Prashnottara - VNP090

ನಮ್ಮ ವೇದ ಗೋತ್ರಗಳನ್ನು ತಿಳಿಯುವ ಕ್ರಮ ಹೇಗೆ?


					 	

ನಮ್ಮ ವೇದ ಗೋತ್ರಗಳನ್ನು ತಿಳಿಯುವ ಕ್ರಮ ಹೇಗೆ? ಗುರುಗಳಿಗೆ ನಮಸ್ಕಾರಗಳು. ನಾವು ಯಾವ ಗೋತ್ರಕ್ಕೆ ಸೇರಿದವರು ಮತ್ತು ಯಾವ ವೇದಕ್ಕೆ ಸೇರಿದವರು ಎಂದು ತಿಳಿಯುವ ಕ್ರಮವನ್ನು ತಿಳಿಸಬೇಕೆಂದು ಕೇಳಿಕೊಳ್ಳುತ್ತೇನೆ. — ರಾಘವೇಂದ್ರ, ದೊಡ್ಡಬಳ್ಳಾಪುರ. ನಾವು ಯಾವ ವೇದದ, ಯಾವ ಶಾಖೆಗೆ ಸೇರಿದವರು ಎಂದು ಹಾಗೂ ನಾವು ಯಾವ ಗೋತ್ರಕ್ಕೆ ಸೇರಿದವರು ಎಂದು ತಿಳಿಯಬೇಕಾದರೆ ನಮ್ಮ ಮನೆಯ ಹಿರಿಯರನ್ನು ಕೇಳಿಯೇ ತಿಳಿಯಬೇಕು. ಬೇರೆ ಮಾರ್ಗವಿಲ್ಲ. ಮನೆಯಲ್ಲಿ ಹಿರಿಯರಿಲ್ಲದಿದ್ದರೆ, ಹಿರಿಯರಿಗೆ ತಿಳಿಯದಿದ್ದರೆ ಕುಟುಂಬದ ಯಾವುದಾದರೂ ಹಿರಿಯರನ್ನು ಅಥವಾ ನಮ್ಮ ಕುಟುಂಬದ ಬಗ್ಗೆ ತಿಳಿದವರನ್ನು ಕೇಳಬೇಕು. ಇನ್ನು ತಿಳಿಯಲಿಕ್ಕೆ ಸಾಧ್ಯವೇ ಇಲ್ಲದ ಪಕ್ಷದಲ್ಲಿ ನಿಮಗೆ ಪಾಠ ಹೇಳುವ ಗುರುಗಳ ವೇದ ಮತ್ತು ಶಾಖೆಯನ್ನು ಅನುಸರಿಸಬಹುದು. ಅದೂ ಸಾಧ್ಯವಿಲ್ಲದ ಪಕ್ಷದಲ್ಲಿ ಋಗ್ವೇದ ಅಶ್ವಲಾಯನ ಸೂತ್ರವನ್ನು ಅನುಸರಿಸಬೇಕು. ಕಾರಣ, ಋಗ್ವೇದ ಎಲ್ಲ ವೇದಗಳಲ್ಲಿಯೂ ಶ್ರೇಷ್ಠವಾದದ್ದು, ಮತ್ತು ಋಗ್ವೇದದ ಪ್ರಧಾನವಾದ ಸೂತ್ರಗ್ರಂಥವನ್ನು ರಚಿಸಿರುವದು ಆಶ್ವಲಾಯನರು. ಗೋತ್ರ ತಿಳಿಯದಿದ್ದರೆ ಕಾಶ್ಯಪಗೋತ್ರದವರೆಂದು ತಿಳಿಯಬೇಕು. ಕಾರಣ, ಈ ಭೂಮಿಯಲ್ಲಿ ಸಮಗ್ರ ಜೀವಸಂಕುಲದ ಆರಂಭದ ಮೂಲ ಶ್ರೀ ಕಶ್ಯಪಮಹರ್ಷಿಗಳು. ಹೀಗಾಗಿ ಕಾಶ್ಯಪಗೋತ್ರವನ್ನು ಪಠಿಸಬೇಕು. ಕಾಶ್ಯಪಗೋತ್ರದ ಪ್ರವರ ಹೀಗಿದೆ — ಕಾಶ್ಯಪ ಅವತ್ಸಾರ ಅಸಿತ ಇತಿ ತ್ರ್ಯಾರ್ಷೇಯ ಕಾಶ್ಯಪಗೋತ್ರಃ ಋಗ್ವೇದಃ ಅಶ್ವಲಾಯನಸೂತ್ರಃ (ನಿಮ್ಮ ಜನ್ಮನಾಮ) ಶರ್ಮಾಹಂ ಎಂದು ಪಠಿಸಬೇಕು. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
8045 Views

Comments

(You can only view comments here. If you want to write a comment please download the app.)
 • M. Ullas Hegde,Mangalore

  9:56 PM , 02/10/2019

  Rigveda Ashwalayana sutra yendu helidare avaru bere veda kaliyuva hage ellava? 
  
  Aa aa vedakke seridavaru yendare yenu artha?

  Vishnudasa Nagendracharya

  ಋಗ್ವೇದ ಶಾಖೆಯವರು ಯಜುರ್ವೇದ ಕಲಿಯಬಾರದು ಎಂದಿಲ್ಲ, ಯಜುಃಶಾಖೆಯವರು ಋಗ್ವೇದ ಕಲಿಯಬಾರದು ಎಂದಿಲ್ಲ. ಆದರೆ ನಾವು ಯಾವ ವೇದಕ್ಕೆ ಸೇರಿದ್ದೇವೆಯೋ ಆ ವೇದವನ್ನು ಮೊದಲು ಕಲಿತು, ನಂತರ ಉಳಿದ ಶಾಖೆಯನ್ನು ಕಲಿಯಬೇಕು. 
 • ಲಕ್ಷ್ಮಣ್,ಬೆಂಗಳೂರು

  9:54 PM , 03/10/2019

  ನಮ್ಮ ಗೋತ್ರ ಭೃಗು ಮಹರ್ಷಿ ಗೋತ್ರ.
  ಋಗ್ವೇದ ಶಾಖೆ ಅಶ್ವಲಾಯನ ಸೂತ್ರ.
  ನಮ್ಮ ಪ್ರವರ ತಿಳಿಸುವಿರಾ?
  
  ನಮ್ಮ ಹಿರಿಯರನ್ನು ಕೇಳಿದ್ದಕ್ಕೆ ಸದ್ಯೋಜಾತ ಪ್ರವರ ಎಂದು ಹೇಳಿದ್ರು. ಆದರೆ ಅವರಿಗೂ ಗೊತ್ತಲ್ಲ.
 • Chandrika prasad,Bangalore

  8:36 PM , 02/10/2019

  ಆಚಾರ್ಯರಿ ಗೆ ಪ್ರಣಾಮಗಳು 🙏
 • Guruprasad,Bangalore

  8:32 PM , 02/10/2019

  Namaskara, we belong to jamadagni gotra. Please tell me which gotra people we should not marry.
 • VinayhossurSeshachalm,Tumkur

  8:14 PM , 02/10/2019

  Namdhu gowtham gotra , aste gothirodhu pravra ithyadhigalu thilidhilla , please thilisi guruji
 • Mahadi Sethu Rao,Bengaluru

  12:30 PM, 14/06/2019

  Acharya hi. Nammadu Kasyapa gotra. Mane devaru SANTHEBIDANURU, HINDUPUR PRANADEVARU. ADARE KULADEVARU YARU ENDU NAMAGE GOTTILLA. VICHARANE MAADIDAGA PRANADEVARE KULADEVATHA ANTHA HEKUTTARE ADARE JYOTHISYRU JATAKA NODI SRI LAKSHMI NARASIMHA DEVARU ANTHA TEKUSIDSARE DAYAVITTU MAHITI NEEDABEKAKI PRASTHANE.
  HARE KRISHNA.

  Vishnudasa Nagendracharya

  ಕುಲದೇವರು ಯಾರು ಎಂದು ತಿಳಿಯುವದು ಹಿರಿಯರಿಂದ. ನಿಮ್ಮ ಹಿರಿಯರ ಮಾತಿನಂತೆ ನಡೆಯಿರಿ. 
 • PRASANNA KUMAR N S,

  6:43 PM , 24/10/2017

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು.
  
  ದಯವಿಟ್ಟು ಚಿತ್ರಾಹುತಿ ಕ್ರಮ ತಿಳಿಸಿ. ನಮ್ಮದು 
  
  ವ್ಯಾಸರಾಜ ಮಠ

  Vishnudasa Nagendracharya

  ಚಿತ್ರಾಹುತಿಯಲ್ಲಿ ಮಠಭೇದವಿಲ್ಲ. ಸಂಪ್ರದಾಯಭೇದವಿದೆ. 
  
  ಒಂದು, ಎರಡು, ಮೂರು, ನಾಲ್ಕು, ಐದು ಚಿತ್ರಾಹುತಿ, ಹೀಗೆ ಐದು ಕ್ರಮಗಳಲ್ಲಿ ಚಿತ್ರಾಹುತಿಗಳನ್ನು ಇಡುವ ಪದ್ಧತಿಯಿದೆ. 
  
  ಎರಡು ಅಥವಾ ನಾಲ್ಕು ಚಿತ್ರಾಹುತಿಗಳು ಪ್ರಸಿದ್ಧ. 
  
  ಚಿತ್ರಾಯ ನಮಃ
  
  ಚಿತ್ರಗುಪ್ತಾಯ ನಮಃ
  
  ಯಮಾಯ ನಮಃ
  
  ಸರ್ವೇಭ್ಯೋ ಭೂತೇಭ್ಯೋ ನಮಃ 
  
  
 • Harikrishna h k,

  5:40 PM , 24/10/2017

  Acharyare namdu kaashyapa gotta ,pravara hege helabeku
 • Subramanya swamy gr,

  10:25 PM, 15/09/2017

  Danyavadhagalu gurugale...
 • Nagaraja Sharma,

  6:57 AM , 07/09/2017

  ಧನ್ಯವಾದ ಆಚಾರ್ಯರೇ ಸರ್ವರಿಗುಪಯುಕ್ತವಾದ ವಿಶೇಷ ಮಾಹಿತಿ, ಹರೇ ಶ್ರೀನಿವಾಸ
 • Padma Sirisha. V,Mysore

  4:02 PM , 22/08/2017

  ಅತ್ಯದ್ಭುತ ಗುರುಗಳೇ 🙏
 • Padma Sirisha. V,Mysore

  4:02 PM , 22/08/2017

  ಅತ್ಯದ್ಭುತ ಗುರುಗಳೇ 🙏
 • Padma Sirisha. V,Mysore

  4:02 PM , 22/08/2017

  ಅತ್ಯದ್ಭುತ ಗುರುಗಳೇ 🙏
 • Anantharaj,

  7:26 AM , 15/07/2017

  ಪೂಜ್ಯರೆ, ಯಜುರ್ವೇದ ಗೋತ್ರದವರು ಶುಕ್ಲ ಅಥವಾ ಕೃಷ್ಣ ಎಂಬದನ್ನು ಹೇಗೆ ತಿಳಿಯಬಹುದು? ನಮ್ಮ ಪ್ರವರದಲ್ಲೇನಾದರೂ ಗೊ
  ತ್ತಾಗುತ್ತಾ?

  Vishnudasa Nagendracharya

  ಪ್ರವರದಲ್ಲಿ ಆಪಸ್ತಂಭಸೂತ್ರಃ ಎಂದು ಹೇಳುತ್ತಿದ್ದರೆ ನೀವು ಕೃಷ್ಣಯಜುರ್ವೇದದವರು. 
  
  ಪ್ರವರದಲ್ಲಿ ಕಾತ್ಯಾಯನಸೂತ್ರಃ ಎಂದು ಹೇಳುತ್ತಿದ್ದರೆ ನೀವು ಶುಕ್ಲಯಜುರ್ವೇದದವರು. 
 • A srinivasa murthy,

  3:42 PM , 17/07/2017

  Hare srinivasa gurugalige hastodaka madida padarthavannu enu madabeku

  Vishnudasa Nagendracharya

  ಸ್ವೀಕರಿಸಬೇಕು. 
  
  ಹಸ್ತೋದಕವನ್ನು ಊಟಕ್ಕೆ ಕೂಡುವ ಮೊದಲು ಎಲೆಗೆ ಹಾಕಿಕೊಳ್ಳಬಾರದು. 
  
  ಪರಿಶೇಚನೆ ಮಾಡಿ, ಚಿತ್ರಾಹುತಿ, ಅಪೋಶನ ಪ್ರಾಣಾಹುತಿಗಳ ನಂತರ ಹಸ್ತೋದಕವನ್ನು ಸ್ವೀಕರಿಸಬೇಕು. 
 • A srinivasa murthy,

  3:40 PM , 17/07/2017

  Gurugale hare srinivasa gurugale hastodaka
 • ಮಹಾಲಕ್ಷ್ಮೀ,

  9:42 AM , 13/07/2017

  ಬಾದರಾಯಣಗೋತ್ರ ಪ್ರವರ ತಿಳಿಸಿ

  Vishnudasa Nagendracharya

  ಆಂಗೀರಸ-ಪುರುಕುತ್ಸ-ತ್ರಾಸದಸ್ಯವ ಇತಿ ತ್ರ್ಯಾರ್ಷೇಯ ಪ್ರವರಾನ್ವಿತ ಬಾದರಾಯಣಗೋತ್ರಃ 
  
 • savitha kiran rao,

  11:42 PM, 12/07/2017

  Acharyare can we read like this apropos to our family tradition
  Kashyapa avastara naidhruva trairushiya kadhyapa gotraha .... Kiran Kumar sharmanam?

  Vishnudasa Nagendracharya

  yes
  
 • Lokesha Moolya,

  6:53 PM , 12/07/2017

  Thumba olleya information.. Danyavadha Guruji
 • Jayashree Karunakar,

  1:49 PM , 12/07/2017

  ಬಹಳ ಉಪಯಕ್ತವಾದ ಸಲಹೆ ನೀಡಿದ್ದೀರ .
  
  ಸಮಾಜದಲ್ಲಿ ಇಂದು ಬಹಳಷ್ಟು ಮಂದಿ ಜ್ಞಾನಿಗಳು ಮತ್ತು ಆಚಾಯ೯ರು ಅಂತ ಕರೆಸಿ ಕೊಳ್ಳುವವರಲ್ಲಿ ತುಂಬಾ ತಪ್ಪು ಮಾಹಿತಿಯನ್ನು ಕೊಡುತ್ತಿದ್ದಾರೆ.
  
  ಆದರೆ ತಮ್ಮ ಜ್ಞಾನದ ಭೋದನೆ ಅತ್ಯಮೂಲ್ಯವಾದದ್ದು ಗುರುಗಳೆ.
  
  ತಮ್ಮಿಂದ ಹೀಗೆ ಸದಾ ಜ್ಞಾನಗಂಗೆ ನಮ್ಮೆಲ್ಲರಿಗೂ ಸಿಗುವಂತಾಗಲಿ ಎಂದು ಆ ಭಗವಂತನಲ್ಲಿ ನಿತ್ಯವೂ ಪ್ರಾಥಿ೯ಸುತ್ತಿದ್ದೇನೆ ಗುರುಗಳೆ.