Prashnottara - VNP107

ಶಠ ಮತ್ತು ಶಾಠ್ಯ ಎಂದರೇನು?


					 	

ಶಠ ಮತ್ತು ಶಾಠ್ಯ ಎಂದರೇನು ಗುರುಗಳೇ? — ಸುದರ್ಶನ ಶ್ರೀ.ಲ. ಶಠ ಮತ್ತು ಶಾಠ್ಯ ಎನ್ನುವ ಶಬ್ದ ಅನೇಕ ಅರ್ಥಗಳಲ್ಲಿ ಪ್ರಯೋಗಗೊಳ್ಳುತ್ತವೆ. 1. ಶಠ ಎಂದರೆ ಅಲಸಿ. ಶಠ ಎಂದರೆ ಆಲಸ್ಯ. ಶಠ ಆಲಸ್ಯೆ ಎಂಬ ಧಾತುವಿದೆ. ಶಠ ಎಂದರೆ ಅಲಸ್ಯ ಮಾಡುವವನು, ಮಾಡಬೇಕಾದ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡದವನು ಎಂದರ್ಥ. “ಆಜನ್ಮಮಾತ್ರಮಪಿ ಯೇನ ಶಠೇನ ಕಿಂಚಿತ್ ಚಿತ್ತಂ ವಿಧಾಯ ಶುಕಶಾಸ್ತ್ರಕಥಾ ನ ಪೀತಾ” ಎಂದು ಪದ್ಮಪುರಾಣದಲ್ಲಿಯೂ “ಸೋಮಾರಿಯಿಂದ” ಎಂಬ ಅರ್ಥದಲ್ಲಿಯೇ ಪ್ರಯೋಗವಾಗಿದೆ. ಮತ್ತು ಶಠ ಎಂಬ ಶಬ್ದ ಕೇವಲ ಸೋಮಾರಿತನವನ್ನು ಹೇಳುವದಿಲ್ಲ. ದೊಡ್ಡಸ್ತಿಕೆಯ ಸೋಮಾರಿತನವನ್ನು ಹೇಳುತ್ತದೆ. ಭಾಗವತವನ್ನು ಕೇಳಬೇಕು ಎನ್ನುವದು ತತ್ವ. ಕೇಳಲು ಇಷ್ಟವಿಲ್ಲದ ವ್ಯಕ್ತಿ, “ಭಾಗವತದಲ್ಲೇನಿದೆ, ದೇವರ ಮಾಹಾತ್ಮ್ಯ ತಾನೆ, ಹರಿ ಸರ್ವೋತ್ತಮ ಎಂಬ ತತ್ವ ತಾನೆ, ಅಲ್ಲಿರುವದೆಲ್ಲ ನನಗೆ ಗೊತ್ತಿದೆ” ಎಂದು ಕುತ್ಸಿತವಾಗಿ ಮಾತನಾಡಿ, ತಾನು ದೊಡ್ಡವ ಎಂಬ ಭ್ರಾಂತಿಯಲ್ಲಿ ಕೇಳದೇ ಸುಮ್ಮನಾಗುತ್ತದೆ. ಅಂತಹವವನ್ನು ಪದ್ಮಪುರಾಣ ಇಲ್ಲಿ ಶಠ ಎಂದು ಕರೆಯುತ್ತಿದೆ. ದೊಡ್ಡಸ್ತಿಕೆಯನ್ನು ತೋರಿಸಿ, ದುರಹಂಕಾರವನ್ನು ತೋರಿಸಿ ಯಾರು ಸೋಮಾರಿಗಳಾಗುತ್ತಾರೆಯೋ ಅವರು ಶಠರು. ೨. ಸಜ್ಜನರಿಗೆ ಹಿಂಸೆ ನೀಡುವವನು ಶಠ. ಹಿಂಸೆ ನೀಡುವ ಕ್ರಿಯೆ ಶಾಠ್ಯ. ಶಠ ಬಧಕ್ಲೇಶಕೈತವೇ ಎಂಬ ಧಾತು. ಸಜ್ಜನರಿಗೆ ಹಿಂಸೆ ನೀಡುವವನು ಶಠ. ಹಿಂಸೆ ನೀಡುವ ಕ್ರಿಯೆ ಶಾಠ್ಯ. “ಶಠೇನ ಮೋಹಾದಾಶಾಭಂಗಃ ಕೃತಃ” ಎಂದೊಬ್ಬ ಕವಿ ಹೇಳುತ್ತಾನೆ. ಕೊಡುತ್ತೇನೆ ಎಂದು ಆಸೆ ಹುಟ್ಟಿಸಿ, ಕರೆಸಿ ಕೊಡದೇ ಕಳುಹಿಸಿದ ಜಿಪುಣನನ್ನು ಸಜ್ಜನರಿಗೆ ಹಿಂಸೆ ನೀಡಿದ್ದಕ್ಕಾಗಿ ಇಲ್ಲಿ ಶಠ ಎಂದು ಕರೆಯುತ್ತಿದ್ದಾರೆ. ೩. ಶಠ ಎಂದರೆ ಕುತ್ಸಿತವಾಗಿ ಸೊಕ್ಕಿನ ಮಾತನಾಡುವವನು ಎಂದರ್ಥ. ಶಾಠ್ಯ ಎಂದರೆ ಕುತ್ಸಿತವಾಗಿ ಮಾತನಾಡುವದು. “ಶಠ ದುಷ್ಟವಚನೇ” ಎಂದೇ ಧಾತುವಿದೆ. ಸೊಕ್ಕಿನ ಮಾತಿನವನು, ಸೊಕ್ಕಿನ ನಡತೆಯವನು ಎಂದು ಇದರ ಪರಮಾರ್ಥ. “ಆಖ್ಯೇಯಂ ನಾಪಿ ಚಾಜ್ಞಾಯ ನ ಶಠಾಯ ನ ಮಾನಿನೇ” ಎಂಬ ಸ್ಕಂದಪುರಾಣದ ವಚನದಲ್ಲಿ ಈ ಎಲ್ಲ ಅರ್ಥಗಳಲ್ಲಿಯೂ ಶಠ ಶಬ್ದವನ್ನು ಪ್ರಯೋಗಿಸಲಾಗಿದೆ. ಸೋಮಾರಿಗೆ, ಹಿಂಸಕನಿಗೆ, ನೀಚಭಾಷೆಯಲ್ಲಿ ಮಾತನಾಡುವವನಿಗೆ, ವಂಚಕನಿಗೆ ಶಾಸ್ತ್ರಾರ್ಥವನ್ನು ತಿಳಿಸಬಾರದು ಎಂದು. 4. ಶಠ ಎಂದರೆ ಧೂರ್ತ, ವಂಚಕ ಎಂದರ್ಥ. ಶಾಠ್ಯ ಎಂದರೆ ಧೂರ್ತತನ, ವಂಚಕತನ. “ಶಠಸ್ತು ಸಮಯಂ ಪ್ರಾಪ್ಯ ನೋಪಕಾರಂ ಹಿ ಮನ್ಯತೇ” ಎಂದೊಂದು ಸುಭಾಷಿತವಿದೆ. ಒಬ್ಬರಿಂದ ಉಪಕಾರ ಪಡೆದ ವ್ಯಕ್ತಿ, ಆ ವ್ಯಕ್ತಿ ಕಷ್ಟವಿದ್ದಾಗ ಅವನಿಂದ ಪಡೆದ ಉಪಕಾರವನ್ನು ಮರೆದು ವಂಚನೆಯನ್ನೇ ಮಾಡುತ್ತಾನೆ ಎಂದದರ ತಾತ್ಪರ್ಯ. ಇದಲ್ಲದೇ ಶಠ ಎಂದರೆ ಒಂದು ವಿಶಿಷ್ಟ ಲೋಹ. ಧತ್ತೂರದ ಗಿಡಕ್ಕೂ ಶಠ ಎಂಬ ಹೆಸರಿದೆ. ಇದಲ್ಲದೇ ಶಠ ಎನ್ನುವದು ಶ್ರೀಬಲರಾಮದೇವರ ಮಗನ ಹೆಸರು. (ಇದರ ಕುರಿತ ರೋಚಕವಿಷಯವನ್ನು ಭಾಗವತದ ದಶಮಸ್ಕಂಧದ ಉಪನ್ಯಾಸದ ಸಂದರ್ಭದಲ್ಲಿ ತಿಳಿಸುತ್ತೇನೆ) ಶಠ ಎನ್ನುವ ಒಬ್ಬ ಹೆಸರಿನ ರಾಕ್ಷಸ ರಾವಣನ ಸೇನೆಯಲ್ಲಿದ್ದ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
2893 Views

Comments

(You can only view comments here. If you want to write a comment please download the app.)
 • Srihari,Bengaluru

  2:31 PM , 24/08/2019

  ಪ್ರಾರಂಭ ಮಾಡುತ್ತಾರೆ. ಅಲ್ಲಿ ಶಠ ಎಂಬ ಶಬ್ದಕ್ಕೆ ಏನು ಅರ್ಥವನ್ನು ಹೇಳಬೇಕು ? ಅಲ್ಲಿ ಶಠ ಶಬ್ದಕ್ಕೆ ಮತ್ಸ್ಯಾವತಾರವೆಂದು ಅರ್ಥ ಬರಲು ಸಾಧ್ಯವೆ?
 • Srihari,Bengaluru

  2:26 PM , 24/08/2019

  ಆಚಾರ್ಯರೆ, ಶ್ರೀ ಗುರುಜಗನ್ನಾಥದಾಸರು ವೇಂಕಟೇಶ ಸ್ತವರಾಜದಲ್ಲಿ ಕಡೆಯಲ್ಲಿ ದಶಾವತಾರ ನಿರೂಪಿಸುವ ಪದ್ಯದಲ್ಲಿ ಮತ್ಸ್ಯಾವತಾರದ ಹೆಸರು ಹೇಳದೇ ಜಯಜಯತು ಶಠ ಕೂರ್ಮರೂಪನೆ ಎಂಬುದಾಗಿ
 • Sreekanth S,

  2:30 PM , 12/11/2017

  Samkshiptha trikala sandhyavandanam for employees and students in Kannada lipi, audio and video. Regards, Sreekanth
 • Payloads Rao,

  4:49 PM , 09/09/2017

  Hare Srinivasa,
  
  Acharyaralli ondu vinanthi, pitru paksha dalli parishes acharanemadalu namage mamma hiriyara vivara gothilladiddaga hegepakha nada Mbeki atavistic thalidomide.
  Vandanegalu
  Prahlada Rao
 • Sheela M,

  2:30 PM , 07/09/2017

  Gurugale paksha atava shradda devsa hostilige angalakke rangoli hakuvudu arishina kunkuma hachhuvudu sariya dayamaadi tilisi gurugale

  Vishnudasa Nagendracharya

  ಮಾಡಬಾರದು. 
  
  ಮಹಾಲಯದಲ್ಲಿ ಕರ್ತವ್ಯ ಅಕರ್ತವ್ಯಗಳು ಎಂಬ ಲೇಖನದಲ್ಲಿ (ಪಿತೃಪಕ್ಷ Folder ನಲ್ಲಿದೆ, VNA137) ಈಗಾಗಲೇ ಈ ವಿಷಯವನ್ನು ತಿಳಿಸಿದ್ದೇನೆ. 
  
  ತುಳಸಿಯ ಮುಂದೆ ಮತ್ತು ದೇವರ ಮುಂದೆ ಮಾತ್ರ ರಂಗೋಲಿ ಹಾಕಬಹುದು. 
 • ಸುದರ್ಶನ ಶ್ರೀ. ಲ.,

  3:31 PM , 07/09/2017

  ಸೂರಜ ಸುಧೀಂದ್ರರವರೆ ಆಲಸ್ಯ ಎಂಬ ಅರ್ಥ ಕೂಡುತ್ತದೆ. 
  
  ಸಾರಾಂಶ:
  
  ಈಗ ಮನೆಯಲ್ಲಿ ಒಬ್ಬರು ಹಿರಿಯರಿರುತ್ತಾರೆ. ಮಗನಿಗೆ ಅವರಿಗೆ ನಮಸ್ಕಾರ ಮಾಡು... ನಮಸ್ಕಾರ ಮಾಡು ಎಂದು ಹೇಳುತ್ತಾರೆ. ಅವನಿಗೆ ಭಕ್ತಿ ಮತ್ತು ಗೌರವವಿರುತ್ತದೆ ದೇವರಲ್ಲಿ, ಹಿರಿಯರಲ್ಲಿ. ಆದರೆ ಆಲಸ್ಯದಿಂದ ಮಾಡುತ್ತಾನೆ. ಹೀಗೆ ನಮಸ್ಕಾರ ಮಾಡಿದರೂ ಪಾಪ ಪರಿಹಾರವಾಗುತ್ತದೆ. ಸಂಶಯವೇ ಇಲ್ಲ.
  
  ಆಲಸ್ಯದಿಂದ ಭಗವಂತನಿಗೆ ನಮಸ್ಕಾರ ಮಾಡಿದರೂ ನಮ್ಮ ೧೦೦ ಜನ್ಮಗಳ ಪಾಪದ ರಾಶಿ ನಾಶವಾಗುತ್ತದೆ. ಸಂಶಯವೇ ಇಲ್ಲ.
  
  ಶ್ರೀ ಮಧ್ವೇಶ ಕೃಷ್ಣಾರ್ಪಣಮಸ್ತು 🙏😊
 • Sheela M,

  2:25 PM , 07/09/2017

  Gurugalige namaskara.
 • suraj sudheendra,bengaluru

  6:05 PM , 02/09/2017

  gurugale ,shaatyenaapi namaskaaram kurvatah shaarnghapaanaye shatha janmaarjitam paapam nashyatyeva na samshayaha, yembuva shlokadalli shaatya padakke melina yaava artha honduvudu haagu aa artha kudisidaaga ee shlokada saaramshavenu yendu dayamadi tilisabeku?
 • ಸುದರ್ಶನ ಶ್ರೀ. ಲ.,

  2:13 PM , 01/09/2017

  ಗುರುಗಳೆ🙏 ತಾಳ್ಮೆ, ಜ್ಞಾನ, ಕಾರುಣ್ಯಾದಿ ಸದ್ಗುಣಗಳನ್ನು ಹೊಂದಿರುವ ನಿಮಗೆ ನನ್ನ ಅನಂತ ಪ್ರಣಾಮಗಳು 🙏😊