ಸಾಡೇಸಾತಿಯ ಪರಿಹಾರ ಹೇಗೆ?
ಪ್ರೀತಿಯ ಗುರುಗಳಿಗೆ ಭಕ್ತಿಯ ನಮಸ್ಕಾರಗಳು. ತಮ್ಮ ವಿಶ್ವನಂದಿನಿಯಿಂದ ನಮ್ಮ ಜೀವನವೇ ಬದಲಾಗುತ್ತಿದೆ. ತಮಗೆ ಎಷ್ಟು ಧನ್ಯವಾದ ಮತ್ತು ನಮಸ್ಕಾರಗಳನ್ನು ಸಲ್ಲಿಸಿದರೂ ಕಡಿಮೆಯೇ. ಹಿಂದೆಯೂ ಎರಡುಬಾರಿ ತಮ್ಮನ್ನು ಈ ಪ್ರಶ್ನೆ ಕೇಳಿದ್ದೆ. ಸಾಡೇಸಾತಿಯ ಕುರಿತು ಪೂರ್ಣವಾದ ಮಾಹಿತಿಯನ್ನು ನೀಡಬೇಕಾಗಿ ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ. ಮುಖ್ಯವಾಗಿ ಅದರ ಪರಿಹಾರವನ್ನು ತಿಳಿಸಿ. ತಾವು ಯಾವುದೇ ವಿಷಯವನ್ನು ನಿರೂಪಿಸಿದರೂ ನಮ್ಮ ಮನಸ್ಸಿಗೆ ನಾಟುವಂತೆ ತಿಳಿಸುತ್ತೀರಿ. ಅದಕ್ಕಾಗಿ ತಮಗೆ ಮೇಲಿಂದ ಮೇಲೆ ನಮ್ಮ ಪ್ರಶ್ನೆಗಳಿಂದ ತೊಂದರೆ ಕೊಡುತ್ತಿರುತ್ತೇವೆ. ದಯವಿಟ್ಟು ಕ್ಷಮಿಸಿ. — ರಘೂತ್ತಮರಾವ್ ಮತ್ತು ಕುಟುಂಬದವರು. [ಶ್ರೀಯುತ ಅಭಿಷೇಕ್ ರವರೂ ಸಹ ಈ ಪ್ರಶ್ನೆಯನ್ನು ಕೇಳಿದ್ದಾರೆ.]