Prashnottara - VNP100

ಪವಿತ್ರದ ಉಂಗುರದ ಧಾರಣೆ ಹೇಗೆ?


					 	

ನಮಸ್ಕಾರ. ಪವಿತ್ರದ ಉಂಗುರವನ್ನು ಯಾವ ಬೆರಳಿಗೆ ಧರಿಸಬೇಕು ??ದಿನದ ಯಾವ ಸಮಯದಲ್ಲಿ ಪವಿತ್ರದ ಉಂಗುರ ದರಿಸಬೇಕು ? — ಶ್ರೀನಿವಾಸ್ ಪವಿತ್ರದ ಉಂಗುರವನ್ನು ತೋರುಬೆರಳು ಅಥವಾ ಅನಾಮಿಕೆಯಲ್ಲಿ ಧರಿಸುವದು ಪದ್ಧತಿ. ತರ್ಪಣವನ್ನು ನೀಡುವ, ಶ್ರಾದ್ಧಾದಿಗಳನ್ನು ಮಾಡುವ ಸಮಯದಲ್ಲಿ ಮಾತ್ರ (ದರ್ಭೆಯ ಪವಿತ್ರ ಇಲ್ಲದಿದ್ದಾಗ ಮಾತ್ರ) ಧರಿಸಬೇಕು. ಅಂದರೆ ಒಟ್ಟಾರೆ ಪಿತೃಕಾರ್ಯಗಳನ್ನು ಮಾಡುವಾಗ ಮಾತ್ರ ಧರಿಸತಕ್ಕದ್ದು. ಬೇರೆ ಸಂದರ್ಭಗಳಲ್ಲಿ ಧರಿಸಬಾರದು. ಶುಭಕಾರ್ಯಗಳಲ್ಲಂತೂ ಸರ್ವಥಾ ಧರಿಸಬಾರದು. ಸಾವಾಗಿ ಸಪಂಡೀಕರಣ ಆಗುವವರೆಗಿನ ಕಾರ್ಯಗಳಲ್ಲಿ ಪವಿತ್ರದುಂಗುರವನ್ನು ಧರಿಸಬಾರದು. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
4705 Views

Comments

(You can only view comments here. If you want to write a comment please download the app.)
 • Vyasasharma,Kolar

  11:06 AM, 09/09/2017

  Brahmayagna sandharbadalli tag no paver that any anamekege suttikollalu sri bannanje govindacharyaru telisdaare dayavittuu vivarane telisabekndu prathisuttane. Haagu yagnopaveethakke pavitrada gantannu haaki brhma gantannu haaka beka telise.

  Vishnudasa Nagendracharya

  ಜನಿವಾರವನ್ನು ಅನಾಮಿಕೆಗೆ (ಒಟ್ಟಾರೆ ಯಾವ ಬೆರಳಿಗೂ) ಸುತ್ತಿಕೊಂಡು ಜಪ ಮಾಡಬಾರದು ಎಂದು ಹಿರಿಯರು ಹೇಳುವದನ್ನು ಕೇಳಿದ್ದೇನೆ. ನಾವು ಆ ರೀತಿ ಮಾಡುವದಿಲ್ಲ. 
  
  ಬನ್ನಂಜೆಯವರು ಹೇಳಿದ್ದಾರೆಂದರೆ ಪ್ರಾಯಃ ಉಡುಪಿಯ ಕಡೆಯ ಸಂಪ್ರದಾಯವಿರಬೇಕು. 
  
  ಇದರ ಕುರಿತು ಯಾವುದಾದರೂ ಪ್ರಮಾಣ ಅಥವಾ ವಿರುದ್ಧ ಪ್ರಮಾಣ ದೊರೆತಲ್ಲಿ ತಿಳಿಸುತ್ತೇನೆ. 
 • Naveen,

  8:59 PM , 07/08/2017

  ಬ್ರಹ್ಮ ಯಜ್ಞಕೇ ಉಪಯೋಗಿಸಬಹುದ ಆಚಾರ್ಯರೇ
 • Pranesh ಪ್ರಾಣೇಶ,

  4:39 PM , 02/08/2017

  ಆಚಾರ್ಯ ಪವಿತ್ರ ಉಂಗುರ ಜಪ ಮಾಡುವ ಸಮಯದಲ್ಲೂ ಹಾಗೂ ದೇವರ ಪೂಜೆ ಮಾಡುವಾಗಲೂ ಧರಿಸಬೇಕು ಅಂತ ಕೇಳಿದ್ದೇನೆ ಹೌದಾ?

  Vishnudasa Nagendracharya

  ಅದು ಎರಡೆಳೆಯ ಪವಿತ್ರದುಂಗುರ. 
  
  ಪ್ರದೀಪ್ ರವರ ಕಾಮೆಂಟಿನ ಉತ್ತರದಲ್ಲಿ ವಿವರಗಳಿವೆ ನೋಡಿ. 
 • Jayashree Karunakar,

  4:52 PM , 02/08/2017

  ಗುರುಗಳೆ ಬಂಗಾರದ ಪವಿತ್ರದ ಉಂಗುರವನ್ನು ಯಾವಾಗಲೂ ಧರಿಸಬಹುದೇ ? ಮತ್ತು ಯಾವ ಬೆರಳಲ್ಲಿ ಧರಿಸಬಹುದು

  Vishnudasa Nagendracharya

  ಬೆಳ್ಳಿಯ ಪವಿತ್ರದ ಉಂಗುರಕ್ಕೆ ಅನ್ವಯಿಸುವ ನಿಯಮವೇ ಬಂಗಾರಕ್ಕೂ ಅನ್ವಯಿಸುತ್ತದೆ. ಯಾವ ವಿಶೇಷ ನಿಯಮವಿಲ್ಲ. 
 • Pradeep,

  4:58 PM , 02/08/2017

  ಆಚಾರ್ಯರೀ ನಮಸ್ಕಾರ ಏರೇಡು ಏಳ ಯ ಬೇಳ್ಳಿಯ ದರ್ಭೆಯನ್ನು ದೆವರ ಪೂಜೆ ಸಮಯದಲ್ಲಿ ಧರಿಸಬಹುದು ಅಲ್ಲವೇ

  Vishnudasa Nagendracharya

  ಎರಡು ದರ್ಭೆಗಳ ಪವಿತ್ರವನ್ನು ಶುಭಕಾರ್ಯಕ್ಕೂ, ಮೂರು ದರ್ಭೆಗಳ ಪವಿತ್ರವನ್ನು ಶ್ರಾದ್ಧಕ್ಕೂ, ಒಂದು ದರ್ಭೆಯ ಪವಿತ್ರವನ್ನು ಅಪರಕ್ರಿಯೆಗೂ ಬಳಸುವದು ಪದ್ಧತಿ. 
  
  ಬ್ರಹ್ಮಚಾರಿ ಮತ್ತು ಗೃಹಸ್ಥರು ಸಕಲ ಸತ್ಕರ್ಮಗಳನ್ನು ಮಾಡಬೇಕಾದರೂ ಪವಿತ್ರವನ್ನು ಧರಿಸಿಯೇ ಮಾಡಬೇಕು. ಪಾಣಿನಿಮಹರ್ಷಿಗಳು ಅಷ್ಟಾಧ್ಯಾಯಿಯನ್ನು ರಚಿಸುವಾಗಲೂ ಕೈಯಲ್ಲಿ ಪವಿತ್ರವನ್ನು ಧರಿಸಿಯೇ ರಚಿಸಿದರು ಎಂದು ಮಹಾಭಾಷ್ಯದಲ್ಲಿ ಉಲ್ಲೇಖವಿದೆ. ಹೀಗಾಗಿ ಪವಿತ್ರಧಾರಣೆ ಶಾಸ್ತ್ರದ ವಿಧಿ. 
  
  ದರ್ಭೆಯ ಬದಲಾಗಿ ಬೆಳ್ಳಿಯ ಪವಿತ್ರವನ್ನು ಧರಿಸುವದು ಅಗತಿಕಾಗತಿ. ಅಂದರೆ ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಆಚರಿಸುವ ಕ್ರಮ. 
  
  ಹೀಗಾಗಿ ದರ್ಭೆ ದೊರೆಯುವ ಸಂದರ್ಭವಿದ್ದಾಗಲೂ ಅದಿಲ್ಲದೇ ಬೆಳ್ಳಿ-ಬಂಗಾರಗಳ ಪವಿತ್ರವನ್ನು ಧರಿಸಿ ಮಾಡುವದು ಶ್ರೇಷ್ಠವಲ್ಲ. 
  
  ಶ್ರಾದ್ಧದಲ್ಲಿ ಮತ್ತು ತರ್ಪಣದಲ್ಲಿ ದರ್ಭೆಯ ಪವಿತ್ರ ಇಲ್ಲದಾಗ ಬೆಳ್ಳಿಯನ್ನು ಧರಿಸಬಹುದು, ಕಾರಣ, ಪಿತೃಕಾರ್ಯಕ್ಕೆ ದರ್ಭೆಯಷ್ಟೇ ಶ್ರೇಷ್ಠ ಬೆಳ್ಳಿ. ಆದರೆ ಶುಭಕರ್ಮಗಳಿಗೆ ಹಾಗಿಲ್ಲ. ಎಲ್ಲಿ ದರ್ಭೆಯನ್ನು ಬಳಸಬೇಕು ಎಂದಿದ್ದಾರೆಯೋ ಅಲ್ಲಿ ದರ್ಭೆಯನ್ನೇ ಬಳಸಬೇಕು. ಬೆಳ್ಳಿ-ಬಂಗಾರಗಳ ಪವಿತ್ರವನ್ನಲ್ಲ. 
  
  ಹೀಗಾಗಿ ಪೂಜೆಯ ಸಂದರ್ಭದಲ್ಲಿ ಬೆಳ್ಳಿ-ಬಂಗಾರಗಳ ಪವಿತ್ರಧಾರಣೆ ಅನಿವಾರ್ಯವಲ್ಲ. ಶ್ರಾದ್ಧದಲ್ಲಿ ದರ್ಭೆಯ ಪವಿತ್ರವಿಲ್ಲದಿದ್ದರೆ, ಅನಿವಾರ್ಯ. 
 • Subrahmanya,

  4:42 PM , 02/08/2017

  ಅಗತ್ಯ ಮಾಹಿತಿ ನೀಡಿದ್ದೀರಿ ಗುರುಗಳೆ.
 • Subrahmanya,

  4:42 PM , 02/08/2017

  ಅಗತ್ಯ ಮಾಹಿತಿ ನೀಡಿದ್ದೀರಿ ಗುರುಗಳೆ.
 • Srinivas,

  4:35 PM , 02/08/2017

  ದನ್ಯವಾದಗಳು ಗುರುಗಳೆ