Prashnottara - VNP096

ನಾಗರ ಚೌತಿ ಮತ್ತು ಪಂಚಮಿಯ ಆಚರಣೆ ಎಂದು?


					 	

ನಾಗಚತುರ್ಥಿ, ನಾಗಪಂಚಮಿ ಯಾವಾಗ ಮಾಡಬೇಕು. ಕೆಲವರು ಬುಧ-ಗುರುವಾರ ಅಂತ, ಕೆಲವರು ಗುರು-ಶುಕ್ರವಾರ ಅಂತ ಹೇಳಿದರು. ದಯವಿಟ್ಟು ತಿಳಿಸಿ. — ಜನಾರ್ದನ್. ತಿರುಪತಿ.


Download Article Share to facebook View Comments
4983 Views

Comments

(You can only view comments here. If you want to write a comment please download the app.)
 • PRAKASH RH,

  6:45 AM , 28/07/2017

  ಗುರುಗಳಿಗೆ ಶಿ.ಸಾ.ನಮಸ್ಕಾರ ಗಳು. ಕುತಪಕಾಲದ ಕುರಿತು ನನಗೆ ತಾವು ಮಾರ್ಗದರ್ಶನ ಮಾಡಿದ್ದಕ್ಕೆ ತಮಗೆ ಅನಂತಾನಂತ ಧನ್ಯವಾದಗಳು
 • Ramachandra gajendragad,

  11:26 PM, 27/07/2017

  ಜನಿವಾರ ( ಉಪಾಕರ್ಮ) ಕಾರ್ಯಕ್ರಮ ಮುಗಿದ ಮೇಲೆ ದೇವರ ಪೂಜೆ ಬರುವದಿಲ್ಲವೆ? ಹೋದ ಸಾರಿ ಕಾರ್ಯಕ್ರಮ ದಲ್ಲಿ ಬಂದ ಆಚಾರ್ಯ ಅವರು ಪಂಚಗವ್ಯ ಪ್ರಾಶನ, ದಧಿಸತ್ತು ಸ್ವೀಕರಿಸಿದ ಕಾರಣ ಬರುವುದಿಲ್ಲ ವಂತೆ. ಸರಿಯಾದ ಕ್ರಮ ತಿಳಿಸಿ.
 • Lokesha Moolya,

  1:06 PM , 27/07/2017

  Thumba olleya information.... Thumba thanks guruji...
 • Jayashree Karunakar,

  11:39 AM, 27/07/2017

  ಕುತಪಕಾಲ ಶಬ್ದದ ಅಥ೯ ಎನು ಗುರುಗಳೆ
 • PRAKASH RH,

  6:48 AM , 27/07/2017

  ಗುರುಗಳಿಗೆ ಶಿ.ಸಾ.ನಮಸ್ಕಾರ ಗಳು.
  ಶ್ರಾದ್ಧ ದ ದಿನ ಕುತಪಕಾಲದ ಮೊದಲು ಪಿಂಡಪ್ರದಾನ ಮಾಡುವ ಪ್ರಸಂಗ ಬಂದರೆ ದೋಷ ಬರುತ್ತದೆ ಯೇ
  ಪ್ರಕಾಶ. ಧಾರವಾಡ ದಿಂದ

  Vishnudasa Nagendracharya

  ಕುತಪಕಾಲ ಶ್ರಾದ್ಧಕ್ಕೆ ಪಾವಿತ್ರ್ಯಪ್ರದ ಮತ್ತು ಶ್ರೇಷ್ಠ. ಹೀಗಾಗಿ ಕುತಪಕಾಲದಲ್ಲಿ ಮಾಡುವದು ಶ್ರೇಷ್ಠ. 
  
  ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಪಿತೃಗಳನ್ನು ಪ್ರಾರ್ಥಿಸಿಕೊಂಡು ಮೊದಲು ಮುಗಿಸಬಹುದು. ಪ್ರಾಮಾಣಿಕ ಅನಿವಾರ್ಯತೆ ಎನ್ನುವದು ನಿಮ್ಮ ಮನಸ್ಸಿಗೆ ಮನವರಿಕೆಯಾಗಬೇಕು. 
  
  ಬಹಳ ಹೊತ್ತು ಕಾಯಲಾಗುವದಿಲ್ಲ ಎನ್ನುವದು ಸರ್ವಥಾ ಸಕಾರಣವಲ್ಲ. ಮತ್ತು ಸೂರ್ಯೋದಯ ಆರಂಭವಾಗಿ 336ನೇ ನಿಮಿಷಕ್ಕೆ (ಅಂದರೆ ಐದೂವರೆ ಗಂಟೆಯ ನಂತರ) ಕುತಪಕಾಲ ಆರಂಭವಾಗುತ್ತದೆ. ಖಂಡಿತ ಬಹಳ ದೂರದ ಸಮಯವಲ್ಲ. 
  
  ರೌಹಿಣಂ ತು ನ ಲಂಘಯೇತ್ ಎಂದು ಸ್ಷಷ್ಟವಚನವಿದೆ. ಅಂದರೆ ಸೂರ್ಯೋದಯವಾಗಿ 432 ನಿಮಿಷದ ಒಳಗೆ ಶ್ರಾದ್ಧ ಮುಗಿಯಬೇಕು. ಅದನ್ನು ಮೀರಿದರೆ ದೋಷ. 
  
  ಸೂರ್ಯೋದಯ ಆರುಗಂಟೆಗೆ ಎಂದರೆ 11-36ಕ್ಕೆ ಕುತಪಕಾಲ ಆರಂಭವಾಗುತ್ತದೆ. 12-26ಕ್ಕೆ ಕುತಪ ಮುಗಿಯುತ್ತದೆ. ಅಷ್ಟರೊಳಗೆ ಪಿಂಡಪ್ರದಾನ ಮುಗಿಯಬೇಕು. 12-26ರಿಂದ 1-12ರವರೆಗೆ ರೌಹಿಣಕಾಲ. ಒಟ್ಟಾರೆ ಈ 96 ನಿಮಿಷಗಳಲ್ಲಿಎಲ್ಲ ವಿಧಿಗಳನ್ನೂ ಮುಗಿಸಿಬಿಡಬೇಕು. ಇನ್ನೂ ಹೆಚ್ಚಿನ ಸಮಯ ಬೇಕೆಂದರೆ ಶ್ರಾದ್ಧವನ್ನೇ ಬೇಗ ಆರಂಭಿಸಬೇಕು. ಸೂರ್ಯೋದಯದ ನಂತರ 432ನಿಮಿಷದ ಒಳಗೆ ಮುಗಿಯಲೇ ಬೇಕು. 
  
  ಈ ನಿಯಮ ತೀರ್ಥಶ್ರಾದ್ಧಗಳಿಗೆ, ದ್ವಾದಶಿಯ ದಿವಸದ ಶ್ರಾದ್ಧಕ್ಕೆ, ಗ್ರಹಣಾದಿನಿಮಿತ್ತಗಳಿಂದ ಮಾಡುವ ಶ್ರಾದ್ಧಕ್ಕೆ, ಸತ್ತ ನಂತರ ಸಪಿಂಡೀಕರಣದವರೆಗೆ ಮಾಡುವ ಶ್ರಾದ್ಧಕ್ಕೆ ಅನ್ವಯಿಸುವದಿಲ್ಲ. ತೀರ್ಥದಲ್ಲಿ ಬೇಗನೇ ಸಹಿತ ಮುಗಿಸಬಹುದು. ಆದರೆ ಅಲ್ಲಿಯೂ ಕುತಪ ಶ್ರೇಷ್ಠ. ದ್ವಾದಶಿ ಸೂರ್ಯೋದಯದ ನಂತರ ಪಿಂಡಪ್ರದಾನ. ಗ್ರಹಣದಲ್ಲಿ ಆಯಾಯಾ ಕಾಲದಲ್ಲಿ ಶ್ರಾದ್ಧ. 
  
 • श्रीधर,

  8:42 PM , 26/07/2017

  ನಮಸ್ಕಾರ, ಉಪಾಕರ್ಮದಂದು ತರ್ಪಣಾದಿಗಳಿರುವುದರಿಂದ ಪಂಚಮಿ ತನಿಯ ನಂತರ ಉಪಾಕರ್ಮ ಆಚರಿಸಬೇಕೆ ಅಥವಾ ಮೊದಲು ಉಪಾಕರ್ಮ ನಂತರ ಪಂಚಮಿ ಆಚರಿಸಬೇಕೆ? ದಯವಿಟ್ಟು ತಿಳಿಸಿ
 • Jayashree Karunakar,Bangalore

  10:50 AM, 26/07/2017

  ಗುರುಗಳೆ ಗೊಂದಲಗಳನ್ನು ಪ್ರಮಾಣಗಳ ಸಹಿತ ಬಿಡಿಸಿ ತಿಳಿಸಿದ ರೀತಿ ಬಹಳ ಸುಂದರವಾಗಿದೆ
 • K Dattatreya,

  9:48 PM , 25/07/2017

  Thank you very much Gurugale.
 • Pradeepachar,Bangalore

  6:59 PM , 25/07/2017

  Hennu makkalu yavag acharisbeku 27.athava 28.dayaviittu tilasee
 • Ashok Prabhanjana,Bangalore

  6:28 PM , 25/07/2017

  ಗುರುಗಳೇ, ನಾಗರಾಜನಾದ ವಾಸುಕಿಯು ತಾರತಮ್ಯದ ಪ್ರಕಾರ ಯಾವ ಕಕ್ಷೆಯಲ್ಲಿ ಬರುತ್ತಾನೆ? ಕೆಲವರು ವಾಸುಕಿಯು ದೇವ ಗಂಗೆಗೆ ಸಮಾನನು ಎಂದು ಹೇಳಿದ್ದನ್ನು ಕೇಳಿದೇನೆ, ಅದು ಸರಿನಾ? ದಯವಿಟ್ಟು ಇದಕ್ಕೆ ಉತ್ತರ ತಿಳಿಸಿ ಗುರುಗಳೇ
 • Gopalakrishnan,

  6:26 PM , 25/07/2017

  Dhanyavadhagalu
 • Anusha Achyut Mirji,Bangalore

  5:44 PM , 25/07/2017

  Nagara chouti mattu panchamiya bagge iruva samshayavannu door madidakkagi gurugalige Anant pranamagalu
 • Sandeep Rao,

  4:37 PM , 25/07/2017

  ನಾಗರಪಂಚಮಿ ಗುರುವಾರ

  Vishnudasa Nagendracharya

  ನಾಗರಚೌತಿ ಗುರುವಾರ 27/7/2017.
  
  ನಾಗರ ಪಂಚಮಿ ಶುಕ್ರವಾರ. 28/7/2017.