Prashnottara - VNP089

ಗರುಡಪುರಾಣವನ್ನು ಓದಬಹುದೆ?


					 	

ಆಚಾರ್ಯರಿಗೆ ಪ್ರಣಾಮಗಳು.ಗರುಡ ಪುರಾಣವನ್ನು ಓದಿದರೆ ಅಪಶಕುನವೆ ? ಓದಿದರೆ ಮನೆಯಲ್ಲಿ ಅಪಮೃತ್ಯು ಉಂಟಾಗುತ್ತದೆಯೆ ?ಅದನ್ನು ಓದಿದರೆ ಅಪಶಕುನ, ಎಂದು ಅಲ್ಲಿರುವುದನ್ನು ನೋಡಿ ಓದುವುದನ್ನು ಬಿಟ್ಟೆ. ಹಾಗಾದರೆ ಅಲ್ಲಿರುವ ವಿಷಯವನ್ನು ತಿಳಿಯುವುದಾದರು ಹೇಗೆ ? ದಯಮಾಡಿ ತಿಳಿಸಿ ಕೊಡಿ. — ಪುರುಷೋತ್ತಮ ಎನ್.


Download Article Share to facebook View Comments
5203 Views

Comments

(You can only view comments here. If you want to write a comment please download the app.)
 • Vani Desai,Bengaluru

  12:27 PM, 15/09/2022

  ಆಚಾರ್ಯರಿಗೆ ಪ್ರಣಾಮಗಳು, ಗರುಡ ಪುರಾಣ ನನ್ನು ಮನೆಯಲ್ಲಿ ಓದಬಹುದೆ,

  Vishnudasa Nagendracharya

  ಖಂಡಿತ.
  
 • Chandrika prasad,Bangalore

  12:13 PM, 15/09/2022

  ಪಕ್ಷ ಮಾಸದಲ್ಲಿ ಓ ದುವುದು, ಶ್ರವಣ ಮಾಡುವುದು ಅತ್ಯಂತ ಪವಿತ್ರ ಕಾರ್ಯ ವಾಗಿದೆ. ಅದರ ಬಗ್ಗೆ ತಿಳಿದು, ಸಾಧ್ಯ ವಿದ್ದಷ್ಟು ಆಚರಣೆ ಮಾಡುವುದು ಉತ್ತಮ ಕೆಲಸವಲ್ಲ ವೇ. ತಪ್ಪು ಮಾಡಿದ ಮೇಲೆ ಶಿಕ್ಷೆ ಖಂಡಿತ. ಮನುಷ್ಯ ನಾಗಿ ಹುಟ್ಟಿದ ಮೇಲೆ ತಪ್ಪು ಮಾಡುವುದು ಸಹಜ ಅದಕ್ಕೆ ತಕ್ಕಂತೆ ಶಿಕ್ಷೆ ಅನುಭವಿಸಲೇಬೇಕು. ಭಯ ಏಕೆ ಅಲ್ಲವೇ ಆಚಾರ್ಯ ರೇ 🙏🏻ಪ್ರಣಾಮಗಳು 🙏🏻
 • H. Suvarna kulkarni,Bangalore

  2:10 AM , 29/09/2017

  ಗುರುಗಳಿಗೆ ಪ್ರಣಾಮಗಳು ನನಗೂ ಇದರ ಬಗ್ಗೆ ಇದ್ದ ಸಂಶಯ ಪರಿಹಾರ ವಾಯಿತು ಧನ್ಯವಾದಗಳು
 • ಗುರುರಾಜಾಚಾರ್ಯ ಕೃ. ಪುಣ್ಯವಂತ.,ಹುಬ್ಬಳ್ಳಿ

  10:59 AM, 22/08/2017

  ಉತ್ತಮ ವಿವರಣೆ ಆಚಾರ್ಯರೆ. ನಾನೂ ಕೂಡಾ ಸಾಕಷ್ಟು ಜನರಿಗೆ ಹೀಗೆ ಹೇಳಿದ್ದೇನೆ
 • Jayashree Karunakar,

  10:35 AM, 11/07/2017

  ಹೆಂಗಸರು ಓದಬಹುದೆ ಗುರುಗಳೆ

  Vishnudasa Nagendracharya

  ಅನುವಾದಗಳನ್ನು ಓದಬಹುದು. 
  
  ಶ್ರೀ ಚತುರ್ವೇದಿ ವೇದವ್ಯಾಸಾಚಾರ್ಯರ ಅನುವಾದದ ಪುಸ್ತಕ ಉತ್ತಮವಾಗಿದೆ ಮತ್ತು ಸಂಗ್ರಾಹ್ಯವಾಗಿದೆ. 
 • Purushothama N,

  5:50 PM , 11/07/2017

  ಧನ್ಯವಾದಗಳು... ನನಗಿದ್ದ ಸಂಶಯಕ್ಕೆ ಉತ್ತರ ದೊರೆಯಿತು.
 • Manjunath,

  7:49 AM , 11/07/2017

  ಧನ್ಯವಾದಗಳು ಆಚಾರ್ಯರೆ ಈಗ ಸ್ಪಷ್ಟನೆ ಆಯಿತು🙏🙏
 • Nagaraj Cochi,

  11:54 PM, 10/07/2017

  Thubha Dhanyavadagalu
 • Manjunath,

  10:12 PM, 10/07/2017

  ಮದುವೆ ಮನೆಯಲ್ಲಿ ಸತ್ತ ಸುದ್ದಿ ತಿಳಿಸಬಾರದು ಎಂಬ ನಮ್ಮ ಜಗನ್ನಾಥ ದಾಸರ 
  ಮಾತಿನ ಅರ್ಥ ತಿಳಿಸಿಕೊಡಬೇಕು
  
  ಏಕೆಂದರೆ ಈಗ ಮದುವೆಯಾಗುತ್ತಿರು ಮನೆಯವರು ಸತ್ತರೆ ಅವರಿಗೆ ಮೈಲಿಗೆಯಾಗುವುದಿಲ್ಲವೇ 
  ಅದನ್ನು ಹೇಳದೆ ಮೈಲಿಗೆಯಲ್ಲಿ ಮದುವೆ ಮಾಡುವುದು ಎಷ್ಟು ಸರಿ?
  
  
  ಇದು ನನ್ನ ಮನಸ್ಸುನಲ್ಲಿ ಬಂದ ಪ್ರಶ್ನೆ ಉದ್ದಟತನವಾಗಿದ್ದರೆ ಕ್ಷಮಿಸಬೇಕು
  
  
  ಜಗನ್ನಾಥ ದಾಸರ ಆ ಸಾಲುಗಳನ್ನು ತಿಳಿಯುವುದಷ್ಟೆ ನನ್ನ ಉದ್ದೇಶ 🙏🙏

  Vishnudasa Nagendracharya

  ಮದುವೆ ಮುಂಜಿ ಮುಂತಾದ ಮಂಗಲಕಾರ್ಯಗಳಲ್ಲಿ ಮೊದಲಿಗೆ ನಾಂದೀಸ್ಥಾಪನೆ ಮಾಡುತ್ತಾರೆ. ನಾಂದೀಸ್ಥಾಪನೆಯಾದ ಬಳಿಕ ವಿಸರ್ಜನೆಯಾಗುವವರೆಗೆ ಆ ಮನೆಯಲ್ಲಿ ಸಾವುಂಟಾದರೆ ಅವರಿಗೆ ಮೈಲಿಗೆಯಿರುವದಿಲ್ಲ. ಅವಶ್ಯವಾಗಿ ಮಂಗಲಕಾರ್ಯವನ್ನು ಮುಗಿಸಬಹುದು. ಮೈಲಿಗೆಯಲ್ಲಿ ಮಾಡಿದಂತಾಗುವದಿಲ್ಲ. 
  
  ಅವರಿಗೆ ಮೈಲಿಗೆಯಿಲ್ಲ ಎಂದು ಹೋಗಿ ಅವರಿಗೆ ಸತ್ತ ಸುದ್ದಿ ಹೇಳಬಾರದು. ಸಾವಿನ ಸುದ್ದಿ ದುಃಖ ನೀಡುವಂತದ್ದು ಮತ್ತು ಅಮಂಗಲ. ಮದುವೆಯಾಗುವವರೆಗೆ ಅದನ್ನು ಹೇಳದೇ ಇರಬೇಕು, ನಿಮಗೆ ತಿಳಿದಿದ್ದಲ್ಲಿ ಅಲ್ಲಿಗೆ ಹೋಗಲೇ ಬಾರದು. 
  
  ಇನ್ನು ಮದುವೆಗೆ ಬಂದಿರುವ ಬಂಧುಗಳಿಗೋ ಅಥವಾ ಸ್ನೇಹಿತರಿಗೋ ಸೂತಕ ಬಂದಿದ್ದಾಗಲೂ, ಮದುವೆ ಮನೆಗೆ ಹೋಗಿ ಅದನ್ನು ಹೇಳಬಾರದು. ಅವರನ್ನು ಮದುವೆ ಮನೆಯಿಂದ ದೂರಕ್ಕೆ ಕರೆದುಕೊಂಡು ಹೋಗಿ ವಿಷಯವನ್ನು ತಿಳಿಸತಕ್ಕದ್ದು. 
  
  ಇನ್ನು ಮದುವೆ ಮುಂಜಿ ಮುಂತಾದ ಶುಭಕಾರ್ಯಗಳಿಗೆ ಹೋದಾಗ ಅಕ್ಕಪಕ್ಕದಲ್ಲಿ ಕುಳಿತವರ ಜೊತೆಯಲ್ಲಿ ಅವರು ಹೋದರಂತೆ ಇವರು ಹೋದರಂತೆ ಎಂದು ಸಾವಿನ ಸುದ್ದಿ ಮಾತನಾಡಬಾರದು ಎನ್ನುವದು ಶ್ರೀ ಜಗನ್ನಾಥದಾಸಾರ್ಯರ ಮಾತಿನ ತಾತ್ಪರ್ಯ. 
  
  ಸಾವಿನ ಸುದ್ದಿಯನ್ನು ಯಾರಿಗಾದರೂ ತಿಳಿಸುವದಕ್ಕಿಂತ ಮುಂಚೆ ಹತ್ತಾರು ಬಾರಿ ಯೋಚಿಸಬೇಕು. ಯಾವ ಪರಿಸ್ಥಿತಿಯಲ್ಲಿದ್ದಾರೆ, ಏನು ಪರಿಣಾಮವಾಗಬಹುದು ಎಂದು ಯೋಚನೆ ಮಾಡಿ ತಿಳಿಸಬೇಕು. 
  
  ವಿವೇಕಿಗಳಾಗಿ ವರ್ತಿಸಿ, ಅವಿವೇಕಿಗಳಂತೆ ವರ್ತಿಸಬೇಡಿ ಎಂದು ದಾಸಾರ್ಯರು ಸೂಚಿಸುತ್ತಿದ್ದಾರೆ. 
  
  
 • K Dattatreya,

  10:03 PM, 10/07/2017

  ನನಗೆ ಸಹ ಈ ಸಂಶಯದ ಉತ್ತರ ಸಿಕ್ಕಿದೆ
  ಧನ್ಯವಾದಗಳು ಗುರುಗಳೇ