ಊರ್ಧ್ವಪುಂಡ್ರಗಳ ನಿಖರ ಸಂಖ್ಯೆ ಎಷ್ಟು? 12, 13, 14,ಅಥವಾ 15?
ಶ್ರೀ ಗುರುಭ್ಯೋ ನಮಃ. ದ್ವಾದಶನಾಮಗಳು ಎಂದು ಪ್ರಸಿದ್ಧಿ ಇರುವಾಗ, ಕೇವಲ ದ್ವಾದಶ ನಾಮಗಳನ್ನು ಧಾರಣೆ ಮಾಡದೆ, ಕೆಲವರು ತ್ರಯೋದಶ, ಕೆಲವರು ಚತುರ್ದಶ ಎಂದು ಕೆಲವರು ಪಂಚದಶ ನಾಮಗಳನ್ನು ಧಾರಣೆ ಮಾಡುತ್ತಾರೆ. ಈ ವ್ಯತ್ಯಾಸ ಏಕೆ ಮತ್ತು ಸರಿಯಾದ ಸಂಖ್ಯೆ ಯಾವುದು ಎಂದು ದಯಮಾಡಿ ತಿಳಿಸಿ. — ಪವನ್ ಬೆಂಗೇರಿ.