ಈ ಬಾರಿಯ ಉಪಾಕರ್ಮ ಯಾವಾಗ?
ಆಚಾರ್ಯ ರಿಗೆ ಪ್ರಣಾಮಗಳು. ಈ ಬಾರಿಯ ಋಗ್ವೇದ ಪ್ರಥಮ ಉಪಾಕರ್ಮ ಎ೦ದು ನೆರವೇರಿಸಬೇಕು ? ದಯವಿಟ್ಟು ತಿಳಿಸಬೇಕಾಗಿ ಪ್ರಾರ್ಥಿಸುತ್ತೇನೆ. ಪ್ರಣಾಮಗಳೊ೦ದಿಗೆ, — ಮಧುಸೂದನ .ಕೆ. ಆರ್. ಹೋದ ವರ್ಷದಂತೆ ಈ ಬಾರಿಯೂ ಉಪಾಕರ್ಮದಲ್ಲಿ ವಿವಾದವಿದ್ದ ಕಾರಣಕ್ಕೆ, ಜನಸಾಮಾನ್ಯರಲ್ಲಿ ಗೊಂದಲ ಉಂಟಾಗಬಾರದು ಎಂಬ ಉದ್ದೇಶದಿಂದ ಪಂಚಾಂಗಗಳು ಮುದ್ರಣವಾಗುವದಿಕ್ಕಿಂತ ಮುಂಚೆಯೇ ಉಪಾಕರ್ಮದ ಕುರಿತ ಲೇಖನವನ್ನು ಪ್ರಕಟಿಸಿದ್ದೇನೆ. ಋಗ್ವೇದಿಗಳು, ಕೃಷ್ಣಯಜುರ್ವೇದಿಗಳು ಮತ್ತು ಶುಕ್ಲಯಜುರ್ವೇದಿಗಳು ಎಂದೆಂದು ಮಾಡಬೇಕು ಎನ್ನುವದನ್ನು ಅದರಲ್ಲಿ ವಿವರಿಸಿದ್ದೇನೆ. ಉಪಾಕರ್ಮ ಎಂಬ ವಿಷಯದಡಿಯಲ್ಲಿ VNA218 ನೇ ಲೇಖನದಲ್ಲಿ ವಿಸ್ತಾರವಾದ ಚರ್ಚೆ ಮತ್ತು ನಿರ್ಣಯಗಳು ಎರಡೂ ಉಪಲಬ್ಧವಿದೆ. ನೋಡಿ. — ವಿಷ್ಣುದಾಸ ನಾಗೇಂದ್ರಾಚಾರ್ಯ.