Prashnottara - VNP095

ಬಿಳುಪು ರೋಗದವರನ್ನು ದೂರ ಇಡುವದು ತಪ್ಪು, ಆಚಾರ್ಯರೇ.


					 	

[ಇದು VNP094 ಪ್ರಶ್ನೋತ್ತರದ ಮುಂದುವರೆ ದ ಚರ್ಚೆ. ಅದನ್ನು ಓದಿದ ನಂತರ ಇದನ್ನು ಓದಿ.] ಗುರುಗಳೆ, ದಯವಿಟ್ಟು ಕ್ಷಮಿಸಿ. ಇದನ್ನು ನಾನು ಒಪ್ಪುವುದಿಲ್ಲ..ಬಿಳಿ ತೊನ್ನು ರೋಗವು ಅಂಟು ರೋಗ ಅಲ್ಲವೇ ಅಲ್ಲ..ಇದೇ ರೀತಿಯಾಗಿ ಇನ್ನು ಹತ್ತು ಹಲವು ಆಪತ್ತು ರಹಿತ ಕಾಯಿಲೆಗಳು ಇವೆ ಮತ್ತು ಅವುಗಳ ಬಗ್ಗೆ ತಪ್ಪು ಕಲ್ಪನೆಗಳು ಇವೆ. ಇವುಗಳು ಮನುಷ್ಯನಲ್ಲಿ ಖಿನ್ನತೆ ಉಂಟುಮಾಡುತ್ತದೆ..ಸಮಾಜ ಇವರನ್ನು ದೂರ ಮಾಡಿದಷ್ಟೂ ಇವರುಗಳ ಖಿನ್ನತೆ ಜಾಸ್ತಿಯಾಗಿ ಒಂಟಿತನ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ..ಇದರ ಪರಿಹಾರ ಸಮಾಜದಲ್ಲಿ ಇಂತಹ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವುದೇ ಹೊರತು ಅವರನ್ನು ದೂರವಿಡುವುದಲ್ಲ..ಅವರನ್ನು ಸಮಾಜದಲ್ಲಿ ಒಬ್ಬರನ್ನಾಗಿ ನೋಡಬೇಕು.ಅಂಟು ರೋಗಿಗಳನ್ನು ಖಂಡಿತ ಕಾಯಿಲೆ ಗುಣಾಗುವವರೆಗೆ ದೂರವಿಡಬೇಕು. ಆದರೆ ಅಂಟುರೋಗವಲ್ಲದ ಕಾಯಿಲೆಗಳನ್ನು ಹೊಂದಿದ ರೋಗಿಗಳನ್ನು ಸರ್ವಥಾ ದೂರ ಮಾಡಬಾರದು..ಬದಲಿಗೆ ಅವರಲ್ಲಿ ಆತ್ಮ ವಿಶ್ವಾಸ ತುಂಬಿ ಅವರನ್ನು ಎಲ್ಲರಂತೆ ಬದುಕಲು ಬಿಡಬೇಕು.ಇನ್ನು ಸೌಂದರ್ಯದ ದೃಷ್ಟಿಯಿಂದ ನೋಡಿದರೂ ರೋಗವಿಲ್ಲದೆ, ಸಹಜವಾಗಿ ಕುರೂಪ ದೇಹ ಇರುವವರೂ , ಕಡುಕಪ್ಪು ಬಣ್ಣದವರು, ನೋಡಲು ಅಸಹ್ಯ ಬರುವವರು ಇದ್ದಾರೆ. ಅಲ್ಲವೇ? ಇವರೆಲ್ಲ ರೋಗಿಗಳಲ್ಲ , ಇವರ ಸಹಜ ದೇಹ ಸೌಂದರ್ಯ ವೇ ಹೀಗೆ ಇರುತ್ತದೆ..ಹಾಗೆ ನೋಡಿದರೆ ಇವರನ್ನೂ ದೂರ ಇಡಬೇಕಲ್ಲವೇ? .ಯಾಕೆ ಕೇವಲ ಬಿಳಿ ಚರ್ಮದ ರೋಗಿಗಳು ಮಾತ್ರ ದೂರ ಇರಬೇಕು? ಸಾಕ್ಷಾತ್ ವೇದವ್ಯಾಸರೇ ಕಡುಕಪ್ಪು ವರ್ಣದವರಲ್ಲವೇ? ಅವರ ಸಂಜಾತ ಪಾಂಡುರಾಜನೂ ತೊನ್ನು ರೋಗವಿದ್ದರೂ ರಾಜ್ಯಭಾರ ಮಾಡಲಿಲ್ಲವೇ? ಅಷ್ಟಾವಕ್ರ, ಕುರೂಪಿಯಾದ ಕುಬ್ಜೆ ಭಗವಂತನ ಕೃಪೆಗೆ ಪಾತ್ರಾಗಲಿಲ್ಲವೇ? ವಿಜಯದಾಸರು ಕಜ್ಜಿಯಿಂದ ನರಳುತ್ತಿದ್ದ ಬಾಲಕನನ್ನು ಸಾಕಿ ಸಲುಹಿ ಮೋಹನದಾಸರನ್ನಾಗಿ ಮಾಡಲಿಲ್ಲವೇ? ಆದ್ದರಿಂದ ನನ್ನ ಅನಿಸಿಕೆಯ ಪ್ರಕಾರ ಅವರನ್ನು ದೂರ ಮಾಡುವ ಬದಲು, ಸಮಾಜದಲ್ಲಿ ಅರಿವು ಮೂಡಿಸಿ, ಅವರಿಗೂ ಎಲ್ಲ ಅರ್ಹತೆ ಯನ್ನು ಒದಗಿಸಬೇಕಲ್ಲವೇ? — ರಾಮಮೂರ್ತಿ ಕುಲಕರ್ಣಿ. ಇಲ್ಲಿ ಒಂದು ವಿಷಯವನ್ನು ನಾವು ಗಮನಿಸಬೇಕು. ಬಿಳುಪುರೋಗವು ಅಂಟು ರೋಗ ಎಂಬ ಕಾರಣಕ್ಕಾಗಿ ನಿಷೇಧಕ್ಕೆ ಒಳಗಾದದ್ದಲ್ಲ. ಪ್ರಬಲವಾದ ಪ್ರಾಚೀನಪಾಪದ ಫಲ ಎಂಬುದಾಗಿ ನಿಷೇಧಕ್ಕೆ ಒಳಗಾದದ್ದು. ನಮ್ಮ ದೇಹದಲ್ಲಿನ ಯಾವುದೇ ನ್ಯೂನತೆಯೂ ಒಂದು ಪಾಪದ ಫಲ. ನಾನು ಕನ್ನಡಕ ಹಾಕುತ್ತೇನೆ, ಕಣ್ಣು ಸರಿಯಾಗಿ ಕಾಣುವದಿಲ್ಲ ಎಂದರೆ ಹಿಂದಿನ ಜನ್ಮದಲ್ಲಿ ಪುಸ್ತಕವೊಂದನ್ನು ಕದ್ದಿದ್ದೇನೆ ಎಂದರ್ಥ. ಅಥವಾ ಮತ್ತೊಬ್ಬರ ಕಣ್ಣಿಗೆ ತೊಂದರೆ ಕೊಟ್ಟಿದ್ದೇನೆ ಎಂದರ್ಥ. ಒಬ್ಬ ವ್ಯಕ್ತಿಯನ್ನು ಮಲಮೂತ್ರ ಮಾಡದಂತೆ ತಡೆದು ಹಿಂಸಿಸಿದರೂ ಕಣ್ಣು ಕಾಣದಾಗುತ್ತದೆ. ಹೀಗೆ ಕುರುಡುತನಕ್ಕೆ ಹತ್ತಾರು ತರಹದ ಕಾರಣಗಳಿವೆ. ಯಾವುದೇ ರೀತಿಯ ಕುರುಡುತನಕ್ಕಾಗಲೀ ಅಥವಾ ಯಾವುದೇ ನ್ಯೂನತೆಗಾಗಲಿ, ವಿಕಲತೆಗಾಗಲೀ ನಮ್ಮ ಪಾಪವೇ ಕಾರಣ. ಆದರೆ ಈ ಬಿಳುಪುರೋಗಕ್ಕೆ ಕಾರಣವಾದದ್ದು ಬೇರೆ. ಬ್ರಹ್ಮಹತ್ಯೆ ಮತ್ತು ಗೋಹತ್ಯೆಗಳನ್ನು ಮಾಡಿದ್ದಾಗಲೀ ಅಥವಾ ಅದಕ್ಕೆ ಪ್ರೋತ್ಸಾಹ ನೀಡಿದ್ದಾಗಲೀ ಮಾಡಿದರೆ ಅದು ಮುಂದಿನ ಜನ್ಮದಲ್ಲಿ ಈ ಖಾಯಿಲೆಯ ರೂಪದಿಂದ ಕಾಡುತ್ತದೆ. ಬ್ರಹ್ಮಹತ್ಯೆ ಮತ್ತು ಗೋಹತ್ಯೆಗಳು ಅತ್ಯಂತ ಹೀನಾಯ ಕೃತ್ಯಗಳು ಎನ್ನುವ ಕಾರಣಕ್ಕೆ, ಮುಂದಿನ ಜನ್ಮದಲ್ಲಿಯೂ ಅದರ ಶಿಕ್ಷೆಯನ್ನು ಅನುಭವಿಸಲು ಶಾಸ್ತ್ರ ತಿಳಿಸುತ್ತದೆ. ಮತ್ತು, ತಂತ್ರಸಾರ ಎನ್ನುವ ಗ್ರಂಥದಲ್ಲಿ (ಆಚಾರ್ಯರ ತಂತ್ರಸಾರಸಂಗ್ರಹವಲ್ಲ, ಆಚಾರ್ಯರೂ ತಂತ್ರಸಾರ ಎಂಬ ಗ್ರಂಥವನ್ನು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ) ಗುರುಗಳಲ್ಲಿ ಯಾವ ದೋಷಗಳಿರಬಾರದು ಎಂದು ಹೇಳಬೇಕಾದರೆ, “श्वित्री चैव गलत्कुष्ठी नेत्ररोगी च वामनः । हीनाङ्गः कपटी रोगी बह्वाशी बहुजल्पकः । एतैर्दोषैर्व्विहीनो यः स गुरुः शिष्यसम्मतः ॥” ಎಂದು ಶ್ವೇತರೋಗವಿರುವ ವ್ಯಕ್ತಿ ಗುರುವಾಗಲು ಯೋಗ್ಯನಲ್ಲ ಹೇಳಿದ್ದಾರೆ. ಹೀಗಾಗಿ, ನಾವು ಇವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಲೇ ಬಾರದು. ಮತ್ತು ನಾವು ಅವರನ್ನು ನಿಕೃಷ್ಟವಾಗಿಯೂ ಕಾಣಬಾರದು. ಯಾವ ಕಾರ್ಯವನ್ನು ಮಾಡಬಾರದು ಎಂದು ಶಾಸ್ತ್ರ ಹೇಳಿದೆಯೋ ಅಂತಹ ಕಾರ್ಯವನ್ನು ಅವರೂ ಮಾಡಬಾರದು. ಅವರನ್ನು ಹೀನಾಯವಾಗಿ ಕಾಣದೆ, ಅವರಿಗೆ ಸಲ್ಲಬೇಕಾದ ಮರ್ಯಾದೆಯನ್ನು ಮಾಡಬೇಕಾದ್ದೂ ಸಮಾಜದ ಕರ್ತವ್ಯ, ನಮ್ಮ ಕರ್ತವ್ಯ. ಮತ್ತೂ ಬ್ರಹ್ಮಹತ್ಯೆ ಗೋಹತ್ಯೆಗಳನ್ನು ಮಾಡಿದವರಿಗೆ ಸರ್ವಥಾ ಅಸ್ಪೃಶ್ಯತ್ವವನ್ನು ಶಾಸ್ತ್ರ ಹೇಳುತ್ತದೆ. ಅಂದರೆ ಬ್ರಹ್ಮಹತ್ಯೆ ಮಾಡಿದ ವ್ಯಕ್ತಿಯನ್ನು ಸಮಾಜದಿಂದಲೇ ಬಹಿಷ್ಕರಿಸಬೇಕು. ಈ ರೀತಿಯ ಘೋರ ಅಸ್ಪೃಶ್ಯತ್ವವನ್ನು ಚರ್ಮರೋಗ ಇರುವವರಿಗೆ ಹೇಳುತ್ತಿಲ್ಲ. ಕೇವಲ ಮಡಿಯ ಕಾರ್ಯಗಳಿಗೆ ಅವರನ್ನು ತೆಗೆದುಕೊಳ್ಳುವದಿಲ್ಲ. ಇನ್ನು ಕುರೂಪದ ಉಲ್ಲೇಖ ನನ್ನ ವಿವರಣೆಯಲ್ಲಿ ಬಂದಿರುವದು ಪ್ರಾಸಂಗಿಕವಾಗಿ. ನಮಗೆ ಕುರೂಪ ಇದ್ದಾಗ ಜನ ನಮ್ಮನ್ನು ದೂರ ಮಾಡುವದು ನಮ್ಮ ಅನುಭವಕ್ಕೇ ಬಂದಿದೆ, ಬಾಹ್ಯ ರೂಪಕ್ಕೆ ಬೆಲೆ ಕೊಡುವ ಈ ಜನರಿಂದ ದೂರವಾಗಿ ನಾವು ಹೇಗಿದ್ದೇವೆಯೋ ಹಾಗೆ ನಮ್ಮನ್ನು ಸ್ವೀಕರಿಸಿ, ನಮ್ಮ ಪಾಪಗಳನ್ನು ಕಳೆದು ನಮ್ಮನ್ನು ಉದ್ಧರಿಸುವ ಶ್ರೀಹರಿಯಲ್ಲಿ ಮನಸ್ಸನ್ನು ನೆಡಬೇಕು ಎನ್ನುವ ದೃಷ್ಟಿಯಿಂದ. ಇನ್ನು, ಬ್ರಹ್ಮಹತ್ಯೆಯನ್ನು ಮಾಡಿದವರನ್ನು ಉದ್ಧಾರ ಮಾಡಿದ ಶ್ರೀ ಶ್ರೀಪಾದರಾಜರು, ನೀವು ಹೇಳಿದಂತೆ ಕುಷ್ಠದ ಬಾಧೆಯಿಂದ ಬಳಲುತ್ತಿದ್ದು ಬಾಲಕನ್ನು ಮೋಹನದಾಸರನ್ನಾಗಿ ಮಾಡಿದ ವಿಜಯದಾಸರು ಮುಂತಾದವರು ಇದೇ ಕಾರಣಕ್ಕಾಗಿಯೇ ಮಹಾನುಭಾವರ ಪಟ್ಟದಲ್ಲಿ ಕುಳಿತವರು. ಅಸಾಮಾನ್ಯರಿಗೂ ಅಸಾಧ್ಯವಾದುದನ್ನು ಮಾಡಿದವರು ಎಂದು ಹೇಳಿ. ಇನ್ನು ಅಷ್ಟಾವಕ್ರ ಮತ್ತು ಕುಬ್ಜೆಯರದು ಈ ರೀತಿಯ ಸಮಸ್ಯೆಯಲ್ಲ. ಅಷ್ಟಾವಕ್ರರು ಮಹಾಜ್ಞಾನಿವರೇಣ್ಯರು ಮತ್ತು ಕುಬ್ಜೆ, ತನ್ನ ಹಿಂದಿನ ಜನ್ಮದ ಪಾಪದ ಫಲವಾಗಿ ಗೂನಿಯಾಗಿ ಹುಟ್ಟಿ ಭಗವದ್ಭಕ್ತಿಯಿಂದ ಉನ್ನತಸ್ಥಾನವನ್ನು ಗಳಿಸಿದ ಪುಣ್ಯವಂತೆ. ಪಾಂಡು ಮಹಾರಾಜರಿಗೆ ಇದ್ದದ್ದು ತೊನ್ನುರೋಗವಲ್ಲ. ಪಾಂಡುರೋಗ. ಎರಡಕ್ಕೂ ವ್ಯತ್ಯಾಸವಿದೆ. ಶುದ್ಧ ಬಿಳುಪಿಗೂ ಬಿಳಿಚಿಕೊಂಡ ಬಿಳುಪಿಗೂ ವ್ಯತ್ಯಾಸ ಇರುತ್ತದೆಯಲ್ಲ ಆ ರೀತಿಯಾದದ್ದು. ಇನ್ನು ಗುಣಪಡಿಸಲಾಗದ ಖಾಯಿಲೆ ಎನ್ನುವ ಕಾರಣಕ್ಕೂ ಇದು ನಿಂದ್ಯವಾದುದಲ್ಲ. ಪೀತಪರ್ಣೀ ಎಂಬ ಮರ ತೊನ್ನುರೋಗಕ್ಕೆ ದಿವ್ಯೌಷಧಿ ಎಂಬ ಮಾತು ಆಯುರ್ವೇದದ ಗ್ರಂಥಗಳಲ್ಲಿದೆ. ಅದಕ್ಕಾಗಿ ಹತ್ತಾರು ರೀತಿಯ ಮದ್ದುಗಳನ್ನು ಶಾಂರ್ಗಧರಸಂಹಿತೆ ವಿಸ್ತಾರವಾಗಿ ತಿಳಿಸುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಶ್ರೀ ಬ್ರಹ್ಮಣ್ಯತೀರ್ಥಗುರುಸಾರ್ವಭೌಮರ, ಶ್ರೀ ಶ್ರೀಪಾದರಾಜಗುರುಸಾರ್ವಭೌಮರ ವೃಂದಾವನದ ಸೇವೆ, ಅವರ ಪಾದೋದಕದ ಪ್ರಾಶನ ಶ್ವೇತರೋಗವನ್ನು ನಿವಾರಿಸುವ ರಾಮಬಾಣ ಎಂದು ಸ್ವಯಂ ಶ್ರೀಮಚ್ಚಂದ್ರಿಕಾಚಾರ್ಯರು ಹೇಳಿದ್ದಾರೆ. ಕುಷ್ಠಶ್ವೇತೋರುಗುಲ್ಮಕ್ಷಯಕಠಿನತರವ್ಯಾಧಿವೈದ್ಯಾಧಿನಾಥೋ ಎಂದು. ಶ್ವೇತರೋಗ ಅಂಟುರೋಗವಲ್ಲ. ಶ್ವೇತರೋಗ ಪರಿಹರಿಸಲ್ಪಡಬಹುದಾದ ರೋಗ. ಶ್ವೇತರೋಗವಿದ್ದವರೂ ಅವಶ್ಯವಾಗಿ ಮುಕ್ತಿಯೋಗ್ಯರು, ಸಾಧನೆ ಮಾಡಿಕೊಳ್ಳಬೇಕು. ಆದರೆ ಶ್ವೇತರೋಗವಿದ್ದವರು ಮತ್ತೊಬ್ಬರ ಆಚಾರಕ್ಕೆ ತೊಂದರೆಯಾಗದಂತೆ ತಾವು ಅವಶ್ಯವಾಗಿ ಸಂಧ್ಯಾವಂದನೆ, ದೇವರಪೂಜೆ ಮುಂತಾದ ಸಾಧನೆಯನ್ನು ಮಾಡಿಕೊಳ್ಳಬೇಕು ಎನ್ನುವದಷ್ಟೇ ನಮ್ಮ ಆಶಯ. ಪ್ರಶ್ನೆಯಿದ್ದರೆ, ಖಂಡಿತ ಚರ್ಚೆಯನ್ನು ಮುಂದುವರೆಸೋಣ. ಖಂಡಿತವಾದ ಧ್ವನಿಯಲ್ಲಿ ಪ್ರಶ್ನೆ ಮಾಡುವ ನಿಮ್ಮ ಜಿಜ್ಞಾಸುತನ ನನಗೆ ಹಿಡಿಸಿದೆ, ರಾಮಮೂರ್ತಿಯವರೆ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ ತುಂಬ ಸಂತೋಷವಾಗುತ್ತದೆ. ನಿಮ್ಮ ವಿನಯ ಮತ್ತು ಖಡಾಖಂಡಿತ ಧ್ವನಿ ಎರಡೂ ಹೀಗೇ ಇರಲಿ. — ವಿಷ್ಣುದಾಸ ನಾಗೇಂದ್ರಾಚಾರ್ಯ --------------------------------- ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು..ನಮ್ಮಂತಹ ಪಾಮರರ ಪ್ರಶ್ನೆಗಳಿಗೂ ಸಾವಧಾನದಿಂದ ಉತ್ತರ ನೀಡುವ ತಮಗೆ ಪ್ರಣಾಮಗಳು..ಶ್ರೀ ಜಗನ್ನಾಥ ದಾಸರಾಯರು ಹೇಳಿದ ಹಾಗೆ " ಬಾಲಕನ ಕಲಭಾಷೆ ಜನನಿಯು ಕೇಳಿ ಸುಖ ಪಡುವಂತೆ" , ತಾವೂ ಸಹ ನಮ್ಮ ಅಲ್ಪ ಶಾಸ್ತ್ರ ಜ್ಞಾನಕ್ಕೆ ಪ್ರೀತಿ ತೋರಿಸುತ್ತಿರುವಿರಿ.. ವಿಷಯಕ್ಕೆ ಬರೋಣ- ನಾವು ಶಾಸ್ತ್ರ ದ ಪ್ರಕಾರ ಬದುಕಬೇಕು ನಿಜ..ಆ ರೀತಿಯಲ್ಲಿ ಅಂತಹವರನ್ನು ನಿಷೇಧಿಸಿದ್ದರೆ, ಖಂಡಿತವಾಗಿಯೂ ಮಾಡೋಣ.. ಆದರೆ ನೀವು ಆಚಾರ್ಯರ ಶ್ಲೋಕವನ್ನು ಮತ್ತು ಕುರುಡುತನದ ಉದಾಹರಣೆಗೆ ಕೊಟ್ಟಿರಿ..ಶ್ಲೋಕದಲ್ಲಿ ಕೇವಲ ನೇತ್ರ ರೋಗಿ ಎಂದು ಮಾತ್ರ ಇದೆ. ಯಾವ ನೇತ್ರ ರೋಗ ಎಂದು ಸ್ಪಷ್ಟವಾಗಿ ಇಲ್ಲ.. ಕಣ್ಣಿನ ನಾನಾ ರೋಗಗಳು ಇವೆ. ಕೆಲವು ಕುರುಡುತನ ಉಂಟುಮಾಡುತ್ತವೆ, ಕೆಲವು ದೃಷ್ಟಿ ಮಸುಕಾಗಿಸುತ್ತವೆ..ಇದರಲ್ಲಿ ಯಾವುದು ನಿಷಿದ್ಧ.. Shortsightedness ಇರುವ, ಕನ್ನಡಕ ಹಾಕುವ ಯತಿಗಳು, ಅನೇಕರು ಇದ್ದಾರೆ. ಇವರೆಲ್ಲ ನಿಷಿದ್ಧರೇ? ಒಬ್ಬ ಸ್ವಾಮಿಗಳು ಕಣ್ಣು ಪೊರೆಯ ಆಪರೇಷನ್ ಮಾಡಿಸಿಕೊಂಡರು..ಇದು ಶಾಸ್ತ್ರಕ್ಕೆ ಸಮ್ಮತವೆ? ಮತ್ತೊಬ್ಬ ಸ್ವಾಮಿಗಳು ಕಾನ್ಸರ್ ನಿಂದ ಬಳಲುತ್ತಿದ್ದರು. ಇವರು ಹಾಗಿದ್ದರೂ ಪಾಠಪ್ರವಚನ ಮಾಡುತ್ತಿದ್ದರು.. ಮಾಡಬಹುದೇ? ಇನ್ನೊಬ್ಬ ಯತಿಗಳಿಗೆ ಸನ್ಯಾಸ ದೀಕ್ಷೆಯ ಮುಂಚೆಯೇ ಆಪರೇಷನ್ ಆಗಿತ್ತು . ಅದರ ಬಗ್ಗೆ ಹೇಗೆ? ಅವರು ಸನ್ಯಾಸ ದೀಕ್ಷೆ ಸರಿಯೇ?.. ಇವರೆಲ್ಲರೂ ಗುರುವಿನ ಸ್ಥಾನದಲ್ಲಿ ನಿಂತು ಮಠಾಧಿಶರಾಗಿರುವಾಗ, ಇವೆಲ್ಲ ನಿಷಿದ್ಧ ಅಲ್ಲ ಎಂದು ಸಿದ್ಧಿಯಾಗುತ್ತದೆ..ಹಾಗಾದರೆ ಚರ್ಮ ಕಾಯಿಲೆ ಮಾತ್ರ ಯಾಕೆ ನಿಷಿದ್ಧ? ಹಾಗೆಯೇ ಇಂದಿನ ಕಲಿಯುಗದ ಜೀವನ ಬದಲಾಗಿದೆ. ಶಾಸ್ತ್ರ ದ ಪ್ರಕಾರ ಬದುಕುವುದಂತೂ ಅಸಾಧ್ಯವಾಗಿದೆ. ಹಾಗೆಂದ ಮಾತ್ರಕ್ಕೆ ಅದೇ ನೆಪವಾಗಿಟ್ಟುಕೊಂಡು ಶಾಸ್ತ್ರವನ್ನು ಗಾಳಿಗೆ ತೂರಬಾರದು.ಎಲ್ಲಿ ಸಾಧ್ಯವೋ ಅಲ್ಲಿ ಅನುಸರಿಸಿ, ಎಲ್ಲಿ ಸಾಧ್ಯವಿಲ್ಲವೋ ಅಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕು ಅಲ್ಲವೇ? ಉದಾ- ಹಿಂದೆ, ಯತಿಗಳು ಮೇನೆಯಲ್ಲಿ ( ಪಲ್ಲಕ್ಕಿ) ಸಂಚಾರ ಮಾಡುತ್ತಿದ್ದರು. ಈಗ ಕಾರು, ವಿಮಾನಗಳಲ್ಲಿ ಸಂಚಾರ ಮಾಡುತ್ತಾರೆ.. ಮುಂಚೆ ಇದ್ದ ತಾಳೆ ಗರಿಗಳು ಈಗ ಪೇಪರ್ ಆಗಿದೆ..ಪಾಠ ಪ್ರವಚನಗಳು ಈಗ mobile app ನಲ್ಲಿ ಲಭ್ಯ.ಅಲ್ಲವೇ? ಇದರಿಂದ ಶಾಸ್ತ್ರ ದ ಉಲ್ಲಂಘನೆ ಯಾಯಿತೇ? ಇಲ್ಲವಲ್ಲ..ಇವುಗಳಿಗೆ ಮಾತ್ರ ಪ್ರಗತಿ ಬೇಕು ಬೇರೆಯದಕ್ಕೆ ಬೇಡ ಎಂದಾದರೆ ಅದು ಅನುಕೂಲ ಸಿಂಧು ಆಗುತ್ತದೆ. ಅಲ್ಲವೇ? . ಚರ್ಚೆ ಹಳಿ ತಪ್ಪಿದ್ದರೆ ಕ್ಷಮಿಸಿ.. — ರಾಮಮೂರ್ತಿ ಕುಲಕರ್ಣಿ. ನಿಮ್ಮ ಈ ಪ್ರತಿಕ್ರಿಯೆಯಲ್ಲಿ ಮೂರು ಪ್ರಶ್ನೆಗಳಿವೆ. ಮೊದಲನೆಯ ಪ್ರಶ್ನೆ - ದೋಷ ಎಂದು ಉಲ್ಲೇಖಗೊಂಡ ಖಾಯಿಲೆಗಳಲ್ಲಿ ನೇತ್ರರೋಗ ಮುಂತಾದವೂ ಇವೆ. ಆ ರೀತಿ ಇದ್ದವರೂ ಸಹಿತ ಗುರುಗಳಾಗಿದ್ದಾರೆ. ಅವರಿಗಿಲ್ಲದ ನಿಷೇಧ ಬಿಳುಪುರೋಗಕ್ಕೆ ಏಕೆ ಎಂದು. ನೋಡಿ. ಶ್ರೀಮದಾಚಾರ್ಯರೇ ಸ್ಪಷ್ಟವಾಗಿ ಗುರುವಿನಲ್ಲಿ ದುರ್ಲಕ್ಷಣಗಳಿರಬಾರದು, ಸಲ್ಲಕ್ಷಣಭರಿತನಾಗಿರಬೇಕು ಎಂದು ಹೇಳಿದ್ದಾರೆ. ನಾವು ಸಮಗ್ರ ವಿಷಯಗಳಲ್ಲಿ ತಾರತಮ್ಯವನ್ನು ಒಪ್ಪುವವರು. ಹೀಗಾಗಿ ದುರ್ಲಕ್ಷಣಗಳಲ್ಲಿಯೂ ತಾರತಮ್ಯವಿದೆ. ರೋಗಗಳಲ್ಲಿಯೂ ತಾರತಮ್ಯವಿದೆ. ಇದಕ್ಕೆ ಕಾರಣವಾದ ಪಾಪಗಳಲ್ಲಿಯೂ ತಾರತಮ್ಯವಿದೆ. ಒಂದು ಇರುವೆಯನ್ನು ಕೊಂದರೂ ಪಾಪವೇ. ನಾಯಿಯನ್ನು ಕೊಂದರೂ ಪಾಪವೇ. ಹಸುವನ್ನು ಕೊಂದರೂ ಪಾಪವೇ. ಬ್ರಾಹ್ಮಣನನ್ನು ಕೊಂದರೂ ಪಾಪವೇ. ಆದರೆ ಪಾಪದಲ್ಲಿ ವ್ಯತ್ಯಾಸವಿದೆ. ಇರುವೆಯನ್ನು ಕೊಂದರೆ ತಲೆನೋವು, ಕೈನೋವು, ಕಾಲುನೋವು ಬರುತ್ತದೆ ಅಷ್ಟೆ. ನಾಯಿಯನ್ನು ಕೊಂದರೆ ನಾಯಿಯಾಗಿಯೇ ಹುಟ್ಟಿ ಆ ರೀತಿಯ ಸಾವು ಪಡೆಯುತ್ತೇವೆ. ಗೋವನ್ನು ಮತ್ತು ಬ್ರಾಹ್ಮಣನನ್ನು ಕೊಂದರೆ ಅಪಾರವಾದ ಪಾಪ. ಹನ್ನೆರಡು ವರ್ಷ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಮಾಡಿಕೊಳ್ಳದಿದ್ದಲ್ಲಿ ಅತೀಘೋರ ನರಕ. ಮುಗಿದ ಮೇಲೆ ಈ ರೀತಿಯ ದೋಷಗಳು. ಹಾಗೆ ನೇತ್ರರೋಗಕ್ಕೆ ಕಾರಣವಾದದ್ದು ಪುಸ್ತಕದ ಕಳ್ಳತನ ಮುಂತಾದವು. ಬ್ರಹ್ಮಹತ್ಯೆಗಿಂತ ಕೆಳಗಿನ ಸ್ತರದ ಪಾಪಗಳು. ಹೀಗಾಗಿ ಶ್ವೇತರೋಗಕ್ಕೆ ಇರುವ ನಿಷೇಧ ಪ್ರಬಲವಾದದ್ದು. ನೇತ್ರರೋಗಕ್ಕೆ ಇರುವ ರೋಗ ಅದಕ್ಕಿಂತ ಕೆಳಗಿನ ಸ್ತರದ್ದು. ಮತ್ತೂ, ಮೇಲಿನ ತಂತ್ರಸಾರದ ವಚನದಲ್ಲಿ ಗುರುವಾಗಲು ವಿರೋಧಿಯಾದ ಎಲ್ಲ ಖಾಯಿಲೆಗಳ ಉಲ್ಲೇಖಗಳಿವೆ. ಇದನ್ನು ನಾವು ವಿವೇಕದಿಂದ ಅರ್ಥ ಮಾಡಿಕೊಳ್ಳಬೇಕು. ತೊನ್ನು ಕುಷ್ಠ ಕಪಟತನ ಮುಂತಾದವು ಎಲ್ಲ ಗುರುಗಳಿಗೂ ಅನ್ವಯಿಸುವಂತಹುದ್ದು. ಮುಖ್ಯವಾಗಿ ಬ್ರಹ್ಮತತ್ವಬೋಧನೆಯನ್ನು ಮಾಡುವ ಗುರುಗಳಿಗೆ. ನೇತ್ರರೋಗ ಮುಂತಾದವು ಶಿಲ್ಪಶಾಸ್ತ್ರ, ಧನುರ್ವಿದ್ಯೆ, ವೈದ್ಯಶಾಸ್ತ್ರ ಮುಂತಾದವನ್ನು ಬೋಧಿಸುವ ಗುರುಗಳಿಗೆ. ನಮ್ಮ ಪ್ರಾಚೀನಕಾಲದಲ್ಲಿ ಇವನ್ನೂ ಸಹ ವ್ಯವಸ್ಥಿತವಾದ ಕ್ರಮದಲ್ಲಿ ತಿಳಿಸಲಾಗುತ್ತಿತ್ತು. ಶಿಲ್ಪ, ಯುದ್ಧ, ಮತ್ತು ವೈದ್ಯಾದಿ ವಿದ್ಯೆಗಳಲ್ಲಿ ಕಣ್ಣಿಗೆ ಅತ್ಯಧಿಕವಾದ ಸ್ಥಾನವಿದೆ ಎನ್ನುವದರಲ್ಲಿ ವಿವಾದವಿಲ್ಲ. ಹೀಗಾಗಿ ಅದನ್ನು ನಾವು ಅಲ್ಲಿಗೆ ಅನ್ವಯ ಮಾಡಿಕೊಳ್ಳಬೇಕು. ವಸ್ತುಸ್ಥಿತಿಯಲ್ಲಿ ಅಪರೋಕ್ಷಜ್ಞಾನಪ್ರದರಾದ ಗುರುಗಳಲ್ಲಿ ಮತ್ತು ಯಾರ ವಿದ್ಯೋಪದೇಶದಿಂದ ಮಹತ್ತರ ಸಿದ್ಧಿಯಾಗುತ್ತದೆಯೋ ಅಂತಹ ಮಹಾಗುರುಗಳಲ್ಲಿ ಈ ನೇತ್ರರೋಗ, ತೊದಲು ಮುಂತಾದವು ಇರಬಾರದು ಎಂದು ನ್ಯಾಯಸುಧಾದಲ್ಲಿಯೂ ಟೀಕಾಕೃತ್ಪಾದರು ತಿಳಿಸುತ್ತಾರೆ. ಗುರುಗಳಾದವರಲ್ಲಿ ಕರಣಪಾಟವ ಇರಬೇಕು ಎಂದು. ಹೀಗಾಗಿ ದೋಷವಿಹೀನರಾದವರೇ ಗುರುಗಳಾಗಬೇಕು ಸಂಶಯವಿಲ್ಲ. ಕನ್ನಡಕ ಮುಂತಾದವನ್ನು ಹಾಕುವದು, ಅಂತ್ಯಕಾಲದಲ್ಲಿ ಖಾಯಿಲೆಗಳನ್ನು ಪಡೆಯುವದು ಮಹತ್ತರ ದೋಷವಲ್ಲ. ಆದರೆ, ತೊನ್ನು, ಕುಷ್ಠ ಇತ್ಯಾದಿಗಳು ಬ್ರಹ್ಮಹತ್ಯಾದಿಗಳ ಸೂಚಕ. ಬ್ರಹ್ಮಹತ್ಯೆ ಅತ್ಯಂತ ನಿಂದ್ಯವಾದ ಕರ್ಮವಾದ್ದರಿಂದ ಗುರುಗಳನ್ನಾಗಿ ಸ್ವೀಕರಿಸುವದರಲ್ಲಿ ಶಾಸ್ತ್ರ ನಿಷೇಧಿಸುತ್ತದೆ. ಮತ್ತು, ನಾನು ಮೊದಲೇ ಹೇಳಿದಂತೆ ಈ ರೀತಿಯ ವಿಷಯಗಳನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಬಾರದು. ವಸ್ತುನಿಷ್ಠವಾಗಿ ತೆಗೆದಕೊಳ್ಳಬೇಕು. ಹಾಗೂ, ಅತ್ಯಂತ ಮುಖ್ಯವಾದ ವಿಷಯ ಎಂದರೆ, ತೊನ್ನು ಮುಂತಾದ ರೋಗ ನಮಗೇ ಬಂದಾಗ ನಾವು ಯಾವ ರೀತಿ ಎಚ್ಚರದಲ್ಲಿರಬೇಕು ಎನ್ನುವದನ್ನು ನಾವು ಕಲಿಯಬೇಕು. ಶಾಸ್ತ್ರವನ್ನು ಅನುಸರಿಸಿದರೇ ನಮಗೆ ಮುಕ್ತಿ. ಶಾಸ್ತ್ರವನ್ನು ಉಲ್ಲಂಘಿಸಿದರೆ ಸರ್ವಥಾ ಮುಕ್ತಿಯಿಲ್ಲ. ಹೀಗಾಗಿ ಅದನ್ನು ಅನುಸರಿಸತಕ್ಕದ್ದು. ಇದಕ್ಕಿಂತ ಮುಖ್ಯವಾದ ಪಾಠ ಎಂದರೆ ತೊನ್ನಿರುವವರನ್ನು ಹೀನಾಯವಾಗಿ ಕಾಣಬಾರದು. ಅವರನ್ನು ಮಡಿಗೆ ತೆಗೆದುಕೊಳ್ಳುವದಿಲ್ಲ ಅಷ್ಟೆ. ಮಾನವೀಯತೆಯನ್ನು ಮೀರಿ, ತುಚ್ಛವಾಗಿ ವರ್ತಿಸುವದು ನಮ್ಮ ಮನುಷ್ಯತ್ವಕ್ಕೇ ಕಲಂಕ ನೀಡುವ ಚರ್ಯೆ. ಅವರನ್ನು ನಿಂದಿಸುವದಾಗಲೀ, ಹಚಹಚ ಎಂದು ದೂರ ಮಾಡುವದಾಗಲೀ ಅಕ್ಷಮ್ಯ ಅಪರಾಧ. ಅವರಿಗಿರುವ ಸ್ಥಾನದಲ್ಲಿ ಅವರನ್ನು ಗೌರವಿಸಲೇ ಬೇಕು. ಅವರನ್ನು ಮಾನಸಿಕವಾಗಿಯಾಗಲೀ, ಶಾರೀರಕವಾಗಿಯಾಗಲೀ ಹಿಂಸಿಸಿದರೆ ನಮಗೆ ಶಿಕ್ಷೆ ನಿಶ್ಚಿತ. ಆ ಎಚ್ಚರ ಇರಲೇಬೇಕು. ಎರಡನೆಯ ಪ್ರಶ್ನೆ - ಅನುಸರಿಸಲು ಸಾಧ್ಯವಿಲ್ಲದ ಶಾಸ್ತ್ರವನ್ನು ಬದಲಾಯಿಸಬಾರದೇಕೆ ಎಂದು. ಈ ರೀತಿ ಪ್ರಶ್ನೆ ಮಾಡುವವರಿಗೆಲ್ಲ ನನ್ನ ಪ್ರಶ್ನೆ — ಬದಲಾಯಿಸಲು ನಾವ್ಯಾರು? ವೇದಗಳ ಪರಿಪೂರ್ಣ ಜ್ಞಾನವಿರುವ ಸರ್ವಜ್ಞರಾದ ವಸಿಷ್ಠಾದಿ ಮಹರ್ಷಿಗಳು ಇದನ್ನು ಪಾಲಿಸಿ, ಇದನ್ನು ಪಾಲಿಸಬೇಡಿ ಎಂದು ನಿರ್ಧರಿಸುವ ಮಹಾನುಭಾವರು. ನಮ್ಮ ಯೋಗ್ಯತೆಯನ್ನು ತಿಳಿದು ಅವರು ಸ್ಮೃತಿಗಳನ್ನು ರಚಿಸಿದ್ದಾರೆ. ಶಕ್ಯವಿದ್ದಷ್ಟನ್ನು ಮಾಡಲೇಬೇಕು. ಮಾಡಲಾಗದೆ ಇರುವ ಧರ್ಮದ ಕುರಿತು ಸಂಕಟವಿರಬೇಕು, ಮಾಡಲಿಕ್ಕಾಗುತ್ತಿಲ್ಲವಲ್ಲ ಎಂದು ಹಾಗೂ, ಮುಂದೆ ಅದನ್ನು ಮಾಡುವ ಶಕ್ತಿಯನ್ನು ದಯಪಾಲಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತಿರಬೇಕು. ಹೊರತು, ಧರ್ಮಶಾಸ್ತ್ರವನ್ನೇ ತಿದ್ದುಪಡಿ ಮಾಡುವ ಅಧಿಕಾರ ನಮಗಿಲ್ಲ. ನಾವು ಮಾಡಿದ್ದು ಧರ್ಮವೂ ಆಗುವದಿಲ್ಲ. ಮತ್ತು, ನನಗೆ ಸಾಧ್ಯವಾಗದ ಧರ್ಮ ನೀವು ಅನುಷ್ಠಾನ ಮಾಡಬಹುದು. ನಿಮಗೆ ಮಾಡಲಿಕ್ಕಾಗದ್ದನ್ನು ಮತ್ತೊಬ್ಬರು ಮಾಡಬಹುದು. ಹೀಗಿರುವಾಗ, ನನಗೆ ಸಾಧ್ಯವಾಗಿಲ್ಲ ಎಂದು ನಾನು ಅದನ್ನು ಬದಲಾಯಿಸಿ ಧರ್ಮಶಾಸ್ತ್ರ ಬರೆದರೆ ಮಾಡಲಿಕ್ಕೆ ಸಾಧ್ಯವಿರುವವರು ಏನು ಮಾಡಬೇಕು. ಹೀಗಾಗಿ ಈ ಕ್ರಮ, ಯುಕ್ತಿಗೂ ವಿರುದ್ಧ. ಮತ್ತು ಪ್ರಾಕ್ಟಿಕಲ್ ಆಗಲು ಸಾಧ್ಯವಿಲ್ಲ. ಮೂರನೆಯ ಪ್ರಶ್ನೆ - ಕೆಲವಕ್ಕೆ ಪ್ರಗತಿ (ಬದಲಾವಣೆ) ನೀವೇ ಓಪ್ಪಿದ್ದೀರಿ. ಇಲ್ಲೇಕೆ ಒಪ್ಪಬಾರದು. ನೋಡಿ, ಕಲಿ ನಮ್ಮ ಮೇಲೆ ಸಾವಿರ ರೀತಿ ಆಕ್ರಮಣ ಮಾಡುತ್ತಿದ್ದಾನೆ. ಹೀಗಾಗಿ ಏನಾದರೂ ಮಾಡಿ ಧರ್ಮವನ್ನು ಉಳಿಸಬೇಕಾಗಿದೆ. ಹೀಗಾಗಿ ಯಾವುದು ಧರ್ಮಕ್ಕೆ ತೀರ ವಿರುದ್ದವಲ್ಲವೋ ಆ ಮಾರ್ಗವನ್ನು ನಾವು ಅನುಸರಿಸಿ ಶಾಸ್ತ್ರವನ್ನು ಉಳಿಸಬೇಕಾಗಿದೆ. ಅದಕ್ಕಾಗಿ ಈ ಮೊಬೈಲು, ಇಂಟರ್ನೆಟ್ಟುಗಳನ್ನು ಎಷ್ಟು ಬೇಕೋ ಅಷ್ಟನ್ನು ಬಳಸಬೇಕು. ಶಾಸ್ತ್ರವು ನಿಷಿದ್ಧ ಮಾಡಿದ್ದನ್ನೇ ನಾವು ಮಾಡಿದರೆ ತಪ್ಪು. ಆದರೆ ಎಷ್ಟು ಹೇಳಬಹುದೋ, ಯಾವುದನ್ನು ಯಾವ ರೀತಿ ಹೇಳಬಹುದೋ ಅಷ್ಟನ್ನು ಮಾತ್ರ ಈ ಮಾಧ್ಯಮದಲ್ಲಿ ಹೇಳುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ನೀವು ಗಮನಿಸಿರ ಬಹುದು. ಅಂಭೃಣೀಸೂಕ್ತದ ಅರ್ಥಾನುಸಂಧಾನದ ಉಪನ್ಯಾಸದಲ್ಲಿ ಅದನ್ನು ಕೇಳಬೇಕಾದರೇ ಸಾಕಷ್ಟು ಕಟ್ಟುಪಾಡುಗಳನ್ನು ನಾನೇ ಹಾಕಿದ್ದೇನೆ. ಕಾರಣ, ವೇದಗಳು, ಉಪನಿಷತ್ತುಗಳು, ಮಂತ್ರಗಳು ಅಷ್ಟು ಸುಲಭವಾಗಿ ನೀಡಬಹುದಾದ ಗ್ರಂಥಗಳಲ್ಲ, ಆದ್ದರಿಂದ ಬ್ರಹ್ಮಸೂತ್ರಗಳು ಹೇಳಿದ ಅನೇಕ ಎಚ್ಚರದೊಂದಿಗೆ ಈ ಮಾಧ್ಯಮವನ್ನು ಬಳಸಬೇಕು. ನಾನಂತೂ ಈ ಎಚ್ಚರದೊಂದಿಗೇ ವಿಶ್ವನಂದಿನಿಯ ಜ್ಞಾನಕಾರ್ಯವನ್ನು ಮಾಡುತ್ತಿದ್ದೇನೆ ಎಂದು ವಿನಮ್ರವಾಗಿ ತಿಳಿಸುತ್ತೇನೆ. ನಾನು ಮೇಲಿಂದ ಮೇಲೆ ಹೇಳುವ ಮಾತು — ಶ್ರೀಮದಾಚಾರ್ಯರ ಶಾಸ್ತ್ರ ಸಮುದ್ರದಿಂದ ತಂದ ಒಂದು ಬೊಗಸೆಯ ನೀರಿನಲ್ಲಿನ ಒಂದು ಬಿಂದು ಈ ವಿಶ್ವನಂದಿನಿ ಎಂದು. ಇದರಿಂದ ಮಧ್ವಶಾಸ್ತ್ರದಲ್ಲಿ ರುಚಿ ಹುಟ್ಟಿ ಶಾಸ್ತ್ರೀಯವಾದ ಕ್ರಮದಲ್ಲಿ ನೀವೆಲ್ಲ ಅಧ್ಯಯ ಮಾಡಬೇಕೆಂಬುದೇ ನನ್ನ ಆಶಯ. ಹೀಗಾಗಿ, ಯಾವುದು ಮಹತ್ತರ ಧರ್ಮಕ್ಕೆ ವಿರುದ್ದವಲ್ಲವೋ, ಯಾವುದು ಪೂರ್ಣ ನಿಷಿದ್ಧವಲ್ಲವೋ ಅದನ್ನು ಅದನ್ನು ಅನುಸರಿಸೋಣ. ಯಾವುದು ನಿಷಿದ್ಧವೋ, ಯಾವ ನಿಷೇಧಕ್ಕೆ ಒಂದು ಮಹತ್ತರ ಕಾರಣವಿದೆಯೋ (ಬಿಳುಪಿನ ವಿಷಯದದಲ್ಲಿ ಬ್ರಹ್ಮಹತ್ಯೆ ಮತ್ತು ಗೋಹತ್ಯೆಗಳು) ಆ ನಿಷೇಧವನ್ನು ಪಾಲಿಸೋಣ ಎನ್ನುವದು ಒಟ್ಟಾರೆ ನನ್ನ ಮಾತಿನ ತಾತ್ಪರ್ಯ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
6007 Views

Comments

(You can only view comments here. If you want to write a comment please download the app.)
 • SUYAMINDRA KOTEKAL,Bangalore

  8:52 AM , 20/07/2018

  ಆಚಾರ್ಯರಿಗೆ ನಮಸ್ಕಾರ. ಈ ಚರ್ಚೆಯನ್ನು ಓದಿದಾಗ ನನಗೆ ನನ್ನ ಅನಿಸಿಕೆ ಇಲ್ಲಿ ಹಂಚಿಕೊಳ್ಳ ಬೇಕೆಂದು ಬರೆಯುತ್ತಿದ್ದೇನೆ. ತಪ್ಪಿದಲ್ಲಿ ಕ್ಷಮಿಸಿ.
  ಸಮಾಜದಲ್ಲಿ ಅನೇಕ ರೋಗಿಗಳು ಇದ್ದು, ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ತೊನ್ನು ರೋಗವೇ ಅಲ್ಲ. ಏಕೆಂದರೆ ಇದು ಅವರನ್ನು ಪೀಡಿಸುವುದಿಲ್ಲ. ಅದಕ್ಕಾಗಿ ಅವರು ಔಷಧಿ ತೆಗೆದು ಕೊಳ್ಳುವುದುಇಲ್ಲ. ಕೇವಲ ಬಾಹ್ಯ ಸೌಂದರ್ಯ ಮಾತ್ರ ಇರುವುದಿಲ್ಲ ಅಷ್ಟೇ. ಉಳಿದಂತೆ ಎಲ್ಲ ರೀತಿಯ ಆರೋಗ್ಯ ಚೆನ್ನಾಗಿರುತ್ತದೆ. ಹಾಗಾಗಿ ಅವರು ಅಷ್ಟು ವ್ಯಥೆ ಪಡದೇ ಆ ಶ್ರೀ ಹರಿಯ ಸೇವೆಯನ್ನು ಮಾಡುವುದರಿಂದ ಅವರ ಸಾಧನೆ ಆಗುತ್ತೆ ಅಲ್ಲವೇ ಆಚಾರ್ಯರೇ
  
  SUYAMINDRA.K

  Vishnudasa Nagendracharya

  ಅವರ ವೈಯಕ್ತಿಕ ಸಾಧನೆಗೆ ಶಾಸ್ತ್ರದ ಯಾವ ವಿರೋಧವೂ ಇಲ್ಲ. ಪ್ರತಿಯೊಬ್ಬರೂ ಅವರಿಗೆ ಯೋಗ್ಯವಾದ ಸಾಧನೆಯನ್ನು ಮಾಡಲೇಬೇಕು. 
 • manjulapanduranga,mysore

  6:41 AM , 11/06/2018

  .
 • Venkataramu,Bangalore

  2:06 PM , 10/02/2018

  By
 • Satish Pralhad,

  11:07 PM, 02/10/2017

  Gurugale,Nanna hesaru Satish anta,Rahu dasha dinda tumba nodeddene parihar tilisi
 • sudha,bangalore

  9:00 PM , 23/09/2017

  Namaskara acharyare .. ee bilupu roga iruvavarige saha pankti kodalu kelavaru nirakarisuttare adu manassige tumba besaravaguttade.. shastrada prakara avarige sahapankti kodabahude?
 • mangala gowri,Bangalore

  9:35 AM , 08/09/2017

  Sariyagi helidiri acharyare navu palisalu sadhyavila vendu sastravanu badalaisalu sadhyavila namma anukulake thakanthe badalaisutha hodare sastrave huliyuvudila mundina piligege
 • ಗುರುರಾಜಾಚಾರ್ಯ ಕೃ. ಪುಣ್ಯವಂತ.,

  11:38 AM, 27/08/2017

  ಒಳ್ಳೆಯ ವಿವರಣೆ. ನಮಸ್ಕಾರಗಳು.
 • Lakshmi,

  7:37 PM , 25/07/2017

  Eee rogakke Maddu haagu karmada moola haagu parihara helidiri. Dayavittu yaava yaava paapakke yaaava yaava karmaphala haagu adara prayaschittada bagge dayamaadi thilisi. Esto dhuskarmagalu maadutheve aadare adakke prayaschitta maadikollalu hiriyaru gnaangalalli helikollalu kastavaaguthade.. heegagi mukyavaada panchamaha paatakagalu n 16 Maha paaagala bagge thilisi acharya.... 
  Ee kaladalli Gotho illadeyo esto paapagalannu sahjavaagi maadutheve. Idara gnana athi avashyaka.
 • Rammurthy Kulkarni,

  2:20 PM , 22/07/2017

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು..ನಮ್ಮಂತಹ ಪಾಮರರ ಪ್ರಶ್ನೆಗಳಿಗೂ ಸಾವಧಾನದಿಂದ ಉತ್ತರ ನೀಡುವ ತಮಗೆ ಪ್ರಣಾಮಗಳು..ಶ್ರೀ ಜಗನ್ನಾಥ ದಾಸರಾಯರು ಹೇಳಿದ ಹಾಗೆ " ಬಾಲಕನ ಕಲಭಾಷೆ ಜನನಿಯು ಕೇಳಿ ಸುಖ ಪಡುವಂತೆ" , ತಾವೂ ಸಹ ನಮ್ಮ ಅಲ್ಪ ಶಾಸ್ತ್ರ ಜ್ಞಾನಕ್ಕೆ ಪ್ರೀತಿ ತೋರಿಸುತ್ತಿರುವಿರಿ..
  
  ವಿಷಯಕ್ಕೆ ಬರೋಣ- ನಾವು ಶಾಸ್ತ್ರ ದ ಪ್ರಕಾರ ಬದುಕಬೇಕು ನಿಜ..ಆ ರೀತಿಯಲ್ಲಿ ಅಂತಹವರನ್ನು ನಿಷೇಧಿಸಿದ್ದರೆ, ಖಂಡಿತವಾಗಿಯೂ ಮಾಡೋಣ.. ಆದರೆ ನೀವು ಆಚಾರ್ಯರ ಶ್ಲೋಕವನ್ನು ಮತ್ತು ಕುರುಡುತನದ ಉದಾಹರಣೆಗೆ ಕೊಟ್ಟಿರಿ..ಶ್ಲೋಕದಲ್ಲಿ ಕೇವಲ ನೇತ್ರ ರೋಗಿ ಎಂದು ಮಾತ್ರ ಇದೆ. ಯಾವ ನೇತ್ರ ರೋಗ ಎಂದು ಸ್ಪಷ್ಟವಾಗಿ ಇಲ್ಲ.. ಕಣ್ಣಿನ ನಾನಾ ರೋಗಗಳು ಇವೆ. ಕೆಲವು ಕುರುಡುತನ ಉಂಟುಮಾಡುತ್ತವೆ, ಕೆಲವು ದೃಷ್ಟಿ ಮಸುಕಾಗಿಸುತ್ತವೆ..ಇದರಲ್ಲಿ ಯಾವುದು ನಿಷಿದ್ಧ.. Shortsightedness ಇರುವ, ಕನ್ನಡಕ ಹಾಕುವ ಯತಿಗಳು, ಉಡುಪಿಯ, ಶಿರೂರು ಮಠದಲ್ಲಿ , ಅದಮಾರು ಕಿರಿಯ ಯತಿಗಳು, ಸೋಸಲೆ ಮಠದ ವಿದ್ಯಾಮನೋಹರರು ಇದ್ದಾರೆ. ಇವರೆಲ್ಲ ನಿಷಿದ್ಧರೇ? ಪೇಜಾವರರು ಕಣ್ಣು ಪೊರೆಯ ಆಪರೇಷನ್ ಮಾಡಿಸಿಕೊಂಡರು..ಇದು ಶಾಸ್ತ್ರಕ್ಕೆ ಸಮ್ಮತವೆ? ಪಲಿಮಾರು ಮಠದ ವಿದ್ಯಾಮಾನ್ಯರು ಕಾನ್ಸರ್ ನಿಂದ ಬಳಲುತ್ತಿದ್ದರು. ಇವರು 
  ಹಾಗಿದ್ದರೂ ಪಾಠಪ್ರವಚನ ಮಾಡುತ್ತಿದ್ದರು.. ಮಾಡಬಹುದೇ? ನಮ್ಮ ಮಠವಾದ ಮಧ್ವಕಣ್ವ ಮಠದ ಈ ಹಿಂದಿನ ಯತಿಗಳಿಗೆ ಸನ್ಯಾಸ ದೀಕ್ಷೆಯ ಮುಂಚೆಯೇ ಆಪರೇಷನ್ ಆಗಿತ್ತು . ಅದರ ಬಗ್ಗೆ ಹೇಗೆ? ಅವರು ಸನ್ಯಾಸ ದೀಕ್ಷೆ ಸರಿಯೇ?.. ಇವರೆಲ್ಲರೂ ಗುರುವಿನ ಸ್ಥಾನದಲ್ಲಿ ನಿಂತು ಮಠಾಧಿಶರಾಗಿರುವಾಗ, ಇವೆಲ್ಲ ನಿಷಿದ್ಧ ಅಲ್ಲ ಎಂದು ಸಿದ್ಧಿಯಾಗುತ್ತದೆ..ಹಾಗಾದರೆ ಚರ್ಮ ಕಾಯಿಲೆ ಮಾತ್ರ ಯಾಕೆ ನಿಷಿದ್ಧ? ಹಾಗೆಯೇ ಇಂದಿನ ಕಲಿಯುಗದ ಜೀವನ ಬದಲಾಗಿದೆ. ಶಾಸ್ತ್ರ ದ ಪ್ರಕಾರ ಬದುಕುವುದಂತೂ ಅಸಾಧ್ಯವಾಗಿದೆ. ಹಾಗೆಂದ ಮಾತ್ರಕ್ಕೆ ಅದೇ ನೆಪವಾಗಿಟ್ಟುಕೊಂಡು ಶಾಸ್ತ್ರವನ್ನು ಗಾಳಿಗೆ ತೂರಬಾರದು.ಎಲ್ಲಿ ಸಾಧ್ಯವೋ ಅಲ್ಲಿ ಅನುಸರಿಸಿ, ಎಲ್ಲಿ ಸಾಧ್ಯವಿಲ್ಲವೋ ಅಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕು ಅಲ್ಲವೇ? ಉದಾ- ಹಿಂದೆ, ಯತಿಗಳು ಮೇನೆಯಲ್ಲಿ ( ಪಲ್ಲಕ್ಕಿ) ಸಂಚಾರ ಮಾಡುತ್ತಿದ್ದರು. ಈಗ ಕಾರು, ವಿಮಾನಗಳಲ್ಲಿ ಸಂಚಾರ ಮಾಡುತ್ತಾರೆ..ಮುಂಚೆ ಇದ್ದ ತಾಳೆ ಗರಿಗಳು ಈಗ ಪೇಪರ್ ಆಗಿದೆ..ಪಾಠ ಪ್ರವಚನಗಳು ಈಗ mobile app ನಲ್ಲಿ ಲಭ್ಯ.ಅಲ್ಲವೇ? ಇದರಿಂದ ಶಾಸ್ತ್ರ ದ ಉಲ್ಲಂಘನೆ ಯಾಯಿತೇ? ಇಲ್ಲವಲ್ಲ..ಇವುಗಳಿಗೆ ಮಾತ್ರ ಪ್ರಗತಿ ಬೇಕು ಬೇರೆಯದಕ್ಕೆ ಬೇಡ ಎಂದಾದರೆ ಅದು ಅನುಕೂಲ ಸಿಂಧು ಆಗುತ್ತದೆ. ಅಲ್ಲವೇ? .ಚರ್ಚೆ ಹಳಿ ತಪ್ಪಿದ್ದರೆ ಕ್ಷಮಿಸಿ..

  Vishnudasa Nagendracharya

  ಚರ್ಚೆಗೆ ಮುನ್ನ ಒಂದಷ್ಟು ಎಚ್ಚರಗಳನ್ನು ಪಾಲಿಸೋಣ. 
  
  ಯಾವ ಯತಿಗಳ ಹೆಸರು ಹೇಳಿ ಹೀಗಿತ್ತು ಎನ್ನುವದು ಬೇಡ. ಅದು ಇಲ್ಲಿ ಅನವಶ್ಯಕ. ಈ ವ್ಯಕ್ತಿ ಗುರು ಹೌದು ಅಲ್ಲವೋ ಎನ್ನುವದು ನಮ್ಮ ಚರ್ಚೆಯಲ್ಲ, ನಮ್ಮ ಚರ್ಚೆಯ ವಿಷಯ - ಶಾಸ್ತ್ರನಿಷಿದ್ಧವಾದ ಖಾಯಿಲೆಗಳಿದ್ದಾಗ ಗುರುವಾಗಬಲ್ಲನೇ ಇಲ್ಲವೇ ಎನ್ನುವದು. 
  
  ಎರಡನೆಯದು, ನಾನು ನೀಡಿರುವದು ಆಚಾರ್ಯರ ವಚನವನ್ನಲ್ಲ. ತಂತ್ರಸಾರ ಎನ್ನುವ ಗ್ರಂಥದ ವಚನ. ಆಚಾರ್ಯರ ಗ್ರಂಥ ತಂತ್ರಸಾರಸಂಗ್ರಹ, ತಂತ್ರಸಾರ ಎನ್ನುವದು ಮೂಲಗ್ರಂಥ. ಭಗವಂತ ರಚಿಸಿದ್ದು. 
  
  ನಿಮ್ಮ ಪ್ರತಿಕ್ರಿಯೆಯಲ್ಲಿ ಶ್ರೀಪಾದಂಗಳ ಹೆಸರುಗಳನ್ನು ತೆಗೆದು ಮತ್ತು ವಚನದ ವಾಕ್ಯವನ್ನು ಸರಿ ಪಡಿಸಿ ಮೂಲ ಲೇಖನದಲ್ಲಿಯೇ ಸೇರಿಸಿ ಪ್ರಕಟಿಸಿದ್ಧೇನೆ. ಓದುಗರಿಗೆ ಸುಲಭವಾಗುತ್ತದೆ. 
  
  
  
 • Pramod,Ballari

  11:12 PM, 22/07/2017

  Acharyarige Namaskaragalu..Dinadinda dinakke, nimma lekhanalanagala Vishaya hagu Vastu nishtateyinda, odugaralli uttama jignaseya koutuka mooduttide. Ee  payana heegeye beleyuttirali ennuva haraike..
 • Rammurthy Kulkarni,

  10:24 PM, 22/07/2017

  ತುಂಬಾ ಧನ್ಯವಾದಗಳು.
 • Rammurthy Kulkarni,

  6:13 PM , 22/07/2017

  ಯತಿಗಳ ಹೆಸರು ಉಲ್ಲೇಖಿಸಿದ್ದಕ್ಕಾಗಿ ಕ್ಷಮೆ ಇರಲಿ..ಇಲ್ಲಿ ಕೇವಲ ನನ್ನ ಅನಿಸಿಕೆ, ಅಭಿಪ್ರಾಯವನ್ನು ಮಾತ್ರ ತಿಳಿಸುತ್ತಿದ್ದೇನೆ..ಇದನ್ನು ಹೀಗೆಯೇ ಮಾಡಬೇಕು ಎಂಬುದು ನನ್ನ ವಾದವಲ್ಲ..ದಯಮಾಡಿ ಅನ್ಯಥಾ ಭಾವಿಸಬಾರದು. ಈ ವಿಶ್ವನಂದಿನಿಯಿಂದ ನಮ್ಮ ಜ್ಣಾನವು ಹೆಚ್ಚಿದೆ..ಅದೇ ರೀತಿ ನಮ್ಮ ವಿಚಾರಗಳನ್ನು ಒರೆಗೆ ಹಚ್ಚಿ, ಮಂಥನ ಮಾಡುವ , ಆ ಮೂಲಕ ಸರಿಯಾದ ಮಾಹಿತಿ ಹೊರಬರುವ ಕಾರ್ಯ ನಡೆಯುತ್ತಿದೆ..ಧನ್ಯವಾದಗಳು..
 • SRINIDHI,Bengaluru

  3:12 PM , 22/07/2017

  Acharyare, Ramamoorthy yavare namaskara... 
  "Yavudu sadhyavo adu madabeku" andare shastrada maathugalannu meeri meeri Munde ondu Dina shastrada yawa vishayagalu uliyadantaagi bidatte allave.... Jagattu badalaguttide howdu adare navu shastrada vidhi vidaanagalannu Tiruchi Namma anukoolakke takka haage madikolluvudu sariye... Illi Acharyaru shastrada maathugalannu torisuva prayatna madutiddare, tatwa nishturavada maathugalannu tilisuttiddare... Idaralli Namma samajadalli iruva Tappu paddhatigalannu sari padisikolluva prayatna navu rudisikollabekallawe.??
  
  Krishnarapanamastu