ. — ಉದ್ಯಾವರ ನಾಗರಾಜ್. ಮುಸುರೆ ಎಂದರೇನು? ಯಾವುದು ಮುಸುರೆ? ಡೈನಿಂಗ್ ಟೇಬಲ್ಲಿನ ಊಟ ಏಕೆ ನಿಷಿದ್ಧ? ಮುಸುರೆ ತೊಳೆಯುವ ಕ್ರಮವೇನು ಎಂಬ ಪ್ರಶ್ನೆಗಳಿಗೆ ಉತ್ತರ ನೀಡುವದರೊಂದಿಗೆ ಶ್ರೀ ಪುರಂದರದಾಸಾರ್ಯರ “ಮುಸುರೆ ತೊಳೆಯಬೇಕು” ಎಂಬ ಹಾಡಿನ ಅರ್ಥಾನುಸಂಧಾನ ಈ ಪ್ರಶ್ನೋತ್ತರದಲ್ಲಿದೆ.


Download Article Share to facebook View Comments
9131 Views

Comments

(You can only view comments here. If you want to write a comment please download the app.)
 • Swathi,Davangere

  5:18 PM , 08/10/2021

  ನಮಸ್ಕಾರ, 
  ಯಾವುದಾದರು ಹಿಟ್ಟನ್ನು ನೀರಿನಲ್ಲಿ ಕಲಿಸಿದಾಗ ಅದನ್ನು ನಾವು ಮುಸುರೆ ಎನ್ನುತ್ತೇವೆ ಉದಾಹರಣೆಗೆ ರೊಟ್ಟಿ ಹಿಟ್ಟು, ಚಪಾತಿ ಮಾಡಲು ಕಲಿಸಿದ ಹಿಟ್ಟು ಕೂಡ ಮುಸುರೆ ಎನ್ನುತ್ತೇವೆ. ಇದು ಸರೀನಾ ಅಥವಾ ತಪ್ಪಾ?

  Vishnudasa Nagendracharya

  ಹಿಟ್ಟಿಗೆ ಬರಿಯ ನೀರು ಹಾಕಿದರೆ ಮುಸುರೆಯಾಗುವದಿಲ್ಲ. ಅಗ್ನಿಯ ಸಂಪರ್ಕವಾದಾಗ ಮಾತ್ರ ಮುಸುರೆ.
  
 • Chandrika prasad,Bangalore

  9:45 AM , 08/10/2020

  ಆಚಾರ್ಯರಿಗೆ ನಮನಗಳು 🙏ಮಡಿ , ಮೈಲಿಗೆ, ಮುಸುರೆ ಎಂಜಲು, ಈ ಎಲ್ಲಾ ಪದಗಳ ಅರ್ಥ ಹಿಂದಿ ನಿಂದ ಆಚರಿಸಿಕೊಂಡು ಬಂದ ಪೂಜನೀಯ ರಿಂದ ಅನುಸರಣೆ ಆಗುತ್ತಿದೆ. ಬಾಲ್ಯದಲ್ಲಿ ಅಭ್ಯಾಸ ಹೇಗೆ ಮಾಡಿಕೊಂಡು ಬರುತ್ತೇವೆಯೋ ಹಾಗೇ ಅದು ನೆಡೆದುಕೊಂಡು ಬರುತ್ತದೆ. ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ. ಧನ್ಯವಾದಗಳು 🙏🙏
 • Sathyavathi venkatesh,Bengaluru

  3:31 PM , 18/02/2019

  Musure shabdartha enu gurugaLe...
 • Mythreyi Rao,

  7:53 PM , 07/07/2018

  ಗುರುಗಳೆ ಮುಸುರೆಯ ಬಗ್ಗೆ (ದೇಹ, ಮನ, ವಸ್ತು) ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ. ಬಹಳ ಧನ್ಯವಾದಗಳು. 
  
  ದೇವರಿಗೆ ಮುಸುರೆಯಿಂದ ಮಾಡುವ ನೈವೇದ್ಯಗಳಿರುವುದೇ? ಹೇಗೆ? ವಿಧಾನವೆಲ್ಲವನ್ನೂ ತಿಳಿಸಿ. ಧನ್ಯವಾದಗಳು
 • Seetaram Venkatesh Acharacle Joshi,Mysuru

  6:29 AM , 23/01/2018

  Dayavittu musurebagge heck China mahuli kodifi
 • laxminarayan BHAT,

  9:32 PM , 26/11/2017

  ಧನ್ಯವಾದಗಳು ಗುರು ಗಳಿಗೆ
 • laxminarayan BHAT,

  11:59 PM, 25/11/2017

  ಗುರುಗಳಿಗೆ ನಮಸ್ಕಾರಗಳು.
  
  ಕೆಲವು ಕಡೆ - ಪ್ರತಿ ಸಲ ಕೈ ತೊಳೆದು ಅನ್ನದ ಪಾತ್ರೆಯನ್ನು ಮುಟ್ಟುತ್ತಾರೆ ಮತ್ತೆ ಅದೇ ಬಡಿಸಿದ ಕೈಯಿಂದ ಉಳಿದ ಊಟದ ಪದಾರ್ಥಗಳನ್ನು ಬಡಿಸುತ್ತಾರೆ.
  
  ಮತ್ತೆ ಕೆಲವು ಕಡೆ ಅನ್ನದ ಪಾತ್ರೆ ಮುಟ್ಟಿದ ನಂತರ ಕೈ ತೊಳೆದು ಬೇರೆ ಊಟದ ಪಾತ್ಯಯನ್ನು ಮುಟ್ಟು ತ್ತಾರೆ.
  ಇದರಲ್ಲಿ ಯಾವುದು ಸರಿ ಮತ್ತೆ ಯಾಕೆ ದಯವಿಟ್ಟು ತಿಳಿಸಿ.

  Vishnudasa Nagendracharya

  ಒಮ್ಮೆ ಅನ್ನವನ್ನು ಬಡಿಸಿ, ಮುಸುರೆಯಲ್ಲದ ಪದಾರ್ಥವನ್ನು ಮುಟ್ಟಬೇಕಾದರೆ ಕೈ ತೊಳೆದುಕೊಳ್ಳಬೇಕು. 
  
  ಒಬ್ಬರಿಗೆ ಅನ್ನವನ್ನು ಬಡಿಸಿ, ಹಾಗೇ ಮುಂದೆ ಮತ್ತೊಬ್ಬರಿಗೆ ಬಡಿಸಬೇಕಾದರೆ ಕೈ ತೊಳೆದು ಬಡಿಸಬೇಕಾಗಿಲ್ಲ. ಎರಡು ಬಾರಿ ಬಡಿಸುವ ಮಧ್ಯದಲ್ಲಿ ಮುಸುರೆಯಲ್ಲದ ಪದಾರ್ಥವನ್ನು ಮುಟ್ಟಬೇಕಾದರೆ ಮಾತ್ರ ಕೈ ತೊಳೆದುಕೊಳ್ಳಬೇಕು. ಅನ್ನವನ್ನು ಬಡಿಸಿ ಸಾರು ಹುಳಿ ಮುಂತಾದ ಮುಸುರೆ ಪದಾರ್ಥಗಳನ್ನು ಬಡಿಸಲು ಕೈ ತೊಳೆದುಕೊಳ್ಳಬೇಕಾಗಿಲ್ಲ. 
  
  
 • Gururaja raised kanugovi,Hyderabad

  8:50 AM , 05/08/2017

  Achaaryarige saastanga namaskaara, nanna samshaya: musare andare enu antha arthavaagide aagali eegina kaalada manushyarige musre andare enu antha thelisa bahudu aagali eke annuvudu arivilla dayamaadi idannu shastrada moolaka telisi. Innodu kaarana, musre aacharanedalli baalastu vyatyasa kaanusthade udaaharenege - table oota poorna table na ne musariyannagi maaduttade aadare nelada mele yeke aaguvadilla, mattu musariannu muttidaga poorna dheha musare yeke aaguvadilla . Idu nanna prashayu mattu naale nanna makkalu idannu kelidaaga uttara kodalu sadyavaaguttade. Dayavittu uttara kottu dhanyagolisabeku endu nimmalli vinamra praarthane.
 • Nagaraj v dhulked,

  11:45 AM, 14/07/2017

  Dannavadagallu 🙏🙏🙏🙏
 • Dr Prasanna Govindacharya Raichur,

  9:24 PM , 12/07/2017

  ಗುಡಿ ಮಠಗಳಲ್ಲಿ ಹಿಂದಿನ ದಿನ ಮಾಡಿದ ಪಕ್ವಾನ್ನಗಳನ್ನು ಮಡಿಯಿಂದ ಬಡಿಸುತ್ತಾರೆ

  Vishnudasa Nagendracharya

  ಅನ್ನ ಮುಂತಾದವುಗಳನ್ನು ಸರ್ವಥಾ ಮಾರನೆಯ ದಿವಸ ಉಣ್ಣಬಾರದು. ಅದು ತಂಗಳು. 
  
  ಮಠಗಳಲ್ಲಿ ಮಾಡುತ್ತಾರೆ ಎಂದರೆ ಏನು ಹೇಳುವದು? ಧರ್ಮದ ಆಚರಣೆ ನಡೆಯಬೇಕಾದ ಎಡೆಯಲ್ಲಿಯೇ ಅಧರ್ಮ ತಾಂಡವವಾಡುವದು ಇವತ್ತಿನ ದುರಂತ. ಕೆಲವು ಕಡೆಯಲ್ಲಿ ಹೋಟೆಲ್ಲಿನಿಂದ ಸ್ವೀಟ್ ತರಿಸಿ ಬಡಿಸುತ್ತಾರೆ ಎನ್ನುವದನ್ನು ತಂದು ನೀಡಿದವರ ಬಾಯಿಂದಲೇ ಕೇಳಿದ್ದೇನೆ. ಅದಕ್ಕಾಗಿಯೇ ಅನೇಕ ನಿಷ್ಠಾವಂತರು ಇಂದಿನ ದಿವಸ ಮಠಗಳಲ್ಲಿಯೂ ಊಟ ಮಾಡುವದನ್ನು ಬಿಟ್ಟಿರುವದು, ಮತ್ತು ಅಡಿಗೆಯವರ ಕೈಯಲ್ಲೂ (ಅವರು ಯಾರು ಎನ್ನುವದೇ ತಿಳಿದಿರುವದಿಲ್ಲ) ಊಟ ಮಾಡುವದನ್ನು ಬಿಟ್ಟಿರುವದು. 
  
  ಇನ್ನು ಕಡುಬು ಮುಂತಾದ ಕರಿದ ಪದಾರ್ಥಗಳನ್ನು (ಒಟ್ಟಾರೆ ನೀರಿನಲ್ಲಿ ಬೇಯಿಸದ ಪದಾರ್ಥಗಳು, ಕರಿದ ಅಥವಾ ಹುರಿದ ಪದಾರ್ಥಗಳು) ಅನೇಕ ದಿವಸಗಳವರೆಗೆ ತಿನ್ನಬಹುದು.
 • K vasudevarao,Hindupur

  1:13 PM , 08/07/2017

  Aacharyarige saashtanga namaskaragalu.Ee prashne samshayave .Tiraskaravalla. Neevu helidahage musare mattu engalu arthavagide.Table mele yake oota madabarado arthavagide.adare neevu helida haage table cloth ellavu musare mattu enjalu adare naavu kelage koodi ootamaaduvagalu kooda naavu tatte itta nela ellavu enjalu agatalleve.ade parisaradalli matobbaru ootamaatdaralleve.aaga avarigu berobbara enjalu takatallave!Mattu oota vadanantara oota maadida stalavallade poorthi parisara suddhi maadabekallave! Daye maadi tilisi.
  Ee prashne tappadare kshame maadi.

  Vishnudasa Nagendracharya

  ಭೂಮಿಯ ಮೇಲೆ ಅಕ್ಕ ಪಕ್ಕದಲ್ಲಿ ಹಾಕಿದ ಎಲೆಗಳು ಎಂಜಲಲ್ಲ, ಅಲ್ಲಿಟ್ಟ ಪಾತ್ರೆಗಳು ಮುಸುರೆಯಲ್ಲ. 
  
  ಮರ, ಪ್ಲಾಸ್ಟಿಕ್ಕು ಮುಂತಾದ ಪದಾರ್ಥಗಳಿಂದ ಮಾಡಿದ ಡೈನಿಂಗ್ ಟೇಬಲ್ಲಿನ ಮೇಲೆ ಒಂದು ಮುಸುರೆಯ ಪಾತ್ರೆಯನ್ನಿಟ್ಟರೆ ಮತ್ತು ಎಂಜಲಿನ ಪಾತ್ರೆಯನ್ನಿಟ್ಟರೆ ಇಡಿಯ ಟೇಬಲ್ಲು ಮುಸುರೆ ಮತ್ತು ಎಂಜಲಾಗುತ್ತದೆ. 
  
  ಹೀಗಾಗಿ ಡೈನಿಂಗ್ ಟೇಬಲ್ಲಿನ ಮೇಲಿನ ಊಟ ನಿಷಿದ್ಧ. 
  
  ದೇಹದ ಅನಾರೋಗ್ಯದಿಂದ ನೆಲದ ಮೇಲೆ ಕೂಡಲು ಸಾಧ್ಯವಿಲ್ಲದ ಪಕ್ಷದಲ್ಲಿ ನೆಲದ ಮೇಲೆ ಒಂದು ಕಟ್ಟೆಯನ್ನು ಕಟ್ಟಿಸಿ (ನಾಲ್ಕು ಕಾಲುಗಳ ಕಟ್ಟೆಯಲ್ಲ, ಗೋಡೆಯಂತಹ ಕಟ್ಟೆ, ಅಂದರೆ ನೆಲದಿಂದ ಮೇಲಿನವರೆಗೂ ಒಂದೇ ಆಕಾರವಿರಬೇಕು, ಕಾಲುಗಳಿರಬಾರದು) ಅದರ ಮೇಲೆ ತಟ್ಟೆ ಎಲೆಗಳನ್ನಿಟ್ಟುಕೊಂಡು ಊಟ ಮಾಡಬಹುದು. ತಪ್ಪಿಲ್ಲ. 
  
  
 • UDYAVAR NAGARAJ,Bangaloe

  3:57 PM , 08/07/2017

  ಆಚಾರ್ಯರಿಗೆ ನಮಸ್ಕಾರ 
  
  ಸಿರಿ ಧಾನ್ಯ ಗಳು ಚಪಾತಿ ಅವಲಕ್ಕಿ ಯ ಹಾಗೂ ಅಥವಾ ಅನ್ನದ ಹಾಗೊ

  Vishnudasa Nagendracharya

  ಚಪಾತಿ ಅವಲಕ್ಕಿಯ ತರಹ. 
  
  
 • Rammurthy Kulkarni,Mangaluru

  9:59 PM , 07/07/2017

  ಗುರುಗಳೆ, ತಂಗಳು ಸ್ವೀಕರಿಸಬಾರದು ನಿಜ. ಆದರೆ, ಕಡು ಬಡವರು, ಒಪ್ಪತ್ತು ಊಟಕ್ಕೂ ಗತಿ ಇಲ್ಲದ ಬ್ರಾಹ್ಮಣರೂ ಇದ್ದಾರಲ್ಲ..ಅಕಸ್ಮಾತಾಗಿ ಉಳಿದ ಅಡುಗೆಯನ್ನು ಮಾರನೇ ದಿನ ಉಣ್ಣಬಾರದೇ? ದನಗಳಿಗೋ, ಭಿಕ್ಷುಕರಿಗೋ ಕೊಡಲು, ಬಿಸಾಡಲು ಇವರ ಮನಸ್ಸು ಒಪ್ಪುತ್ತದೆಯೇ?

  Vishnudasa Nagendracharya

  ಈ ಪ್ರಶ್ನೆಗೆ ಮೂರು ಉತ್ತರಗಳಿವೆ - 
  
  1. ಮನೆಯಲ್ಲಿ ಧಾನ್ಯಗಳ ದಾರಿದ್ರ್ಯವಿದ್ದಾಗ, ಎಷ್ಟು ಬೇಕೋ ಅಷ್ಟನ್ನೇ ಜಾಗ್ರತೆಯಿಂದ ಮಾಡಬೇಕು. ಚಲ್ಲುವಂತೆ, ಉಳಿಯುವಂತೆ ಮಾಡಬಾರದು. ಅನ್ನದ ಕುರಿತು, ಧಾನ್ಯಗಳ ಕುರಿತು ತೋರುವ ತಿರಸ್ಕಾರವೇ ಎಲ್ಲ ದಾರಿದ್ರ್ಯಕ್ಕೂ ಮೂಲ. 
  
  2. ಅನಿವಾರ್ಯವಾಗಿ ಉಳಿದ ಪಕ್ಷದಲ್ಲಿಯೂ ಅದನ್ನು ಪ್ರಾಣಿಗಳಿಗೆ ನೀಡಬೇಕು, ಕಾರಣ ತಂಗಳನ್ನು ತಿನ್ನುವದು ನಿಷಿದ್ಧ. ತಂಗಳನ್ನು ತಿಂದರೆ ಬುದ್ಧಿ ಮಾಂದ್ಯವುಂಟಾಗುತ್ತದೆ ಮತ್ತು ಧರ್ಮಾಚರಣೆಯ ಅಧಿಕಾರವನ್ನು ಕಳೆದುಕೊಳ್ಳುತ್ತೇವೆ. ದಾರಿದ್ರ್ಯವಿಲ್ಲದಾಗ ಮಾಡುವ ಧರ್ಮಾಚರಣೆಗಿಂತಲೂ ದಾರಿದ್ರ್ಯವಿದ್ದಾಗ ಮಾಡುವ ಧರ್ಮಾಚರಣೆ ಅತ್ಯಧಿಕ ಫಲವನ್ನು ನೀಡುತ್ತದೆ. ಬಗೆವರೋ ಬಡತನ ಭಾಗ್ಯ ಭಾಗ್ಯವಂತರು ಎಂಬ ಶ್ರೀ ಜಗನ್ನಾಥದಾಸಾರ್ಯರ ಮಾತು ನಮ್ಮ ಆದರ್ಶವಾಗಬೇಕು. 
  
  3. ಹಸಿವನ್ನು ತಡೆಯಲು ಸಾಧ್ಯವೇ ಇಲ್ಲ, ಬೇರೆಯ ಪದಾರ್ಥಗಳು ಇಲ್ಲವೇ ಇಲ್ಲ ಎಂಬ ಸಂದರ್ಭಗಳಲ್ಲಿ ಜೀವವನ್ನು ಉಳಿಸಿಕೊಳ್ಳಲು ಮಹಾಋಷಿಗಳು ನಿಷಿದ್ಧ ಪದಾರ್ಥಗಳನ್ನು , ಎಂಜಲನ್ನೂ ತಿಂದ ಘಟನೆಯ ಉಲ್ಲೇಖವನ್ನು ಶಾಸ್ತ್ರ ಮಾಡುತ್ತದೆ. ಹೀಗಾಗಿ ಬೇರೆ ಮಾರ್ಗವೇ ಇಲ್ಲ ಎಂದಾದಾಗ ತಂಗಳನ್ನು ತಿಂದರೆ ದೋಷವಲ್ಲ. 
  
  
  
 • ಅನಿರುಧ್ಧ ಕುಲಕಣಿ೯,

  10:43 PM, 07/07/2017

  ಈ ವಿವರಗಳನ್ನು ವೈಜ್ಞಾನಿಕ ದೃಷ್ಟಿಯಿಂದಲೂ ವಿಶ್ಲೇಷಿಸಿ ಹೇಳಿದರೆ ಇಂದಿನ ಜನಾಂಗಕ್ಕೆ ಹೆಚ್ಚು ಸಕಾರಣವಾಗಿರುತ್ತದೆ.